ತುಮಕೂರಿನಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ; ಜಿಲ್ಲೆಯಲ್ಲಿ ಇದ್ದರೂ ಸಮಾವೇಶಗಳಿಗೆ ಬಾರದ ಡಾ ಜಿ ಪರಮೇಶ್ವರ್

ತುಮಕೂರಿನಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ; ಜಿಲ್ಲೆಯಲ್ಲಿ ಇದ್ದರೂ ಸಮಾವೇಶಗಳಿಗೆ ಬಾರದ ಡಾ ಜಿ ಪರಮೇಶ್ವರ್
ತುಮಕೂರಿನಲ್ಲಿ ನಡೆದ ಮಡಿವಾಳ ಸಮಾಜದ ಸಮಾವೇಶ

ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ ಅಂತಾ ಮತ್ತೊಮ್ಮೆ ಸಾಬೀತಾಗಿದೆ. ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕರುಗಳ ಮಧ್ಯೆ ಮುನಿಸು, ಭಿನ್ನಾಭಿಪ್ರಾಯಗಳು ಪದೇ ಪದೇ ಗೊಚರವಾಗುತ್ತಿವೆ.

TV9kannada Web Team

| Edited By: sandhya thejappa

May 23, 2022 | 9:03 AM

ತುಮಕೂರು: ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ (Congress) ಭರ್ಜರಿ ತಯಾರಿ ನಡೆಸಿದ್ದು, ನಿನ್ನೆ (ಮೇ 22) ಜಿಲ್ಲೆಯಲ್ಲಿ ಎರಡು ಬೃಹತ್ ಸಮಾವೇಶಗಳು ನಡೆದಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಬಣದಿಂದ ಮೊದಲು ಅಹಿಂದ ಅಸ್ತ್ರ ಪ್ರಯೋಗಿಸಲಾಗಿದೆ. ಇದರಂತೆ ನಿನ್ನೆ ಮಡಿವಾಳ ಸಮಾಜದ ರಾಜ್ಯ ಸಮಾವೇಶ ಹಾಗೂ ಅಲ್ಪಸಂಖ್ಯಾತರ ಜಿಲ್ಲಾ ಸಮಾವೇಶ ನಡೆಸಲಾಗಿದೆ. ಆದರೆ ಈ ಸಮಾವೇಶಕ್ಕೆ ಡಿಸಿಎಮ್ ಡಾ. ಜಿ ಪರಮೇಶ್ವರ್ ಭಾಗಿಯಾಗಿರಲಿಲ್ಲ. ಜಿಲ್ಲೆಯಲ್ಲಿ ಇದ್ದರೂ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.

ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ ಅಂತಾ ಮತ್ತೊಮ್ಮೆ ಸಾಬೀತಾಗಿದೆ. ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕರುಗಳ ಮಧ್ಯೆ ಮುನಿಸು, ಭಿನ್ನಾಭಿಪ್ರಾಯಗಳು ಪದೇ ಪದೇ ಗೊಚರವಾಗುತ್ತಿವೆ. ನಿನ್ನೆ ನಡೆದ ಮಡಿವಾಳ ಸಮಾಜದ ಸಮಾವೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಸಮುದಾಯದ ಮುಖಂಡರಿಂದ ಹಿಡಿದು ಮಾಜಿ ಶಾಸಕ ಕೆಎನ್ ರಾಜಣ್ಣವರೆಗೂ ಸಿದ್ದರಾಮಯ್ಯರನ್ನ ಹಾಡಿಹೊಗಳಿದ್ದಾರೆ. ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ನಂಜಪ್ಪ ಸಿದ್ದರಾಮಯ್ಯರೇ ನಮಗೆಲ್ಲ ಅಂತಾ ಹೊಗಳಿ, ಸಮಾಜ ನಿಮ್ಮ ಜೊತೆ ಇರುತ್ತೆ ಅಂತಾ ಹೇಳಿದರು.

ಈ ಬೃಹತ್ ಸಮಾವೇಶಕ್ಕೆ ಮಾಜಿ ಡಿಸಿಎಮ್ ಪರಮೇಶ್ವರ್ ಗೈರಾಗಿದ್ದರು. ತುಮಕೂರಿನ ಹೆಗ್ಗೆರೆಯ ಸಿದ್ದಾರ್ಥ ಮೆಡಿಕಲ್ ಕಾಲೇಜು ಪಕ್ಕದಲ್ಲೇ ಸಮಾವೇಶ ನಡೆದರೂ ಕೂಡ ಸಮಾವೇಶಕ್ಕೆ ಬಂದಿಲ್ಲ. ಶನಿವಾರವೇ ಪರಮೇಶ್ವರ್, ಸಿದ್ದರಾಮಯ್ಯ ಸೇರಿದಂತೆ ಪ್ರಮುಖರಿಗೆ ತಮ್ಮ ಕಾಲೇಜಿನಲ್ಲೇ ಉಪಹಾರ ವ್ಯವಸ್ಥೆ ತಯಾರಿ ಮಾಡಲು ಸಿದ್ಧತೆ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಶ್ರೀಲೀಲಾ ನಟನೆ; ಯಾವ ಪಾತ್ರ? ಇಲ್ಲಿದೆ ಟ್ವಿಸ್ಟ್..​

ನೆಪ ಮಾತ್ರಕ್ಕೆ ಬಂದು ಹೋದರಾ ಡಿಕೆಶಿ?: ಮಡಿವಾಳ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಂದರೂ ಕೂಡ ಹೆಚ್ಚು ಕಾಲ ಕಾರ್ಯಕ್ರಮದಲ್ಲಿ ಉಳಿಯಲಿಲ್ಲ. ಕಾರ್ಯಕ್ರಮಕ್ಕೆ ಬಂದು ಸಮಾವೇಶ ಉದ್ಘಾಟಿಸಿ, ಭಾಷಣ ನೇರವೇರಿಸಿ ಕನಕಪುರದಲ್ಲಿ ಕಾರ್ಯಕ್ರಮ ಇದೆ ಅಂತಾ ಹೊರಟು ಹೋದರು.

ಇದಾದ ಬಳಿಕ ತುಮಕೂರಿನ ಗ್ಲಾಸ್ ಹೌಸ್ನಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಸಮಾವೇಶಕ್ಕೆ ಸಿದ್ದರಾಮಯ್ಯ ಆಗಮಿಸಿದರು. ಇಲ್ಲೂ ಕೂಡ ನಾಯಕರ ಅಸಮಾಧಾನ ಹೊಗೆ ಎದ್ದು ಕಾಣಿಸಿದೆ. ಡಾ ಜಿ ಪರಮೇಶ್ವರ್ ಇಲ್ಲೂ ಕೂಡ ಬಾರದೇ ತಮ್ಮ ಮುನಿಸು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ತ ಡಿಕೆಶಿ ಕೂಡ ಕಾಯದೇ ಅಲ್ಪಸಂಖ್ಯಾತ ಸಮಾವೇಶದಲ್ಲಿ ಮೊದಲೇ ಭಾಷಣ ಮಾಡಿ ಹೊರಟು ಹೋಗಿದ್ದರು. ಈ ಎಲ್ಲಾ ಬೆಳವಣಿಗೆ ಗಮನಿಸಿದಾಗ ಕಾಂಗ್ರೆಸ್ನಲ್ಲಿ ಅಸಮಧಾನ ಇರುವುದು ಸಾಬೀತಾಗಿದೆ.

ವರದಿ: ಮಹೇಶ್

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಲಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada