ಆರಂಭದಲ್ಲಿ ಅನುಮಾನ! ಕಾಲಾಂತರದಲ್ಲಿ ಗಟ್ಟಿಯಾಗಿ ನೆಲೆಯೂರಿದ EVMಗಳ ಯಶಸ್ಸಿನ ಕತೆ: ಏನಿದರ ಬೆಳವಣಿಗೆಯ ರಹಸ್ಯ?
ಅಂದಿನ ಅನಕ್ಷರಸ್ಥ ಭಾರತದಲ್ಲಿ ದುರ್ಬಲ ನಾಗರಿಕರಿಗೆ ಪೇಪರ್ ಬ್ಯಾಲೆಟ್ ವ್ಯವಸ್ಥೆಯಲ್ಲಿ ಮತ ಚಲಾಯಿಸುವುದಕ್ಕೆ ಸಾಕಷ್ಟು ಅಡ್ಡಿ ಆತಂಕಗಳಿದ್ದವು. ಇದು ಬಲಾಢ್ಯ ರಾಜಕಾರಣಿಗಳಿಗೆ ಅನುಕೂಲಸಿಂಧು ಆಗುತ್ತಿತ್ತು. ದೇಶದಿಂದ ಕಾಲ್ತೆಗೆದಿದ್ದ ಬ್ರಿಟೀಷರು ಸೇರಿದಂತೆ ಮುಂದುವರಿದ ದೇಶಗಳ ನಾಯಕರು ಅಂಬೆಗಾಲಿಡುತ್ತಿದ್ದ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅವಹೇಳನ ಮಾಡತೊಗಿದ್ದರು. ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಪ್ರಜಾಪ್ರಭುತ್ವ/ ಮತದಾನ ಎಂಬುದು ಭಾರತಕ್ಕೆ ಹೇಳಿಮಾಡಿಸಿದ್ದಲ್ಲ ಎಂದು ವ್ಯಂಗ್ಯವಾಗತೊಡಗಿದ್ದರು. ಆದರೆ ಹರಿದು ಹಂಚಿಕೆಯಾಗಿದ್ದ ಮತಪತ್ರ ಚುನಾವಣೆಗೆ ಗುಡ್ಬೈ ಹೇಳುವ ಕಾಲ ಬಂದಿತ್ತು.

ಆ ಕಾಲಕ್ಕೆ ಮಹಾ ಚುನಾವಣೆಗಳು ನಡೆಯುತ್ತಿದ್ದುದ್ದೇ ಹಾಗೆ. ದುಡ್ಡು ಮತ್ತು ತೋಳಿನ ಶಕ್ತಿಯನ್ನೇ ಅಸ್ತ್ರವಾಗಿಸಿಕೊಂಡಿದ್ದ ಬಲಾಢ್ಯ ರಾಜಕಾರಣಿಗಳು ಚುನಾವಣೆಗಳನ್ನು ಗೆಲ್ಲುತ್ತಿದ್ದರು. ಭಾರತದ ರಾಜಕೀಯದಲ್ಲಿ Money and Muscle Power ಪಾತ್ರ ಮಿತಿಮೀರಿತ್ತು. ವಾಸ್ತವದಲ್ಲಿ ಪ್ರಜಾಪ್ರಭುತ್ವದ ಮುಖ್ಯ ಆಶಯಕ್ಕೆ ಎಳ್ಳು ನೀರು ಬಿಡಲಾಗಿತ್ತು. ನಿಜವಾದ ಕಾಳಜಿಯೊಂದಿಗೆ ಜನ ಸೇವೆ ಮಾಡುವುದು ಗಗನಕುಸುಮವಾಗಿತ್ತು. ದುಡ್ಡಿನ ಆಮಿಷವೊಡ್ಡಿ ಮತ ಹಾಕಿಸಿಕೊಳ್ಳಲಾಗುತ್ತಿತ್ತು. ಇಲ್ಲಾಂದ್ರೆ ತೋಳಿನ ಶಕ್ತಿ ಬಳಸಿ ಮತದಾರರನ್ನು ಹೆದರಿಸಿ, ಬೆದರಿಸಿ ಓಲೈಕೆ ಮಾಡಲಾಗುತ್ತಿತ್ತು. ಆದರೆ ಇದು ಇಷ್ಟಕ್ಕೇ ನಿಲ್ಲಲಿಲ್ಲ. ಬಲಿಷ್ಟ ದುಷ್ಟ ಜನನಾಯಕರು ಮತಗಟ್ಟೆಯೊಳಕ್ಕೆ ನುಗ್ಗಿ ಮತಪತ್ರಗಳನ್ನು ವಶಪಡಿಸಿಕೊಂಡು ತಮ್ಮ ಪಟಾಲಂಗಳ ಮೂಲಕ ತಮ್ಮ ಗುರ್ತಿಗೆ ಮತ ಒತ್ತಿಸಿಕೊಳ್ಳುತ್ತಿದ್ದರು. ಇದಿಷ್ಟೂ ರಾಜಕಾರಣಿಗಳ ಮುಖವಾಡವಾಗಿದ್ದರೆ ಇದಕ್ಕೆ ಮತ್ತೊಂದು ಆಯಾಮವೂ ಸೇರಿಕೊಂಡಿತ್ತು. ಅದು ತಾಂತ್ರಿಕವಾಗಿ ಎದುರಾಗುತ್ತಿದ್ದ ಸಮಸ್ಯೆಗಳು. ಅಂದರೆ ಮತಪತ್ರಗಳ ಪಾಲನೆ. ಬೃಹತ್ ಭಾರತದಲ್ಲಿ ಅದು ಹೇಳಿಕೇಳಿ ಕಾಗದದ ಮತಪತ್ರ ಪದ್ಧತಿ (paper ballot system) ಇದ್ದ ಕಾಲ. ಅವುಗಳ ಮುದ್ರಣ, ರಕ್ಷಣೆ, ಮತ ಪತ್ರಗಳ ಸಾಗಣೆ, ವೆಚ್ಚ ಕೊನೆಗೆ ಮತ ಎಣಿಕೆ ಇವೇ ಮುಂತಾದ ಬೃಹತ್ ಸಮಸ್ಯೆಗಳೂ ತಾಂಡವವಾಗತೊಡಗಿದ್ದವು. ಸರಿಯಾಗಿ ಅದೇ ಕಾಲಕ್ಕೆ ಪ್ರಜ್ಞಾವಂತ ಮತದಾರ ಜಾಗೃತನಾಗತೊಡಗಿದ್ದ. ಚುನಾವಣೆ/ ಮತದಾನ ಎಂಬ ಈ ಬೃಹತ್ ನಾಟಕದಲ್ಲಿ ಹೊಸತನ್ನು ಬಯಸತೊಡಗಿದ್ದ. ಹೇಗಾದರೂ ಮಾಡಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಪರಿಣಮಿಸಿದ್ದ ದುಡ್ಡು ಮತ್ತು ತೋಳಿನ ಶಕ್ತಿ ಕುತಂತ್ರವನ್ನು ಹಿಮ್ಮೆಟ್ಟಿಸಲು ಹಾತೊರೆಯುತ್ತಿದ್ದ. ಇಲ್ಲಿ ಮತ್ತೂ ಒಂದು ಅಹಿತಕರ ವಿದ್ಯಮಾನ ನಡೆಯುತ್ತಿತ್ತು. ಬಲಾಢ್ಯ ರಾಜಕಾರಣಿಗಳ ಕುತಂತ್ರದಿಂದ ಬೇಸತ್ತು ಹೆಚ್ಚಾಗಿ ಜನ ಮತಗಟ್ಟೆಗಳತ್ತ ಸುಳಿಯುತ್ತಿರಲಿಲ್ಲ. ಅಂದರೆ ಮತದಾನ...
Published On - 2:37 pm, Sat, 11 May 24




