ರಂಗೋಲಿ ಸಾಧಕಿ | ತಮಿಳುನಾಡಿನಲ್ಲಿ ರಂಗೋಲಿ ಸಂಸ್ಕೃತಿ ಉಳಿಸಲು, ಬೆಳೆಸಲು ಶ್ರಮಿಸುತ್ತಿರುವ ಕನ್ನಡತಿ ಸುಚಿತಾ

ನೆಲವನ್ನೇ ಕ್ಯಾನ್ವಾಸ್​ ಮಾಡಿಕೊಂಡು ಬಗೆಬಗೆ ಕಲಾಕೃತಿಗಳಂಥ ರಂಗೋಲಿ ಬಿಡಿಸುವುದು ಸಂಕ್ರಾಂತಿ ಹಬ್ಬದ ಸಂಭ್ರಮಗಳಲ್ಲಿ ಒಂದು. ನೆರೆಮನೆಯವರಿಗಿಂತ ನಮ್ಮ ಮನೆ ಎದುರಿನ ರಂಗೋಲಿ ಎದ್ದು ಕಾಣುವಂತಿರಬೇಕು ಎನ್ನುವುದು ಹೆಣ್ಣುಮಕ್ಕಳ ಆಸೆ. ಪ್ರಸ್ತುತ ಚೆನ್ನೈ ನಗರದಲ್ಲಿರುವ ರಾಯಚೂರು ಮೂಲದ ಎ.ಸುಚಿತಾ ಬಾಲಾಜಿ ತಮಿಳುನಾಡಿನ ರಂಗೋಲಿ ಸಂಸ್ಕೃತಿಯನ್ನು ವಿವರಿಸಿದ್ದಾರೆ. ರಂಗೋಲಿ ಅನ್ನೋದು ಹೆಣ್ಣುಮಕ್ಕಳ ಕ್ರಿಯಾಶೀಲತೆಯನ್ನು ತೋರಿಸಿಕೊಡುತ್ತೆ. ಆಕೆಯ ತಾಳ್ಮೆ, ಸಹನೆ ಇದರಲ್ಲಿ ಅತಿಮುಖ್ಯ. ರಂಗೋಲಿ ಬಿಡೋದು ಸುಲಭದ ಕೆಲಸ ಅಲ್ಲ. ಅದರಲ್ಲೂ ಈ ಒಂದೇ ಎಳೆಯಲ್ಲಿ ಚೈನ್ ಮಾದರಿಯಲ್ಲಿ (ಕಂಬಿ ಕೋಲಮ್) ರಂಗೋಲಿ […]

ರಂಗೋಲಿ ಸಾಧಕಿ | ತಮಿಳುನಾಡಿನಲ್ಲಿ ರಂಗೋಲಿ ಸಂಸ್ಕೃತಿ ಉಳಿಸಲು, ಬೆಳೆಸಲು ಶ್ರಮಿಸುತ್ತಿರುವ ಕನ್ನಡತಿ ಸುಚಿತಾ
ಚೆನ್ನೈ ನಗರದಲ್ಲಿ ಸಂಕ್ರಾಂತಿ ರಂಗೋಲಿ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: Lakshmi Hegde

Updated on:Jan 14, 2021 | 11:13 AM

ನೆಲವನ್ನೇ ಕ್ಯಾನ್ವಾಸ್​ ಮಾಡಿಕೊಂಡು ಬಗೆಬಗೆ ಕಲಾಕೃತಿಗಳಂಥ ರಂಗೋಲಿ ಬಿಡಿಸುವುದು ಸಂಕ್ರಾಂತಿ ಹಬ್ಬದ ಸಂಭ್ರಮಗಳಲ್ಲಿ ಒಂದು. ನೆರೆಮನೆಯವರಿಗಿಂತ ನಮ್ಮ ಮನೆ ಎದುರಿನ ರಂಗೋಲಿ ಎದ್ದು ಕಾಣುವಂತಿರಬೇಕು ಎನ್ನುವುದು ಹೆಣ್ಣುಮಕ್ಕಳ ಆಸೆ. ಪ್ರಸ್ತುತ ಚೆನ್ನೈ ನಗರದಲ್ಲಿರುವ ರಾಯಚೂರು ಮೂಲದ ಎ.ಸುಚಿತಾ ಬಾಲಾಜಿ ತಮಿಳುನಾಡಿನ ರಂಗೋಲಿ ಸಂಸ್ಕೃತಿಯನ್ನು ವಿವರಿಸಿದ್ದಾರೆ.

ರಂಗೋಲಿ ಅನ್ನೋದು ಹೆಣ್ಣುಮಕ್ಕಳ ಕ್ರಿಯಾಶೀಲತೆಯನ್ನು ತೋರಿಸಿಕೊಡುತ್ತೆ. ಆಕೆಯ ತಾಳ್ಮೆ, ಸಹನೆ ಇದರಲ್ಲಿ ಅತಿಮುಖ್ಯ. ರಂಗೋಲಿ ಬಿಡೋದು ಸುಲಭದ ಕೆಲಸ ಅಲ್ಲ. ಅದರಲ್ಲೂ ಈ ಒಂದೇ ಎಳೆಯಲ್ಲಿ ಚೈನ್ ಮಾದರಿಯಲ್ಲಿ (ಕಂಬಿ ಕೋಲಮ್) ರಂಗೋಲಿ ಬಿಡಿಸುವುದು ತುಂಬಾ ಕಷ್ಟ. ಜಾಮೆಟ್ರಿಕಲ್ ಡಿಸೈನ್ ಗೊತ್ತಿರೋರಿಗೆ ಸ್ವಲ್ಪ ಸುಲಭವಾಗುತ್ತೆ ಎಂದು ಮುಗುಳ್ಗುತ್ತಾರೆ ಸುಚಿತಾ. ರಂಗೋಲಿಯನ್ನು ಮನಸಾರೆ ಪ್ರೀತಿಸುವ ಸುಚಿತಾ ಅವರ ಮನದ ಮಾತುಗಳು ಇಲ್ಲಿವೆ..

ನನ್ನ ಅಮ್ಮ ರಾಯಚೂರಿನವರು. ಅಮ್ಮನೇ ನನಗೆ ಸ್ಪೂರ್ತಿ. ನಾವು ಈಗ ವಾಸವಿರುವ ತಮಿಳುನಾಡಿನಲ್ಲಿ ರಂಗೋಲಿ ಹಾಕೋದು ಎಲ್ಲ ಹೆಣ್ಣುಮಕ್ಕಳಿಗೂ ಸಂತೋಷದ ವಿಷಯ. ನಾನೂ ಹೊಸಹೊಸ ರಂಗೋಲಿ ಹಾಕುವುದನ್ನು ಕಲಿತಿದ್ದೇನೆ. ಪೊಂಗಲ್ (ತಮಿಳುನಾಡಿನ ಸಂಕ್ರಾಂತಿ) ಸಮಯದಲ್ಲಿ ಚೆನ್ನೈನ ಹಲವು ಏರಿಯಾಗಳಲ್ಲಿ ರಂಗೋಲಿ ಸ್ಪರ್ಧೆಗಳನ್ನು ಆಯೋಜನೆ ಮಾಡಿಸ್ತೀನಿ. ನನಗೆ ಇದು ಬಹಳ ಖುಷಿ ಕೊಟ್ತಿದೆ.

ಚೆನ್ನೈ ಸೇರಿದಂತೆ ತಮಿಳುನಾಡಿನಲ್ಲಿ ಇಂದಿಗೂ ರಂಗೋಲಿ ಸಂಸ್ಕೃತಿ ಜೀವಂತವಾಗಿದೆ. ಎಷ್ಟೋ ಮನೆಗಳವರು ಮನೆಕೆಲಸದವರಂತೆ ರಂಗೋಲಿ ಬಿಡಿಸುವವರನ್ನೂ ಸಂಬಳಕೊಟ್ಟು ನೇಮಕ ಮಾಡಿರುತ್ತಾರೆ. ಅವರು ಪ್ರತಿದಿನ ಮನೆಗಳ ಮುಂದೆ ಸಾರಿಸಿ, ರಂಗೋಲಿ ಹಾಕಿ ಹೋಗುತ್ತಾರೆ. ಹಬ್ಬಳಿದ್ದಾಗ ವಿಶೇಷ ವಿನ್ಯಾಸದ ರಂಗೋಲಿಗಳನ್ನು ಬಿಡಿಸುತ್ತಾರೆ.

ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮ | ಎಳ್ಳುಬೆಲ್ಲ ಹಂಚಿ ಸ್ನೇಹ ಬೆಸೆಯುವ ಹಬ್ಬಕ್ಕಿದೆ ಧಾರ್ಮಿಕ ಮಹತ್ವ

ಮನೆಯೆದುರು ನಲಿವ ನವಿಲು!

ರಂಗೋಲಿ ಎಂಬ ಹೆಂಗಳೆಯರ ಸ್ಪರ್ಧಾಕಣ

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸಂಕ್ರಾಂತಿಗೆ ಒಂದೆರೆಡು ದಿನ ಮೊದಲೇ ಮನೆಗಳ ಮುಂದಿನ ಅಂಗಳವನ್ನು (ಬೀದಿ) ರಂಗೋಲಿ ಹಾಕಲು ಅಣಿಗೊಳಿಸುವ ಕಾರ್ಯ ಆರಂಭವಾಗುತ್ತೆ. ಒಂದೆಡೆರೆಡು ದಿನ ಸೆಗಣಿ ಹಾಕಿ ನೆಲ ಸಾರಿಸಿ ಸಮತಟ್ಟುಗೊಳಿಸಿಕೊಳ್ಳುತ್ತಾರೆ. ಸಾರಿಸಿದ ಹಸಿ ನೆಲಕ್ಕೆ ಸಾಮಾನ್ಯವಾಗಿ ಗಾಢ ಹಸಿರುಬಣ್ಣವಿರುತ್ತದೆ. ಅದರ ಮೇಲೆ ಹಾಕುವ ಅಚ್ಚಬಿಳುಪಿನ ರಂಗೋಲಿ, ಅದಕ್ಕೊಪ್ಪುವ ವರ್ಣವಿನ್ಯಾಸಗಳು ಎದ್ದು ಕಾಣುತ್ತವೆ.

ತಮಿಳುನಾಡಿನ ಊರುಗಳಲ್ಲಿ ಡಿಸೆಂಬರ್ 15, 16ರಿಂದಲೇ ಅಂದರೆ ಸಂಕ್ರಾಂತಿಗೆ ಒಂದು ತಿಂಗಳು ಮೊದಲೇ ಮನೆಮುಂದೆ ದೊಡ್ಡ ಡಿಸೈನ್​ನ ರಂಗೋಲಿ ಬಿಡಿಸುವ ಕೆಲಸ ಶುರುವಾಗುತ್ತೆ. ಇದು ಒಂದು ಥರ ಸರಣಿಯಿದ್ದಂತೆ. ಪ್ರತಿದಿನವೂ ಹೊಸಹೊಸ ವಿನ್ಯಾಸದ ರಂಗೋಲಿ ಹಾಕಲು ಪ್ರಯತ್ನ ಪಡುತ್ತಾರೆ. ಸಂಕ್ರಾಂತಿ ಹಬ್ಬದ ಮಾರನೇ ದಿನಕ್ಕೆ ದೊಡ್ಡ ಡಿಸೈನ್ ರಂಗೋಲಿ ಬಿಡಿಸುವುದು ಮುಕ್ತಾಯವಾಗುತ್ತೆ. ಮಾರನೇ ದಿನದಿಂದ ನಿತ್ಯದ ಸಾಧಾರಣ ರಂಗೋಲಿಗಳನ್ನು ಹಾಕಲು ಶುರು ಮಾಡುತ್ತಾರೆ. ಅಕ್ಕಪಕ್ಕದ ಮನೆಯವರ ಹೆಂಗಸರಲ್ಲಿ ನೀನು 60 ಚುಕ್ಕಿ ರಂಗೋಲಿ ಹಾಕ್ತೀಯಾ, ನಾನು 70 ಚುಕ್ಕಿ ರಂಗೋಲಿ ಬಿಡಿಸ್ತೀನಿ ಅಂತ ಕಾಂಪಿಟೇಶನ್ ಮೇಲೆ ರಂಗೋಲಿ ಹಾಕಿ ಸಂಭ್ರಮಿಸುತ್ತಾರೆ. ದೇವಾಲಯಗಳ ಮುಂದೆಯೂ ವೈವಿಧ್ಯಮಯ ರಂಗೋಲಿಗಳನ್ನು ಹಾಕಿ ಸಂಭ್ರಮಿಸುತ್ತಾರೆ.

ಚೆನ್ನೈನ ವೆಲಚೇರಿಯಲ್ಲಿರುವ ಅಣ್ಣೈ ಇಂಡಿಯಾ ನಗರ ಬಡವಾಣೆಯಲ್ಲಿ ನಮ್ಮ ಮನೆಯಿದೆ. ಸಂಕ್ರಾಂತಿ ಸಂದರ್ಭದಲ್ಲಿ ಪ್ರತಿವರ್ಷ ಲಯನ್ಸ್​ ಕ್ಲಬ್ ಸಹಯೋಗದಲ್ಲಿ ನಾಗರಿಕ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದೆವು. ಈ ವರ್ಷ ಕೊರೊನಾ ಕಾರಣದಿಂದ ರಂಗೋಲಿ ಸ್ಪರ್ಧೆ ಮಾಡಲು ಆಗಲಿಲ್ಲ.

ಪ್ರತಿವರ್ಷ ನಡೆಸುತ್ತಿದ್ದ ಈ ಸ್ಪರ್ಧೆಗಳಲ್ಲಿ ಹೆಂಗಸರಿಗೆ ಮಾತ್ರವಲ್ಲ, ಗಂಡಸರಿಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ದಾರಿಯುದ್ದಕ್ಕೂ ಬಣ್ಣಬಣ್ಣದ ರಂಗೋಲಿಗಳು ಹಬ್ಬಕ್ಕೆ ಸ್ವಾಗತ ಕೋರಿದಂತಿರುತ್ತೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಮೊದಲ ಬಹುಮಾನ ಅಂತ ಒಂದು ಗ್ರಾಂ ಚಿನ್ನದ ನಾಣ್ಯ, ಎರಡನೇ ಬಹುಮಾನ ಅರ್ಧ ಗ್ರಾಂ ಚಿನ್ನದ ನಾಣ್ಯ ಹಾಗೂ ಮೂರನೇ ಬಹುಮಾನ 300 ಮಿಲಿ ಚಿನ್ನದ ನಾಣ್ಯ ಕೊಡ್ತೀವಿ. ಸಮಾಧಾನಕರ ಬಹುಮಾನವಾಗಿ 15 ಜನರಿಗೆ ಬೆಳ್ಳಿನಾಣ್ಯಗಳನ್ನು ಕೊಡ್ತೀವಿ.

ಇದನ್ನೂ ಓದಿ: ಸಂಕ್ರಾಂತಿ ವಿಶೇಷ | ಹೀಗೆ ಮಾಡಿದ್ರೆ ರಂಗೋಲಿ ಬಿಡಿಸೋದು ತುಂಬಾ ಸುಲಭ

ತಮಿಳುನಾಡಿನ ದೊಡ್ಡ ಹಬ್ಬ ಪೊಂಗಲ್

ಅಕ್ಕಿಹಿಟ್ಟಿನ ರಂಗೋಲಿ ಅಚ್ಚುಮೆಚ್ಚು

ರಂಗೋಲಿ ಬಿಡಿಸಲು ತೇವಾಂಶವಿರುವ ಅಕ್ಕಿಹಿಟ್ಟು ಬಳಸುವುದು ಒಳ್ಳೆಯದು ಎನ್ನುವುದು ಸುಚಿತಾ ಅವರ ಮನದ ಮಾತು. ಅಕ್ಕಿಯನ್ನು ಆರಿಸಿ, ಶುದ್ಧ ಮಾಡಿ, ನೀರಿನಲ್ಲಿ ನೆನೆಸಿ, ಅವುಡಾಗಿ ಇರುವಂತೆ ಮಿಕ್ಸಿಯಲ್ಲಿ ಪುಡಿ ಮಾಡಿ ರಂಗೋಲಿ ಮೇಲೆ ಹಾಕ್ತಾರೆ. ಇದು ಬಹಳ ಹಳೆಯ ಪದ್ಧತಿ. ನಾವು ಹಾಕುವ ರಂಗೋಲಿಯಲ್ಲಿರುವ ಅಕ್ಕಿ ಚಿಕ್ಕಚಿಕ್ಕ ಹುಳುಗಳಿಗೆ, ಪಕ್ಷಿಗಳಿಗೆ ಆಹಾರವಾಗುತ್ತೆ. ಹುಳಗಳು ಮನೆಅಂಗಳದಲ್ಲಿರುವ ಅಕ್ಕಿ ಹಿಟ್ಟು ತಿಂದು ವಾಪಾಸ್ ಹೋಗುತ್ವೆ. ಮನೆಗೊಳಗೆ ಬರಲ್ಲ. ನಮಗೇ ಗೊತ್ತಿಲ್ಲದ ಹಾಗೆ ನಾವು ನಮ್ಮ ಸುತ್ತಲಿನ ಜೀವಿಗಳಿಗೆ ಆಹಾರ ಹಾಕಿದ ಭಾಗ್ಯ ಸಿಗುತ್ತೆ.

ಬಗೆಬಗೆ ರಂಗೋಲಿ

ರಂಗೋಲಿಯ ಈವೆಂಟ್ ಮ್ಯಾನೇಜ್​ಮೆಂಟ್​ ಈಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿದೆ. ಗೃಹಪ್ರವೇಶದಂಥ ಶುಭ ಸಮಾರಂಭಗಳಲ್ಲಿ ರಂಗೋಲಿ ಕಲಾವಿದರನ್ನು ಮನೆಗಳಿಗೆ ಕರೆಸಿ, ತಮ್ಮಿಷ್ಟದ ರಂಗೋಲಿ ಹಾಕಿಸಿಕೊಳ್ಳುತ್ತಾರೆ. ಕೆಲವರು ಮನೆ ಅಂಗಳದಲ್ಲಿ ದೊಡ್ಡದಾದ ರಂಗೋಲಿ ಹಾಕಿಸಿದರೆ, ಕೆಲವರು ಮನೆಯೊಳಗೆ ಕಲರ್ ವ್ಯಾಕ್ಸ್ ಬಳಸಿ ಚಿಕ್ಕ ರಂಗೋಲಿಗಳನ್ನು ಬಿಡಿಸಿ ಅದರಲ್ಲಿ ದೀಪಾಲಂಕಾರ ಮಾಡಿಸಲು ಇಷ್ಟಪಡ್ತಾರೆ. ಹೂವು, ದೀಪಗಳ ಅಲಂಕಾರ, ಉಪ್ಪು, ವಿವಿಧ ಬಣ್ಣಗಳನ್ನು ಬಳಸಿ ಬಿಡಿಸುವ ರಂಗೋಲಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ದೇಶದ ಇತರ ನಗರಗಳಲ್ಲಿ ಈ ಪದ್ಧತಿ ಬೆಳೆದಿದೆ, ಚೆನ್ನೈನಲ್ಲಿ ಅಷ್ಟು ಜನಪ್ರಿಯವಾಗಿಲ್ಲ.

(ನಿರೂಪಣೆ: ಆಯೇಷಾ)

ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು

Published On - 9:26 am, Thu, 14 January 21

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!