ತಿನ್ನೋ ಆಹಾರ ವಿಷವಾಯಿತೇ? ತಕ್ಷಣ ಹೀಗೆ ಮಾಡಿ
ನೀವು ಸೇವಿಸುವ ಆಹಾರ ವಿಷವಾಗಿದ್ದರೆ, ಆಗ ನೀವು ಹೆಚ್ಚು ನೀರಿನಾಂಶ ಸೇವಿಸಬೇಕು. ಹಣ್ಣಿನ ಜ್ಯೂಸ್ ಮತ್ತು ಎಳನೀರು ಕಾರ್ಬೋಹೈಡ್ರೇಟ್ಸ್ ನ್ನು ಮರು ಸ್ಥಾಪಿಸುವುದು ಮತ್ತು ನಿಶ್ಯಕ್ತಿ ದೂರ ಮಾಡುವುದು. ಈ ಸಂದರ್ಭದಲ್ಲಿ ಕೆಫಿನ್ ಸೇವನೆ ಮಾಡಬೇಡಿ, ಇದು ಜೀರ್ಣಕ್ರಿಯೆ ವ್ಯವಸ್ಥೆಗೆ ಕಿರಿಕಿರಿ ಉಂಟು ಮಾಡುವುದು. ಕ್ಯಾಮೊಮೈಲ್, ಪುದೀನಾ ಮತ್ತು ದಂಡೇಲಿಯನ್ ಇಂತಹ ಕೆಫಿನ್ ಮುಕ್ತ ಗಿಡಮೂಲಿಕೆ ಚಾ ಸೇವಿಸಬಹುದು. ಇದು ಹೊಟ್ಟೆಗೆ ಶಮನ ನೀಡುವುದು. ಆದರೆ ನೀವು ವೈದ್ಯರ ಸಲಹೆ ಪಡೆಯುವುದ ಸೂಕ್ತ. ಆಹಾರ ವಿಷವಾದ ಸಮಯದಲ್ಲಿ […]
ನೀವು ಸೇವಿಸುವ ಆಹಾರ ವಿಷವಾಗಿದ್ದರೆ, ಆಗ ನೀವು ಹೆಚ್ಚು ನೀರಿನಾಂಶ ಸೇವಿಸಬೇಕು. ಹಣ್ಣಿನ ಜ್ಯೂಸ್ ಮತ್ತು ಎಳನೀರು ಕಾರ್ಬೋಹೈಡ್ರೇಟ್ಸ್ ನ್ನು ಮರು ಸ್ಥಾಪಿಸುವುದು ಮತ್ತು ನಿಶ್ಯಕ್ತಿ ದೂರ ಮಾಡುವುದು. ಈ ಸಂದರ್ಭದಲ್ಲಿ ಕೆಫಿನ್ ಸೇವನೆ ಮಾಡಬೇಡಿ, ಇದು ಜೀರ್ಣಕ್ರಿಯೆ ವ್ಯವಸ್ಥೆಗೆ ಕಿರಿಕಿರಿ ಉಂಟು ಮಾಡುವುದು. ಕ್ಯಾಮೊಮೈಲ್, ಪುದೀನಾ ಮತ್ತು ದಂಡೇಲಿಯನ್ ಇಂತಹ ಕೆಫಿನ್ ಮುಕ್ತ ಗಿಡಮೂಲಿಕೆ ಚಾ ಸೇವಿಸಬಹುದು. ಇದು ಹೊಟ್ಟೆಗೆ ಶಮನ ನೀಡುವುದು. ಆದರೆ ನೀವು ವೈದ್ಯರ ಸಲಹೆ ಪಡೆಯುವುದ ಸೂಕ್ತ. ಆಹಾರ ವಿಷವಾದ ಸಮಯದಲ್ಲಿ ಹೆಚ್ಚಿನ ವಿಶ್ರಾಂತಿ ಪಡೆಯುವುದು ಅತೀ ಅಗತ್ಯವಾಗಿರುವುದು. ಆಹಾರ ವಿಷವಾಗುವ ಸಮಸ್ಯೆಯು ತೀವ್ರವಾಗಿದ್ದರೆ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗಬಹುದು.
ವಾಂತಿ ಹಾಗೂ ಬೇಧಿ ಕಡಿಮೆ ಆಗುವ ತನಕ ಯಾವುದೇ ಘನ ಆಹಾರ ಸೇವನೆ ಮಾಡದೆ ಇದ್ದರೆ ತುಂಬಾ ಒಳ್ಳೆಯದು. ಇದು ಕಡಿಮೆ ಆದ ಬಳಿಕ ನೀವು ಸಾಮಾನ್ಯವಾಗಿ ಸೇವಿಸುವ, ಆದರೆ ಸುಲಭವಾಗಿ ಕರಗುವ ಆಹಾರ ಸೇವಿಸಿ. ನೀವು ಈ ರೀತಿಯ ಆಹಾರ ಸೇವಿಸಬಹುದು. ಬಾಳೆಹಣ್ಣು, ಅನ್ನ, ಓಟ್ ಮೀಲ್, ಬಟಾಟೆ, ಬೇಯಿಸಿದ ತರಕಾರಿ, ಬ್ರೆಡ್ ಟೋಸ್ಟ್, ಕೆಫಿನ್ ಇಲ್ಲದೆ ಇರುವ ಸೋಡಾ, ಹಣ್ಣಿನ ಜ್ಯೂಸ್, ಕ್ರೀಡಾ ಪಾನೀಯಗಳು ಸೂಕ್ತ.
ಹೊಟ್ಟೆಯು ಇನ್ನಷ್ಟು ಸಮಸ್ಯೆಗೆ ಒಳಗಾಗುವುದನ್ನು ತಪ್ಪಿಸಲು ಈ ರೀತಿಯ ಘನ ಆಹಾರ ಸೇವಿಸುವುದನ್ನು ನೀವು ಕಡೆಗಣಿಸಬೇಕು. ಇದರಲ್ಲಿ ಮುಖ್ಯವಾಗಿ, ಹಾಲಿನ ಉತ್ಪನ್ನಗಳು, ವಿಶೇಷವಾಗಿ ಹಾಲು ಮತ್ತು ಚೀಸ್, ಕೊಬ್ಬಿನ ಆಹಾರಗಳು, ಹೆಚ್ಚು ಸಕ್ಕರೆ ಇರುವ ಆಹಾರ, ಖಾರದ ಆಹಾರ, ಕರಿದ ಆಹಾರಗಳನ್ನು ತಿನ್ನಬಾರದು. ಕೆಫಿನ್, ಆಲ್ಕೋಹಾಲ್, ನಿಕೋಟಿನ್ ಇವುಗಳನ್ನು ಸೇವಿಸದೇ ಇದ್ರೆ ಉತ್ತಮ.
ಇದನ್ನೂ ಓದಿ: ಸ್ವಲ್ಪ ಯಾಮಾರಿದ್ರೆ ಹೊಟ್ಟೆಗೆ ಬೀಳುತ್ತೆ ಮಾರಣಾಂತಿಕ ವಿಷ!
ಆಹಾರವನ್ನು ತುಂಬಾ ಸುರಕ್ಷಿತವಾಗಿ ನೀವು ಇಟ್ಟುಕೊಳ್ಳಬೇಕು ಮತ್ತು ಅಸುರಕ್ಷಿತ ವಾತಾವರಣದಲ್ಲಿ ಆಹಾರವನ್ನು ತೆರೆದಿಡಬಾರದು. ಕೆಲವೊಂದು ಆಹಾರಗಳು ಉತ್ಪನ್ನವಾಗುವ ಕ್ರಮದಿಂದಾಗಿ ಬೇಗನೆ ವಿಷವಾಗುವುದು. ಉದಾಹರಣೆಗೆ ಮಾಂಸ, ಕೋಳಿಮಾಂಸ, ಮೊಟ್ಟೆ ಮತ್ತು ಚಿಪ್ಪುಮೀನು ಬೇಗನೆ ಕೆಡುವುದು. ಆದರೆ ಇದೆಲ್ಲವನ್ನು ಬಿಸಿ ಮಾಡುವ ವೇಳೆ ಸೋಂಕು ನಿವಾರಣೆ ಆಗುವುದು. ಇಂತಹ ಆಹಾರಗಳನ್ನು ನೀವು ಹಸಿಯಾಗಿ ತಿಂದರೆ ಅಥವಾ ಸರಿಯಾಗಿ ಬೇಯಿಸದೆ ತಿಂದರೆ ಆಗ ಆಹಾರವು ಬೇಗನೆ ವಿಷವಾಗುವುದು.
ಅಡುಗೆ ಮಾಡುವ ಮೊದಲು ಅಥವಾ ಊಟ ಮಾಡುವ ಮೊದಲು ಸರಿಯಾಗಿ ಕೈಗಳನ್ನು ತೊಳೆಯಿರಿ. ಆಹಾರವು ಸರಿಯಾಗಿ ಸೀಲ್ ಆಗಿದೆಯಾ ಅಥವಾ ಶೇಖರಣೆ ಮಾಡಲಾಗಿದೆಯಾ ಎಂದು ನೋಡಿ. ಮಾಂಸ ಮತ್ತು ಮೊಟ್ಟೆಯನ್ನು ಸರಿಯಾಗಿ ಬೇಯಿಸಿ. ಯಾವುದೇ ತಾಜಾ ಆಹಾರವನ್ನು ಬಳಸುವ ಮೊದಲು ಅದನ್ನು ಸರಿಯಾಗಿ ತೊಳೆಯಿರಿ. ಹಣ್ಣುಗಳು ಹಾಗೂ ತರಕಾರಿಗಳನ್ನು ಸರಿಯಾಗಿ ತೊಳೆದ ಬಳಿಕ ಬಳಸಿಕೊಂಡರೆ ಆಹಾರ ವಿಷವಾಗುವುದನ್ನು ತಪ್ಪಿಸಬಹುದು.
Published On - 12:10 pm, Fri, 18 October 19