ಹಾಸನದಲ್ಲೇ ಯಾಕೆ ಕೆಂಪೇಗೌಡರ ಜಯಂತಿ ಮಾಡಿದ್ರು? ಸರ್ಕಾರಕ್ಕೆ ಪ್ರಶ್ನಿಸಿದ ಹೆಚ್ಡಿ ರೇವಣ್ಣ
ಜೂ.27 ರಾಜ್ಯ ಸರ್ಕಾರ ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗಡೆ ಹಾಸನ ಜಿಲ್ಲೆಯಲ್ಲಿ ಹಮ್ಮಿಕೊಂಡಿತ್ತು. ಈ ವಿಚಾರವಾಗಿ ‘ಕಾರ್ಯಕ್ರಮದ ತಯಾರಿ ಸಭೆಗೆ ನನ್ನನ್ನ ಕರೆದಿರಲಿಲ್ಲ, ಉಸ್ತುವಾರಿ ಸಚಿವರ ಕಛೇರಿಯಿಂದಲೂ ಕರೆ ಬಂದಿರಲಿಲ್ಲವೆಂದು ಮಾಜಿ ಸಚಿವ ಎಚ್.ಡಿ ರೇವಣ್ಣನವರು ಹೇಳಿದ್ದಾರೆ.
ಹಾಸನ: ಜೂ.27 ರಾಜ್ಯ ಸರ್ಕಾರ ಕೆಂಪೇಗೌಡ ಜಯಂತಿ(Kempegowda Jayanthi)ಯನ್ನು ಅದ್ದೂರಿಯಾಗಿ ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗಡೆ ಹಾಸನ ಜಿಲ್ಲೆಯಲ್ಲಿ ಹಮ್ಮಿಕೊಂಡಿತ್ತು. ಈ ವಿಚಾರವಾಗಿ ‘ಕಾರ್ಯಕ್ರಮದ ತಯಾರಿ ಸಭೆಗೆ ನನ್ನನ್ನ ಕರೆದಿರಲಿಲ್ಲ, ಉಸ್ತುವಾರಿ ಸಚಿವರ ಕಛೇರಿಯಿಂದಲೂ ಕರೆ ಬಂದಿರಲಿಲ್ಲವೆಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ(HD Revanna)ನವರು ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್ನವರು ಹಾಸನದಲ್ಲೇ ಯಾಕೆ ಕೆಂಪೇಗೌಡರ ಜಯಂತಿ ಮಾಡಿದ್ರು, ಏನು ದೃಷ್ಠಿ ಇತ್ತು ಎಂದು ಪ್ರಶ್ನಿಸಿದ ಅವರು ಜುಲೈ 10 ಕ್ಕೆ ನಮ್ಮ ಕ್ಷೇತ್ರದಲ್ಲಿಯೇ ದೊಡ್ಡದಾಗಿ ಕೆಂಪೇಗೌಡರ ಜಯಂತಿ ಮಾಡುತ್ತೇವೆ ಎಂದರು.
ಇನ್ನು ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು ‘ನಮ್ಮ ಪಕ್ಷದ ನಾಯಕರ ಜೊತೆ ಕೂತು ಚರ್ಚೆ ಮಾಡುತ್ತೇವೆ. ಇನ್ನೂ ಕೂಡ ಸಾಕಷ್ಟು ಸಮಯಾವಕಾಶ ಇದ್ದು, ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ಯಾರಿಗೆ ಟಿಕೆಟ್ ಕೊಡಬೇಕು, ಯಾರನ್ನ ಯಾವ ಕ್ಷೇತ್ರದಲ್ಲಿ ನಿಲ್ಲಿಸಬೇಕು ಎಲ್ಲವನ್ನೂ ಗಮನಿಸಬೇಕಾಗುತ್ತದೆ. ಆದಕ್ಕೊಸ್ಕರ ನಮ್ಮ ಪಕ್ಷದ ನಾಯಕರು ಸೇರಿ ಈ ಕುರಿತು ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಜೆಡಿಎಸ್ ಮುಗಿಸಬೇಕೆಂದು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಯತ್ನ
ಕಾಂಗ್ರೆಸ್ ವಿರುಧ್ದ ಕುಮಾರಸ್ವಾಮಿ ಟೀಕೆ ವಿಚಾರ ‘ ಕುಮಾರಸ್ವಾಮಿ ಹೇಳುವುದರಲ್ಲಿ ತಪ್ಪೇನಿದೆ ಹೇಳಿ. ಕಾಂಗ್ರೆಸ್ನವರು ಹತ್ತು ಕೆಜಿ ಅಕ್ಕಿ ಕೊಡ್ತಿವಿ ಅಂದಿದ್ದರು. ಈಗಾಗಲೇ ಕೊಡುತ್ತಿರುವ ಅಕ್ಕಿ ಜೊತೆಗೆ 5 ಕೆ.ಜಿ ಕೊಡುತ್ತೇವೆಂದು ಹೇಳಿರಲಿಲ್ಲ. ಹಾಗಾಗಿ ಕುಮಾರಸ್ವಾಮಿ ಕೇಳಿದ್ದಾರೆ ಅಷ್ಟೇ, ಈ ಕಾಂಗ್ರೆಸ್ನವರು ಕೇವಲ ಹತ್ತುವರೆ ತಿಂಗಳಲ್ಲಿ ದೇವೇಗೌಡರನ್ನೇ ಮನೆಗೆ ಕಳಿಸಿದ್ರು, ದೇಶದ ಹದಿನೇಳು ರಾಷ್ಟ್ರೀಯ ಪಕ್ಷಗಳು ಮಾಡುತ್ತಿರುವುದು ಅವಕಾಶಸಿಂದ ರಾಜಕಾರಣ. ಜೆಡಿಎಸ್ ಮುಗಿಸಬೇಕು ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಯತ್ನ ಮಾಡುತ್ತಿದ್ದಾರೆ. ಇದು ಯಾರಿಂದಲು ಸಾಧ್ಯವಿಲ್ಲ ಎಂದು ರೇವಣ್ಣ ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ