Science and Environment : ಜೀವವೆಂಬ ಜಾಲದೊಳಗೆ: ಏನಿದು ‘ಅಂಡರ್ ಸ್ಟೋರಿ’ ರಹಸ್ಯ

Photosynthesis : ನಮ್ಮ ಕೊಲ್ಲೂರು ಘಾಟಿಯಲ್ಲಿರುವ ಕಾಡಿನಲ್ಲಿ ಸೂರ್ಯನ ಬೆಳಕೇ ಕಾಡಿನ ಒಳಗೆ ಬೀಳದಿದ್ದರೂ ಒಂದಿಂಚೂ ಜಾಗವಿಲ್ಲದಂತೆ ಗಿಡ, ಪೊದೆಗಳು, ಪುಟ್ಟ ಮರಬಳ್ಳಿಗಳು ಬೆಳೆದಿವೆಯಲ್ಲ ಹೇಗೆ? – ಪ್ರಶ್ನೆ ಕೇಳಿದವರು ಸಾಗರದ ವತ್ಸಲಾ ಮೂರ್ತಿ.

Science and Environment : ಜೀವವೆಂಬ ಜಾಲದೊಳಗೆ: ಏನಿದು ‘ಅಂಡರ್ ಸ್ಟೋರಿ’ ರಹಸ್ಯ
Follow us
ಶ್ರೀದೇವಿ ಕಳಸದ
|

Updated on: May 20, 2022 | 12:27 PM

ಜೀವವೆಂಬ ಜಾಲದೊಳಗೆ | Jeevavemba Jaaladolage : ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ವಾತಾವರಣದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು ಹೀರಿಕೊಂಡು ಸೂರ್ಯನ ಬೆಳಕಿನ ಸಹಾಯದಿಂದ ಗ್ಲೂಕೋಸ್ ಮತ್ತು ಆಮ್ಲಜನಕವನ್ನು ತಯಾರಿಸುವ ಕ್ರಿಯೆಗೆ ದ್ಯುತಿ ಸಂಶ್ಲೇಷಣೆ ಎಂದು ಹೆಸರು. ಸೂರ್ಯನ ಬೆಳಕು ಈ ಕ್ರಿಯೆಗೆ ಅತೀ ಮುಖ್ಯ. ಸಮಭಾಜಕ ವೃತ್ತ ಹಾಗೂ ಅದರ ಆಸುಪಾಸಿನಲ್ಲಿರುವ ಸ್ಥಳಗಳಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುತ್ತದೆ. ಇದೇ ಕಾರಣದಿಂದಾಗಿ ಇಲ್ಲಿ ಬಿಸಿಲು ಹೆಚ್ಚು. ಹಾಗೆಯೇ ಪ್ರತೀ ದಿನವೆಂಬಂತೆ ಮಳೆಯೂ ಬರುತ್ತದೆ. ಹೆಚ್ಚಿನ ಸೂರ್ಯರಶ್ಮಿ, ನೀರು, ಹದವಾದ ಉಷ್ಣತೆ ಸಸ್ಯಗಳ ಬೆಳವಣಿಗೆಗೆ ಹೇಳಿ ಮಾಡಿಸಿದ ವಾತಾವರಣವಾದ್ದರಿಂದ ಈ ಪ್ರದೇಶಗಳಲ್ಲಿ ದಟ್ಟವಾದ ಕಾಡುಗಳಿದ್ದು ಇವು ಮಳೆಕಾಡುಗಳೆಂದೇ ಪ್ರಸಿದ್ಧವಾಗಿವೆ. ಪ್ರಪಂಚದಲ್ಲಿ ಅತೀ ಹೆಚ್ಚು ಆಮ್ಲಜನಕದ ಉತ್ಪತ್ತಿ ಮಳೆಕಾಡುಗಳಲ್ಲಿ ಆಗುವುದರಿಂದ ಇವುಗಳನ್ನು ನಮ್ಮ ಭೂಗೋಲದ ಶ್ವಾಸಕೋಶಗಳೆಂದು ಕರೆಯುತ್ತಾರೆ. ನಮ್ಮ ದೇಶದ ಪಶ್ಚಿಮಘಟ್ಟದ ಕಾಡುಗಳೂ ಸಹ ಮಳೆಕಾಡುಗಳು. ಕೊಲ್ಲೂರು ಘಾಟಿ ಇದೇ ಪಶ್ಚಿಮಘಟ್ಟಗಳಲ್ಲಿದೆ. ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ (Suma Sudhakiran) 

ಈ ಮಳೆಕಾಡುಗಳಲ್ಲಿ ಜೀವಜಾಲವು ನಾಲ್ಕು ಅಂತಸ್ತುಗಳಲ್ಲಿ ಹರಡಿರುತ್ತದೆ. ಅತ್ಯಂತ ಮೇಲೆ ಸಿಗುವುದು “ಎಮರ್ಜೆಂಟ್” ಎಂಬ ಅಂತಸ್ತು. ಸುಮಾರು 80-100 ಅಡಿಗಳಷ್ಟು ಎತ್ತರಕ್ಕೆ ಬೆಳೆವ ಮರಗಳು ಇಲ್ಲಿರುತ್ತವೆ. ಇವುಗಳ ಸಂಖ್ಯೆ ವಿರಳವಾಗಿರುತ್ತದೆ. ಇವುಗಳಿಗೆ ಸೂರ್ಯನ ಬೆಳಕು ಗಾಳಿ ಎಲ್ಲವೂ ಹೇರಳವಾಗಿ ಸಿಗುತ್ತದೆ. ಸದೃಢವಾದ ಕಾಂಡಗಳನ್ನುಳ್ಳ ಮರಗಳ ಬೀಜಗಳು ಗಾಳಿಯಲ್ಲೇ ಪ್ರಸರಣಗೊಳ್ಳುವಂತಹುದಾಗಿರುತ್ತದೆ. ಇಲ್ಲಿ ಅನೇಕ ಕೀಟಗಳೂ, ಹದ್ದು, ಗಿಡುಗಳಂತಹ ಪಕ್ಷಿಗಳು ವಾಸಿಸುತ್ತವೆ. ಇದಕ್ಕಿಂತ ಸ್ವಲ್ಪ ಕೆಳಗಿರುವುದು ದಟ್ಟವಾಗಿ ಬೆಳೆದಿರುವ “ಕೆನೊಪಿ” ಅಂತಸ್ತು. ಇಲ್ಲಿ ಸಹ ಸೂರ್ಯನ ಬೆಳಕು ಹಾಗೂ ಗಾಳಿಗೆ ಕೊರತೆಯಿರುವುದಿಲ್ಲ. ಅಧಿಕ ಸಂಖ್ಯೆಯ ಮರಗಳು ಒಂದಕ್ಕೊಂದು ಪೈಪೋಟಿ ನೀಡುವಂತೆ ಇಲ್ಲಿ ಬೆಳೆದಿರುತ್ತವೆ. ಒತ್ತೊತ್ತಾಗಿರುವ ರೆಂಬೆಗಳ ಎಲೆಗಳು ಹೆಚ್ಚು ಹೆಚ್ಚು ಸೂರ್ಯನ ಬೆಳಕು ಹಾಗೂ ಗಾಳಿಯನ್ನು ಪಡೆಯವ ಉದ್ದೇಶದಿಂದ ಸ್ಥಳವನ್ನು ಆಕ್ರಮಿಸಿಕೊಂಡಿರುತ್ತವೆ.

ಇದನ್ನೂ ಓದಿ : Science and Environment : ಜೀವವೆಂಬ ಜಾಲದೊಳಗೆ: ‘ಕೆಂಪಿ ಮಾಸ ತಿಂದುಬಿಟ್ಟಿರುತ್ತೆ, ಜಾಸ್ತಿ ನಂಜಿಗೆ ಕೊಡಬೇಕು’

ಇದನ್ನೂ ಓದಿ
Image
ಜೀವವೆಂಬ ಜಾಲದೊಳಗೆ; ಪ್ರಾಣಿಗಳಿಗಂತೂ ಬೋರ್ಡ್​ ಓದಲು ಬರುವುದಿಲ್ಲ ಚಿಪ್ಸ್​, ಕುರ್ಕುರೆ ಹಿಡಿದುಕೊಂಡು ಹೋಗುವ ನಮಗೆ?
Image
ಜೀವವೆಂಬ ಜಾಲದೊಳಗೆ : ಈ ಪರಾವಲಂಬಿಗರು ನಿಮ್ಮ ಮಾವಿನಮರವನೇರಿ ಕುಳಿತಿದ್ದಾರಾ? ನೋಡಿ ಒಮ್ಮೆ

ಈ ಕಾರಣದಿಂದಾಗಿ ಇವುಗಳನ್ನು ಹಾದು ಸೂರ್ಯನ ಬೆಳಕು ಹಾಗು ಗಾಳಿ ಕೆಳಗಿನ ಅಂತಸ್ತನ್ನು ತಲುಪುವುದೇ ಕಷ್ಟವಾಗುತ್ತದೆ. ಈ ಅಂತಸ್ತು ಅನೇಕ ಜೀವಿಗಳ ಆವಾಸಸ್ಥಾನ. ಮಂಗಗಳು, ಹಾರುವ ಬೆಕ್ಕು, ಅಳಿಲುಗಳು, ಬಾವಲಿಗಳು, ಅನೇಕ ಜಾತಿಯ ಪಕ್ಷಿಗಳು, ಕೀಟಗಳು, ಇಲ್ಲಿ ವಾಸಿಸುತ್ತವೆ. ಪರಾವಲಂಬಿ ಸಸ್ಯಗಳು ಈ ಅಂತಸ್ತಿನ ಮರಗಳ ಮೇಲೆ ಬೆಳೆದಿರುತ್ತವೆ. ಅನೇಕಾನೇಕ ಬಳ್ಳಿಗಳು ಮರಗಳನ್ನು ಬಳಸಿ ನಿಂದಿರುತ್ತವೆ. ಇಲ್ಲಿನ ಮರ ಬಳ್ಳಿಗಳು ಪರಾಗಸ್ಪರ್ಶ ಹಾಗೂ ಬೀಜಪ್ರಸರಣಕ್ಕೆ ಗಾಳಿ, ಕೀಟ, ಪ್ರಾಣಿ, ಪಕ್ಷಿಗಳನ್ನು ಅವಲಂಬಿಸಿರುತ್ತವೆ.

ಕೆನೊಪಿಯಿಂದ ಕೆಳಗಿರುವುದು “ಅಂಡರ್ ಸ್ಟೋರಿ” ಅಂತಸ್ತು. ಇಲ್ಲಿ ಅನೇಕ ಪೊದೆಗಳು, ಚಿಕ್ಕ ಪುಟ್ಟ ಮರಗಳು ಬಳ್ಳಿಗಳು ಬೆಳೆಯುತ್ತವೆ. ಸುಂದರವಾದ ಹೂಗಿಡಗಳು, ರುಚಿಕರ ಹಣ್ಣುಗಳನ್ನು ಬಿಡುವ ಸಸ್ಯಗಳು ಇಲ್ಲಿರುತ್ತವೆ. ಇದಕ್ಕಿಂತ ಕೆಳಗಿರುವುದು “ಫ್ಲೋರ್ ಲೇಯರ್” ಅಥವಾ ನೆಲಅಂತಸ್ತು. ಇಲ್ಲಿ ಅನೇಕ ಜಾತಿಯ ಜರಿಗಿಡಗಳು, ಬಳ್ಳಿಗಳು, ಹಾವಸೆಗಳು, ಪಾಚಿಗಳು, ಚಿಕ್ಕಪುಟ್ಟ ಸಸ್ಯಗಳು ಬೆಳೆಯುತ್ತವೆ. ಈ ಹಂತದಲ್ಲಿ ಪ್ರಾಣಿಗಳ ಚಟುವಟಿಕೆಯೂ ಅತೀ ಹೆಚ್ಚು. ಕೀಟಗಳು, ಸಂಧಿಪದಿಗಳು, ಹಾವು ಚೇಳುಗಳು, ಬಸವನ ಹುಳುಗಳು, ದೊಡ್ಡ ಗಾತ್ರದ ಸಸ್ಯಾಹಾರಿ, ಮಾಂಸಾಹಾರಿ ಸಸ್ತನಿಗಳು ಇಲ್ಲಿ ವಾಸಿಸುತ್ತವೆ.

Jeevavemba Jaaladolage Science and Environment Question and Answer Column by Suma Sudhakiran

ಮಳೆಕಾಡುಗಳ ಅಂತಸ್ತುಗಳು

ಇದನ್ನೂ ಓದಿ : Science and Environment : ಜೀವವೆಂಬ ಜಾಲದೊಳಗೆ: ವಶೀಕರಣ ವಿದ್ಯೆ ಕಲಿಯಬೇಕೆ? ಇವರುಗಳನ್ನು ಸಂಪರ್ಕಿಸಿ

ಕೆನೊಪಿ ಹಾಗೂ ನೆಲಅಂತಸ್ತುಗಳಲ್ಲಿ ಸೂರ್ಯನ ಬೆಳಕು ಅತೀ ಕಡಿಮೆ ಇರುತ್ತದೆ. ಗಾಳಿ ಕಡಿಮೆ, ಆದ್ರತೆ, ತೇವಾಂಶ ಅತೀ ಹೆಚ್ಚು. ಸದಾ ಕಾಲ ಮಳೆ ಬೀಳುವುದರಿಂದ ನೀರಿನಂಶವೂ ಹೆಚ್ಚು. ಇಲ್ಲಿ ಬೆಳೆವ ಸಸ್ಯಗಳು ಈ ಎಲ್ಲ ಪ್ರತೀಕೂಲ ಪರಿಸ್ಥಿತಿಗೆ ಹೊಂದಿಕೊಳ್ಳಲು ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡಿರುತ್ತವೆ, ಅಗಲವಾದ ದಟ್ಟ ಹಸಿರು ಎಲೆಗಳಿರುತ್ತವೆ. ಇವುಗಳಲ್ಲಿ ದ್ಯುತಿಸಂಶ್ಲೇಷಣ ಕ್ರಿಯೆ ನಡೆಸಲು ಅವಶ್ಯಕವಾದ “ಪತ್ರಹರಿತ್ತು” ದಟ್ಟವಾಗಿ ತುಂಬಿಕೊಂಡಿರುತ್ತವೆ. ಇವುಗಳು ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಅನ್ನು ಅತೀ ಹೆಚ್ಚಾಗಿ ಬಳಸಿಕೊಳ್ಳುತ್ತವೆ. ಹಾಗಾಗಿ ದೊರಕುವ ಕಡಿಮೆ ಬೆಳಕಿನಲ್ಲೇ ಆಹಾರವನ್ನು ಉತ್ಪಾದಿಸುವುದಲ್ಲದೆ, ಅತೀ ಹೆಚ್ಚು ಆಮ್ಲಜನಕವನ್ನೂ ಹೊರಸೂಸುತ್ತವೆ. ಅಗಲವಾದ ಎಲೆಗಳ ಮೇಲೆ ನೀರು ನಿಲ್ಲದಂತೆ ಚೂಪಾದ ತುದಿಗಳು, ಮೇಣದಂತಹ ಮೇಲ್ಮೈಗಳಿರುತ್ತದೆ. ತೇವಾಂಶ ಹೆಚ್ಚಿರುವುದರಿಂದ ಶಿಲೀಂದ್ರಗಳ ಆಕ್ರಮಣ ಸಾಧ್ಯತೆ ಹೆಚ್ಚು. ಅವುಗಳನ್ನು ಎಲೆಗಳ ಮೇಣದಂತ ಮೇಲ್ಮೈ ಹಾಗೂ ಸಸ್ಯದ ಹೆಚ್ಚಿನ ಪ್ರತಿರೋಧಕ ವ್ಯವಸ್ಥೆ ತಡೆಯುತ್ತದೆ. ಹೀಗೆ ಅನೇಕ ರೀತಿಯ ಮಾರ್ಪಾಡುಗಳನ್ನು ಅಳವಡಿಸಿಕೊಂಡಿರುವ ಸಸ್ಯಗಳು ಮಳೆಕಾಡುಗಳ ಕೆನೊಪಿಯ ಕೆಳಗೂ ಚೆನ್ನಾಗಿ ಬೆಳೆಯುತ್ತವೆ.

ಇತ್ತೀಚೆಗೆ ಅತೀ ಹೆಚ್ಚು ಜನಪ್ರಿಯವಾಗಿರುವ ಮನೆಯೊಳಗೆ ಬೆಳೆಸುವ ಹೆಚ್ಚಿನ ಅಲಂಕಾರಿಕ ಸಸ್ಯಗಳ ಮೂಲ ಮಳೆಕಾಡುಗಳ ಅಂಡರ್ ಸ್ಟೋರಿ ಅಂತಸ್ತಿನಲ್ಲಿ ಬೆಳೆಯುತ್ತಿದ್ದ ಸಸ್ಯಗಳೇ ಆಗಿವೆ.

(ಮುಂದಿನ ಜಾಲ : 3.6.2022)

ಗಮನಿಸಿ: ಈ ಅಂಕಣಕ್ಕೆ ವಿಜ್ಞಾನ, ಪರಿಸರ, ಜೀವವೈವಿಧ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ನೀವೂ ಕಳಿಬಹುದು.  tv9kannadadigital@gmail.com

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್