Personality: ನಿಮ್ಮ ಧ್ವನಿಗೂ ನಿಮ್ಮ ವ್ಯಕ್ತಿತ್ವಕ್ಕೂ ಸಂಬಂಧ ಇದೆಯೆ?

| Updated By: ಶ್ರೀದೇವಿ ಕಳಸದ

Updated on: Jul 02, 2022 | 5:59 PM

Deep Voice : ಆಳಧ್ವನಿಯುಳ್ಳ ವ್ಯಕ್ತಿಯ ಗುಣಲಕ್ಷಣಗಳನ್ನು ಅರಿಯುವುದಕ್ಕಾಗಿ ಅವರ ಧ್ವನಿಗಳನ್ನು ರೆಕಾರ್ಡ್​ ಮಾಡಿಕೊಳ್ಳಲಾಯಿತು. ಜೊತೆಗೆ ವಯಸ್ಸು, ಲಿಂಗವನ್ನೂ. ಇಷ್ಟೇ ಅಲ್ಲ, ಅವರ ಲೈಂಗಿಕ ನಡೆವಳಿಕೆಯ ಕುರಿತು ಮಾಹಿತಿ ಸಂಗ್ರಹಿಸಲಾಯಿತು. 

Personality: ನಿಮ್ಮ ಧ್ವನಿಗೂ ನಿಮ್ಮ ವ್ಯಕ್ತಿತ್ವಕ್ಕೂ ಸಂಬಂಧ ಇದೆಯೆ?
ಸೌಜನ್ಯ : ಅಂತರ್ಜಾಲ
Follow us on

Voice Personality Test : ಫೋನಿನಲ್ಲಿ ಯಾರಾದರೂ ಅಪರಿಚಿತರೊಂದಿಗೆ ಮಾತನಾಡುವಾಗ ಅವರ ಲಿಂಗ, ವಯಸ್ಸನ್ನು ಊಹಿಸಲು ಶುರು ಮಾಡುತ್ತೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದಂತೆ ವ್ಯಕ್ತಿಯ ಗಾತ್ರ, ಆಕಾರ, ಎತ್ತರವನ್ನೂ. ಹಾಗೆ ಮಾತನಾಡುತ್ತಲೇ ಆ ವ್ಯಕ್ತಿ ಸೂಕ್ಷ್ಮಗ್ರಾಹಿಯೋ, ಸ್ನೇಹಪರರೋ, ಸದ್ಯ ದುಃಖದಲ್ಲಿದ್ದಾರೋ, ಏನನ್ನಾದರೂ ನಿರೀಕ್ಷಿಸುತ್ತಿದ್ದಾರೋ ಹೀಗೆ ಏನೋ ಒಂದು ಅಂದಾಜಿನಲ್ಲಿ ಯೋಚಿಸಲಾರಂಭಿಸುತ್ತೇವೆ. ಈ ಮೂಲಕ ಅವರ ವ್ಯಕ್ತಿತ್ವವನ್ನು ಅಂದಾಜಿಸಲು ಶುರುಮಾಡುತ್ತೇವೆ. ಆಳವಾದ ಧ್ವನಿಯುಳ್ಳವರನ್ನು ಹೆಚ್ಚು ಆಕರ್ಷಕ ವ್ಯಕ್ತಿತ್ವವೆಂದು ಪರಿಗಣಿಸಲಾಗುತ್ತದೆ ಎನ್ನುತ್ತವೆ ಸಂಶೋಧನೆಗಳು. ಉದಾಹರಣೆಗೆ ರಾಜಕಾರಣಿ, ಸಿನೆಮಾ ನಾಯಕರು, ನಿರೂಪಕರು, ಸಾರ್ವಜನಿಕವಾಗಿ ಖ್ಯಾತಿಹೊಂದಿದ ವ್ಯಕ್ತಿಗಳ ಧ್ವನಿಗಳನ್ನು ನೆನಪಿಗೆ ತಂದುಕೊಳ್ಳಿ.  ಮತದಾನದ ವೇಳೆ ಯಾರ ಧ್ವನಿಯ ಪ್ರಭಾವ ಮತದಾರನ ಮನಸ್ಸಿನಲ್ಲಿ ಬೇರೂರಿರುತ್ತದೆಯೋ ಅದೇ ವ್ಯಕ್ತಿಗೆ ಓಟು ಹಾಕುತ್ತಾನೆ ಎನ್ನುವುದನ್ನು ಅಧ್ಯಯನಗಳು ಬಹಿರಂಗಪಡಿಸಿವೆ. ಇನ್ನು ಸಂಗಾತಿಗಳ ಆಯ್ಕೆಯಲ್ಲಿಯೂ ಧ್ವನಿಯ ಪಾತ್ರ ಬಹಳ ಮುಖ್ಯ ಎನ್ನುವುದನ್ನೂ ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ.

ಧ್ವನಿ ಮತ್ತದರ ಪಿಚ್ ನಮ್ಮ ಬದುಕಿನ ಎಲ್ಲ ಹಂತಗಳಲ್ಲೂ ಒಂದು ರೀತಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆಳ ಧ್ವನಿಯುಳ್ಳ ವ್ಯಕ್ತಿಯಲ್ಲಿ ಪ್ರಾಬಲ್ಯ ಸ್ವಭಾವ, ಆಕರ್ಷಿಸುವ ಗುಣ, ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆ ಇರುತ್ತದೆ ಎನ್ನುತ್ತವೆ ಹಲವಾರು ಸಂಶೋಧನೆಗಳು. ಗೊಟ್ಟಿಂಗನ್ ವಿಶ್ವವಿದ್ಯಾಲಯದಲ್ಲಿ ಸ್ಕಿಲ್ಡ್ ಮನಶ್ಶಾಸ್ತ್ರಜ್ಞ ಜೂಲಿಯಾ ಸ್ಟರ್ನ್ ನೇತೃತ್ವದ ಸಂಶೋಧನಾ ತಂಡ 2021ರಲ್ಲಿ ಧ್ವನಿ ಮತ್ತು ವ್ಯಕ್ತಿತ್ವ ಕುರಿತು ಪ್ರಬಂಧ ಮಂಡಿಸಿತು. ವ್ಯಕ್ತಿಯ ಧ್ವನಿಯು ಅವರ ವ್ಯಕ್ತಿತ್ವದ ಮೇಲೆ ನಿಜವಾದ ಪ್ರಭಾವವನ್ನು ಹೊಂದಿದೆಯೇ ಎಂದು ಕಂಡುಹಿಡಿಯುವುದು ಈ ತಂಡದ ಉದ್ದೇಶವಾಗಿತ್ತು.

ಇದನ್ನೂ ಓದಿ : Personality Test: ಈ 10 ಗುಣಲಕ್ಷಣಗಳಿದ್ದರೆ ನಿಮ್ಮದು ಸೃಜನಶೀಲ ವ್ಯಕ್ತಿತ್ವ

ಇದನ್ನೂ ಓದಿ
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಈ ಅಧ್ಯಯನಕ್ಕಾಗಿ 2,217 ಪುರುಷರು ಮತ್ತು ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಮಹಿಳೆಯರು ಸ್ವಲ್ಪಮಟ್ಟಿಗೆ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಳವಾದ ಧ್ವನಿಯುಳ್ಳ ವ್ಯಕ್ತಿಯ ಗುಣಲಕ್ಷಣಗಳನ್ನು ಅರಿಯುವುದರ ಹಿನ್ನೆಲೆಯಲ್ಲಿ, ಅವರೆಲ್ಲರ ನಿರ್ದಿಷ್ಠವಾದ ಪಿಚ್​ ತಿಳಿಯಲು ಅವರ ಧ್ವನಿಗಳನ್ನು ರೆಕಾರ್ಡ್​ ಮಾಡಿಕೊಳ್ಳಲಾಯಿತು. ಜೊತೆಗೆ ವಯಸ್ಸು, ಲಿಂಗವನ್ನೂ. ಇಷ್ಟೇ ಅಲ್ಲ, ಅವರ ಲೈಂಗಿಕ ನಡೆವಳಿಕೆಯ ಕುರಿತೂ ಮಾಹಿತಿ ಸಂಗ್ರಹಿಸಲಾಯಿತು.

ಇದನ್ನೂ ಓದಿ : Personality Test: ನಿಮ್ಮ ಪಾದಗಳ ಆಕಾರಕ್ಕೂ ವ್ಯಕ್ತಿತ್ವಕ್ಕೂ ಏನು ಸಂಬಂಧ?

ಕೊನೆಗೆ ತಿಳಿದುಬಂದಿದ್ದು, ಆಳವಾದ ಧ್ವನಿಯುಳ್ಳವರು ಪ್ರಬಲರು, ಹೆಚ್ಚು ಬಹಿರ್ಮುಖಿ ಮತ್ತು ಕಡಿಮೆ ಆಹ್ಲಾದಕರ ಸ್ವಭಾವ ಹೊಂದಿರುತ್ತಾರೆ. ಆದರೆ ಲೈಂಗಿಕ ಆಸಕ್ತಿ ತುಸು ಜಾಸ್ತಿಯೇ ಇರುತ್ತದೆ  ಎಂದು. ನಂತರ ಅವರವರ ಸಂಗಾತಿಗಳನ್ನು ಅವರವರ ಧ್ವನಿಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಯಿತು.

ಎಲ್ಲದಕ್ಕೂ ಧ್ವನಿಯೇ ನಿರ್ಣಾಯಕವಲ್ಲ

ಪ್ರಾಮಾಣಿಕತೆ, ಮುಕ್ತ ಮನಸ್ಸು ಮತ್ತು ಆತ್ಮಸಾಕ್ಷಿಗೆ ಸಂಬಂಧಿಸಿದ ವಿಷಯವನ್ನು ಧ್ವನಿಯ ಮೂಲಕ ನಿರ್ಧರಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಸಂಶೋಧನೆಯ ಅಂತಿಮ ಫಲಿತಾಂಶದಿಂದ ತಿಳಿಯಿತು. ಹಾಗಾಗಿ ಧ್ವನಿಯಾಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ಅಳೆಯಲಾಗುವುದಿಲ್ಲ ಎನ್ನುವುದು ಖಚಿತವಾಯಿತು.