General Elections 2023: ಮುಂದಿನ ಸಾರ್ವತ್ರಿಕ ಚುನಾವಣೆಗೆ ಆಕ್ಟೀವ್ ಆಗಿ ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ: ಹೆಚ್​ಡಿ ದೇವೇಗೌಡ

General Elections 2023: ಮುಂದಿನ ಸಾರ್ವತ್ರಿಕ ಚುನಾವಣೆಗೆ ಆಕ್ಟೀವ್ ಆಗಿ ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ: ಹೆಚ್​ಡಿ ದೇವೇಗೌಡ
2023 ಚುನಾವಣೆಗೆ ಆಕ್ಟೀವ್ ಆಗಿ ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ: ಹೆಚ್​ಡಿ ದೇವೇಗೌಡ

ಬೆಂಗಳೂರು: ರಾಜ್ಯ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ದೀಪಾವಳಿ ಅಂಗವಾಗಿ ಲಕ್ಷ್ಮೀ ಪೂಜೆ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಿನ್ನೆಲೆ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭ ಸುದ್ದಿಗೋಷ್ಟಿ ನಡೆಸಿದ ಹೆಚ್​ಡಿ ದೇವೇಗೌಡ ಪ್ರತಿ ವರ್ಷ ಮನೆಯಲ್ಲಿ ಮೊದಲನೇ ದಿನ ನೀರು ತುಂಬುವುದು ಸಂಪ್ರದಾಯ. ಎರಡನೇ ದಿನ ಲಕ್ಷ್ಮಿ ಪೂಜೆ ಮಾಡ್ತೀವಿ. ಈ ಕಚೇರಿ ಕಟ್ಟುವಾಗ […]

TV9kannada Web Team

| Edited By: sadhu srinath

Nov 04, 2021 | 11:46 AM


ಬೆಂಗಳೂರು: ರಾಜ್ಯ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ದೀಪಾವಳಿ ಅಂಗವಾಗಿ ಲಕ್ಷ್ಮೀ ಪೂಜೆ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಿನ್ನೆಲೆ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭ ಸುದ್ದಿಗೋಷ್ಟಿ ನಡೆಸಿದ ಹೆಚ್​ಡಿ ದೇವೇಗೌಡ ಪ್ರತಿ ವರ್ಷ ಮನೆಯಲ್ಲಿ ಮೊದಲನೇ ದಿನ ನೀರು ತುಂಬುವುದು ಸಂಪ್ರದಾಯ. ಎರಡನೇ ದಿನ ಲಕ್ಷ್ಮಿ ಪೂಜೆ ಮಾಡ್ತೀವಿ. ಈ ಕಚೇರಿ ಕಟ್ಟುವಾಗ ಕಷ್ಟ ಕಾಲ ಇತ್ತು. ಹಳೇ ಬಿಲ್ಡಿಂಗ್ ಕುರಿತಾದ ಕೋರ್ಟ್ ಆದೇಶದಿಂದಾಗಿ ಅಲ್ಲಿಂದ ಹೊರ ಬಂದೆವು. ಕೆ.ಆರ್.ಪುರಂದಿಂದ ಸ್ನೇಹಿತರು ಬಂದು 18 ಲಕ್ಷ ರೂಪಾಯಿ ಕೂಡಿಸಿದರು. ನಂತರ ಶೆಡ್ ಹಾಕಲಾಯ್ತು. ತುಂಬಾ ಕಷ್ಟಸ ಸಮಯದಲ್ಲಿ ಬಿಲ್ಡಿಂಗ್ ಕಟ್ಟಿದೆವು ಎಂದು ವಿವರಿಸಿದರು.

ಈ ವೇಳೆ ರಾಜಕೀಯವಾಗಿ ತಮ್ಮ ಭವಿಷ್ಯದ ಕನಸುಗಳನ್ನು ಹಂಚಿಕೊಂಡ ಜೆಡಿಎಸ್ ಅಧಿನಾಯಕ ಹೆಚ್​ಡಿ ದೇವೇಗೌಡ ಅವರು 2023 ಕ್ಕೆ ಚುನಾವಣೆಗೆ ನಾನು ಆಕ್ಟೀವ್ ಆಗಿ ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ. ನಿನ್ನೆ ಕುಮಾರಸ್ವಾಮಿ, ಹೆಚ್ ಕೆ ಕುಮಾರಸ್ವಾಮಿ ತಿಪ್ಪೇಸ್ವಾಮಿ ಮೀಟಿಂಗ್ ಮಾಡಿದ್ವಿ. ಮೂರು ಗಂಟೆಗೂ ಹೆಚ್ಚ ಕಾಲ ಚರ್ಚೆ ಆಯ್ತು. ಅನೇಕ ಯೋಜನೆ ಯೋಜಿಸಿದ್ದಾರೆ. ಎಲ್ಲರೂ ಆಕ್ಟೀವ್ ಆಗಿ ಕೆಲಸ ಮಾಡಬೇಕು ಎಂದು ಆಶಿಸಿದರು.

ಅಕ್ಟೋಬರ್ 8 ರಿಂದ ಎರಡನೇ ಹಂತದ ಕಾರ್ಯಗಾರ:

8 ರಿಂದ ಎರಡನೇ ಹಂತದ ಕಾರ್ಯಗಾರ ಇರಲಿದೆ. ಅಲ್ಲಿಂದ ಕಾರ್ಯಕ್ರಮ ಹಾಗೆಯೇ ಮುಂದುವರೆಯಲಿದೆ. ಉಪ ಚುನಾವಣೆ ಫಲಿತಾಂಶ ಬಗ್ಗೆ ಹೇಳಲ್ಲ. ನಮಗೆ ಹೇಗೆ ಫಲಿತಾಂಶ ಬಂದಿದೆಯೋ ಅದನ್ನು ಸ್ವೀಕಾರ ಮಾಡ್ತೀವಿ. ಜನರ ತೀರ್ಮಾನದಂತೆ ಹೋಗ್ತೀವಿ. ಪ್ರಾದೇಶಿಕ ಪಕ್ಷ ಉಳಿಯಲು ಕೆಲಸ ಮಾಡ್ತೀವಿ ಎಂದು ದೇವೇಗೌಡ ಹೇಳಿದರು.

ಯಾವುದೇ ಪಕ್ಷ ಕಟ್ಟೋದಕ್ಕೆ ಆರ್ಥಿಕ ಶಕ್ತಿ ಮುಖ್ಯ. ಕಾಂಗ್ರೆಸ್ ಮತ್ತು ಬಿಜೆಪಿ ಬಳಿ ಹಣ ಎಷ್ಟಿದೆ ಅಂತ ಪುನರುಚ್ಚಾರ ಮಾಡಲ್ಲ. ಇಂದು ಪ್ರಾದೇಶಿಕ ಪಕ್ಷ ಉಳಿಸಬೇಕು. ಆರ್ಥಿಕತೆ ಬೇಕು, ಈ ಜವಾಬ್ದಾರಿಯನ್ನ ಎಲ್ಲರೂ ಹೊರಬೇಕು. ಕುಮಾರಸ್ವಾಮಿ ಹಾಗೂ ನಾನು ಐದು ಪಂಚರತ್ನ ಯೋಜನೆ ಮಾಡಲು ಯೋಜಿಸಿದೆವು. ನಮ್ಮ ಎಂಎಲ್​ಎ, ಎಂಎಲ್​ಸಿಗಳನ್ನು ಕರೆದು ಕಾರ್ಯಾಗಾರ ಮಾಡಿದ್ವಿ. ಮಹಿಳಾ, ಯುವ, ಮುಸ್ಲಿಂ, ಕ್ರಿಶ್ಚಿಯನ್, ಒಬಿಸಿ ಹೀಗೆ ಎಲ್ಲರನ್ನು ಕರೆದು ಕಾರ್ಯಾಗಾರ ಮಾಡಿದೆ. ಏಳು ದಿನಗಳ ಕಾರ್ಯಕ್ರಮ ಅದಾಗಿತ್ತು. ಅದು ಉತ್ತಮ ಕಾರ್ಯಕ್ರಮವಾಗಿತ್ತು. ಅದಕ್ಕೆ ಹಣ ಜೋಡಿಸಲು ಏನು ತೊಂದರೆ ಆಯ್ತು ಗೊತ್ತಿದೆ. ಉಪ ಚುನಾವಣೆಗೂ ಎಷ್ಟು ಶ್ರಮಪಟ್ಟರೂ ಅಂತಾನೂ ಗೊತ್ತಿದೆ ಎಂದು ಹೆಚ್ ಡಿಡಿ ಹೇಳಿದರು.

EX PM HD Devegowda Press Meet | ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ದೇವೇಗೌಡ ಸುದ್ದಿಗೋಷ್ಠಿ | TV9Kannada

(set eyes on 2023 general elections and will work on it says jds supremo hd devegowda)

Follow us on

Related Stories

Most Read Stories

Click on your DTH Provider to Add TV9 Kannada