AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hindutva Icon Kalyan Singh: ಕರಸೇವಕರ ಮೇಲೆ ಗುಂಡು ಹಾರಿಸಲು ಅನುಮತಿಸದೆ CM ಕುರ್ಚಿ ಬಿಟ್ಟೆದ್ದಿದ್ದ ಕಲ್ಯಾಣ್​ ಸಿಂಗ್

1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದ ದಿನದಂದು ಕರಸೇವಕರ ಮೇಲೆ ಗುಂಡು ಹಾರಿಸುವುದಕ್ಕೆ ಅನುಮತಿ ನೀಡದೆ ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ್ದ ಕಲ್ಯಾಣ್​ ಸಿಂಗ್ ಹಿಂದುತ್ವದ ಐಕಾನ್ ಎನಿಸಿಕೊಂಡಿದ್ದರು.

Hindutva Icon Kalyan Singh: ಕರಸೇವಕರ ಮೇಲೆ ಗುಂಡು ಹಾರಿಸಲು ಅನುಮತಿಸದೆ CM ಕುರ್ಚಿ ಬಿಟ್ಟೆದ್ದಿದ್ದ ಕಲ್ಯಾಣ್​ ಸಿಂಗ್
ಕಲ್ಯಾಣ್​ ಸಿಂಗ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on:Aug 21, 2021 | 11:37 PM

Share

“ನಾನು ಬದುಕಿರುವಾಗಲೇ ಅಲ್ಲಿ ರಾಮಮಂದಿರ ಆಗುವುದನ್ನು ನೋಡಬೇಕು ಮತ್ತು ಅದೇ ಅಯೋಧ್ಯಾದಲ್ಲೇ ಮತ್ತೆ ನಾನು ಹುಟ್ಟಬೇಕು,” – ಹೀಗಂದಿದ್ದರು ಕಲ್ಯಾಣ್​ ಸಿಂಗ್. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದ್ದ ಮಾತಿದು. ಅಂದಹಾಗೆ, 89 ವರ್ಷದ ಕಲ್ಯಾಣ್​ ಸಿಂಗ್ ಶನಿವಾರದಂದು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಭಾರತದ ಇತಿಹಾಸದ ಮಹತ್ವವಾದ ಘಟನೆಯಲ್ಲಿ ಒಂದಾದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಒಂದು ಕೊಂಡಿ ಕಳಚಿದಂತಾಗಿದೆ. ಮೇಲೆ ಪ್ರಸ್ತಾಪಿಸಲಾದ ಸಂದರ್ಶನ ಕಳೆದ ವರ್ಷ ನಡೆದಿತ್ತು. ಡಿಸೆಂಬರ್ 6, 1992ರಂದು ಕರಸೇವಕರ ಮೇಲೆ ಪೊಲೀಸರು ಗುಂಡು ಹಾರಿಸುವುದಕ್ಕೆ ಆ ಸಂದರ್ಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದ ತಾವು ಅನುಮತಿ ನೀಡದಿರುವ ತೀರ್ಮಾನವನ್ನು ಕಲ್ಯಾಣ್​ ಸಿಂಗ್ ಸಮರ್ಥಿಸಿಕೊಂಡಿದ್ದರು. ಆ ನಿರ್ಧಾರವು ಹೆಮ್ಮೆಯ ಸಂಗತಿ ಎಂದು ಕೂಡ ಹೇಳಿಕೊಂಡಿದ್ಚರು.

“ಬಾಬ್ರಿ ಮಸೀದಿ ಕಟ್ಟಡ ಕೆಡವಿದ್ದಕ್ಕೆ ಕ್ಷಮೆ ಕೇಳಬೇಕು ಅನಿಸುವುದಿಲ್ಲ. ಅಥವಾ ಅದಕ್ಕಾಗಿ ನನಗೆ ಯಾವುದೇ ಅಸಮಾಧಾನ ಕೂಡ ಇಲ್ಲ. ಯಾವುದೇ ವಿಷಾದವಿಲ್ಲ, ಪಶ್ಚಾತ್ತಾಪವಿಲ್ಲ, ದುಃಖವಿಲ್ಲ, ಶೋಕವಿಲ್ಲ. ವಿವಾದಾತ್ಮಕ ಕಟ್ಟಡ ಕೆಡವಿದ ನಂತರ, ಅನೇಕರು ಈ ಘಟನೆಯನ್ನು ರಾಷ್ಟ್ರೀಯ ಅವಮಾನದ ಸಂಗತಿ ಎಂದು ಕರೆದರು. ಆದರೆ ಇದು ರಾಷ್ಟ್ರೀಯ ಹೆಮ್ಮೆಯ ವಿಷಯ ಎಂದು ನಾನು ಹೇಳುತ್ತೇನೆ,” ಎಂದು ಸಿಂಗ್ ತಿಳಿಸಿದ್ದರು. ಕಲ್ಯಾಣ್​ ಸಿಂಗ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ವಿವಾದಾತ್ಮಕ ಕಟ್ಟಡವು ಅಯೋಧ್ಯೆಯಲ್ಲಿ ನೆಲಕ್ಕೆ ಉರುಳಿಸಲಾಗಿತ್ತು. ಆ ಧ್ವಂಸ ಪ್ರಕರಣದ ನಂತರದಲ್ಲಿ ಕಲ್ಯಾಣ್​ ಸಿಂಗ್​ರ ನೇತೃತ್ವದ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿತ್ತು.

ಆ ಘಟನೆ ನಡೆದ ವರ್ಷಗಳ ನಂತರ ಟೀವಿ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ, ದೇಶದ ‘ಜಾತ್ಯತೀತ’ ತತ್ವವನ್ನು ಉಳಿಸಲು ಯಾವ ಕರಸೇವಕರು ಪ್ರಾಣ ಬಿಡಲಿ ಎನ್ನುವುದನ್ನು ಬಯಸುತ್ತಾರೆ, ಆ ದಿನದಂದು ಅಯೋಧ್ಯೆಯಲ್ಲಿ ಏನಾಯಿತು ಎಂಬುದಕ್ಕೆ ನನಗೆ ಯಾವುದೇ ಪಶ್ಚಾತ್ತಾಪ ಅಥವಾ ವಿಷಾದ ಇಲ್ಲ ಎಂದು ಸಿಂಗ್ ಹೇಳಿದ್ದರು. ರಾಮಜನ್ಮಭೂಮಿ ಚಳವಳಿಯಲ್ಲಿ ಕಲ್ಯಾಣ್​ ಸಿಂಗ್​ ಅವರಿಗೆ ಭಾರೀ ಗೌರವ ಇತ್ತು. ಕರಸೇವಕರ ಮೇಲೆ ಪೊಲೀಸರು ಗುಂಡು ಹಾರಿಸುವುದಕ್ಕೆ ಅನುಮತಿ ನೀಡದ ಸಿಂಗ್, ಮುಖ್ಯಮಂತ್ರಿ ಹುದ್ದೆಯನ್ನು ತೊರೆದಿದ್ದರು. ಆ ಕಾರಣದಿಂದಲೇ ಹಿಂದುತ್ವ ಚಳವಳಿಯಲ್ಲಿ ಕಲ್ಯಾಣ್​ ಸಿಂಗ್​ ಐಕಾನ್ ಆಗಿದ್ದರು.

ಇದನ್ನೂ ಓದಿ: Kalyan Singh: ಉತ್ತರ ಪ್ರದೇಶದ ಮಾಜಿ ಸಿಎಂ, ಹಿರಿಯ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ನಿಧನ

(Hindutva Icon Kalyan Singh Sacrificed CM Position Instead Of Giving Firing Order On Karsevaks)

Published On - 11:30 pm, Sat, 21 August 21

‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ