Corona Warriors: ಕೊರೊನಾ ವಿರುದ್ಧದ ಯುದ್ಧ ಕಾಲದಲ್ಲಿ ಹೆಸರಿಗೆ ತಕ್ಕಂತೆ ಶಾಂತಾವಾಗಿ ಸಮಾಜ ಸೇವೆಯಲ್ಲಿ ತೊಡಗಿದೆ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್

Shantha Krishnamurthy Foundation: ಕೊವಿಡ್ ವಾರ್ ರೂಂ ರಚಿಸಿ ರೇಷನ್ ಪೂರೈಕೆ, ಆಕ್ಸಿಜನ್ ಸಪ್ಲೈ, ವ್ಯಾಸಿನೇಷನ್ ಸೇರಿದಂತೆ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನೇತೃತ್ವದಲ್ಲಿ ನಾವು ಬಡವರಿಗೆ ಸಹಾಯ ಮಾಡಿ ಅವರ ನಗು ಮುಖ ನೋಡಿ ತೃಪ್ತಿ ಪಡುತ್ತಿದ್ದೇವೆ. ನಾವು ಕೊಟ್ಟ ಊಟ, ವ್ಯವಸ್ಥೆ ಪಡೆದು ನಮ್ಮನ್ನು ಹಾರೈಸಿದಾಗ ನಮಗೆ ಸಿಗುವ ತೃಪ್ತಿ ಬೆರೆಯಾವುದರಲ್ಲೂ ಸಿಗುವುದಿಲ್ಲ ಎಂದು ಶ್ರೀನಿವಾಸ ಮನ ಬಿಚ್ಚಿ ಮಾತನಾಡಿದ್ರು.

Corona Warriors: ಕೊರೊನಾ ವಿರುದ್ಧದ ಯುದ್ಧ ಕಾಲದಲ್ಲಿ ಹೆಸರಿಗೆ ತಕ್ಕಂತೆ ಶಾಂತಾವಾಗಿ ಸಮಾಜ ಸೇವೆಯಲ್ಲಿ ತೊಡಗಿದೆ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್
ಊಟ ವಿತರಣೆ ಮತ್ತು ಆಕ್ಸಿಜನ್ ಬಸ್ ವ್ಯವಸ್ಥೆ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:May 28, 2021 | 4:57 PM

ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಇಡೀ ದೇಶ ಕಂಗಾಲಾಗಿದೆ. ಹೆಮ್ಮರದಂತೆ ಆಶ್ರಯದಾತರಾಗಿದ್ದ ಮನೆಯ ಹಿರಿಯರನ್ನು ಕಳೆದುಕೊಂಡು ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಲಾಕ್ಡೌನ್ನಿಂದ ಒಂದು ಹೊತ್ತಿನ ಊಟಕ್ಕೂ ಪರದಾಟ ಎದುರಾಗಿದೆ. ಮನೆಯಲ್ಲೇ ಹೋಂ ಐಸೋಲೇಷನ್ ಆದವರು ಮನೆಯಲ್ಲಿ ಅಡುಗೆ ಮಾಡಿಕೊಳ್ಳಲಾಗದೆ ತಿನ್ನುವ ಅನ್ನಕ್ಕೂ ತತ್ವಾರ ಎದುರಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದ್ದು ಚಿಕ್ಕ ವಯಸ್ಸಿನ ಯುವಕರು ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಷ್ಟಲ್ಲಾ ತೊಂದರೆಗಳನ್ನು ಗಮನಿಸಿದ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ನಿರ್ಗತಿಕರಿಗಾಗಿ, ಕೊರೊನಾ ಸೋಂಕಿತರಿಗಾಗಿ, ಹೋಂ ಐಸೋಲೇಷನ್ನಲ್ಲಿರುವವರಿಗೂ ಹಗಲು-ರಾತ್ರಿ ಎನ್ನದೆ ಪ್ರತಿ ನಿತ್ಯ ಊಟ, ಆಹಾರ ಕಿಟ್, ಆಕ್ಸಿಜನ್ ಬಸ್ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಹಸಿದವರಿಗೆ ಅನ್ನ ನೀಡಿ, ಕಷ್ಟದಲ್ಲಿದ್ದವರಿಗೆ ಕಣ್ಣೀರು ಒರೆಸಿ ಕೊರೊನಾ ಸಮಯದಲ್ಲಿ ರಿಯಲ್ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಈ ಫೌಂಡೇಷನ್​ನವರು. ಶಾಂತ ಕೃಷ್ಣಮೂರ್ತಿ ಫೌಂಡೇಷನ್ನ ವಾಲೆಂಟಿಯರ್ ಸದಸ್ಯ ಶ್ರೀನಿವಾಸ ಚಳಗೇರಿ ಈ ಕಾರ್ಯದಿಂದ ತಮಗೆ ಸಿಗುತ್ತಿರುವ ಖುಷಿಯನ್ನ ಟಿವಿ9 ಕನ್ನಡ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ.

ರಾಮಮೂರ್ತಿ ನಗರ, ಕೆ.ಆರ್ ಪುರಂ ಸುತ್ತಮುತ್ತಲಿನ ಸಾವಿರಾರು ಜನರಿಗೆ ನಿರ್ಗತಿಕರಿಗೆ, ಕೊರೊನಾ ಸೋಂಕಿತರಿಗೆ, ಹೋಂ ಐಸೋಲೇಷನ್ನಲ್ಲಿರುವವರಿಗೆ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ (SKF- Shantha Krishnamurthy Foundation) ವತಿಯಿಂದ ಪ್ರತಿನಿತ್ಯ ಮನೆ ಮನೆಗೆ ಹೋಗಿ ಊಟ ತಲುಪಿಸುವುದು, ಫ್ರೀ ಮೆಡಿಕಲ್ ಕಿಟ್ ನೀಡುವಂತಹ ಕಾರ್ಯ ಮಾಡುತ್ತಿದ್ದೇವೆ. ಸದ್ಯ ಈಗ ಪ್ರತಿ ದಿನ 300-400 ಮಂದಿಗೆ ಉಚಿತ ಊಟ ಪೂರೈಸಲಾಗುತ್ತಿದೆ. ಬಡವರಿಗೆ ಒಂದು ತಿಂಗಳಿಗೆ ಆಗುವಷ್ಟು ರೇಷನ್ ಕಿಟ್ಗಳನ್ನು ನೀಡುತ್ತೇವೆ. ಇನ್ನು ನಗರಲ್ಲಿ ಆಕ್ಸಿಜನ್ ಬೆಡ್ ಸಮಸ್ಯೆ ಇದೆ. ಹೀಗಾಗಿ ಆಕ್ಸಿಜನ್ ಸಮಸ್ಯೆ ಕಡಿಮೆ ಮಾಡಲು ತಕ್ಷಣಕ್ಕೆ ಸಂಜೀವಿನಿ ನೀಡುವ ಸಲುವಾಗಿ ಆಕ್ಸಿಜನ್ ಬಸ್ಗಳನ್ನು ಮಾಡಿದ್ದೇವೆ. ಇದರಿಂದ ಆಸ್ಪತ್ರೆಗೆ ಹೋಗುವವರೆಗೂ ಅಥವಾ ಬೆಡ್ ಬುಕ್ ಆಗುವವರೆಗೂ ತಕ್ಷಣಕ್ಕೆ ಆಕ್ಸಿಜನ್ ನೀಡಿ ಅವರ ಸ್ಯಾಚುರೇಶನ್ ಲೆವೆಲ್ ಜಾಸ್ತಿ ಮಾಡುವ ಉದ್ದೇಶ ಹೊಂದಿದ್ದೇವೆ. ನಮ್ಮ ವಾರ್ಡ್ನ ಕೊರೊನಾದಿಂದ ಬಾಧಿತರಾದ ಕುಟುಂಬಗಳಿಗೆ ಆಸರೆಯಾಗಬೇಕೆಂಬುವುದು ನಮ್ಮ ಅಧ್ಯಕ್ಷರಾದ ಶಾಂತ ಕೃಷ್ಣಮೂರ್ತಿಯವರ ಬಯಕೆ. ಹೀಗಾಗಿ ಅದೇ ನಿಟ್ಟಿನಲ್ಲಿ ನಾವು ಸೇವೆ ಸಲ್ಲಿಸುತ್ತಿದ್ದೇವೆ ಎಂದು ಶ್ರೀನಿವಾಸ ಮಾತು ಮುಂದುವರೆಸಿದ್ರು.

ನಮ್ಮದು 30 ಜನರ ತಂಡ. ನಮ್ಮಲ್ಲಿ ವಾರ್ ರೂಂ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿಗೆ ಸಹಾಯಕ್ಕಾಗಿ ಕರೆ ಮಾಡುವ ಪ್ರತಿಯೊಬ್ಬರ ಸಮಸ್ಯೆಯನ್ನು ನಮ್ಮದೆಂದೇ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ತಿಳಿದು ಸಹಾಯ ಮಾಡುತ್ತೇವೆ. ಕಳೆದ ವರ್ಷ ಕೊರೊನಾ ಸಮಯದಲ್ಲಿ ಸುಮಾರು 10 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ್ವಿ. ಈ ಬಾರಿ ಅದಕ್ಕೂ ಹೆಚ್ಚು ಜನರಿಗೆ ನೆರವಾಗುವ ಉದ್ದೇಶವಿದೆ. ನಮ್ಮ ಅಧ್ಯಕ್ಷರಾದ ಶಾಂತ ಕೃಷ್ಣಮೂರ್ತಿಯವರು ಸ್ವತಹ ಅಡುಗೆ ಉಸ್ತುವಾರಿಯನ್ನು ವಹಿಸುತ್ತಾರೆ. ಅವರ ಕೈಯಿಂದ ಅಡುಗೆ ಮಾಡಿ ರುಚಿ ಪರಿಶೀಲಿಸಿ ಪ್ಯಾಕಿಂಗ್ನಲ್ಲಿ ಭಾಗಿಯಾಗುತ್ತಾರೆ.

covid warrior

ಆಡುಗೆ ತಯಾರಿಸುತ್ತಿರುವ ಶಾಂತ ಕೃಷ್ಣಮೂರ್ತಿ

ನಮ್ಮ ರಾಮಮೂರ್ತಿ ನಗರ ಹಾಗೂ ಕೆ ಆರ್ ಪುರಂ ಸುತ್ತ ಮುತ್ತಲಿನ ಜನರ ತೊಂದರೆಗೆ ನೆರವಾಗುವ ದೃಷ್ಟಿಯಿಂದ ನನ್ನ ಕೈ ಇಂದ ಆಗುವ ಎಲ್ಲ ರೀತಿಯ ಸಹಾಯವನ್ನು ಮಾಡುವ ನಿರ್ಧಾರ ಮಾಡಿ ಕಳೆದ ವರ್ಷದಿಂದ ಸತತ ಶ್ರಮ ಹಾಕುತ್ತಿದ್ದಾರೆ ನಮ್ಮ ಫೌಂಡೇಷನ್ ಸದಸ್ಯರು ಹಾಗೂ ನಮ್ಮ ಹಿತೈಷಿಗಳು. ನಮಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಾಮಾಜ ಸೇವಕಿ ಶ್ರಿಮತಿ ಶಾಂತಾ ಕೃಷ್ಣಮೂರ್ತಿ ಧನ್ಯವಾದ ತಿಳಿಸಿದ್ದಾರೆ.

covid warrior

ರೇಷನ್ ಕಿಟ್ ವಿತರಣೆಗೆ ಸಿದ್ಧತೆ

ಕೊರೊನಾದಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಆರೋಗ್ಯವಾಗಿ ಕುಂಠಿತರಾಗಿರುವ ಜನರನ್ನು ಚೇತರಿಸುವ ನಿಟ್ಟಿನಲ್ಲಿ ತಮ್ಮ ಶಕ್ತಿ ಸಾಮರ್ಥ್ಯ ಮೀರಿ ತಂಡವನ್ನು ರಚಿಸಿ ಶಾಂತಾ ಕೃಷ್ಣಮೂರ್ತಿ ಜನರ ಸೇವೆಗೆ ನಿಂತಿದ್ದಾರೆ. ಕೊವಿಡ್ ವಾರ್ ರೂಂ ರಚಿಸಿ ರೇಷನ್ ಪೂರೈಕೆ, ಆಕ್ಸಿಜನ್ ಸಪ್ಲೈ, ವ್ಯಾಕ್ಸಿನೇಷನ್ ಸೇರಿದಂತೆ ಎಲ್ಲ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನೇತೃತ್ವದಲ್ಲಿ ನಾವು ಬಡವರಿಗೆ ಸಹಾಯ ಮಾಡಿ ಅವರ ನಗು ಮುಖ ನೋಡಿ ತೃಪ್ತಿ ಪಡುತ್ತಿದ್ದೇವೆ. ನಾವು ಕೊಟ್ಟ ಊಟ, ವ್ಯವಸ್ಥೆ ಪಡೆದು ನಮ್ಮನ್ನು ಹಾರೈಸಿದಾಗ ನಮಗೆ ಸಿಗುವ ತೃಪ್ತಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಎಂದು ಶ್ರೀನಿವಾಸ ಮನ ಬಿಚ್ಚಿ ಮಾತನಾಡಿದ್ರು.

covid warrior

ರೇಷನ್ ಕಿಟ್ ವಿತರಣೆಗೆ ಸಿದ್ಧತೆ

ಲಸಿಕೆ ಅಭಿಯಾನ ಇನ್ನು ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ವತಿಯಿಂದ ಲಸಿಕೆ ಅಭಿಯಾನ ಸಹ ನಡೆಯುತ್ತೆ. ಈ ವೇಳೆ ಜನರಿಗೆ ಲಸಿಕೆ ಬಗೆ ಮಾಹಿತಿ ನೀಡಿ, ಎರಡನೇ ಡೋಸ್ ಪಡೆಯಬೇಕು. ಲಸಿಕೆ ಬಳಿಕ ನಮ್ಮಲ್ಲಿ ಕಂಡು ಬರುವ ಬದಲಾವಣೆ, ಕೊರೊನಾ ಬಗ್ಗೆ ಜಾಗ್ರತೆ, ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿ ಜನರಿಗೆ ಮಾಹಿತಿ ನೀಡಲಾಗುತ್ತೆ. ಹಾಗೂ ನಮ್ಮ ತಂಡದವರು ಕೊರೊನಾದ ಎಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ಅಚ್ಚುಕಟ್ಟಾಗಿ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸುವ ಕಾರ್ಯ ಮಾಡುತ್ತೇವೆ.

ಸಾಮಾಜಿಕ ಕಳಕಳಿಯಿಂದ ಕೊರೊನಾ ಸಂಕಷ್ಟದ ಸಮಯದಲ್ಲಿ ಈ ರೀತಿಯ ಸೇವೆಗೆ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ಮುಂದಾಗಿದ್ದು, ಜನರಿಗೆ ರೇಷನ್ ಪೂರೈಕೆ, ಆಕ್ಸಿಜನ್ ಬಸ್ ವ್ಯವಸ್ಥೆ ಹಾಗೂ ಪ್ರತಿ ನಿತ್ಯ ನೂರಾರು ಜನರಿಗೆ ಕೊವಿಡ್ ಲಸಿಕೆಯನ್ನು ಅಚ್ಚು ಕಟ್ಟಾಗಿ ಒದಗಿಸುತ್ತಿರುವ ಸಮಾಜ ಸೇವಕಿ ಶಾಂತಾ ಕೃಷ್ಣಮೂರ್ತಿ ಅವರ ಈ ಕಾರ್ಯ ರಾಜ್ಯಕ್ಕೆ ಮಾದರಿ ಆಗಿದೆ.

covid warrior

ಇದನ್ನೂ ಓದಿ: Covid Warriors: ಹಸಿದವರ ಹೊಟ್ಟೆ ತಣ್ಣಗಿರಿಸಲು ನನ್ನದೊಂದು ಸಣ್ಣ ಪ್ರಯತ್ನ ಎನ್ನುತ್ತಾರೆ ಹರ್ಷಿತ್​

Published On - 4:57 pm, Fri, 28 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ