ಕೊರೊನಾ ಸಂಕಟದ ನಡುವೆ ಪಿರಮಿಡ್ಗಳಿಗೆ ಸ್ವಚ್ಛತಾ ಭಾಗ್ಯ!
ಕೈರೋ: ಕೊರೊನಾ ಹಾವಳಿಗೆ ಸಿಕ್ಕು ದೈನಂದಿನ ಜನಜೀವನ ಅಸ್ತವ್ಯಸ್ತವಾಗಿವೆ. ಕೊರೊನಾ ಭಯದಿಂದ ಅದೆಷ್ಟೋ ಪ್ರವಾಸಿ ತಾಣಗಳಲ್ಲಿ ಜನಜಂಗುಳಿಯೇ ಇಲ್ಲ. ಅಂಥಾದ್ರಲ್ಲಿ ಕೈರೋ ಪಿರಮಿಡ್ ಇರೋ ತಾಣವೂ ಸಹ ಒಂದಾಗಿದೆ. ಜನ ಬಾರದೇ ಅಲ್ಲಿನ ಆರ್ಥಿಕ ಸ್ಥಿತಿ ಅಧ್ವಾನವಾಗಿದೆ. ಇದೇ ಕಾಲಕ್ಕೆ ಈ ಪಿರಮಿಡ್ಗಳು ಮತ್ತದರ ಸುತ್ತಮುತ್ತಲ ಸ್ಥಳಗಳಲ್ಲಿ ಸೋಂಕು ನಿವಾರಿಸುವ ಕೆಲಸದಲ್ಲಿ ಅಲ್ಲಿನ ಅಧಿಕಾರಿಗಳು ತೊಡಗಿಕೊಂಡಿದ್ದಾರೆ. ಅದರಲ್ಲೂ ಈಜಿಪ್ಟ್‌ನ ಗಿಜಾ ಪಿರಮಿಡ್ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯ ಅದಾಗಲೇ ಮುಗಿದಿದೆ. ಫೇಸ್ ಮಾಸ್ಕ್ ಮತ್ತು ಕೈಗೆ ಗ್ಲೌಸ್ಗಳನ್ನು ಧರಿಸಿದ […]
ಕೈರೋ: ಕೊರೊನಾ ಹಾವಳಿಗೆ ಸಿಕ್ಕು ದೈನಂದಿನ ಜನಜೀವನ ಅಸ್ತವ್ಯಸ್ತವಾಗಿವೆ. ಕೊರೊನಾ ಭಯದಿಂದ ಅದೆಷ್ಟೋ ಪ್ರವಾಸಿ ತಾಣಗಳಲ್ಲಿ ಜನಜಂಗುಳಿಯೇ ಇಲ್ಲ. ಅಂಥಾದ್ರಲ್ಲಿ ಕೈರೋ ಪಿರಮಿಡ್ ಇರೋ ತಾಣವೂ ಸಹ ಒಂದಾಗಿದೆ. ಜನ ಬಾರದೇ ಅಲ್ಲಿನ ಆರ್ಥಿಕ ಸ್ಥಿತಿ ಅಧ್ವಾನವಾಗಿದೆ.
ಇದೇ ಕಾಲಕ್ಕೆ ಈ ಪಿರಮಿಡ್ಗಳು ಮತ್ತದರ ಸುತ್ತಮುತ್ತಲ ಸ್ಥಳಗಳಲ್ಲಿ ಸೋಂಕು ನಿವಾರಿಸುವ ಕೆಲಸದಲ್ಲಿ ಅಲ್ಲಿನ ಅಧಿಕಾರಿಗಳು ತೊಡಗಿಕೊಂಡಿದ್ದಾರೆ. ಅದರಲ್ಲೂ ಈಜಿಪ್ಟ್‌ನ ಗಿಜಾ ಪಿರಮಿಡ್ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯ ಅದಾಗಲೇ ಮುಗಿದಿದೆ.
ಫೇಸ್ ಮಾಸ್ಕ್ ಮತ್ತು ಕೈಗೆ ಗ್ಲೌಸ್ಗಳನ್ನು ಧರಿಸಿದ ಕಾರ್ಮಿಕರು ಪಿರಮಿಡ್‌ಗಳ ಸುತ್ತಲೂ, ಟಿಕೆಟ್ ಕಚೇರಿ ಮತ್ತು ಸಂದರ್ಶಕ ಕೇಂದ್ರಗಳು, ಜನರು ನಡೆದಾಡುವ ಮಾರ್ಗಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿರುವುದರಿಂದ ಕೈರೋದಲ್ಲಿನ ಈಜಿಪ್ಟಿನ ವಸ್ತು ಸಂಗ್ರಹಾಲಯದಿಂದ ಹಿಡಿದು ಲಕ್ಸಾರ್‌ನ ಕಣಿವೆಯವರೆಗಿನ ಎಲ್ಲಾ ಈಜಿಪ್ಟ್‌ನ ಪ್ರಸಿದ್ಧ ಪುರಾತನ ಸ್ಥಳಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಅದಾಗಲೇ ಮುಚ್ಚಲಾಗಿದೆ. ಅಧಿಕಾರಿಗಳು ಹೀಗೆ ಹೋಟೆಲ್‌ಗಳು ಮತ್ತು ಪ್ರವಾಸಿ ತಾಣಗಳನ್ನು ಸ್ವಚ್ಛಗೊಳಿಸಿ ಸೋಂಕು ನಿವಾರಣೆಗೆ ಮುಂದಾಗಿದ್ದಾರೆ.
ಅದಾಗಲೇ ಮೊದಲ ಹಂತದ ಸೋಂಕು ನಿವಾರಕ ಕಾರ್ಯಗಳು ಆರಂಭವಾಗಿದ್ದು, ಎಲ್ಲಾ ಪ್ರವಾಸಿ ತಾಣಗಳನ್ನು ಇದೇ ಮಾದರಿಯಲ್ಲಿ ಸ್ವಚ್ಛಗೊಳಿಸುವ ಮೂಲಕ ಸೋಂಕು ನಿವಾರಣೆ ಮಾಡುವ ಕಾರ್ಯ ಮುಂದುವರೆಯಲಿದೆ. ಇಂಥಹ ಪ್ರಾಚೀನ ಸ್ಮಾರಕಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ವಿಶೇಷ ತಜ್ಞರು ಮತ್ತು ಉತ್ಖನನ ತಂಡವನ್ನು ನಿಯೋಜಿಸಲಾಗಿದೆ. ಈ ಮೂಲಕ ಕೊರೊನಾ ಮುಕ್ತ ದಿನಗಳಲ್ಲಿ ಉತ್ತಮ ವಾತಾವರಣ ಕಲ್ಪಿಸುವುದು ಅಧಿಕಾರಿಗಳ ಉದ್ದೇಶ. ಅದ್ಕಾಗಿ ಸ್ವಚ್ಛತೆ ಜೊತೆ ನವೀಕರಣ ಮತ್ತು ನಿರ್ವಹಣಾ ಕಾರ್ಯಗಳು ಕೂಡಾ ಭರದಿಂದ ಸಾಗ್ತಾ ಇವೆ. (ವಿಶೇಷ ಬರಹ-ರಾಜೇಶ್ ಶೆಟ್ಟಿ)
Published On - 6:45 pm, Mon, 18 May 20