ಸಾವಿನ ಮನೆಯಲ್ಲಿ ಒಲೆಯನ್ನು ಹಚ್ಚುವುದಿಲ್ಲ, ಏಕೆ ಗೊತ್ತಾ?

ಹಿರಿಯರು ಆಚರಿಸಿಕೊಂಡು ಬಂದಿರುವ ಕೆಲವು ಆಚಾರ, ವಿಚಾರಗಳು ನಮಗೆ ವಿಚಿತ್ರ ಅನಿಸಿದರೂ ಕೂಡ ಅದರ ಹಿಂದೆ ಒಂದು ಬಲವಾದ ಕಾರಣ ಇರುತ್ತೆ. ಮನುಷ್ಯನ ಜನನದಿಂದ ಹಿಡಿದು ಮರಣದವರೆಗೂ ನಾವು ಹಲವು ಆಚಾರ ವಿಚಾರಗಳನ್ನು ಪಾಲಿಸುತ್ತಲೇ ಬಂದಿದ್ದೇವೆ, ಇಂದಿಗೂ ಪಾಲಿಸುತ್ತಿದ್ದೇವೆ. ನಾವು ಆಚರಿಸುವ ಕೆಲವು ಆಚರಣೆಗಳು ನಮಗೆ ಮೂಢನಂಬಿಕೆ ಅನಿಸಿದರೂ ಕೂಡ ಅದರ ಹಿಂದೆ ವೈಜ್ಞಾನಿಕ ಅರಿವು ಇರುತ್ತೆ. ಇನ್ನು ನಾವು ಪ್ರತಿ ಆಚರಣೆಯನ್ನು ನಂಬಲೇಬೇಕು ಅನ್ನೋದು ತಪ್ಪು. ಯಾಕಂದ್ರೆ ಕೆಲವು ಆಚರಣೆಗಳು ಅವರವರ ಮನಸ್ಸಿಗೆ ಸಂಬಂಧಿಸಿದ್ದು. ಕೆಲವರು […]

ಸಾವಿನ ಮನೆಯಲ್ಲಿ ಒಲೆಯನ್ನು ಹಚ್ಚುವುದಿಲ್ಲ, ಏಕೆ ಗೊತ್ತಾ?
Follow us
ಸಾಧು ಶ್ರೀನಾಥ್​
|

Updated on: Nov 15, 2019 | 7:46 AM

ಹಿರಿಯರು ಆಚರಿಸಿಕೊಂಡು ಬಂದಿರುವ ಕೆಲವು ಆಚಾರ, ವಿಚಾರಗಳು ನಮಗೆ ವಿಚಿತ್ರ ಅನಿಸಿದರೂ ಕೂಡ ಅದರ ಹಿಂದೆ ಒಂದು ಬಲವಾದ ಕಾರಣ ಇರುತ್ತೆ. ಮನುಷ್ಯನ ಜನನದಿಂದ ಹಿಡಿದು ಮರಣದವರೆಗೂ ನಾವು ಹಲವು ಆಚಾರ ವಿಚಾರಗಳನ್ನು ಪಾಲಿಸುತ್ತಲೇ ಬಂದಿದ್ದೇವೆ, ಇಂದಿಗೂ ಪಾಲಿಸುತ್ತಿದ್ದೇವೆ. ನಾವು ಆಚರಿಸುವ ಕೆಲವು ಆಚರಣೆಗಳು ನಮಗೆ ಮೂಢನಂಬಿಕೆ ಅನಿಸಿದರೂ ಕೂಡ ಅದರ ಹಿಂದೆ ವೈಜ್ಞಾನಿಕ ಅರಿವು ಇರುತ್ತೆ.

ಇನ್ನು ನಾವು ಪ್ರತಿ ಆಚರಣೆಯನ್ನು ನಂಬಲೇಬೇಕು ಅನ್ನೋದು ತಪ್ಪು. ಯಾಕಂದ್ರೆ ಕೆಲವು ಆಚರಣೆಗಳು ಅವರವರ ಮನಸ್ಸಿಗೆ ಸಂಬಂಧಿಸಿದ್ದು. ಕೆಲವರು ಅವುಗಳನ್ನು ನಂಬ್ತಾರೆ, ಇನ್ನು ಕೆಲವರು ನಂಬೋದಿಲ್ಲ. ಅಂತಹ ಕೆಲವು ಆಚರಣೆಗಳಲ್ಲಿ ಒಂದು ಸಾವಿನ ಸೂತಕ. ಸಾವನ್ನಪ್ಪಿದ ಮನೆಯಲ್ಲಿ ಸೂತಕ ಇರುತ್ತೆ ಎಂಬ ನಂಬಿಕೆ ಇದೆ. ಇಷ್ಟಕ್ಕೂ ಸಾವಿನ ಮನೆಯಲ್ಲಿ ಸೂತಕ ಎಷ್ಟು ದಿನ ಇರುತ್ತೆ. ಏನಿದು ಸಾವಿನ ಸೂತಕ? ಬನ್ನಿ ತಿಳಿಯೋಣ.

ಸಾವಿನ ಮನೆಯ ಸೂತಕ * ಸತ್ತ ವ್ಯಕ್ತಿಯ ಮನೆಯಲ್ಲಿ ಒಲೆಯನ್ನು ಹಚ್ಚಬಾರದು. ಅಡುಗೆ ಮಾಡಬಾರದು ಅನ್ನುವ ವಿಷಯ ಎಲ್ಲರಿಗೂ ಗೊತ್ತೇ ಇರುತ್ತೆ. * ಕೆಲವರ ಮನೆಯಲ್ಲಿ ಮೂರು ದಿನ, ಹನ್ನೊಂದು ದಿನ ಮತ್ತು ಒಂಬತ್ತು ದಿನಗಳ ಶೋಕಾಚರಣೆಯನ್ನು ಮಾಡ್ತಾರೆ. * ಕೆಲವೊಂದು ಧರ್ಮದಲ್ಲಿ ಒಂದೊಂದು ಆಚರಣೆ ಇರುತ್ತೆ. ಒಬ್ಬ ವ್ಯಕ್ತಿ ಸತ್ತರೆ ಹಿಂದೂ ಧರ್ಮದ ಪ್ರಕಾರ 11 ದಿನಗಳವರೆಗೆ ಶೋಕಾಚರಣೆಯನ್ನು ಮಾಡಲಾಗುತ್ತೆ. * ಮುಸ್ಲಿಂ ಧರ್ಮದಲ್ಲಿ ಮೂರೂ ದಿನ, ಕ್ರಿಶ್ಚಿಯನ್ ಧರ್ಮದಲ್ಲಿ 30 ದಿನಗಳ ತನಕ ಶೋಕಾಚರಣೆಯನ್ನು ಮಾಡಲಾಗುತ್ತೆ.

ಏಕೆ ಒಲೆ ಹಚ್ಚಬಾರದು?: ಇನ್ನು ಸತ್ತ ವ್ಯಕ್ತಿಯ ಮನೆಯಲ್ಲಿ ಏಕೆ ಒಲೆ ಹಚ್ಚಬಾರದು ಮತ್ತು ಅಡುಗೆ ಮಾಡಬಾರದು ಅನ್ನೋದಕ್ಕೂ ಕಾರಣವಿದೆ. ಮನೆಯಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಮನೆಯಲ್ಲಿನ ಜನರು ಉಪವಾಸ ಮಾಡಬೇಕು ಎಂಬ ನಿಯಮವಿಲ್ಲ. ಮನೆಯಲ್ಲಿ ಅಡುಗೆ ಮಾಡದೇ ಬೇರೆಯವರು ತಂದು ಕೊಡುವ ಆಹಾರ ಸೇವಿಸಬಹುದು. ಸಾವಿನ ಮನೆಯವರು ಅಡುಗೆ ಮಾಡಿದರೆ ಮೃತದೇಹದ ಜೊತೆಗೆ ಅವರ ಆತ್ಮ ಕೂಡ ಸುಟ್ಟು ಹೋಗುತ್ತೆ ಅನ್ನೋ ನಂಬಿಕೆ ಇದೆ.

ಇನ್ನು ವಾಸ್ತವವಾಗಿ ಹೇಳಬೇಕೆಂದರೆ ಸಾವನ್ನಪ್ಪಿದವರ ಮನೆಯವರಿಗೆ ದುಃಖಿಸಲು ಮತ್ತು ಮೃತರಿಗೆ ಸಂತಾಪವನ್ನು ವ್ಯಕ್ತಪಡಿಸಲು ಸ್ವಲ್ಪ ಸಮಯ ಸಿಗಲಿ ಅನ್ನುವ ಉದ್ದೇಶದಿಂದ ಈ ನಿಯಮ ಮಾಡಲಾಗಿದೆ. ಮೃತರ ಮನೆಯವರಿಗೆ ಮತ್ತು ಅವರ ಸಂಬಂಧಿಕರಿಗೆ ದುಃಖವನ್ನು ನೀಗಿಸಿಕೊಳ್ಳಲು ಒಂದಷ್ಟು ಸಮಯಾವಕಾಶವನ್ನು ನೀಡುವ ಸಲುವಾಗಿ ಈ ಆಚರಣೆಯನ್ನು ಪಾಲಿಸಿಕೊಂಡು ಬರಲಾಗಿದೆ. ಇನ್ನು ಮರಣಿಸಿದವರ ಮೇಲೆ ನಮಗಿರುವ ಗೌರವ, ವಿಧೇಯತೆಯ ಸೂಚಕವಾಗಿ ಒಂದು ವರ್ಷದ ಕಾಲ ಹಬ್ಬ-ಹರಿದಿನಗಳು, ಶುಭ ಸಮಾರಂಭಗಳನ್ನು ಆಚರಿಸೋದಿಲ್ಲ. ಆದರೆ ಅವುಗಳನ್ನು ಆಚರಿಸೋದು ಬಿಡೋದು ಅವರವರ ನಂಬಿಕೆಗೆ ಬಿಟ್ಟದ್ದು.

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ