ಚಿಕ್ಕ ವಯಸ್ಸಿನಲ್ಲೇ ಕವಿತೆ ಬರೆದು ಸಾಧನೆ; ಕಿರಿಯ ಕವಯತ್ರಿ ಎಂಬ ದಾಖಲೆಗೆ ಸೇರ್ಪಡೆಗೊಂಡ ಅಮನ
ಕು. ಅಮನ, ಬಿಷಪ್ ಕಾಟನ್ ಗಲ್ರ್ಸ್ ಸ್ಕೂಲ್, ಬೆಂಗಳೂರಿನಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅವರ ಹೆಸರು ಕಿರಿಯ ವಯಸ್ಸಿನಲ್ಲಿಯೇ ಪ್ರತಿಷ್ಠಿತ ‘ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್’ನಲ್ಲಿ ‘ಕಿರಿಯ ಕವಯಿತ್ರಿ’ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ‘ಗ್ರ್ಯಾಂಡ್ ಮಾಸ್ಟರ್’ ಎಂದು ದಾಖಲಾಗಿದೆ.

ಬೆಂಗಳೂರು: ಅತ್ಯಂತ ಕಿರಿಯ ಕವಯಿತ್ರಿ ಎಂಬ ದಾಖಲೆಯನ್ನು ಬೆಂಗಳೂರಿನ ಕುಮಾರಿ ಅಮನ ನಿರ್ಮಿಸಿದ್ದಾರೆ. ಅವರ 61 ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ‘ಎಕೋಸ್ ಆಫ್ ಸೋಲ್ಫುಲ್ ಪದ್ಯಗಳು’ (ISBN: 978-93-90490-90-5) ಎಂಬ ಪುಸ್ತಕವನ್ನು ಸಪ್ನಾ ಬುಕ್ ಹೌಸ್, ನವೆಂಬರ್ 2020ರಲ್ಲಿ ಪ್ರಕಟಿಸಿದೆ. ಪುಸ್ತಕ ಪ್ರಕಟ ಆಗುವ ಸಮಯದಲ್ಲಿ ಕು. ಅಮನ ವಯಸ್ಸು 12 ವರ್ಷ, 5 ತಿಂಗಳು ಮತ್ತು 10 ದಿನಗಳು ಮಾತ್ರ ಆಗಿತ್ತು. ಜುಲೈ 26, 2021 ರಂದು ಈ ಸಾಧನೆಯನ್ನು ‘ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್’ನಲ್ಲಿ ‘ಕಿರಿಯ ಕವಿಯತ್ರಿ‘ ಎಂದು ದೃಢಪಡಿಸಲಾಗಿದೆ. ಜೂನ್ 20, 2008ರಲ್ಲಿ ಜನಿಸಿದ ಅಮನಾ, ಚಿಕ್ಕ ವಯಸ್ಸಿನಲ್ಲೇ ಕವಿತೆಗಳನ್ನು ಬರೆದಿರುವುದಕ್ಕೆ – ಏಷ್ಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ‘ಗ್ರ್ಯಾಂಡ್ ಮಾಸ್ಟರ್’ ಎಂದು ಕೂಡ ದಾಖಲೆ ನಿರ್ಮಿಸಿದ್ದಾರೆ.
ಕು. ಅಮನ, ಬಿಷಪ್ ಕಾಟನ್ ಗಲ್ರ್ಸ್ ಸ್ಕೂಲ್, ಬೆಂಗಳೂರಿನಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅವರ ಹೆಸರು ಕಿರಿಯ ವಯಸ್ಸಿನಲ್ಲಿಯೇ ಪ್ರತಿಷ್ಠಿತ ‘ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್’ನಲ್ಲಿ ‘ಕಿರಿಯ ಕವಯಿತ್ರಿ’ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ‘ಗ್ರ್ಯಾಂಡ್ ಮಾಸ್ಟರ್’ ಎಂದು ದಾಖಲಾಗಿದೆ.
ಇಲ್ಲಿಯವರೆಗೆ ಕುಮಾರಿ ಅಮನ 275ಕ್ಕೂ ಹೆಚ್ಚು ಕವಿತೆಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆದಿದ್ದಾಳೆ. ಆಕೆಯ 2 ನೇ ಪುಸ್ತಕ ಪ್ರಕಟವಾಗುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆಕೆಯ ಅನೇಕ ಕವಿತೆಗಳು ಪತ್ರಿಕೆ ಮತ್ತು ವಿವಿಧ ವೆಬ್‍ಸೈಟ್‍ಗಳಲ್ಲಿ ಪ್ರಕಟವಾಗಿವೆ. ಕರ್ನಾಟಕದ ವಿದ್ಯಾರ್ಥಿನಿಯೊಬ್ಬಳು ಭಾರತದ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಜೊತೆಗೆ ಕು. ಅಮನ
ಇದನ್ನೂ ಓದಿ: ವಯಸ್ಸಿಗೂ ಮೀರಿದ ಪ್ರತಿಭೆ; ಪುಟ್ಟ ಬಾಲಕಿಯ ಜಿಮ್ನಾಸ್ಟಿಕ್ ವಿಡಿಯೋ ವೈರಲ್
Published On - 8:04 am, Sun, 22 August 21