Mandya Ramesh Birthday : ‘ಇವೆರಡೂ ನನ್ನಿಷ್ಟದ ಪುಸ್ತಕಗಳು’

Happy birthday Mandya Ramesh : ‘ಮಾಸ್ಟರ್ ಹಿರಣ್ಣಯ್ಯ ಹೊಸಪೇಟೆಯ ತುಂಗಭದ್ರಾ ಡ್ಯಾಮ್‍ನ ತುದಿಗೆ ಹೋಗಿ ಕಾರು ನಿಲ್ಲಿಸಿ ಇನ್ನೇನು ನದಿಗೆ ಹಾರಬೇಕು, ಪುಟ್ಟಮಕ್ಕಳ ಶಾಲಾ ವಾಹನ ಧುತ್ತಾಗಿ ನಿಲ್ಲುತ್ತೆ. ಆ ಮಕ್ಕಳು ಓಡಿ ಬಂದು ಇವರನ್ನು ಗುರುತು ಹಿಡಿದು ಮಾತನಾಡಿಸಿ, ಕೆನ್ನೆ ಸವರಿ ತೆರಳುತ್ತವೆ. ಮಾಸ್ಟರ್ ಆ ಕ್ಷಣಕ್ಕೆ ಎಲ್ಲ ಮರೆತು ಮಕ್ಕಳ ಪ್ರೀತಿ ನೆನೆಯುತ್ತಾ ನಾಟಕಕ್ಕೆ ವಾಪಾಸಾಗುತ್ತಾರೆ.’ ನಟ ಮಂಡ್ಯ ರಮೇಶ, ಹಿರಣ್ಣಯ್ಯನವರ ಆತ್ಮಕಥನದ ಸಾರ ಹಿಡಿದಿಟ್ಟಿದ್ದಾರೆ.

Mandya Ramesh Birthday : ‘ಇವೆರಡೂ ನನ್ನಿಷ್ಟದ ಪುಸ್ತಕಗಳು’
ರಂಗನಿರ್ದೇಶಕ, ನಟ ಮಂಡ್ಯ ರಮೇಶ
Follow us
ಶ್ರೀದೇವಿ ಕಳಸದ
|

Updated on:Jul 14, 2021 | 9:38 AM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು? ‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ರಂಗನಿರ್ದೇಶಕ, ನಟ ಮಂಡ್ಯ ರಮೇಶ ಅವರ ಆಯ್ಕೆಗಳು ಇಲ್ಲಿವೆ.

ಕೃ: ನಾನು ಮಾಸ್ಟರ್ ಹಿರಣ್ಣಯ್ಯ- ನನ್ನ ಕಥೆ ಹೇಳ್ತೀನಿ (ಆತ್ಮಕಥನ)

ಲೇ: ಮಾಸ್ಟರ್ ಹಿರಣ್ಣಯ್ಯ

ಪ್ರ : ವಿಕ್ರಂ ಪ್ರಕಾಶನ

ಮಾಸ್ಟರ್ ಹಿರಣ್ಣಯ್ಯ ಅವರ ಆತ್ಮಕಥೆ ಏಳುನೂರು ಪುಟಗಳ ಬೃಹತ್‍ಗ್ರಂಥ. ಕನ್ನಡ ಜನಮಾನಸವನ್ನು ಆಳಿದ ಕೆ. ಹಿರಣ್ಣಯ್ಯಮಿತ್ರ ಮಂಡಳಿಯ ಉಗಮ-ಬೆಳವಣಿಗೆ-ಉಚ್ಛ್ರಾಯಗಳನ್ನು ಸವಿಸ್ತಾರವಾಗಿ, ಭಾವನಾತ್ಮಕವಾಗಿ ಹೇಳುತ್ತಾ ಎಂಟು ದಶಕಗಳ ರಂಗಭೂಮಿಯ ಮಗ್ಗಲುಗಳ ದಾಖಲಿಸುವ ಅಪರೂಪದ ಕಥನಕ್ರಮ.

ಹತ್ತೊಂಬರ ತಾರುಣ್ಯದಲ್ಲೇ ಅಮ್ಮನನ್ನು ಕಳೆದುಕೊಂಡ ತಬ್ಬಲಿ ಮಗನೊಬ್ಬ, ರಂಗತಾರೆ, ಕಲ್ಚರ್ಡ್‍ ಕಮೇಡಿಯನ್ ಕೆ.ಹಿರಣ್ಣಯ್ಯನವರಂತಹ ತಂದೆಯಿದ್ದೂ ಅನಾಥನಾಗಿ ಬಿಡುವ ಪರಿಸ್ಥಿತಿ. ಮೊದಲ ಬಾರಿ ರಂಗ ಹತ್ತಿದಾಗ ಹುಬ್ಬಳ್ಳಿಯಲ್ಲಿ ಎದುರಿಸಿದ ತತ್ತರಿಕೆ, ಅಪ್ಪನಿಂದಾದ ಅವಮಾನಗಳಿಂದಾಗಿ ಕುಗ್ಗಿಹೋಗುವುದು, ಅಪ್ಪನೇ ಮಗನ ಯಶಸ್ಸು ಶುರುವಾಗುವುದಕ್ಕೆ ಮುನ್ನ ಅನಾರೋಗ್ಯಕ್ಕೆ ತುತ್ತಾಗಿ ಮಡಿಕೇರಿಯಲ್ಲಿ ಸಾವನ್ನಪ್ಪುವುದು. ಈ ಪ್ರಸಂಗದಿಂದ ಜರ್ಝರಿತನಾದ ಮಗ ನರಸಿಂಹಮೂರ್ತಿ, ಮಾಸ್ಟರ್ ಹಿರಣ್ಣಯ್ಯ ಆಗಿಕ್ರಮೇಣ ಬದಲಾದ ಪ್ರಕ್ರಿಯೆಯ ಅನಾವರಣದ ಹಿನ್ನೆಲೆ ಕಥೆ ವಿಶೇಷ ವೇದಿಕೆ ಸೃಷ್ಟಿಸಿದೆ.

ತಂದೆ ಕಟ್ಟಿದ ಕಂಪೆನಿಯಲ್ಲೇ 120ರೂ. ಸಂಬಳಕ್ಕೆ ನೌಕರಿಗೆ ನಿಲ್ಲುವ ಮಾಸ್ಟರ್, ತಂದೆಯ ಲಕ್ಷಾಂತರ ರೂಪಾಯಿ ಸಾಲ ತೀರಿಸಲು ಪಡುವ ಶ್ರಮ, ಪ್ರತೀ ತುತ್ತಿನ ಅನ್ನಕ್ಕಾಗಿ ಪಡುವ ಬವಣೆಯ ಕಥೆ ಹೃದಯವಿದ್ರಾವಕವಾಗಿದೆ. ಬಳ್ಳಾರಿ ಲಲಿತಮ್ಮನವರ ಜೊತೆಯಿಂದಾಗಿ ಅವರ ಸೋದರರು ನೀಡುವ ಕಾಟ, ಕಂಪೆನಿ ಮಾರಿದಾಗ ಅದರ ರಾಜಾಪಾತ್ರಗಳ ಸೀರೆಗಳ ಝರಿಗಳನ್ನು ಕಿತ್ತು ಉಂಡೆ ಮಾರಿ ಕದ್ದುತಂದು ಉಣ್ಣುವ, ಊರುದಾಟುವ ಪ್ರಸಂಗ, ಆರ್.ನಾಗೇಂದ್ರರಾಯರ ಪ್ರಕರಣ, ಅ.ನ.ಕೃ ಅವರು ಮನೆಗೆ ಕರೆದೊಯ್ದು ನೆಲೆಕೊಟ್ಟದ್ದು. ಚಲನಚಿತ್ರದ ಹುಚ್ಚಿನಿಂದ ಮರಳಿ ಮತ್ತೆ ಕಂಪೆನಿ ಕಟ್ಟಲು ಹೆಣಗಿ ಹೆಣಗಿ ಸೋತು ಸುಣ್ಣವಾಗಿ ಮತ್ತೆ ರಂಗಭೂಮಿಯಲ್ಲಿ ಸ್ಥಿರವಾಗಿದ್ದು ಹೀಗೆ ಅನೇಕ ವಿಷಯಗಳು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತವೆ.

ಒಂದಲ್ಲ, ಎರಡು ಬಾರಿ ಆತ್ಮಹತ್ಯೆಗೆ ತೀವ್ರವಾಗಿ ಪ್ರಯತ್ನಿಸುತ್ತಾರೆ. ಕಾರಣ ಏನು ಗೊತ್ತೇ: ಇವತ್ತು ಇಡೀ ಭಾರತ ಮಾತನಾಡುತ್ತಿರುವ ಮಹಾನ್ ಮಾರಕ ಕಾಯಿಲೆ ‘ಖಿನ್ನತೆ’ಯಿಂದ ಬಳಲುತ್ತಿರುತ್ತಾರೆ. ಅಲ್ಲಿಂದ ಬಚಾವಾಗಿ ಬಂದಿದ್ದೇ ಒಂದು ಅಚ್ಚರಿ! ಎರಡನೆಯ ಬಾರಿ ಅವರು ಹೊಸಪೇಟೆ ಕ್ಯಾಂಪ್ ನಡೆಯುವಾಗ ಯಾರಿಗೂ ಹೇಳದೇ ಒಂದು ಸಂಜೆ ತುಂಗಭದ್ರಾ ಡ್ಯಾಮ್‍ನ ತುದಿಗೆ ಹೋಗಿ ಕಾರು ನಿಲ್ಲಿಸಿ ಇನ್ನೇನು ನದಿಗೆ ಹಾರಬೇಕು ಅಂತ ಚಲಿಸುವಾಗ ಶಾಲೆಯಿಂದ ಮರಳುವ ಪುಟ್ಟ ಮಕ್ಕಳ ಶಾಲಾ ವಾಹನ ಧುತ್ತಾಗಿ ನಿಲ್ಲುತ್ತೆ. ಆ ಮಕ್ಕಳು ಓಡಿ ಬಂದು ಇವರನ್ನು ಗುರುತು ಹಿಡಿದು ಮಾತನಾಡಿಸಿ, ಕೆನ್ನೆ ಸವರಿ ತೆರಳುತ್ತವೆ. ಮಾಸ್ಟರ್ ಆ ಕ್ಷಣಕ್ಕೆ ಎಲ್ಲ ಮರೆತು ಮಕ್ಕಳ ಪ್ರೀತಿ ನೆನೆಯುತ್ತಾ ನಾಟಕಕ್ಕೆ ವಾಪಾಸಾಗುತ್ತಾರೆ.

ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಳಿಯ ಕಾಲದಲ್ಲೇ ಖ್ಯಾತವಾಗಿದ್ದ ಅನೇಕ ಪ್ರಸಿದ್ಧ ಕಂಪನಿಗಳ ಜೊತೆಗಿನ ಇವರ ಸುಮಧುರ ಸಂಬಂಧ, ನಟ, ನಟಿ, ಮ್ಯಾನೇಜರ್, ತಂತ್ರಜ್ಞರ ಪ್ರತಿಭೆಯ ಎಡವಟ್ಟುಗಳು, ಬೆನ್ನಲ್ಲಿ ಚೂರಿ ಹಾಕುತ್ತಿದ್ದುದ್ದು ಅವರ ಸಂವಹನ ಶಕ್ತಿಯ ಶ್ರೇಷ್ಠತೆ, ನಾಟಕ ನೋಡಲು ಬರುತ್ತಿದ್ದ ಪ್ರತೀ ಪ್ರೇಕ್ಷಕರೊಂದಿಗಿನ ಇವರ ಸಂಬಂಧ, ಚಲನೆ ಜೀವನದಲ್ಲಿ ಕಂಡ ಅಷ್ಟು ಪಾತ್ರಗಳ, ಸಂದರ್ಭಗಳ ವಿವರಗಳನ್ನು ಸಾವಧಾನತೆಯಿಂದ ಹಿಡಿದಿಟ್ಟಿದ್ದಾರೆ.ಇಳಿಗಾಲದ ಎಡವಟ್ಟಿನಿಂದಾದ ವಿಪರೀತಕ್ಕೆ ಸಹಜವಾಗಿ, ಸರಿಯಾಗಿ ಉತ್ತರಿಸಿ-ಕ್ಷಮೆಕೋರಿ ಮತ್ತಷ್ಟು ಎತ್ತರಕ್ಕೆ ಹೋಗಿದ್ದಾರೆ ಮಾಸ್ಟರ್!

ಕೃ: ಹುಲಿ ಪತ್ರಿಕೆ (ಕಾದಂಬರಿ)

ಲೇ: ಅನುಷ್ ಎ. ಶೆಟ್ಟಿ

ಪ್ರ: ಅನುಗ್ರಹ ಪ್ರಕಾಶನ 

‘ಈ ಕಾಡಲ್ಲಿ ದೊಡ್ಡ ದೊಡ್ಡ ನಾಯಿಗಳು ಅಲೀತಾ ಇವೆ. ಅದಕ್ಕೆ ದೊಡ್ಡ ದೊಡ್ಡ ಮುಖಗಳಿವೆ. ದೊಡ್ಡ ದೊಡ್ಡ ಹಲ್ಲಿದೆ. ಹುಲಿಯಷ್ಟು ದೊಡ್ದಾಗ್ತಿದೆ. ಸಿಕ್ಕಾಕ್ಕೊ೦ಡ್ರೆ ಮಾಂಸಾನ ಚೂರ್ ಚೂರ್ ಮಾಡ್ಬಿಡುತ್ತೆ. ಬೇಗ ಹೊರ್ಟೋಗಿ ಇಲ್ಲಿಂದ. ಆದರೂ ಕೈಲಿ ನಂಗೇನು ಮಾಡಕ್ಕಾಗಲ್ಲ, ಅದು ನನ್ನ ಕೊಂದ್ರೂ ನಾನು ಸಾಯಲ್ಲ.’

ತತ್ವಶಾಸ್ತ್ರ-ಪುರಾಣ ಕಲ್ಪನೆಗಳನ್ನು ಪ್ರಸ್ತುತ ವಿದ್ಯಮಾನಗಳಿಗೆ ಬೆಸೆಯುವ ವಿಚಿತ್ರ ರೂಪಕಗಳನ್ನು ಸಮರ್ಥವಾಗಿ ಸೃಜಿಸುವ ಶಕ್ತಿ ಈ ಕಾದಂಬರಿ ಮೂಲಕ ಶಕ್ತವಾಗಿ ದಕ್ಕಿಸಿಕೊಂಡಿದ್ದಾರೆ. ಅನುಷ್ ಶೆಟ್ಟಿ ಅವರು ಓದು, ರಂಗಸಂಗೀತದ ಭಾವ ತೀವ್ರತೆ, ಕಾಲೇಜು ಅನುಭವದ ಲಯ, ವಿಶಿಷ್ಟ ನಿರೂಪಣೆ, ಸಹಜ ವಿನೋದದ ಕಾಣ್ಕೆಗಳು. ಕಾದಂಬರಿಯುದ್ದಕ್ಕೂ ಓದುಗನಿಗೆ ಕತ್ತಲ ಕಾಡಿನಲ್ಲಿ ಅಲೆವ ರೋಮಾಂಚನವನ್ನು ಬೆಳಗಿನ ದೃಶ್ಯದಲ್ಲೂ ತೀವ್ರವಾಗಿಯೇ ತಾಕುತ್ತದೆ. ಇವರ ಕಾದಂಬರಿಗಳ ಸ್ಥಾಯಿ ಭಾವವೇ ಕೌತುಕ. ಕಣ್ಣಿಗೆ ಕಟ್ಟುವಂತೆ ಬರೆಯುವುದರಲ್ಲಿ ಸಿದ್ಧಹಸ್ತ.  ಕೊರೆವ ಈ ಕುಳಿರ್ಗಾಳಿಯಲ್ಲಿ ಕಾವೇರಿಸುವ ಶಕ್ತಿ ಹುಲಿಪತ್ರಿಕೆಗಿದೆ.

ಇದನ್ನೂ ಓದಿ : Art With Heart : ಸಿರಿಗದ್ದೆಯಿಂದ ಸಿಂಗಪೂರದವರೆಗೆ ಅಂಬಲಜೀರಳ್ಳಿಯಿಂದ ಅಮೆರಿಕಾದವರೆಗೆ

Published On - 11:33 am, Tue, 29 December 20

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ