AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಪರೀಕ್ಷೆಗಾಗಿ.. 105 ಕಿಲೋಮೀಟರ್​ ಸೈಕಲ್​ ತುಳಿದ ಕೂಲಿ ಕಾರ್ಮಿಕ

ಭೋಪಾಲ್​: ಮಗನನ್ನ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ತಂದೆಯೊಬ್ಬ ಸೈಕಲ್​ ಮೇಲೆ ಆತನನ್ನ ಹೊತ್ತು ಸರಿಸುಮಾರು 105 ಕಿಲೋಮೀಟರ್​ ಕ್ರಮಿಸಿರುವ ರೋಚಕ ಪ್ರಸಂಗ ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶೋಭಾರಾಂ ಎಂಬ ಬಡ ಕೂಲಿ ಕಾರ್ಮಿಕನ ಈ ಕಾರ್ಯಕ್ಕೆ ದೇಶದ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಧಾರ್​ ಜಿಲ್ಲೆಯ ಮನಾವರ್​ ತಾಲೂಕಿನ ಬಾಯಾಡಿಪುರ ನಿವಾಸಿಯಾದ ಶೋಭಾರಾಂನ ಮಗ ಆಶೀಶ್​ಗೆ ಕಳೆದ ಮಂಗಳವಾರದಿಂದ10ನೇ ಕ್ಲಾಸ್​ನ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷಾ ಕೇಂದ್ರವನ್ನ ಕಾರ್ಮಿಕನ ಗ್ರಾಮದಿಂದ ಸುಮಾರು 100 ಕಿಲೋಮೀಟರ್​ […]

ಮಗನ ಪರೀಕ್ಷೆಗಾಗಿ.. 105 ಕಿಲೋಮೀಟರ್​ ಸೈಕಲ್​ ತುಳಿದ ಕೂಲಿ ಕಾರ್ಮಿಕ
KUSHAL V
|

Updated on: Aug 20, 2020 | 7:30 PM

Share

ಭೋಪಾಲ್​: ಮಗನನ್ನ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ತಂದೆಯೊಬ್ಬ ಸೈಕಲ್​ ಮೇಲೆ ಆತನನ್ನ ಹೊತ್ತು ಸರಿಸುಮಾರು 105 ಕಿಲೋಮೀಟರ್​ ಕ್ರಮಿಸಿರುವ ರೋಚಕ ಪ್ರಸಂಗ ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶೋಭಾರಾಂ ಎಂಬ ಬಡ ಕೂಲಿ ಕಾರ್ಮಿಕನ ಈ ಕಾರ್ಯಕ್ಕೆ ದೇಶದ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಧಾರ್​ ಜಿಲ್ಲೆಯ ಮನಾವರ್​ ತಾಲೂಕಿನ ಬಾಯಾಡಿಪುರ ನಿವಾಸಿಯಾದ ಶೋಭಾರಾಂನ ಮಗ ಆಶೀಶ್​ಗೆ ಕಳೆದ ಮಂಗಳವಾರದಿಂದ10ನೇ ಕ್ಲಾಸ್​ನ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷಾ ಕೇಂದ್ರವನ್ನ ಕಾರ್ಮಿಕನ ಗ್ರಾಮದಿಂದ ಸುಮಾರು 100 ಕಿಲೋಮೀಟರ್​ ದೂರವಿರುವ ಜಿಲ್ಲಾಕೇಂದ್ರಲ್ಲಿ ಗೊತ್ತುಮಾಡಲಾಗಿತ್ತು. ಲಾಕ್​ಡೌನ್​ ಬಳಿಕ ಆತನ ಹಳ್ಳಿಯಿಂದ ಜಿಲ್ಲಾಕೇಂದ್ರಕ್ಕೆ ಬಸ್​ ವ್ಯವಸ್ಥೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ, ಹಳ್ಳಿಯ ಇತರ ಗ್ರಾಮಸ್ಥರ ಬಳಿ ಯಾವುದೇ ವಾಹನವಿಲ್ಲದ ಕಾರಣ ಶೋಭಾರಾಂ ಮಗನನ್ನು ಪರೀಕ್ಷೆಗೆ ಸೈಕಲ್​ ಮೇಲೆ ಕರೆದುಕೊಂಡು ಹೋಗಲು ನಿರ್ಧರಿಸಿದ.

ಸೈಕಲ್​ ಮೇಲೇ 105 ಕಿ.ಮಿ. ಪಯಣ ಭಾನುವಾರ ರಾತ್ರಿ ಸೈಕಲ್​ ಮೇಲೆ ಹೊರಟ ತಂದೆ ಮತ್ತು ಮಗ ಪರೀಕ್ಷೆ ಪ್ರಾರಂಭವಾಗಲು ಕೇವಲ 15 ನಿಮಿಷಗಳು ಬಾಕಿ ಇರುವಾಗ ಪರೀಕ್ಷಾ ಕೇಂದ್ರಕ್ಕೆ ತಲುಪಿದರು. ಇದೀಗ ಆಶೀಶ್​ ಪರೀಕ್ಷೆ ಪ್ರಾರಂಭವಾಗಿದ್ದು ಅತನ ಪರೀಕ್ಷೆ ಮುಗಿಯುವವರೆಗೂ ಶೋಭಾರಾಂ ಅಲ್ಲೇ ಉಳಿದುಕೊಳ್ಳಲು ಬೇಕಾದ ಅಗತ್ಯ ಅಕ್ಕಿ ಮತ್ತು ದಿನಸಿ ಪದಾರ್ಥಗಳನ್ನು ಮನೆಯಿಂದಲೇ ಹೊತ್ತು ತಂದಿದ್ದಾನೆ.

ಕಾರ್ಮಿಕನ ಕಷ್ಟಕ್ಕೆ ಸ್ಪಂದಿಸಿದ ಅಧಿಕಾರಿಗಳು ಇನ್ನು ಈ ಸಂಗತಿ ಎಲ್ಲೆಡೆ ಹಬ್ಬುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಅಪ್ಪ ಹಾಗೂ ಮಗನಿಗೆ ಉಳಿದುಕೊಳ್ಳಲು ವಸತಿ ಮತ್ತು ಊಟದ ವ್ಯವಸ್ಥೆಯನ್ನ ಏರ್ಪಡಿಸಿದ್ದಾರೆ. ಜೊತೆಗೆ, ಪರೀಕ್ಷೆಯ ನಂತರ ವಾಪಸ್​ ಊರು ತಲುಪಲು ವ್ಯವಸ್ಥೆ ಸಹ ಮಾಡಿಕೊಟ್ಟಿದ್ದಾರೆ.

ನೀವು ಸೈಕಲ್​ ತುಳಿದುಕೊಂಡು ಮಗನನ್ನ ಕರೆದುಕೊಂಡು ಬರೋಕೆ ಹೇಗೆ ಸಾಧ್ಯವಾಯಿತು ಎಂದು ಕೇಳಿದ್ದಕ್ಕೆ ಶೋಭಾರಾಂ ನಾನಂತೂ ಓದೋಕಾಗಲಿಲ್ಲ. ಆದರೆ, ನನ್ನ ಮಗ ಚೆನ್ನಾಗಿ ಓದಿ ದೊಡ್ಡ ಆಫೀಸರ್​ ಆಗಬೇಕು ಎಂಬ ಆಸೆ ಇದೆ. ನನ್ನ ಮಗ ಒಳ್ಳೇ ವಿದ್ಯಾರ್ಥಿ. ಆದರೆ, ನಮ್ಮೂರಲ್ಲಿ ಶಾಲೆಯಿದ್ದರೂ ಶಿಕ್ಷಕರಿಲ್ಲ. ಟ್ಯೂಷನ್​ ಸೆಂಟರ್​ ಸಹ ಇಲ್ಲ. ಹಾಗಾಗಿ, ನನ್ನ ಮಗ ಮೂರು ವಿಷಯಗಳಲ್ಲಿ ಫೇಲ್​ ಆಗಿಬಿಟ್ಟ. ಪರೀಕ್ಷೆ ಮಿಸ್​ ಆಗಿದ್ರೇ ಒಂದು ವರ್ಷ ಕಳೆದುಕೊಳ್ಳುವನು. ಆದ್ದರಿಂದ ಅವನು ಶತಾಯಗತಾಯ ಪರೀಕ್ಷೆ ಬರೆಯಲೇ ಬೇಕೆಂದು ಕರೆದುಕೊಂಡು ಬಂದೆ ಎಂದಿದ್ದಾರೆ.

Follow Us
KUSHAL V
KUSHAL V
ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ?
ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ?
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ