Belagavi News: ಇವತ್ತಲ್ಲ ನಾಳೆ ಸತೀಶ್ ಜಾರಕಿಹೊಳಿ ಸಿಎಂ ಆಗಿಯೇ ಆಗ್ತಾರೆ: ಲಕ್ಷ್ಮೀ ಹೆಬ್ಬಾಳ್ಕರ್
ನಿನ್ನೆ(ಮೇ.27)ಲಕ್ಷ್ಮೀ ಹೆಬ್ಬಾಳ್ಕರ್ ಸಚಿವ ಸ್ಥಾನಕ್ಕೆ ಪ್ರಮಾಣ ವಚನ ಮಾಡಿದ ಬಳಿಕ ಇಂದು (ಮೇ.28)ಸ್ವ ಕ್ಷೇತ್ರಕ್ಕೆ ಆಗಮಿಸಿದರು. ಈ ವೇಳೆ ಸತೀಶ್ ಜಾರಕಿಹೊಳಿ ಡಿಸಿಎಂ ಆಗಬೇಕೆಂಬ ಅಭಿಮಾನಿಗಳ ಆಗ್ರಹ ವಿಚಾರ ‘ಸಚಿವ ಸತೀಶ್ ಜಾರಕಿಹೊಳಿ ಡಿಸಿಎಂ ಅಷ್ಟೇ ಅಲ್ಲ, ಸಿಎಂ ಆಗಲು ಸಹ ಅರ್ಹರು ಎಂದಿದ್ದಾರೆ.
ಬೆಳಗಾವಿ: ನಿನ್ನೆ(ಮೇ.27)ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಸಚಿವ ಸ್ಥಾನಕ್ಕೆ ಪ್ರಮಾಣ ವಚನ ಮಾಡಿದ ಬಳಿಕ ಇಂದು (ಮೇ.28)ಸ್ವ ಕ್ಷೇತ್ರಕ್ಕೆ ಆಗಮಿಸಿದರು. ಈ ವೇಳೆ ಸತೀಶ್ ಜಾರಕಿಹೊಳಿ(Satish Jarkiholi) ಡಿಸಿಎಂ ಆಗಬೇಕೆಂಬ ಅಭಿಮಾನಿಗಳ ಆಗ್ರಹ ವಿಚಾರ ‘ಸಚಿವ ಸತೀಶ್ ಜಾರಕಿಹೊಳಿ ಡಿಸಿಎಂ ಅಷ್ಟೇ ಅಲ್ಲ, ಸಿಎಂ ಆಗಲು ಸಹ ಅರ್ಹರು, ಆ ಸಾಮರ್ಥ್ಯ ಅವರಿಗಿದೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು, ಇವತ್ತಲ್ಲ ನಾಳೆ ಸತೀಶ್ ಜಾರಕಿಹೊಳಿ ಸಿಎಂ ಆಗಿಯೇ ಆಗ್ತಾರೆ ಎಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಚಿವೆ ಹೆಬ್ಬಾಳ್ಕರ್ ಹೇಳಿದರು.
ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಭರವಸೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಇನ್ನು ಅಧಿಕೃತವಾಗಿ ಇಲಾಖೆ ಹಂಚಿಕೆ ಆಗಿಲ್ಲ. ಮೊದಲನೇಯದಾಗಿ ಅಧಿಕೃತವಾಗಿ ಇಲಾಖೆ ಹಂಚಿಕೆ ಆಗಬೇಕು. ಇಲಾಖಾವಾರು ಸಭೆ ಮಾಡಿ ವಾಗ್ದಾನ ಮಾಡಿದ ಬಳಿಕ ಭರವಸೆ ಈಡೇರಿಕೆಗೆ ಕಟಿಬದ್ಧ ಇದ್ದೇವೆ ಎಂದರು. ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಈ ಹಿಂದೆ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿ ‘ನಾನು ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿ ಇನ್ನೂ 24 ಗಂಟೆಯಾಗಿಲ್ಲ. ರಾಜ್ಯದ ಜನರು ಮೆಚ್ಚುವ ಹಾಗೇ ಸರ್ಕಾರ ಸಿಎಂ, ಡಿಸಿಎಂ ಎಲ್ಲರಿಗೂ ಒಳ್ಳೆಯ ಹೆಸರು ಬರುವ ಹಾಗೇ ಕೊಟ್ಟಂತ ಇಲಾಖೆ ನಡೆಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:Belagavi News: ಗೋಕಾಕ್ ಸಾಹುಕಾರ್‌ಗೆ ಸೆಡ್ಡು ಹೊಡೆದು ಮಿನಿಸ್ಟರ್ ಆದ ಲಕ್ಷ್ಮೀ ಹೆಬ್ಬಾಳ್ಕರ್
ನಾವು ಯಾವುದೇ ಇಲಾಖೆ ನೀಡಿದರೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ. ರಾಜ್ಯದಲ್ಲಿ 70 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಬಹಳಷ್ಟು ಕಡೆ ಸ್ವಂತ ಕಟ್ಟಡಗಳಿಲ್ಲ. ಅಂಗನವಾಡಿ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುವುದು ನನ್ನ ಆಸೆ, ಈ ಇಲಾಖೆ ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕು, ಒಂದೇ ದಿನದಲ್ಲಿ ಎಲ್ಲ ಬದಲಾವಣೆ ಅಸಾಧ್ಯ ಹಂತ ಹಂತವಾಗಿ ಅಗತ್ಯ ಬದಲಾವಣೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:32 pm, Sun, 28 May 23