AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Strange Moving Lights: ಆಗಸದಲ್ಲಿ ನಿಗೂಢ ಬೆಳಕಿನ ಸರ: ಸಾಮಾಜಿಕ ಮಾಧ್ಯಮಗಳಲ್ಲಿ ಗರಿಗೆದರಿದ ವಿಜ್ಞಾನ ಚರ್ಚೆ

Starlink Satellites: ಕರ್ನಾಟಕದ ಹಲವೆಡೆ ಸಂಜೆ 7.30ರ ಸುಮಾರಿನಲ್ಲಿ ಆಗಸದಲ್ಲಿ ನಕ್ಷತ್ರಗಳ ಸರಮಾಲೆ ತೇಲಿಹೋಗುವ ವಿದ್ಯಮಾನ ಗೋಚರಿಸಿದೆ.

Strange Moving Lights: ಆಗಸದಲ್ಲಿ ನಿಗೂಢ ಬೆಳಕಿನ ಸರ: ಸಾಮಾಜಿಕ ಮಾಧ್ಯಮಗಳಲ್ಲಿ ಗರಿಗೆದರಿದ ವಿಜ್ಞಾನ ಚರ್ಚೆ
ಆಗಸದಲ್ಲಿ ಕಾಣಿಸಿದ ನಿಗೂಢ ಬೆಳಕಿನ ಸರ (ಚಿತ್ರಕೃಪೆ: facebook.com/sameervb)
TV9 Web
| Edited By: |

Updated on:Dec 20, 2021 | 10:32 PM

Share

ಬೆಂಗಳೂರು: ಕರ್ನಾಟಕದ ಹಲವೆಡೆ ಸಂಜೆ 7.30ರ ಸುಮಾರಿನಲ್ಲಿ ಆಗಸದಲ್ಲಿ ನಕ್ಷತ್ರಗಳ ಸರಮಾಲೆ (Strange Moving Lights) ತೇಲಿಹೋಗುವ ವಿದ್ಯಮಾನ ಗೋಚರಿಸಿದೆ. ಅದನ್ನು ಗಮನಿಸಿದ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಕಂಡಿದ್ದನ್ನು ಹಂಚಿಕೊಂಡಿದ್ದು ಹೆಚ್ಚಿನ ವಿವರಗಳನ್ನು ಕೇಳಿದ್ದಾರೆ. ಬಾಹ್ಯಾಕಾಶದಲ್ಲಿ ಏಕಾಏಕಿ ಬೆಳಕಿನ ಸಾಲು ಹೀಗೆ ಹರಿದು ಹೋಗಿರುವುದು ಮಲೆನಾಡಿನ ಜನರಿಗೆ ಇದು ಹೊಸ ಅನುಭವ ಎನಿಸಿದೆ. ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಈ ಕೌತುಕ ಕಂಡಿರುವುದಾಗಿ ಜನರು ಹೇಳಿಕೊಂಡಿದ್ದಾರೆ. ಅನೇಕರು ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಏಕಕಾಲಕ್ಕೆ 50 ಸಣ್ಣಸಣ್ಣ ದೀಪಗಳು ಕಂಡು ಮಾಯವಾಗಿವೆ ಎಂದು ಸಾಕಷ್ಟು ಜನರು ಹೇಳಿದ್ದಾರೆ. ಬಾಹ್ಯಾಕಾಶದಲ್ಲಿ ಹಾದು ಹೋಗಿರುವುದು ಏನು ಎನ್ನುವುದನ್ನು ವಿಜ್ಞಾನಿಗಳು ಇನ್ನೂ ಸ್ಪಷ್ಟಪಡಿಸಬೇಕಿದೆ.

‘ಈಗ ಸಂಜೆ ಏಳು ಇಪ್ಪತ್ತರ ಸುಮಾರಿಗೆ ಆಕಾಶದಲ್ಲಿ ವಿಶಿಷ್ಟ ಸಂಗತಿಯೊಂದನ್ನು ನೋಡಿದೆ. ಹಿಂದೆಂದೂ ಕಂಡಿರಲಿಲ್ಲ. ಕೆಳಗೆ ನಾನು ಬಿಡಿಸಿದ ಚಿತ್ರದಲ್ಲಿರುವ ರೀತಿಯಲ್ಲಿ ನೂರಾರು ನಕ್ಷತ್ರಗಳ ಸಾಲೊಂದು ಸಾಲಾಗಿ ರೈಲುಬೋಗಿಗಳಂತೆ ಚಲಿಸುತ್ತಿರುವುದು ಕಂಡಿತು. ಸರಿ ಸುಮಾರು ಉತ್ತರದಿಂದ ದಕ್ಷಿಣಕ್ಕೆ. ವಿಚಿತ್ರ ಮತ್ತು ರೋಮಾಂಚನಕಾರಿಯೆನಿಸಿತು. ಕೆಲಸವೊಂದರಲ್ಲಿ ನಿರತನಾಗಿದ್ದು, ಇನ್ನೂ ಸರಿಯಾಗಿ ನೋಡಬೇಕೆಂದು ಬಯಲಿಗೆ ಬರುವಷ್ಟರಲ್ಲಿ ಮಧ್ಯ ಆಕಾಶದಲ್ಲೇ ಕಣ್ಮರೆಯಾದಂತೆನಿಸಿತು. ಅದು ಬಾಹ್ಯಾಕಾಶ ನಿಲ್ದಾಣವಿದ್ದಿರಬಹುದೇ? ಅಥವಾ ಬೇರೇನಿರಬಹುದು? ಯಾರಿಗಾದರೂ ಮಾಹಿತಿಯಿದ್ದರೆ ತಿಳಿಸಿ’ ಎಂದು ಗಣೇಶ ಹೊಸಮನೆ ಅವರು ಫೇಸ್​ಬುಕ್​ನಲ್ಲಿ ತಾವು ಕಂಡ ದೃಶ್ಯದ ಚಿತ್ರಬಿಡಿಸಿ ಹಂಚಿಕೊಂಡಿದ್ದಾರೆ.

‘ಆಗಸದಲ್ಲಿ ಸೀರಿಯಲ್ ಲೈಟಿನ ಸರ ಓಡಿತು; ಮೊಬೈಲಿನಲ್ಲಿ ಫೋಟೋ ಅಥವಾ ವಿಡಿಯೋ ಸಿಗಲಿಲ್ಲ; ಸಂಜೆ 7:30ರ ವೇಳಗೆ ನಡೆದ ವಿದ್ಯಮಾನವಿದು. ಯಾರಾದರೂ ಗಮನಿಸಿದಿರಾ?’ ಎಂದು ಅಖಿಲೇಶ್ ಚಿಪ್ಲಿ ಅವರು ಕೇಳಿದ್ದಾರೆ. ಈ ದೃಶ್ಯದ ಎರಡು ವಿಡಿಯೊ ತುಣುಕುಗಳನ್ನು ಸದಾಶಿವಗಡದ ಸಮೀರ್ ಬಾಡ್ಕರ್ ತಮ್ಮ ಫೇಸ್​ಬುಕ್​ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ಗಳ ಸ್ಕ್ರೀನ್​ಶಾಟ್​ಗಳನ್ನು ವಾಟ್ಸ್ಯಾಪ್​ ಮೂಲಕ ಹಂಚಿಕೊಳ್ಳುತ್ತಿರುವ ನೂರಾರು ಮಂದಿ, ಇದೇನೆಂದು ಪ್ರಶ್ನಿಸುತ್ತಿದ್ದಾರೆ.

ಗಣೇಶ ಹೊಸಮನೆ ಅವರ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಪ್ರಸನ್ನ ಪಿ.ಬಿ. ಎನ್ನುವವರು ಈ ಪ್ರಶ್ನೆಗೆ ಉತ್ತರ ಹುಡುಕಲು ಯತ್ನಿಸಿದ್ದಾರೆ. ‘ಭೌತವಿಜ್ಞಾನಿ ಎ.ಪಿ.ಭಟ್ ಅವರು ಇದನ್ನು ಉಪಗ್ರಹಗಳ ಸರಮಾಲೆ ಎಂದು ವಿವರಿಸಿದ್ದಾರೆ’ ಎಂದು ತಿಳಿಸಿದ್ದಾರೆ.

Satellite

ಭೂಮಿಯ ಸುತ್ತ ಕಿಕ್ಕಿರಿದು ತುಂಬಿರುವ ರಾಕೆಟ್​ಗಳು (ಕಲಾವಿದನ ಕಲ್ಪನೆ)

ಏನಿದು ಉಪಗ್ರಹ ಸರಮಾಲೆ? ಉತ್ತರ ಕನ್ನಡದ ಕಡಲ ತೀರ ಮತ್ತು ಶಿವಮೊಗ್ಗದ ಮಲೆಗಾಡು ಪ್ರದೇಶದಲ್ಲಿ ಗೋಚರಿಸಿದ ಬೆಳಕಿನ ಸರಮಾಲೆಯು ವಾಸ್ತವವಾಗಿ ಉಪಗ್ರಹಗಳ ಸರಣಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಉಪಗ್ರಹಗಳ ಮೂಲಕ ಇಂಟರ್ನೆಟ್‌ ಸೇವೆಯನ್ನು ಒದಗಿಸುವ ಸ್ಪೇಸ್​ಎಕ್ಸ್​ ಕಂಪನಿಯು ಕ್ಯಾಲಿಫೋರ್ನಿಯಾದಿಂದ 52 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಶನಿವಾರ ಉಡಾವಣೆ ಮಾಡಿತ್ತು. ಸ್ಟಾರ್​ಲಿಂಕ್​ನ ರಾಕೆಟ್​ಗಳು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿವೆ. ಇದು ಸ್ಟಾರ್‌ಲಿಂಕ್​ ಕಂಪನಿಯ 34ನೇ ಉಡಾವಣೆಯಾಗಿದ್ದು, ಭೂಮಿಯ ಕೆಳಹಂತದ ಕಕ್ಷೆಗೆ 2000 ಉಪಗ್ರಹಗಳನ್ನು ಸೇರಿಸುವ ಗುರಿಯನ್ನು ಸ್ಟಾರ್‌ಲಿಂಕ್ ಇಟ್ಟುಕೊಂಡಿದೆ.

ಅಂತರಿಕ್ಷಕ್ಕೆ ಇಷ್ಟೊಂದು ಉಪಗ್ರಹಗಳನ್ನು ಕಳಿಸಿದರೆ ಅಲ್ಲಿಯೂ ಟ್ರಾಫಿಕ್ ಜಾಂ ಆಗಲಾರದೆ? ಇತರ ದೇಶಗಳ ಬಾಹ್ಯಾಕಾಶ ಚಟುವಟಿಕೆಗಳಿಗೆ ತೊಂದರೆಯಾಗದೆ ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಿದ್ದಾರೆ.

ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಚೀನಾದ ನೆಲೆಯನ್ನು ತೋರಿಸಿವೆ ಹೊಸ ಉಪಗ್ರಹ ಚಿತ್ರಗಳು: ವರದಿ ಇದನ್ನೂ ಓದಿ: ಅಮೆರಿಕ ಯುದ್ಧನೌಕೆಗಳ ಪ್ರತಿರೂಪ ತಯಾರಿಸಿ ತರಬೇತಿಗೆ ಬಳಸಿದ ಚೀನಾ; ಉಪಗ್ರಹ ಚಿತ್ರಗಳು ಸಾಕ್ಷಿ

Published On - 10:18 pm, Mon, 20 December 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ