Column: ಎಲ್ರೂ ಬದುಕಬೇಕಲ್ವಾ?; ಕ್ಷಮಿಸುವುದು ದೌರ್ಬಲ್ಯದ ಲಕ್ಷಣವಲ್ಲ

Apology : "ಇಂದು ನಾನು ಇಲ್ಲಿರುವುದು ಒಬ್ಬರ ಕ್ಷಮೆಯ ಫಲ. ಇಲ್ಲದಿದ್ದರೆ ರಸ್ತೆಯಲ್ಲಿ ಪೊರ್ಕಿ ಹುಡುಗನಾಗಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಇರಬೇಕಿತ್ತು. ಚಿಕ್ಕ ಹುಡುಗರನ್ನು ಪೊಲೀಸರಿಗೆ ಒಪ್ಪಿಸಿದರೆ ಏನಾಗುತ್ತೆ ಗೊತ್ತಾ?"

Column: ಎಲ್ರೂ ಬದುಕಬೇಕಲ್ವಾ?; ಕ್ಷಮಿಸುವುದು ದೌರ್ಬಲ್ಯದ ಲಕ್ಷಣವಲ್ಲ
Edited By: ಶ್ರೀದೇವಿ ಕಳಸದ

Updated on: May 25, 2022 | 11:32 AM

Apology : ‘ಅವನನ್ನು ಕ್ಷಮಿಸಬಾರದಿತ್ತು. ಎಷ್ಟು ಕಷ್ಟ ಆಯ್ತು ಅವನಿಂದ’ ಅಪೂರ್ವ ಸಿಟ್ಟಿನಿಂದ ತಾಯಿಯನ್ನು ದುರುಗುಟ್ಟಿ ನೋಡಿದಳು. ‘ಕ್ಷಮಯಾ ಧರಿತ್ರಿ ನೀನು. ಯಾವುದೋ ಕಾಲದಲ್ಲಿ ಇದೀಯ. ಅವನು ಇನ್ನೂ ಎಷ್ಟು ಕಳ್ಳತನ ಮಾಡುತ್ತಾನೋ ಗೊತ್ತಿಲ್ಲ, ಈ ಸಲ ಬುದ್ಧಿ ಕಲಿಸಿದ್ದರೆ ಎಚ್ಚೆತ್ತುಕೊಳ್ಳುತ್ತಿದ್ದ.’ ಸಿಟ್ಟಿನಿಂದ ಅವಡುಗಚ್ಚಿದ ಅಪೂರ್ವ ಅಲ್ಲಿಂದ ಸರಿದುಹೋದಳು. ಮುಂಚಿನಿಂದ ಅವಳದು ರೋಷ, ದ್ವೇಷದ ಸ್ವಭಾವ. ಯಾರಾದರೂ ಏನಾದರೂ ಹೇಳಿದರೆ ಅದನ್ನೇ ಸಾಧಿಸಿ ದೊಡ್ಡದು ಮಾಡಿ ರಾದ್ಧಾಂತ ಮಾಡುವ ಸ್ವಭಾವ. ಅವಳನ್ನು ತಿದ್ದಲು ಸಾಕಷ್ಟು ಪ್ರಯತ್ನಪಟ್ಟರೂ ಆಗಿರಲಿಲ್ಲ. ತಾಯಿ ತುಂಬಾ ಮೃದು, ಎಲ್ಲದಕ್ಕೂ ತಕ್ಷಣ ಅಡ್ಜಸ್ಟ್ ಆಗುತ್ತಾರೆ ಎಂದು ಅವಳಿಗೆ ಸಿಟ್ಟು. ಸ್ವಭಾವತಃ ಕರುಣಾಮಯಿ, ಕೋಮಲ ಹೃದಯದ ಸುನಂದಾ ಅವರಿಗೂ, ಅಪೂರ್ವಳಿಗೂ ಈ ವಿಷಯದಲ್ಲಿ ಯಾವಾಗಲೂ ವಿರಸ. ಮಗಳ ಈ ಹಠ, ರೋಷದ ಬುದ್ಧಿ ಸುನಂದಾಗೆ ತಲೆ ನೋವಿನ ಸಂಗತಿಯಾಗಿತ್ತು.
ಡಾ. ಸಹನಾ ಪ್ರಸಾದ್ (Dr. Sahana Prasad)

ರೂಮಿನಲ್ಲಿ ಏನೋ ಎಸೆದ ಶಬ್ದ, ಜೋರಾಗಿ ಸಿಟ್ಟಿನಲ್ಲಿ ಅರಚಿದ ಮಾತುಗಳು ಅಪೂರ್ವಳ ಮನಸ್ಥಿತಿ ಸಾರಿ ಹೇಳಿದವು. ಬೆಳಗಿನಿಂದ ಈ ಮಾತುಗಳು ಬೇಕಾದಷ್ಟು ಸಲ, ಬೇರೆಬೇರೆ ರೀತಿಯಲ್ಲಿ ಹೇಳಿದ್ದಳು ಅಪೂರ್ವ. ಅದಕ್ಕೆ ಸುನಂದಾ ಉತ್ತರ ಕೊಟ್ಟಿದ್ದೂ ಆಗಿತ್ತು. ಆಗಿದ್ದು ಇಷ್ಟೇ, ಕೆಲಸದಾಕೆಯ ಮಗ ಅಪೂರ್ವಳ ಪರ್ಸ್ ಕದ್ದಿದ್ದ. ಅದರಲ್ಲಿ ಅವಳ ಆಫೀಸ್ ಕೀ, ಎರಡು ಮೊಬೈಲ್​ಗಳು, 3000 ರೂಪಾಯಿಗಳು, ಲಿಪ್​ಸ್ಟಿಕ್​ಗಳು, ಇನ್ನೂ ಬೇಕಾದಷ್ಟು ಸಾಮಾನುಗಳು ಇದ್ದವು. ಹಿಂದಿನ ದಿನ ಬೆಳಗ್ಗೆ ತಾಯಿಯ ಜತೆ ಬಂದಿದ್ದ ಹುಡುಗ ಹೊರಗಡೆ ಪೋರ್ಟಿಕೊದಲ್ಲಿ ಕುಳಿತಿದ್ದ. ಅಪೂರ್ವಳಿಗೆ ರಜೆ ಇದ್ದಿದ್ದರಿಂದ ಅವಳು ಇನ್ನೂ ಎದ್ದೇ ಇರಲಿಲ್ಲ. ಹಿಂದಿನ ರಾತ್ರಿ ಲೇಟಾಗಿ ಬಂದವಳು, ಅಲ್ಲಿಯೇ ಸೋಫಾದ ಮೇಲೆ ಪರ್ಸ್ ಎಸೆದು ಮಲಗಲು ಹೋಗಿದ್ದಳು. ಇವನು ಯಾವ ಮಾಯದಲ್ಲಿ ಒಳಬಂದು ಪರ್ಸ್ ಎಗರಿಸಿದನೋ ಗೊತ್ತೇ ಆಗಲಿಲ್ಲ. ಅವಳು ನಿಧಾನವಾಗಿ ಎದ್ದು ಮೊಬೈಲ್​ನಲ್ಲಿ  ಮೆಸೇಜು ಬಂದಿದೇಯ ಅಂತ ನೋಡಲು ಹಾಲಿಗೆ ಬಂದರೆ ಪರ್ಸ್ ಇಲ್ಲ. ಆಫೀಸ್ ಕೀ, ಆಫೀಸ್ ಮೊಬೈಲ್ ಜತೆ ತನ್ನ ಸಾಮಾನುಗಳು ಬೇಕಾದಷ್ಟು ಇದ್ದವು. ಗಾಬರಿಯಿಂದ ಇಡೀ ಮನೆ ಜಾಲಾಡಿದರು ತಾಯಿ, ಮಗಳು. ಕೆಲಸದಾಕೆಗೆ ಫೋನ್ ಮಾಡಿ ಕರೆಸಿಕೊಂಡರು. ದುಡ್ಡು ಹೋದರೆ ಹೋಗಲಿ, ಮಿಕ್ಕೆಲ್ಲ ಸಾಮಾನು ತಂದುಕೊಡು ಎಂದು ಆದಷ್ಟು ನಯವಾಗಿ ಹೇಳಿದರು ಸುನಂದಾ. ಕೋಪದಿಂದ ಕುದಿಯುತ್ತಿದ್ದ ಅಪೂರ್ವ ಹೊರಬರಲಿಲ್ಲ. ಎಲ್ಲವೂ ಕೇಳಿ ಕೆಲಸದಾಕೆ ಸಿಟ್ಟಿನಿಂದ ಕೆಲಸ ಬಿಟ್ಟು ಹೋಗುತ್ತಾಳೆ ಎಂದು ಭಾವಿಸಿದರು ಆದರೆ ಆಕೆ ಅರೆಕ್ಷಣ ಸುಮ್ಮನಿದ್ದು, ಕೊಂಚ ಸಮಯ ಕೊಡಿ ಎಂದು ಹೊರಟಳು. “ಒಳ್ಳೆಯ ಮಾತಿನಲ್ಲೇ ಕೇಳು. ಹೊಡಿದು ಬಡಿದು ಮಾಡಬೇಡ “ಎಂದು ಹೇಳುತ್ತ ಇದ್ದ ಸುನಂದಾರ ಮಾತು ಕೇಳಿಸಿದರೂ ಸುಮ್ಮನೆ ಹೊರನಡೆದಳು.

ಇದನ್ನೂ ಓದಿ : New Column: ‘ಎಲ್ರೂ ಬದುಕಬೇಕಲ್ವಾ?’ ಏ. 27ರಿಂದ ಡಾ. ಸಹನಾ ಪ್ರಸಾದ್ ಅಂಕಣ ಪ್ರಾರಂಭ

ಇದನ್ನೂ ಓದಿ
ಎಲ್ರೂ ಬದುಕಬೇಕಲ್ವಾ?: ಲೆಕ್ಕಾಚಾರದ ಮಾವ ಆನ್​ಲೈನ್​ ಶಾಪಿಂಗ್​ಗೆ​ ಒಪ್ಪಿದರೆ?
Mother’s Day: ಗಂಡ ಅಥವಾ ಮಕ್ಕಳ ಬಾಯಿಂದ ಈ ಮಾತು ಬಂದರೆ ಅವಳ ಜನುಮ ಸಾರ್ಥಕ!
Mother’s Day 2022: ನಿನ್ನ ಅಮ್ಮ ಎನ್ನಲೇ, ದೇವರೆನ್ನಲೇ

ಸ್ವಲ್ಪ ಸಮಯದಲ್ಲೇ ಮಗನನ್ನು ಕರೆದುಕೊಂಡು ಬಂದ ಅವಳ ಮುಖ ಕೋಪದಿಂದ ಕೆಂಪಾಗಿತ್ತು. “ಎಲ್ಲಾ ಅವನ ಅಪ್ಪನ ಚಾಳಿ. ಇನ್ನೂ 13 ತುಂಬಿಲ್ಲ, ಆಗಲೇ ಇವೆಲ್ಲವೂ ಶುರುವಾಗಿದೆ. ನಾನು ಮನೆಗಳಲ್ಲಿ ಮುಸುರೆ ತಿಕ್ಕಿ ಇವನನ್ನು ಓದಿಸುತ್ತಾ ಇದೀನಿ. ಇವನು ನೋಡಿದರೆ ಹೀಗೆ” ಮಾತು ಮುಗಿಯುವಷ್ಟರಲ್ಲಿ ಕಣ್ಣಿನಿಂದ ಧಾರಾಕಾರ ನೀರು ತಾಯಿ ಮಗನಿಗೆ. 500ರೂಪಾಯಿ ಖರ್ಚಾಗಿದೆ, ನನ್ನ ಸಂಬಳದಲ್ಲಿ ಹಿಡಿದುಕೊಳ್ಳಿ. ಬೇರೆಲ್ಲಾ ಸಾಮಾನು ಇದೆ ಅನಿಸುತ್ತೆ”ಎಂದವಳೇ ಮಗನಿಗೆ ಮತ್ತೆ ಏಟು ಕೊಟ್ಟಳು. “ಈ ನಾಟಕ ಸಾಕು. ಈಗಲೇ ಪೋಲಿಸಿಗೆ ಕರೆ ಮಾಡ್ತೀನಿ. ನನ್ನ ಆಫೀಸ್ ಕೀ ನಕಲು ಮಾಡಿಸಿದ್ದರೆ? ಮೊಬೈಲ್ ಅಲ್ಲಿ ಇರುವ ಮಾಹಿತಿ ಕದ್ದಿದ್ದರೆ?” ಕಿಡಿಕಿಡಿಯಾದಳು ಅಪೂರ್ವ. “ಇದೊಂದು ಸಲ ಕ್ಷಮಿಸಿ ಅಮ್ಮ” ಬೇಡಿಕೊಂಡ ಆಕೆಯನ್ನು ಕಳಿಸಿಕೊಟ್ಟರು ಸುನಂದಾ. ನಿಂದೇನೂ ತಪ್ಪಿಲ್ಲ, ನಾಳೆ ಮಾಮೂಲಿನಂತೆ ಕೆಲಸಕ್ಕೆ ಬಾ ಎಂದು ಸಹ ಹೇಳಿದ ತಾಯಿಯ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು ಅಪೂರ್ವಾಳಿಗೆ. “ಅವನನ್ನು ಹಿದಿದುಕೊಟ್ಟರೆ ರೋಷ, ದೇಷದಲ್ಲಿ ಅವನು ಇನ್ನೂ ದೊಡ್ಡ ಕ್ರಿಮಿನಲ್ ಆಗಬಹುದು. ಆ ತಪ್ಪಿಗೆ ನಾವು ಕಾರಣವಾಗಬಾರದು. ನಿಧಾನವಾಗಿ ಯೋಚಿಸು, ನಿನಗೇ ಗೊತ್ತಾಗುತ್ತೆ” ಎಂದರು ಸುನಂದಾ.

ಇದನ್ನೂ ಓದಿ: International Museum Day 2022 : ನಮಗೆಂಥ ಮ್ಯೂಸಿಯಂ ಬೇಕಿದೆ?

ಇದಾದ ಮಾರನೆಯ ದಿನ ಅಪೂರ್ವ ಆಫೀಸಿನಲ್ಲಿ ಬಹಳ ಮಂಕಾಗಿ ಇದ್ದಳು. ಆ ಹುಡುಗನನ್ನು ತಾಯಿ ಕ್ಷಮಿಸಬಾರದಿತ್ತು, ಪೋಲೀಸಿಗೆ ಕೊಡಬೇಕಿತ್ತು ಎಂದು ಅವಳ ಮನಸ್ಸಿಗೆ ತೀವ್ರವಾಗಿ ಅನಿಸುತ್ತಾ ಇತ್ತು. ಕಾಫಿಗೆ ಕರೆಯಲು ಬಂದಿದ್ದ ಸಹೋದ್ಯೋಗಿ ವಿಕ್ರಾಂತನಿಗೆ ಎಲ್ಲವೂ ಕೂಲಂಕಷವಾಗಿ ಹೇಳಿದಳು. ಕೊಂಚ ಸಮಯ ಪೆಚ್ಚಾಗಿ ಕುಳಿತ ಅವ, ಮೆಲ್ಲನೆ ನುಡಿದ “ಇಂದು ನಾನು ಇಲ್ಲಿರುವುದು ಒಬ್ಬರ ಕ್ಷಮೆಯ ಫಲ. ಇಲ್ಲದಿದ್ದರೆ ರಸ್ತೆಯಲ್ಲಿ ಪೊರ್ಕಿ ಹುಡುಗನಾಗಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಇರಬೇಕಿತ್ತು. ಚಿಕ್ಕ ಹುಡುಗರನ್ನು ಪೊಲೀಸರಿಗೆ ಒಪ್ಪಿಸಿದರೆ ಏನಾಗುತ್ತೆ ಗೊತ್ತಾ?” ಚಿಕ್ಕವನಾಗಿದ್ದಾಗ ತಾನು ತಾಯಿ ಅಡುಗೆ ಮಾಡುತ್ತಿದ್ದ ಕಡೆ ಆಸೆಯಿಂದ 100 ರೂಪಾಯಿ ಎಗರಿಸಿದ್ದು , ಅವರು ತನ್ನನ್ನು ಕ್ಷಮಿಸಿದ್ದು ಎಲ್ಲವನ್ನೂ ಹೇಳಿದ.”50,000 ಸಂಬಳ ತೆಗೆಯುವ ವಿಕ್ರಾಂತ್ ಒಬ್ಬ ಕಳ್ಳನಾಗದೇ ಉಳಿದಿದ್ದು ಕ್ಷಮೆಯ ಫಲ ಎಂದು ಅರಿತಾಗ ತನ್ನಮ್ಮನ ಬಗ್ಗೆ ಹೆಮ್ಮೆ ಮೂಡಿತು.

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 11:32 am, Wed, 25 May 22

TV9 Web

TV9 Kannada

Read More
Loading...
Unable to load recommendations.
Follow Us