‘ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿ ಸೇರುತ್ತಿದ್ದಾರೆಂದ ಸಿದ್ದ ರಾಮಯ್ಯಗೆ ಪ್ರಶ್ನೆ- ಪಕ್ಷ ಬಿಟ್ಟು ಹೋದ ನಿನ್ನದೂ ಹೊಟ್ಟೆ ಪಾಡೇ ಅಲ್ಲವೇ?’

ಬೆಂಗಳೂರು: ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿ ಸೇರುತ್ತಿದ್ದಾರೆಂಬ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಹೇಳಿಕೆ ರಾಜ್ಯದಲ್ಲಿ ಪ್ರತಿಭಟನೆಯ ಕಿಡಿ ಹಚ್ಚಿದೆ. ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಸೇರಿದಂತೆ ನಾನಾ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ಕಾಂಗ್ರೆಸ್ ಅಂದ್ರೆ ದಲಿತರು, ದಲಿತರು ಅಂದ್ರೆ ಕಾಂಗ್ರೆಸ್ ಎಂಬ ಸಂದರ್ಭ ಇತ್ತು. ದಲಿತರನ್ನೇ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನ ಆಳುತ್ತಾ ಬಂದಿತ್ತು. ಆದರೀಗ ಒಬ್ಬೊಬ್ಬರಾಗಿ ದಲಿತರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ಈಗ ಕಾಂಗ್ರೆಸ್ ದಲಿತರನ್ನ ಕಳೆದುಕೊಂಡು ಸೋಲುತ್ತಾ ಬಂದಿದ್ದಾರೆ ಎಂದು ಪ್ರತಿಭಟನೆಯಲ್ಲಿ ಬಿಜೆಪಿ ಎಸ್.ಸಿ. ಮೋರ್ಛಾ ರಾಜ್ಯಾಧ್ಯಕ್ಷ ಛಲವಾದಿ […]

‘ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿ ಸೇರುತ್ತಿದ್ದಾರೆಂದ ಸಿದ್ದ ರಾಮಯ್ಯಗೆ ಪ್ರಶ್ನೆ- ಪಕ್ಷ ಬಿಟ್ಟು ಹೋದ ನಿನ್ನದೂ ಹೊಟ್ಟೆ ಪಾಡೇ ಅಲ್ಲವೇ?’
ಸಿದ್ದರಾಮಯ್ಯ ಹಾಗೂ ಛಲವಾದಿ ನಾರಾಯಣಸ್ವಾಮಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 03, 2021 | 1:59 PM

ಬೆಂಗಳೂರು: ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿ ಸೇರುತ್ತಿದ್ದಾರೆಂಬ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಹೇಳಿಕೆ ರಾಜ್ಯದಲ್ಲಿ ಪ್ರತಿಭಟನೆಯ ಕಿಡಿ ಹಚ್ಚಿದೆ. ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಸೇರಿದಂತೆ ನಾನಾ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ಕಾಂಗ್ರೆಸ್ ಅಂದ್ರೆ ದಲಿತರು, ದಲಿತರು ಅಂದ್ರೆ ಕಾಂಗ್ರೆಸ್ ಎಂಬ ಸಂದರ್ಭ ಇತ್ತು. ದಲಿತರನ್ನೇ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನ ಆಳುತ್ತಾ ಬಂದಿತ್ತು. ಆದರೀಗ ಒಬ್ಬೊಬ್ಬರಾಗಿ ದಲಿತರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ಈಗ ಕಾಂಗ್ರೆಸ್ ದಲಿತರನ್ನ ಕಳೆದುಕೊಂಡು ಸೋಲುತ್ತಾ ಬಂದಿದ್ದಾರೆ ಎಂದು ಪ್ರತಿಭಟನೆಯಲ್ಲಿ ಬಿಜೆಪಿ ಎಸ್.ಸಿ. ಮೋರ್ಛಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.

‘ಪಕ್ಷ ಬಿಟ್ಟು ಹೋದ ನಿನ್ನದೂ ಹೊಟ್ಟೆ ಪಾಡೇ ಅಲ್ಲವೇ?’ ಸಿದ್ದರಾಮಯ್ಯ ಇದನ್ನು ಇಷ್ಟಕ್ಕೇ ಬಿಡ್ತೀವಿ ಅಂತಾ ಅನ್ಕೋಬೇಡ. ನಾವು ದಲಿತರು ನಮ್ಮದು ಸಣ್ಣ ಹೊಟ್ಟೆ ಇರಬಹುದು, ನಿನ್ನದು ದೊಡ್ಡ ಹೊಟ್ಟೆ ಇರಬಹುದು.ದಲಿತರನ್ನು ಯಾರನ್ನಾದ್ರೂ ಉದ್ಧಾರ ಆಗೋಕೆ ಬಿಟ್ಯಾ? ಯಾರೋ ದುಡ್ಡಿರೋ ಮುಸ್ಲಿಂ ಒಬ್ಬನನ್ನು ಪಕ್ಕದಲ್ಲಿ ಇಟ್ಟುಕೊಂಡು, ಇಡೀ ಮುಸ್ಲೀಮರನ್ನೇ ಜೊತೆಯಲ್ಲಿ ಇಟ್ಟುಕೊಂಡಿದ್ಯಾ? ಕಾಂಗ್ರೆಸ್ ಲೀಡರ್ಸ್ ಬೋನ್ ಲೆಸ್ ಎಂದು ಛಲವಾದಿ ನಾರಾಯಣ ಸ್ವಾಮಿ ಗುಡುಗಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಹೋಗಿ 14 ವರ್ಷಗಳಾಯ್ತು. ಪಕ್ಷ ಬಿಟ್ಟು ಹೋದ ನಿನ್ನದೂ ಹೊಟ್ಟೆ ಪಾಡೇ ಅಲ್ಲವೇ? ದಲಿತರು ಅಂದು ಮತ ಹಾಕದಿದ್ರೆ, ನಿನ್ನ ರಾಜಕೀಯ ಭವಿಷ್ಯ ಅಂದೇ ಹೋಗುತ್ತಿತ್ತು. ದಲಿತ ನಾಯಕರು ನಿನ್ನನ್ನು ಬರಮಾಡಿಕೊಳ್ಳದಿದ್ರೆ ಏನಾಗ್ತಿದ್ದೆ? ನಮ್ಮ ಹೊಟ್ಟೆ ಪಾಡಿನ ಬಗ್ಗೆ ಮಾತನಾಡ್ತೀಯಾ? ಶ್ರೀನಿವಾಸ್ ಪ್ರಸಾದ್‌ಗೆ ನೀನು ಏನು ಮಾಡಿದೆ ಗೊತ್ತಿದೆ. ಹೆಚ್.ಸಿ. ಮಹದೇವಪ್ಪ ಮಾತೆತ್ತಿದರೆ ನಿನ್ನ ಜೊತೆಯಲ್ಲೇ ಇರುತ್ತಿದ್ರು, ಯಾಕಪ್ಪ ಸೋಲಿಸಿದೆ? ಪರಮೇಶ್ವರ್ ಗೆದ್ದಿದ್ರೆ ಎಲ್ಲಿ ಸಿಎಂ ಆಗ್ತಾರೋ ಅಂತ ಪರಮೇಶ್ವರ್ ಕುತ್ತಿಗೆ ಹಿಸುಕಿದ್ರಿ. ಪರಮೇಶ್ವರ್ ಮುಖ್ಯಮಂತ್ರಿ ಆಗಲು ಬಿಡದ ದಲಿತ ದ್ರೋಹಿ ನೀನು ಎಂದು ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದ್ದಾರೆ.

‘ಮೀಸಲಾತಿ ಕಾಂಗ್ರೆಸ್ ಕೊಟ್ಟಿರೋದಲ್ಲ, ನಮ್ಮಪ್ಪ ಅಂಬೇಡ್ಕರ್ ಕೊಟ್ಟಿರೋದು’: ನೀನು ಎರಡು ಬಾರಿ ಉಪಮುಖ್ಯಮಂತ್ರಿ ಆದೆ. ಮಾತೆತ್ತಿದರೆ ದಲಿತರ ಓಟು ಬೇಕು, ಆದ್ರೆ ದಲಿತರ ಬಗ್ಗೆ ಕೆಟ್ಟದಾಗಿ ಮಾತನಾಡ್ತೀಯಾ. ಮೀಸಲಾತಿ ಕಾಂಗ್ರೆಸ್ ಕೊಟ್ಟಿರೋದಲ್ಲ, ನಮ್ಮಪ್ಪ ಅಂಬೇಡ್ಕರ್ ಕೊಟ್ಟಿರೋದು. ಅದಕ್ಕಿಂತ ಹೆಚ್ಚಿನದನ್ನು ಬಿಜೆಪಿ ನಮಗೆ ಕೊಡಲಿದೆ. ನನ್ನ ರೀತಿಯ ಸ್ವಾಭಿಮಾನಿ ದಲಿತರು ಬಿಜೆಪಿಗೆ ಬರುತ್ತಿದ್ದಾರೆ. ಸಿದ್ದರಾಮಯ್ಯ ಒಂದು ರೀತಿಯ ವಿಷ ಸರ್ಪ. ಸಣ್ಣ ಹುಳುಗಳು ಸೇರಿ ಕಟ್ಟಿದ್ದ ಹುತ್ತಕ್ಕೆ, ಸರ್ಪದ ರೀತಿಯಲ್ಲಿ ನೀನು ಬಂದು ಸೇರಿಕೊಂಡಿರುವೆ. ದಲಿತರೆಲ್ಲ ಬಿಜೆಪಿ ಸೇರುತ್ತಿರೋದು ನಿನಗೆ ಸಹಿಸಲಾಗ್ತಿಲ್ಲ. ದಲಿತರನ್ನು, ಹಿಂದುಳಿದವರನ್ನು, ಮುಸ್ಲಿಮರನ್ನು ನುಂಗಿದ ನಿಮ್ಮದು ದೊಡ್ಡ ಹೊಟ್ಟೆಯೇ ಅಲ್ಲವಾ ಎಂದು ಛಲವಾದಿ ನಾರಾಯಣ ಸ್ವಾಮಿ ಕುಟುಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ ಚಿಕ್ಕಬಳ್ಳಾಪುರ: ವಿಧಾನಸಭೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಎಸ್​ಟಿ ಮೋರ್ಚಾ ಘಟಕದಿಂದ ಪ್ರತಿಭಟನೆ ನಡೆದಿದೆ. ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

siddaramaiah says dalits joining bjp to fill their stomach

ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ

ಸಿದ್ದರಾಮಯ್ಯ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು- ಪಿ.ರಾಜೀವ್: ಸಿದ್ದರಾಮಯ್ಯ ಕೇವಲ ಬಿಜೆಪಿಯನ್ನು ಅವಮಾನ ಮಾಡಿಲ್ಲ. ದಲಿತ ಸಮುದಾಯಕ್ಕೂ ಅವಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಹೊಟ್ಟೆಪಾಡಿಗಾಗಿ ಕಾಂಗ್ರೆಸ್‌ಗೆ ಸೇರಿದವರು. ಮೂಲ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ನಿಮ್ಮಿಂದ ಇಂತಹ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಪಿ.ರಾಜೀವ್ ಎಚ್ಚರಿಸಿದ್ದಾರೆ.

‘ಅಹಂಕಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ’ ಬೆಳಗಾವಿ: ಅಹಂಕಾರದ ಮತ್ತೊಂದು ಹೆಸರೇ ಸಿದ್ದರಾಮಯ್ಯ ಎಂದು ಬೆಳಗಾವಿಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಜರಿದಿದ್ದಾರೆ. ಸಿದ್ದರಾಮಯ್ಯರ ಪ್ರತಿಯೊಂದು ಹೇಳಿಕೆಯಲ್ಲಿ ಅಹಂಕಾರ ಕಾಣಿಸುತ್ತಿದೆ. ತಾವು ಐದು ವರ್ಷ ಸಿಎಂ ಆಗಿ ಕೆಲಸ ಮಾಡೇನಿ ಅಂತಾ ಅಹಂಕಾರ. ದಲಿತರಿಗೆ ಅವಮಾನ ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಅಹಂಕಾರಿಗಳಿಗೆ ಜನರು ಕ್ಷಮೆ ಮಾಡಿಲ್ಲ. ಅಹಂಕಾರ ಬಿಡಲಿಲ್ಲ ಅಂದ್ರೆ ನಿಮಗೂ ಅದೇ ಪರಿಸ್ಥಿತಿ ಬರಬಹುದು. ದಲಿತರಿಗೆ ಅಪಮಾನ ಮಾಡಿದ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಿ ಎಚ್ಚರಿಕೆ ಕೊಡ್ತಿದೀವಿ. ಮುಂದೆ ಇದೇ ರೀತಿ ಮಾತನಾಡಿದ್ರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಬೆಳಗಾವಿಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

(congress leader siddaramaiah says dalits joining bjp to fill their stomach, bjp Chalavadi Narayanaswamy questions his motives)

Published On - 1:40 pm, Wed, 3 November 21

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ