ಹಳೆಯ ಬ್ರಷ್ ಬಳಸಿ ಮೇಕಪ್ ಮಾಡ್ತೀರಾ? ಅಯ್ಯೋ! ಎಚ್ಚರಾ..
ಮೇಕಪ್ ಬ್ರಷ್ ಗಳು, ಬ್ಲೆಂಡರ್‌ಗಳು ಬಹುತೇಕ ಎಲ್ಲ ಯುವತಿಯರ ಅಚ್ಚು ಮೆಚ್ಚಿನ ಹಾಗೂ ಅತಿ ಅಗತ್ಯ ಮೇಕಪ್ ಸಾಧನಗಳಾಗಿವೆ. ಮುಖದ ಮೇಲೆ ಫೌಂಡೇಶನ್ ಹಚ್ಚಿಕೊಳ್ಳುವುದಿರಬಹುದು, ಗಲ್ಲಕ್ಕೆ ಹೊಳಪು ನೀಡುವುದಾಗಿರಬಹುದು .. ಎಲ್ಲದಕ್ಕೂ ಬ್ರಷ್ ಹಾಗೂ ಬ್ಲೆಂಡರ್‌ಗಳು ಬೇಕೆ ಬೇಕು. ಪ್ರತಿದಿನ ಮೇಕಪ್ ಮಾಡಿಕೊಳ್ಳಲು ಬ್ರಷ್ ಗಳು ಮತ್ತು ಬ್ಲೆಂಡರ್‌ಗಳನ್ನು ಬಳಸುವುದರಿಂದ ಅವು ಪ್ರತಿನಿತ್ಯ ನಿಮ್ಮ ಚರ್ಮದ ಸಂಪರ್ಕಕ್ಕೆ ಬರುತ್ತವೆ. ಆದರೆ ಬಹಳ ಸಮಯದಿಂದ ಅವೇ ಹಳೆಯ ಮೇಕಪ್ ಬ್ರಷ್ ಹಾಗೂ ಬ್ಲೆಂಡರ್‌ಗಳನ್ನು ನೀವು ಬಳಸುತ್ತಿರುವಿರಾ? ಹಾಗಾದರೆ ಅದರಿಂದ […]
ಮೇಕಪ್ ಬ್ರಷ್ ಗಳು, ಬ್ಲೆಂಡರ್‌ಗಳು ಬಹುತೇಕ ಎಲ್ಲ ಯುವತಿಯರ ಅಚ್ಚು ಮೆಚ್ಚಿನ ಹಾಗೂ ಅತಿ ಅಗತ್ಯ ಮೇಕಪ್ ಸಾಧನಗಳಾಗಿವೆ. ಮುಖದ ಮೇಲೆ ಫೌಂಡೇಶನ್ ಹಚ್ಚಿಕೊಳ್ಳುವುದಿರಬಹುದು, ಗಲ್ಲಕ್ಕೆ ಹೊಳಪು ನೀಡುವುದಾಗಿರಬಹುದು .. ಎಲ್ಲದಕ್ಕೂ ಬ್ರಷ್ ಹಾಗೂ ಬ್ಲೆಂಡರ್‌ಗಳು ಬೇಕೆ ಬೇಕು. ಪ್ರತಿದಿನ ಮೇಕಪ್ ಮಾಡಿಕೊಳ್ಳಲು ಬ್ರಷ್ ಗಳು ಮತ್ತು ಬ್ಲೆಂಡರ್‌ಗಳನ್ನು ಬಳಸುವುದರಿಂದ ಅವು ಪ್ರತಿನಿತ್ಯ ನಿಮ್ಮ ಚರ್ಮದ ಸಂಪರ್ಕಕ್ಕೆ ಬರುತ್ತವೆ. ಆದರೆ ಬಹಳ ಸಮಯದಿಂದ ಅವೇ ಹಳೆಯ ಮೇಕಪ್ ಬ್ರಷ್ ಹಾಗೂ ಬ್ಲೆಂಡರ್‌ಗಳನ್ನು ನೀವು ಬಳಸುತ್ತಿರುವಿರಾ? ಹಾಗಾದರೆ ಅದರಿಂದ ಏನೆಲ್ಲ ಪರಿಣಾಮಗಳಾಗಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.
ಬ್ಯಾಕ್ಟೀರಿಯಾಗಳ ಬೆಳವಣಿಗೆ: ಬಹುಕಾಲದಿಂದ ಅದೇ ಮೇಕಪ್ ಸಾಧನಗಳನ್ನು ಬಳಸುತ್ತಿದ್ದರೆ ಅವುಗಳಲ್ಲಿ ಬ್ಯಾಕ್ಟೀರಿಯಾ, ಧೂಳು, ಕಸ ಮತ್ತು ಸತ್ತ ಚರ್ಮದ ಜೀವಕೋಶಗಳು ಸಂಗ್ರಹಗೊಳ್ಳುತ್ತವೆ. ಮತ್ತೆ ಅವೇ ಸಾಧನಗಳನ್ನು ಬಳಸುವುದರಿಂದ ಪ್ರತಿದಿನ ಬ್ಯಾಕ್ಟೀರಿಯಾಗಳು ನಿಮ್ಮ ಚರ್ಮ ಪ್ರವೇಶಿಸಲು ಅವಕಾಶ ಮಾಡಿದಂತಾಗುತ್ತದೆ. ಇದರಿಂದ ಗಂಭೀರವಾದ ಚರ್ಮದ ಸೋಂಕು ಹಾಗೂ ಇನ್ನಿತರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿರುತ್ತವೆ. ಹಳೆಯ ಹಾಗೂ ಹೊಲಸಾದ ಮೇಕಪ್ ಬ್ರಷ್ ಬಳಕೆಯಿಂದ ಸ್ಟಾಫ್ ಎಂಬ ಬ್ಯಾಕ್ಟೀರಿಯಾ ಸೋಂಕು ಮಹಿಳೆಯರಲ್ಲಿ ಕಂಡು ಬರುತ್ತದೆ. ಮೇಕಪ್ ಮಾಡಿಕೊಳ್ಳುವಾಗ ಈ ಬ್ಯಾಕ್ಟೀರಿಯಾಗಳು ದೇಹದ ಇತರ ಭಾಗಗಳಿಗೂ ಹರಡುತ್ತವೆ. ಇದರಿಂದ ಆಗಾಗ ಚರ್ಮದ ತುರಿಕೆ ಕಂಡು ಬರಬಹುದು. ಹೀಗಾಗಿ ಸಮಸ್ಯೆ ಕೈ ಮೀರುವ ಮುನ್ನ ನಿಮ್ಮ ಹಳೆಯ ಮೇಕಪ್ ಸಾಧನಗಳನ್ನು ಬದಲಾಯಿಸಿ.
ತೈಲ ಹಾಗೂ ಬೆವರಿನ ಬಿಡುಗಡೆಗಾಗಿ ಚರ್ಮದ ಮೇಲೆ ಅತಿ ಸೂಕ್ಷ್ಮವಾದ ರಂಧ್ರಗಳಿರುತ್ತವೆ. ಈ ರಂಧ್ರಗಳು ಮುಚ್ಚಿ ಹೋದಲ್ಲಿ ಚರ್ಮದ ಮೇಲೆ ಕಪ್ಪು, ಬಿಳಿ ಕಲೆಗಳು, ಮೊಡವೆಗಳು ಉಂಟಾಗಿ ಚರ್ಮ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಧೂಳು ಹಾಗೂ ಮಣ್ಣು ಹಿಡಿದ ಹಳೆಯ ಮೇಕಪ್ ಬ್ರಶ್‌ನಿಂದ ಚರ್ಮದ ಮೇಲಿನ ಸೂಕ್ಷ್ಮ ರಂಧ್ರಗಳು ಮುಚ್ಚಿ ಹೋಗಬಹುದು. ಹೀಗಾಗಿ ಮೇಕಪ್‌ನಿಂದ ಚರ್ಮಕ್ಕೆ ಹೊಳಪು ನೀಡುವ ಬದಲು ಹಳೆ ಬ್ರಶ್‌ನಿಂದ ಚರ್ಮ ಕಳೆಗುಂದುವಂತಾಗಲು ಅವಕಾಶ ನೀಡಬೇಡಿ.
ಮುಖದ ಮೇಲೆ ಹಳೆಯ ಬ್ರಶ್ ಮಾಡುವ ಅವಾಂತರವೇನು? ಕೇವಲ ಸೋಂಕು ಮಾತ್ರವಲ್ಲದೆ ಹಳೆ ಬ್ರಶ್‌ನಿಂದ ಮೇಕಪ್ ಮಾಡಿಕೊಳ್ಳುವುದರಿಂದ ಇಡೀ ಮೇಕಪ್ ಕ್ರಿಯೆಯೇ ಹಾಳಾಗುತ್ತದೆ. ಧೂಳು, ಮಣ್ಣು ಹಿಡಿದ ಬ್ರಶ್‌ನಿಂದ ಸಮಾಂತರವಾಗಿ ಮೇಕಪ್ ಮಾಡಲು ಸಾಧ್ಯವಾಗದಿರಬಹುದು. ಹಾಳಾದ ಬ್ರಷ್ಕಾರಣದಿಂದ ಪದೇ ಪದೇ ಮೇಕಪ್ ಹಚ್ಚಬೇಕಾಗುವುದರಿಂದ ಎಲ್ಲೆಡೆ ಸಮಾನವಾಗಿ ಮೇಕಪ್ ಮಾಡಲಾಗುವುದಿಲ್ಲ. ಎಷ್ಟೆಲ್ಲ ಪ್ರಯತ್ನ ಪಟ್ಟರೂ ನೀವು ಬಯಸಿದ ಮೇಕಪ್ ಸೌಂದರ್ಯ ನಿಮ್ಮದಾಗದಿರಬಹುದು.
ಚರ್ಮದ ಮೇಲೆ ಜಿಡ್ಡು ಹಾಗೂ ಧೂಳು ಸಂಗ್ರಹವಾದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಬ್ಯಾಕ್ಟೀರಿಯಾ ಹಾಗೂ ಧೂಳಿನಿಂದ ಚರ್ಮ ಬಿರುಕು ಬಿಟ್ಟು ಸೋಂಕು ತಗುಲಬಹುದು. ಹೊಸ ಹಾಗೂ ಸ್ವಚ್ಛವಾದ ಮೇಕಪ್ ಬ್ರಶ್‌ಗಳು ಮೃದುವಾಗಿರುವುದರಿಂದ ಚರ್ಮಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಆದರೆ ಹಳೆಯ ಬ್ರಶ್‌ಗಳು ಬಿರುಸಾಗಿರುವುದರಿಂದ ಚರ್ಮದ ಮೇಲೆ ಗೀರುಗಳುಂಟಾಗಿ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಇದರಿಂದ ಚರ್ಮದಲ್ಲಿ ತುರಿಕೆ, ಉರಿಯ ಅನುಭವ ಆಗಬಹುದು.
ನೀವು ಬಳಸುವ ಮೇಕಪ್ ಸಾಧನಗಳಿಂದಲೂ ಮೊಡವೆಗಳುಂಟಾಗಬಹುದು ಎಂಬುದು ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ. ಅದೇ ಹಳೆಯ ಬ್ರಶ್‌ಗೂ ಬ್ಲೆಂಡರ್‌ಗಳನ್ನು ಬಳಸುವುದರಿಂದ ನಿಮಗೆ ಗೊತ್ತಿಲ್ಲದೆ ಅನೇಕ ಬ್ಯಾಕ್ಟೀರಿಯಾಗಳು ನಿಮ್ಮ ಚರ್ಮವನ್ನು ಪ್ರವೇಶಿಸುತ್ತವೆ. ಇದರಿಂದ ಮೊಡವೆ ಬರಬಹುದು ಹಾಗೂ ‘ಸ್ಟಾಫ್’ ಬ್ಯಾಕ್ಟೀರಿಯಾ ಸೋಂಕು ಉಂಟಾಗಬಹುದು. ಯಾವಾಗಲೂ ದುಬಾರಿ ಬೆಲೆಯ ಮೇಕಪ್ ಸಾಧನಗಳನ್ನು ಕೊಳ್ಳುವ ಬದಲು ಮಧ್ಯಮ ಬೆಲೆಯ ಸಾಧನಗಳನ್ನು ಖರೀದಿಸಿ, ಅವುಗಳನ್ನು ಆಗಾಗ ಬದಲಾಯಿಸುವುದು ಜಾಣತನವಾಗಿದೆ. ಜೊತೆಗೆ ತಿಂಗಳಿಗೆ ಎರಡು ಬಾರಿಯಾದರೂ ನಿಮ್ಮ ಮೇಕಪ್ ಸಾಧನಗಳನ್ನು ತೊಳೆದು ಸ್ವಚ್ಛಗೊಳಿಸಬೇಕು. ಹಾಗಾಗಿ, ತಪ್ಪದೇ ಜಾಗ್ರತೆ ವಹಿಸಿ.
Published On - 7:06 pm, Thu, 17 October 19