ನಿಮ್ಮ ಹೆಂಡತಿಯೂ ಕಾಂಗ್ರೆಸ್​ ಬಿಡಲು ಸಿದ್ಧರಿದ್ದಾರಾ?; ಅಮರಿಂದರ್ ಸಿಂಗ್​ಗೆ ನವಜೋತ್ ಸಿಧು ಲೇವಡಿ

TV9 Digital Desk

| Edited By: Sushma Chakre

Updated on:Nov 03, 2021 | 5:09 PM

"ನೀವು ಗುಡುಗು-ಸಿಡಿಲಿನ ಹೊಡೆತಕ್ಕೆ ಸಿಲುಕಿ ಸಾಯುತ್ತಿರುವ ಬಾತುಕೋಳಿ. ನಿಮ್ಮ ಹೆಂಡತಿ ಪ್ರಣೀತ್ ಕೌರ್ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಾರೆಯೇ?" ಎಂದು ಮಾಧ್ಯಮಗಳ ಎದುರು ಕ್ಯಾಪ್ಟನ್​ ಅಮರಿಂದರ್ ಸಿಂಗ್​ಗೆ ನವಜೋತ್ ಸಿಂಗ್ ಸಿಧು ಪ್ರಶ್ನೆ ಹಾಕಿದ್ದಾರೆ.

ನಿಮ್ಮ ಹೆಂಡತಿಯೂ ಕಾಂಗ್ರೆಸ್​ ಬಿಡಲು ಸಿದ್ಧರಿದ್ದಾರಾ?; ಅಮರಿಂದರ್ ಸಿಂಗ್​ಗೆ ನವಜೋತ್ ಸಿಧು ಲೇವಡಿ
ನವಜೋತ್ ಸಿಂಗ್ ಸಿಧು

Follow us on

ಚಂಡೀಗಢ: ಪಂಜಾಬ್​ನ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿನ್ನೆಯಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಇಂದು ಅಮರಿಂದರ್ ಸಿಂಗ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು, ಅಮರಿಂದರ್ ಸಿಂಗ್ ಬಿರುಗಾಳಿಗೆ ಸಾಯುತ್ತಿರುವ ಬಾತುಕೋಳಿ ಎಂದು ಕಟುವಾಗಿ ಟೀಕಿಸಿದ್ದಾರೆ. ಅಮರಿಂದರ್ ಸಿಂಗ್ ಅವರ ಹೆಂಡತಿಯೇ ಅವರ ಬೆನ್ನಿಗೆ ನಿಲ್ಲುತ್ತಿಲ್ಲ. ನೀವು ಹೊಸ ಪಕ್ಷ ಕಟ್ಟುವುದೇ ಹೌದಾದರೆ ನಿಮ್ಮ ಹೆಂಡತಿಯೂ ಕಾಂಗ್ರೆಸ್​ ತೊರೆಯಲು ಸಿದ್ಧರಿದ್ದಾರಾ? ಎಂದು ಸಿಧು ಲೇವಡಿ ಮಾಡಿದ್ದಾರೆ.

ಅಮರಿಂದರ್ ಸಿಂಗ್ ಅವರ ಪತ್ನಿ ಕೂಡ ಅವರೊಂದಿಗೆ ನಿಲ್ಲುತ್ತಿಲ್ಲ ಎಂದು ಹೇಳಿರುವ ನವಜೋತ್ ಸಿಂಗ್ ಸಿಧು, ಪ್ರಣೀತ್ ಕೌರ್ ಕೂಡ ಕಾಂಗ್ರೆಸ್ ತೊರೆಯುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ಪಂಜಾಬ್ ಮಾಜಿ ಸಿಎಂ ಈಗ ಸೋತಿದ್ದಾರೆ. ಅವರೊಂದಿಗೆ ಅವರ ಕುಟುಂಬವೂ ಬೆಂಬಲವಾಗಿ ನಿಂತಿಲ್ಲ ಎಂದು ಸಿಧು ಟೀಕಿಸಿದ್ದಾರೆ.

“ನೀವು ಗುಡುಗು-ಸಿಡಿಲಿನ ಹೊಡೆತಕ್ಕೆ ಸಿಲುಕಿ ಸಾಯುತ್ತಿರುವ ಬಾತುಕೋಳಿ. ನಿಮ್ಮ ಹೆಂಡತಿ ಕೂಡ ನಿಮ್ಮೊಂದಿಗೆ ನಿಲ್ಲುತ್ತಿಲ್ಲ. ಅವರು ಕಾಂಗ್ರೆಸ್ ಬಿಡುತ್ತಾರೆಯೇ? ಪ್ರಣೀತ್ ಕೌರ್ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಾರೆಯೇ?” ಎಂದು ಮಾಧ್ಯಮಗಳ ಎದುರು ಕ್ಯಾಪ್ಟನ್​ಗೆ ಸಿಧು ಪ್ರಶ್ನೆ ಹಾಕಿದ್ದಾರೆ.

ಅಮರಿಂದರ್ ಸಿಂಗ್ ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಹಾಗೇ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ‘ಪಂಜಾಬ್ ಲೋಕ ಕಾಂಗ್ರೆಸ್’ ಎಂಬ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಭಿನ್ನಾಭಿಪ್ರಾಯದಿಂದಲೇ ಪಕ್ಷವನ್ನು ತೊರೆಯುವುದಾಗಿ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಅಮರಿಂದರ್ ಸಿಂಗ್ ಉಲ್ಲೇಖಿಸಿದ್ದರು.

ಇದನ್ನೂ ಓದಿ: Punjab Politics ಅಮರಿಂದರ್ ಸಿಂಗ್ ವಿರುದ್ಧ ಸಿಧು ಆಪ್ತರಾದ ಪರಗಟ್ ಸಿಂಗ್, ವಾರಿಂಗ್ ಟೀಕೆ

Captain Amarinder Singh ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada