AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಪ್ಪತ್ತಗುಡ್ಡದ ಔಷಧೀಯ ಸಸ್ಯ ಸಂಪತ್ತು: ಧಾರವಾಡದ ಅಧಿಕಾರಿಗಳ ಮಾದರಿ ಕಾರ್ಯ

ಸರಕಾರಿ ಕೆಲಸ ಅಂದಕೂಡಲೇ ಕಚೇರಿ ಕೆಲಸವಷ್ಟೇ ಎಂದುಕೊಳ್ಳುವ ನೌಕರರಿಗೆ ಈ ದಂಪತಿ ಮಾದರಿ. ಐಎಫ್ಎಸ್ ಅಧಿಕಾರಿಗಳಾಗಿ ಕೆಲಸದ ಒತ್ತಡದ ನಡುವೆಯೂ ಇಂಥದ್ದೊಂದು ಉತ್ತಮ ಕಾರ್ಯ ಮಾಡಿದ್ದಾರೆ.

ಕಪ್ಪತ್ತಗುಡ್ಡದ ಔಷಧೀಯ ಸಸ್ಯ ಸಂಪತ್ತು: ಧಾರವಾಡದ ಅಧಿಕಾರಿಗಳ ಮಾದರಿ ಕಾರ್ಯ
ಅರಣ್ಯಾಧಿಕಾರಿ ದಂಪತಿ ಯಶಪಾಲ್ ಕ್ಷೀರಸಾಗರ್ ಹಾಗೂ ಸೋನಲ್ ವೃಷ್ಣಿ.
Follow us
Skanda
| Updated By: ಆಯೇಷಾ ಬಾನು

Updated on:Jan 22, 2021 | 7:11 AM

ಧಾರವಾಡ: ಅರಣ್ಯ ಹಾಗೂ ಸಸ್ಯ ಸಂಪತ್ತನ್ನು ಉಳಿಸುವುದರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಅದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತಿದೆ ಎಂಬ ವಿಷಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಅರಣ್ಯವನ್ನು ನೋಡಿದರೆ ತಿಳಿಯುತ್ತದೆ. ಅನೇಕರು ಅರಣ್ಯ ರಕ್ಷಣೆಯೇ ತಮ್ಮ ಧ್ಯೇಯ ಎಂದು ಅರಣ್ಯ ಇಲಾಖೆಯೇನೋ ಸೇರುತ್ತಾರೆ. ಆ ಪೈಕಿ ಎಷ್ಟು ಜನರು ಪೂರ್ಣ ಪ್ರಮಾಣದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎನ್ನುವುದು ಮಾತ್ರ ಯಕ್ಷ ಪ್ರಶ್ನೆ.

ಆದರೆ, ಧಾರವಾಡದಲ್ಲಿ ಮಾತ್ರ ಅರಣ್ಯ ಸಂಪತ್ತಿನ ಬಗ್ಗೆ ನಿಜವಾಗಿಯೂ ಕಾಳಜಿಯುಳ್ಳ ಅಧಿಕಾರಿಗಳಿಬ್ಬರು ಇದ್ದಾರೆ. ವಿಶೇಷವೆಂದರೆ ಅವರಿಬ್ಬರೂ ಸತಿ-ಪತಿ. ಅರಣ್ಯ ಉಳಿವಿಗೆ ಕಾವಲಾಗಿರುವುದು ಮಾತ್ರವಲ್ಲದೆ, ಅಲ್ಲಿನ ಸಸ್ಯ ಸಂಪತ್ತಿನ ಬಗ್ಗೆ ಜನರಿಗೆ ತಿಳಿಸುವ ವಿಶೇಷ ಕೆಲಸವನ್ನು ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿರುವ ದಂಪತಿ ಹೆಸರು ಯಶಪಾಲ್ ಕ್ಷೀರಸಾಗರ್ ಹಾಗೂ ಸೋನಲ್ ವೃಷ್ಣಿ.

ಯಶಪಾಲ ಕ್ಷೀರಸಾಗರ ಅವರು ಧಾರವಾಡ ಅರಣ್ಯ ಉಪಸಂರಕ್ಷಣಾಧಿಕಾರಿ. ಅವರ ಪತ್ನಿ ಧಾರವಾಡ ತಾಲೂಕಿನ ಗುಂಗರಗಟ್ಟಿ ಅರಣ್ಯ ಅಕಾಡೆಮಿಯ ಜಂಟಿ ನಿರ್ದೇಶಕಿ ಹಾಗೂ ಅರಣ್ಯ ಉಪಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ. ಈ ದಂಪತಿ ಇದೀಗ ಉತ್ತಮ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇವರಿಬ್ಬರೂ ಅರಣ್ಯ ಸಂಪತ್ತಿಗೆ ಕಾವಲಾಗೋದಕ್ಕೆ ಸೀಮಿತವಾಗದೇ ಅರಣ್ಯವನ್ನು ಏಕೆ ಉಳಿಸಬೇಕು ಹಾಗೂ ಅರಣ್ಯಗಳಲ್ಲಿ ಎಷ್ಟೆಲ್ಲಾ ಬಗೆಯ ಸಸ್ಯ ಸಂಪತ್ತಿರುತ್ತದೆ ಎಂಬ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ.

ಗದಗದ ಕಪ್ಪತ್ತಗುಡ್ಡದಲ್ಲಿನ ಔಷಧೀಯ ಸಸ್ಯಗಳ ದಾಖಲೀಕರಣ ಗದಗದ ಕಪ್ಪತಗುಡ್ಡ ಅಂದಕೂಡಲೇ ಎಲ್ಲರ ಮನಸ್ಸಿನಲ್ಲಿ ಬರುವುದು ಅಲ್ಲಿಯ ಔಷಧೀಯ ಸಸ್ಯಗಳು. ಈ ಗುಡ್ಡದಲ್ಲಿ ಬಗೆ ಬಗೆಯ ಔಷಧೀಯ ಸಸ್ಯಗಳು ಬೆಳೆಯುತ್ತವೆ. ಇದೇ ಕಾರಣಕ್ಕೆ ಇಂದಿಗೂ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸರಕಾರ ಅನುಮತಿ ನೀಡುತ್ತಿಲ್ಲ. ಇಲ್ಲಿನ ಖನಿಜ ಸಂಪತ್ತನ್ನು ದೋಚಲು ಅನೇಕರು ಪ್ರಯತ್ನಿಸಿದರಾದರೂ ಈ ಗುಡ್ಡದಲ್ಲಿನ ಔಷಧೀಯ ಸಸ್ಯಗಳಿಂದಾಗಿ ಯಾರಿಗೂ ಅವಕಾಶ ಸಿಕ್ಕಿಲ್ಲ.

ಕೆಲ ವರ್ಷಗಳ ಹಿಂದೆ ರಾಜ್ಯ ಸರಕಾರ ಗಣಿಗಾರಿಕೆಗೆ ಅನುಮತಿ ನೀಡಿತ್ತಾದರೂ ಔಷಧಿ ಸಸ್ಯಗಳ ಕಾರಣದಿಂದಾಗಿಯೇ ದೊಡ್ಡ ಮಟ್ಟದ ಹೋರಾಟ ನಡೆದು, ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತಾಯಿತು. ಹಾಗಾದರೆ ಇಲ್ಲಿ ಬೆಳೆಯುವ ಔಷಧ ಸಸ್ಯಗಳಾದರೂ ಯಾವುವು ಅನ್ನೋದರ ಬಗ್ಗೆಯೇ ಈ ದಂಪತಿ ಕುತೂಹಲಿಗಳಾಗಿ ಕೆಲಸ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಇದೀಗ ಆ ಸಸ್ಯಗಳ ದಾಖಲೀಕರಣವನ್ನೂ ಮಾಡಿದ್ದಾರೆ. ಇದುವರೆಗೆ ಎಲ್ಲರಿಗೂ ಇಲ್ಲಿನ ಔಷಧೀಯ ಸಸ್ಯಗಳ ಬಗ್ಗೆ ಗೊತ್ತಿತ್ತೇ ವಿನಃ ಅವು ಯಾವುವು ಮತ್ತು ಎಷ್ಟು ಪ್ರಮಾಣದಲ್ಲಿವೆ ಎನ್ನುವುದನ್ನು ಯಾರೂ ದಾಖಲಿಸಿರಲಿಲ್ಲ. ಇದೇ ಕಾರಣಕ್ಕೆ ಈ ದಂಪತಿ ಸ್ವಯಂ ಸ್ಫೂರ್ತಿಯಿಂದ 375 ಸಸಿಗಳ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ. ಇದೀಗ ಕಪ್ಪತ್ತಗುಡ್ಡ (ಗದಗ ಔಷಧೀಯ ಸಸ್ಯಗಳ ಒಂದು ಸಂಗ್ರಹ) ಎಂಬ ಪುಸ್ತಕವನ್ನು ಕೂಡ ಸಿದ್ಧಪಡಿಸಿದ್ದಾರೆ. ಈ ಪುಸ್ತಕ ಔಷಧೀಯ ಸಸ್ಯಗಳ ಮಾಹಿತಿ ಸೇರಿ ಅವುಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿರುವುದು ವಿಶೇಷ.

ಆರು ವರ್ಷಗಳ ಕಾಲ ಅಧ್ಯಯನ.. 428 ಪುಟಗಳ ಪುಸ್ತಕ ಐಎಫ್‌ಎಸ್‌ನ 2011ನೇ ಬ್ಯಾಚ್‌ನ ಈ ದಂಪತಿ ಗದಗ ಜಿಲ್ಲೆಯಲ್ಲಿ ಅರಣ್ಯ ಉಪಸಂರಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಅಲ್ಲಿದ್ದ ಸಂದರ್ಭದಲ್ಲೇ ಕಪ್ಪತ್ತಗುಡ್ಡ ಉಳಿಸುವ ಕುರಿತು ಬೃಹತ್ ಆಂದೋಲನ ನಡೆದಿತ್ತು. ಆ ಆಂದೋಲನದಿಂದ ಸ್ಪೂರ್ತಿ ಪಡೆದ ಇವರು, ಔಷಧೀಯ ಸಸ್ಯಗಳ ಕುರಿತು ಅಧ್ಯಯನ ನಡೆಸಿದ್ದಾರೆ. 2015ನೇ ಇಸವಿಯಿಂದ ಈ ಕಾರ್ಯದಲ್ಲಿ ತೊಡಗಿದ್ದ ಇವರು, 6 ವರ್ಷಗಳ ಕಾಲ ಅಧ್ಯಯನ ನಡೆಸಿ 428 ಪುಟಗಳ ಪುಸ್ತಕ ಹೊರ ತಂದಿದ್ದಾರೆ. ಈ ಪುಸ್ತಕವನ್ನು ಮಾರಾಟ ಮಾಡದೆ ಉಚಿತವಾಗಿ ಜನರಿಗೆ ನೀಡುವ ಮೂಲಕ ಅವರಿಗೆ ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ನೀಡುವುದೇ ಇವರ ಮುಖ್ಯ ಉದ್ದೇಶವಾಗಿದೆ. 375 ಔಷಧೀಯ ಸಸ್ಯಗಳ ಬಗ್ಗೆ ಸಮಗ್ರ ಮಾಹಿತಿ ಗದಗದ ಕಪ್ಪತ್ತಗುಡ್ಡದಲ್ಲಿ ಒಟ್ಟು 500ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ ಎನ್ನಲಾಗಿದೆ. ಅವುಗಳಲ್ಲಿ 375 ಜಾತಿಯ ಸಸ್ಯಗಳ ಮಾಹಿತಿ ಸಂಗ್ರಹಿಸಿ ಈ ಪುಸ್ತಕದಲ್ಲಿ ದಾಖಲೀಕರಣ ಮಾಡಿದ್ದಾರೆ. ಪ್ರತಿ ಸಸ್ಯಗಳ ಪಟ್ಟಿ ಮಾಡಿ, ಆ ಸಸ್ಯದ ಜಾತಿ, ಕುಟುಂಬ, ಸಾಮಾನ್ಯ ಹೆಸರು (ಪರಿಚಿತ ಹೆಸರು), ಕನ್ನಡದ ಹೆಸರು, ಹೂವು, ಕಾಯಿ ಬಿಡುವ ಸಮಯ, ಸಸಿಯ ಎತ್ತರ, ಎಲೆಯ ಅಳತೆ, ವಿನ್ಯಾಸ -ಹೀಗೆ ಸಸ್ಯದ ಸಂಪೂರ್ಣ ವೈಶಿಷ್ಟ್ಯದ ಜತೆಗೆ ಸಸ್ಯದಿಂದ ಆಗುವ ಆಯುರ್ವೇದ ಉಪಯೋಗದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

24ರಂದು ಪುಸ್ತಕ ಬಿಡುಗಡೆ.. ಉಚಿತವಾಗಿ ಪುಸ್ತಕ ನೀಡಿಕೆ ಜ. 24ರಂದು ಗದಗ ರಿಂಗ್ ರಸ್ತೆಯಲ್ಲಿನ ಡಾ. ಅಂಬೇಡ್ಕರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕಪ್ಪತ್ತಗುಡ್ಡ ಪುಸ್ತಕ ಬಿಡುಗಡೆಯಾಗುತ್ತಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಅರಣ್ಯ ಇಲಾಖೆ ಸಚಿವ ಆನಂದ ಸಿಂಗ್, ಅರಣ್ಯ ಪಡೆ ಮುಖ್ಯಸ್ಥ ಸಂಜಯ ಮೋಹನ, ಅಜಯ ಮಿಶ್ರಾ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪುಸ್ತಕವನ್ನು ಉಚಿತವಾಗಿ ಹಂಚಲು ನಿರ್ಧರಿಸಿರುವ ದಂಪತಿ ಸಸ್ಯ ಸಂಪತ್ತನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎನ್ನುವ ಅರಿವು ಮೂಡಿಸುವ ಉದ್ದೇಶ ಹೊಂದಿದ್ದಾರೆ. ಅಲ್ಲದೇ ಆ ಸಸ್ಯ ಸಂಪತ್ತಿಗಾಗಿ ಕೆಲಸ ಮಾಡುವುದು ಶ್ರೇಷ್ಠ ಕರ್ತವ್ಯ. ಹೀಗಾಗಿ ತಮ್ಮ ಬದುಕಿನ ಧ್ಯೇಯದ ಒಂದು ಭಾಗವಾಗಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದೇವೆ ಎಂದು ಹೇಳಿದ್ದಾರೆ.

ಕರ್ತವ್ಯದ ಬಳಿಕ ಪುಸ್ತಕದ ಕೆಲಸ.. ಕಪ್ಪತಗುಡ್ಡ ಉಳಿವಿಗಾಗಿ ಗದಗದ ಶ್ರೀ ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಅವರಿಗೆ ನಾಡಿನಾದ್ಯಂತ ಅನೇಕರು ಸಾಥ್ ನೀಡಿದ್ದರು. ಆಗ ಈ ಹೋರಾಟ ದೊಡ್ಡ ಮಟ್ಟದಲ್ಲಿ ಆಗಿತ್ತು. ಆ ಸಂದರ್ಭದಲ್ಲಿ ಗುಡ್ಡದ ಮಾಹಿತಿ ತಿಳಿದಾಗ ಔಷಧೀಯ ಸಸ್ಯಗಳು ಇರುವುದು ಗೊತ್ತಾಯಿತು. ಆದರೆ ಈ ಬಗ್ಗೆ ಯಾವುದೇ ದಾಖಲೀಕರಣ ಇಲ್ಲದ ಕಾರಣ ಪುಸ್ತಕ ಸಿದ್ಧಪಡಿಸಲು ನಿರ್ಧರಿಸಿದೆವು. ನಮ್ಮ ಕಚೇರಿ ಕೆಲಸದ ಬಳಿಕ ಈ ಕಾರ್ಯ ನಡೆಸಿದ್ದರಿಂದ ಪುಸ್ತಕ ಸಿದ್ಧವಾಗಲು 6 ವರ್ಷಗಳು ಬೇಕಾಯಿತು ಎನ್ನುತ್ತಾರೆ ಯಶಪಾಲ ಕ್ಷೀರಸಾಗರ.

ಸರಕಾರಿ ಕೆಲಸ ಅಂದಕೂಡಲೇ ಕಚೇರಿ ಕೆಲಸವಷ್ಟೇ ಎಂದುಕೊಳ್ಳುವ ನೌಕರರಿಗೆ ಈ ದಂಪತಿ ಮಾದರಿಯಾಗಿದ್ದಾರೆ. ಅದರಲ್ಲೂ ಐಎಫ್ಎಸ್ ಅಧಿಕಾರಿಗಳಾಗಿ ಕೆಲಸದ ಒತ್ತಡದ ನಡುವೆಯೂ ಇಂಥದ್ದೊಂದು ಉತ್ತಮ ಕಾರ್ಯ ಮಾಡಿದ್ದು ಎಲ್ಲರಿಗೂ ಮಾದರಿ.

Published On - 9:37 pm, Thu, 21 January 21

ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ