ಕೊಟ್ಟ ಮಾತಿಗೆ ನಡೆಯದಿದ್ರೆ 1 ಸೆಕೆಂಡ್ ಸಹ ಅಧಿಕಾರದಲ್ಲಿ ಇರಲ್ಲ: ಸಿದ್ದರಾಮಯ್ಯ ಶಪಥ
ನಾವು ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲರ ಬೇಡಿಕೆ ಈಡೇರಿಸುತ್ತೇವೆ. ಕೊಟ್ಟ ಮಾತಿಗೆ ನಡೆಯದಿದ್ರೆ 1 ಸೆಕೆಂಡ್ ಸಹ ಅಧಿಕಾರದಲ್ಲಿ ಇರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾಗಲಕೋಟೆ: ನಾವು ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲರ ಬೇಡಿಕೆ ಈಡೇರಿಸುತ್ತೇವೆ. ಕೊಟ್ಟ ಮಾತಿಗೆ ನಡೆಯದಿದ್ರೆ 1 ಸೆಕೆಂಡ್ ಸಹ ಅಧಿಕಾರದಲ್ಲಿ ಇರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, 165 ಭರವಸೆ ನೀಡಿದ್ದೆವು, ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಹುನಗುಂದ ಕ್ಷೇತ್ರಕ್ಕೆ ನಾಲ್ಕೂವರೆ ಸಾವಿರ ಕೋಟಿ ಅನುದಾನ ನೀಡಿದ್ದೆವು. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ಬಿಜೆಪಿ ಸುಳ್ಳಿನ ಕಾರ್ಖಾನೆ. ಬಿಜೆಪಿಯವರು ಅಂದರೆ ಮಾನಗೆಟ್ಟವರು, ಲಜ್ಜೆಗೆಟ್ಟವರು. ಸಿದ್ದರಾಮಯ್ಯರನ್ನು ಮುಗಿಸ್ತೀವಿ ಅಂತಾ ಹೇಳ್ತಾರಲ್ಲ ಇದು ಸರಿನಾ ಎಂದು ಪ್ರಶ್ನಿಸಿದರು.
ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ. ಒಬ್ಬ ಸಿದ್ದರಾಮಯ್ಯ ಹೋದರೆ ಸಾವಿರಾರು ಸಿದ್ದರಾಮಯ್ಯ ಜನಿಸ್ತಾರೆ. ರೈತರು, ಬಡವರು, ಯುವಕರು, ಶ್ರಮಿಕರ ಪರ ಹೋರಾಟ ಮಾಡ್ತಿದ್ದೇನೆ. ಇದು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹರಿಹಾಯ್ದರು.
ಇದನ್ನೂ ಓದಿ: ಅಜ್ಜಿ ಮನೆಯಲ್ಲಿ ಬೆಕ್ಕು ಮರಿ ಹಾಕಿತ್ತು: ಬೆಕ್ಕಿನ ಕಥೆ ಹೇಳಿ ಕಾಂಗ್ರೆಸ್ಗೆ ಟಾಂಗ್ ಕೊಟ್ಟ ತೇಜಸ್ವಿ ಸೂರ್ಯ
ಜನರ ಹಣ ಜನರಿಗೆ ಖರ್ಚು ಮಾಡಿದರೆ ಯಾಕೆ ಹೊಟ್ಟೆ ಉರಿ
ಅಮಿತ್ ಶಾ ಬಿಜೆಪಿ ಮಹಾನಾಯಕ. ಮುಂದಿನ ಚುನಾವಣೆಯಲ್ಲಿ ಅಬ್ಬಕ್ಕ ವರ್ಸಸ್ ಟಿಪ್ಪು ಅಂತಾರೆ. ಕಟೀಲ್ ರಸ್ತೆ, ಚರಂಡಿ ಬಗ್ಗೆ ಮಾತಾಡಬೇಡಿ ಲವ್ ಜಿಹಾದ್ ಬಗ್ಗೆ ಮಾತಾಡಿ ಅಂತಾರೆ. ಇದರಿಂದ ಜನರ ಹೊಟ್ಟೆ ತುಂಬುತ್ತಾ? ಜನರ ಸಮಸ್ಯೆ ಬಗೆಹರಿಯುತ್ತಾದಾ ಎಂದು ಪ್ರಶ್ನಿಸಿದರು. ಏಳು ಕೆಜಿ ಅಕ್ಕಿ ಕೊಟ್ಟರೆ ನಿಮ್ಮಪ್ಪನ ಗಂಟು ಹೋಗುತ್ತಾ ಅಂದೆ. ಜನರ ಹಣ ಜನರಿಗೆ ಖರ್ಚು ಮಾಡಿದರೆ ಯಾಕೆ ಹೊಟ್ಟೆ ಉರಿಯಪ್ಪಾ ಯಡಿಯೂರಪ್ಪ, ಮಿಸ್ಟರ್ ಬೊಮ್ಮಾಯಿ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
ವಿಧಾನಸೌಧದ ಗೋಡೆಗಳು ಲಂಚ ಲಂಚ ಅಂತಿವೆ
ಮೋದಿ ಅಚ್ಚೆ ದಿನ್ ಆಯೆಗಾ ಅಂದ್ರು. ಆದರೆ ಎಲ್ಲ ಬೆಲೆ ಏರಿಕೆ ಆಗಿದೆ. ಇದಕ್ಕೆ ಅಚ್ಚೆ ದಿನ ಅಂತ ಕರಿಬೇಕು. ಮೋದಿ ನಾ ಖಾವುಂಗಾ ನಾ ಖಾನೆದೂಂಗಾ ಅಂದರು. 40 ಪರ್ಸೆಂಟ್ ಕಮೀಷನ್ ಯಾಕೆ ನಡೆಯಿತು. ಈ ಬಗ್ಗೆ ಮೋದಿ ಒಂದೇ ಒಂದು ಆ್ಯಕ್ಷನ್ ತಗೊಳ್ಳಲಿಲ್ಲ. ಅಲಿಬಾಬಾ 40 ಚೋರ್ ಕಳ್ಳರು ಅಂತಹ ಸರಕಾರ ಇದು. ವಿಧಾನಸೌಧದ ಗೋಡೆಗಳು ಲಂಚ ಲಂಚ ಅಂತಿವೆ ಎಂದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿಲ್ಲ, ಸಿದ್ದರಾಮಯ್ಯ ಹೇಳಿಕೆಗೆ ಗೋವಿಂದ ಕಾರಜೋಳ ಆಕ್ಷೇಪ
ವಿಜಯಾನಂದ ಕಾಶಪ್ಪನವರ ಗೆದ್ರೆ ಸಿದ್ದರಾಮಯ್ಯನೆ ಗೆದ್ದಂತೆ. ಕಾಶಪ್ಪನವರ ಅವರನ್ನು ಗೆಲ್ಲಿಸ್ತಿರಿ ಅಲ್ವಾ ಎಂದು ಜನರನ್ನು ಪ್ರಶ್ನಿಸಿದರು. ಭೂಮಿ ಮೇಲೆ ಸೂರ್ಯ ಹುಟ್ಟೋದು ಎಷ್ಟು ಸತ್ಯಾನೋ ಕಾಶಪ್ಪನವರ ಗೆಲ್ಲೋದು ಅಷ್ಟೇ ಸತ್ಯ. ಮತ್ತೆ ಹುನಗುಂದ ಕ್ಷೇತ್ರ ಅಭ್ಯರ್ಥಿ ಎಂದು ಕಾಶಪ್ಪನವರ ಹೆಸರನ್ನು ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:10 pm, Wed, 22 February 23