AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Propose Day 2021: ಈ ಬಾರಿಯಾದರೂ ಪ್ರಪೋಸ್ ಮಾಡಿಯೇ ಬಿಡಬೇಕು: ಪ್ರಪೋಸ್ ಡೇ ದಿನ ತನ್ನವರನ್ನು ಒಪ್ಪಿಸುವುದು ಅಷ್ಟು ಕಷ್ಟದ ಮಾತಲ್ಲ

Valentine's Week Propose Day 2021: ಈಗಾಗಲೇ ಲವ್ ಮಾಡುತ್ತಿರುವವರು ಪುನಃ ನಿಮ್ಮ ಸಂಗಾತಿಯ ಮನವೊಲಿಸುವ ಪ್ರಯತ್ನ ಮಾಡಬಹುದು. ಹೊಸದಾಗಿ ಪ್ರೀತಿಗೆ ದಾಸರಾಗಲೂ ಇಚ್ಚಿಸುವವರು ಸಂಗಾತಿಯ ಇಷ್ಟಕಷ್ಟಗಳನ್ನು ಅರಿತುಕೊಳ್ಳಿ

Propose Day 2021: ಈ ಬಾರಿಯಾದರೂ ಪ್ರಪೋಸ್ ಮಾಡಿಯೇ ಬಿಡಬೇಕು: ಪ್ರಪೋಸ್ ಡೇ ದಿನ ತನ್ನವರನ್ನು ಒಪ್ಪಿಸುವುದು ಅಷ್ಟು ಕಷ್ಟದ ಮಾತಲ್ಲ
ಪ್ರಾತಿನಿಧಿಕ ಚಿತ್ರ
preethi shettigar
| Edited By: |

Updated on:Feb 08, 2021 | 9:51 AM

Share

ಫೆಬ್ರವರಿ ಆರಂಭವಾದ ತಕ್ಷಣ ಹಲವರ ಮನದಲ್ಲಿ ಮೂಡುವ ಕೌತುಕಗಳಲ್ಲಿ ಪ್ರಾಯಶಃ ಪ್ರೀತಿಯ ಭಾವನೆಗಳೇ ಹೆಚ್ಚು. ಇದಕ್ಕೆ ಕಾರಣ ಪ್ರೇಮಿಗಳ ದಿನದ ಕುತೂಹಲದ ಪರಿಗಳು. ಪ್ರೀತಿಯಲ್ಲಿ ಬಿದ್ದವರಿಗೆ ಮಾತ್ರ ಈ ರೀತಿಯ ಕಾತರಗಳು ಇರಬೇಕು ಎಂದೇನು ಇಲ್ಲ. ಪ್ರೀತಿಯಲ್ಲಿನ ಸುಮಧುರ ಘಳಿಗೆಗಳು ನಮಗೂ ದಕ್ಕಲಿ ಎನ್ನುವ ಕಲ್ಪನಾ ಶಕ್ತಿಯ ತೂಕವೇ ಬೇರೆ.

ಸರಿ ಹಾಗಿದ್ದರೆ, ಪ್ರೇಮಿಗಳ ಕಾಲ ಆರಂಭವಾಗಿದೆ. ಹೋದ ವರ್ಷಕ್ಕಿಂತ ಈ ವರ್ಷ ಇನ್ನೂ ಹೊಸ ರೀತಿಯಲ್ಲಿ ನನ್ನ ಸಂಗಾತಿಯನ್ನು ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದುಕೊಳ್ಳುವವರು ಒಂದು ಕಡೆಯಿದ್ದರೆ, ಮೊನ್ನೆಯಷ್ಟೇ ನನ್ನವಳನ್ನು ನೋಡಿದ್ದೇ ನನ್ನ ಮನದಲ್ಲಿ ಅವಳಿಗಾಗಿ ಮುಚ್ಚಿಟ್ಟುಕೊಂಡಿದ್ದ ಪ್ರೀತಿಯ ನೀವೇದನೆಯನ್ನು ಮಾಡಿಕೊಳ್ಳಬೇಕು ಎನ್ನುವವರು ಇನ್ನೊಂದು ಕಡೆ.

ಹಾಗಿದ್ದರೆ ಪ್ರೇಮಿಗಳ ದಿನಕ್ಕಿಂತ ಮೊದಲು ಬರುವ ಫೆ.8ರ ಪ್ರಪೋಸ್ ಡೇಗೆ ತಯಾರಿ ಮಾಡಲು ಚಿಂತಿಸುತ್ತಿದ್ದ ಹಲವರ ಮನಸ್ಥಿತಿ ಹೇಗಿರಬಹುದು? ನನ್ನ ಸಂಗಾತಿಗೆ ಪ್ರೀತಿ ಹೇಳಲೇಬೇಕು, ಹೇಗೆ ಹೇಳೋದು? ಇಲ್ಲಿವೆ ಓದಿ ಒಂದಿಷ್ಟು ಐಡಿಯಾಗಳು..

ಪ್ರಪೋಸ್ ಮಾಡಲು ಯಾರು ಮೊದಲು? ಪ್ರಪೋಸ್ ಮಾಡಲು ಹುಡುಗಿಯರಿಗೆ ಸ್ವಲ್ಪ ಮುಜುಗರ ಎನ್ನುವುದು ಕ್ಲೀಷೆ ಎನಿಸಬಹುದು. ಆದರೆ ಇದು ಒಂದು ತರಹದಲ್ಲಿ ನಿಜ. ಪ್ರಪೋಸ್ ಮಾಡುವ ಬಹುತೇಕ  ಮೊದಲ ಪ್ರಯತ್ನ ಹುಡುಗನದ್ದೇ ಆಗಿರುತ್ತದೆ. ಹಾಗೆಂದು ಹುಡುಗಿಯರು ಮೊದಲು ಪ್ರೀತಿ ಹೇಳಿಕೊಂಡ ಉದಾಹರಣೆಗಳು ಇಲ್ಲವೇ ಇಲ್ಲ ಎಂದಲ್ಲ. ಪ್ರೀತಿಯನ್ನು ಯಾರು ಮೊದಲು ಹೇಳಿಕೊಳ್ಳುತ್ತಾರೆ ಎನ್ನುವುದಕ್ಕಿಂತ ಪ್ರೀತಿಯಲ್ಲಿ ಇಬ್ಬರೂ ಹೇಗೆ ಹೊಂದಿಕೊಂಡು ಕೊನೆಯವರೆಗೆ ಬಾಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.

ಮನವೊಲಿಸಲು ಪ್ರಯತ್ನ ಮೊದಲ ಬಾರಿ ಹುಡುಗಿಯನ್ನು ನೋಡಿದಾಗ ಏನು ಅನಿಸಲಿಲ್ಲ. ಆದರೆ ಅವಳ ನಡವಳಿಕೆ, ಕಾಳಜಿ ಎಲ್ಲವೂ ನಿಜಕ್ಕೂ ಅವಳನ್ನು ನನ್ನತ್ತ ಸೆಳೆಯಿತು. ಒಂದೊಮ್ಮೆ ಬಾಳ ಸಂಗಾತಿ ಎಂದು ಯಾರನ್ನಾದರೂ ನನ್ನೊಟ್ಟಿಗೆ ಕಲ್ಪಿಸಿಕೊಂಡರೆ ಇದು ಅವಳನ್ನೇ. ಇದು ನಿಜಕ್ಕೂ ಪ್ರೇಮದ ಆಳಕ್ಕೆ ಬಿದ್ದ ಹಲವು ಹುಡುಗr ಮೊದಲ ಮಾತು. ಹಾಗಿದ್ದರೆ ಅವಳಿಗೆ ಪ್ರಪೋಸ್ ಮಾಡಿಯೇ ಬಿಡುತ್ತೇನೆ ಎಂದು ಮುಂದೆ ಸಾಗುವಾಗ ಖಾಲಿ ಕೈಯಲ್ಲಿ ಹೋಗದ ಹುಡುಗ ಚಾಕಲೇಟ್, ರೋಸ್, ಟೆಡಿಬೇರ್ ಹೀಗೆ ಸಾಕಷ್ಟನ್ನು ತೆಗೆದುಕೊಂಡು ಹೋಗುತ್ತಾನೆ. ಹಾಗಿದ್ದರೆ ಪ್ರಪೋಸ್ ಮಾಡುವುದು ಹೇಗೆ?

ಸರ್​ಪ್ರೈಸ್ ಪ್ರಪೋಸ್ ಬೆಸ್ಟ್ ಐ ಲವ್ ಯು ಎಂದು ಹೇಳುವ ಮೊದಲು ಒಂದಿಷ್ಟು ಪೂರ್ವ ತಯಾರಿ ಅಗತ್ಯ. ಕಾರಣ ಅವನು ಅಥವಾ ಅವಳು ನನ್ನನ್ನು ಲವ್ ಮಾಡುತ್ತಾಳೆ ಎಂಬುದು ಮನಸ್ಸಿನಲ್ಲಿ ಇದ್ದರೂ ಪ್ರೀತಿಯನ್ನು ಬಾಯಿಬಿಟ್ಟು ಸಂಗಾತಿಯ ಮುಂದೆ ಹೇಳುವಾಗ ಸರ್​ಪ್ರೈಸ್ ಪ್ಲಾನ್ ಮಾಡಿಕೊಂಡರೆ ಎದುರಿಗಿದ್ದವರ ಖುಷಿಗೆ ಪಾರವೇ ಇರುವುದಿಲ್ಲ. ಒಂದಿಷ್ಟು ಸರ್​ಪ್ರೈಸ್ ಉಡುಗೊರೆಗಳನ್ನು ನೀಡಿದರೆ. ‘ಇವನು ನನ್ನ ಬಗ್ಗೆ ನನಗಿಂತ ಚೆನ್ನಾಗಿ ತಿಳಿದುಕೊಂಡಿದ್ದಾನೆ. ನನ್ನ ಖುಷಿಯಲ್ಲಿಯೇ ತನ್ನ ಖುಷಿಯನ್ನೂ ಕಾಣುತ್ತಾನೆ’ ಎಂದು ನಿಮ್ಮ ಲವ್ ಪ್ರಪೋಸ್​ಗೆ ಥಟ್ಟನೆ ಓಕೆ ಎನ್ನುವ ಸಾಧ್ಯತೆಗಳು ಹೆಚ್ಚು.

propose day

ಸಾಂದರ್ಭಿಕ ಚಿತ್ರ

ಪ್ರಪೋಸ್ ಮಾಡಲು ಯಾವ ಜಾಗ ಒಳ್ಳೆಯದು? ಜಾಗ ಯಾವುದಾದರೇನು ಮನಸ್ಸಿನಲ್ಲಿ ಇರುವುದನ್ನು ಹೇಳಿಕೊಳ್ಳುವುದಕ್ಕೆ ಎಂದು ಹೇಳಬಹುದು. ಆದರೆ ಕೆಲವೊಮ್ಮೆ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ನಿರ್ಮಲವಾದ ಜಾಗ ಹಾಗೂ ಸಂಗಾತಿಗೆ ಇಷ್ಟವಾದ ಸ್ಥಳವನ್ನು ಮೊದಲೇ ತಿಳಿದುಕೊಂಡರೆ ಒಳಿತು. ಇನ್ನು ಕೆಲವರಿಗೆ ಮನೆಯೇ ಸ್ವರ್ಗ. ಸಿಂಪಲ್​ ಆಗಿ ಮನೆಯಲ್ಲಿ ನಾಲ್ಕು ಬಲೂನುಗಳನ್ನು ಹಾಕಿ. ಒಂದಷ್ಟು ಜೊತೆಗೆ ಕ್ಲಿಕ್ಕಿಸಿಕೊಂಡ ಮೆಮೊರಿ ಪೋಟೋಗಳಿಗೆ ಶೀರ್ಷಿಕೆ ಕೊಟ್ಟು ಗೋಡೆಗಳ ಮೇಲೆ ಅಂಟಿಸಿ, ತನ್ನವರ ಕೈ ಹಿಡಿದು ಮಂಡಿ ಊರಿ ಕೇಳಿದರೆ ಆ ಪ್ರಪೋಸ್ ಮೆಚ್ಚಿಕೊಳ್ಳದವರು ಯಾರು ಹೇಳಿ.

ಉಡುಗೊರೆಯೊಂದಿಗೆ ಪ್ರಪೋಸ್​ ಪ್ರಪೋಸ್ ಮಾಡುವ ದಿನ ಕೈ ತುಂಬಾ ರೋಸ್, ಒಂದಷ್ಟು ಗಿಫ್ಟ್ ಬಾಕ್ಸ್​ಗಳು ಇರಲಿ. ಹಾಗಿದ್ದರೆ ಆ ಬಾಕ್ಸ್​ನಲ್ಲಿ ಏನಿರಬೇಕು? ಸಂಗಾತಿಯನ್ನು ಬೆಚ್ಚಗಾಗಿಸುವ ಸ್ವೆಟರ್, ಸದಾ ಕೈಯಲ್ಲಿ ಮಿಡಿಯುವ ವಾಚ್, ಸಂಗಾತಿಯಂತೆಯೇ ಮುದ್ದಾಗಿರುವ ಟೆಡ್ಡಿಬೇರ್, ಸಿಹಿಯಾದ ಚಾಕಲೇಟ್.. ಇಷ್ಟು ಸಾಕು ಎದುರಿಗಿದ್ದವರನ್ನು ನನ್ನವರನ್ನಾಗಿಸಲು. ನಿಮ್ಮ ಪ್ರಪೋಸ್​ಗೆ ಅಂಗೀಕಾರ ಸಿಗದೆ ‘ಹೋಲ್ಡ್’ ಆದರೆ, ಏಕೆ ನೀನೇ ಬೇಕು ಎಂದು ಸ್ಪಷ್ಟವಾಗಿ ಹೇಳಿಬಿಡಿ. ಮನಕರಗಿ ‘ಅನ್​ಹೋಲ್ಡ್​’ ಆದರೂ ಆದೀತು.

ಪ್ರಪೋಸ್ ಏಕೆ? ಪ್ರಪೋಸ್ ಡೇ ದಿನ ಲವ್, ಮದುವೆಯ ಪ್ರಸ್ತಾವ ಮುಂದಿಟ್ಟರೆ ಒಪ್ಪಿಕೊಳ್ಳಬಹುದು. ಇದರ ಜೊತೆಗೆ ಲವ್ವಾ? ಮ್ಯಾರೇಜಾ  ಎನ್ನುವ ಪ್ರಶ್ನೆ ಕೂಡ ಹಲವರಲ್ಲಿ ಮೂಡುವುದು ಸಹಜ. ಮತ್ತೊಮ್ಮೆ ಯೋಚಿಸಿ ಪ್ರೀತಿಗಿರುವ ನಂಬಿಕೆ ಮದುವೆಗೆ ಇರಬೇಕು ಎಂದೇನು ಇಲ್ಲ. ಮದುವೆಯ ಕಲ್ಪನೆಯೇ ಬೇರೆ. ಪ್ರೀತಿಗೆ ಒಪ್ಪಿದರೂ ಕೆಲವೊಮ್ಮೆ ಮದುವೆಯ ಪ್ರಪೋಸಲ್​ಗೆ ವಿಳಂಬವಾಗಬಹುದು. ಸೂಕ್ತವಾದದನ್ನು ಯೋಚಿಸಿ ಒಂದು ತೀರ್ಮಾನಕ್ಕೆ ಬಂದರೆ ಒಳಿತು.

ಒಟ್ಟಿನಲ್ಲಿ ಪ್ರಪೋಸ್ ಮಾಡಲು ನಾಳೆಯ ದಿನ (ಫೆ.8) ಸೂಕ್ತ ಎನ್ನುವುದು ಒಂದು ರೀತಿಯ ಕ್ರೇಜ್. ಈಗಾಗಲೇ ಲವ್ ಮಾಡುತ್ತಿರುವವರು ಪುನಃ ನಿಮ್ಮ ಸಂಗಾತಿಯ ಮನವೊಲಿಸುವ ಪ್ರಯತ್ನ ಮಾಡಬಹುದು. ಹೊಸದಾಗಿ ಪ್ರೀತಿಗೆ ದಾಸರಾಗಲೂ ಇಚ್ಚಿಸುವವರು ಸಂಗಾತಿಯ ಇಷ್ಟಕಷ್ಟಗಳನ್ನು ಅರಿತುಕೊಳ್ಳಿ. ಯಾವುದೇ ಪ್ರಪೋಸ್ ಬಾರದೇ ಇರುವವರು ಕಲ್ಪನಾ ಲೋಕದ ಇನಿಯನ ಅಥವಾ ಪ್ರಿಯತಮೆಯ ಜೊತೆಗೆ ಮತ್ತಷ್ಟು ಕಾಲ ಮುಸುಕಿನ ಗುದ್ದಾಟ ನಡೆಸಿ. ಒಟ್ಟಿನಲ್ಲಿ ಫೆ. 8 ಪ್ರಪೋಸ್ ಡೇಗೆ ಸಿದ್ಧರಾಗಿರಿ.

Rose Day ನಾಳೆಯ ರೋಸ್​ ಡೇಗೆ ಗುಲಾಬಿ ಹೂವು ಕೊಟ್ಟರೆ ಸಾಕು ಎಂದುಕೊಳ್ಳಬೇಡಿ.. ಹೇಗೆಲ್ಲ ಪ್ಲ್ಯಾನ್​ ಮಾಡಬಹುದು ನೋಡಿ !

Published On - 2:52 pm, Sun, 7 February 21

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್