World Theatre Day ; ಮಧ್ಯಾಹ್ನಕ್ಕೆ ಹೊಸ ಪ್ರಹಸನ : ‘ಕೈಕೈ ಹಿಡಕೊಂಡು’

‘ಮೂಗು ತೂರಿಸೋದು ಅನ್ನೋ ಪದ ನಿನ್ನಿಂದಾಗೇ ಬಂದಿರೋದು ನೋಡು. ಸುಮ್ನಿರು, ನಾನೇ ಹೇಳ್ತೀನಿ. ವಿಷಯ ಏನಪ್ಪಾಂದ್ರೆ, ಇನ್ನು ಮೇಲೆ ಈ ಮೂಗು- ಬಾಯಿ ಮುಚ್ಕೊಂಡ್ ಓಡಾಡೋದು ಬೇಡ್ವಂತೆ, ಇನ್ನುಮೇಲೆ ನನಗೆ-ನಿನಗೆ ಸಜಾ ಅಂತೆ.’

World Theatre Day ; ಮಧ್ಯಾಹ್ನಕ್ಕೆ ಹೊಸ ಪ್ರಹಸನ : 'ಕೈಕೈ ಹಿಡಕೊಂಡು'
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Mar 27, 2021 | 1:23 PM

ಕೊರೊನಾದಿಂದ ಈವತ್ತು ಮೂಗು ಬಾಯಿ ಮುಚ್ಚಿಕೊಂಡೇ ಜೀವನ ಸಾಗಿಸುತ್ತಿದ್ದೇವೆ. ರೂಪಾಂತರಗೊಂಡ ವೈರಸ್​ನಿಂದಾಗಿ ಮುಂದೊಂದು ದಿನ ಕಣ್ಣು, ಕಿವಿಯನ್ನೂ ಮುಚ್ಚಿಕೊಂಡು ಓಡಾಡಬೇಕು ಎಂದು ಫರಮಾನು ಹೊರಡಿಸುವಂತಾದರೆ? ಹೀಗೊಂದು ಎಳೆಯನ್ನು ನಮ್ಮ ಬರಹಗಾರರಿಗೆ ತಲುಪಿಸಿ, ನಿಮ್ಮಲ್ಲಿ ಮೊಳೆತ ಆಲೋಚನೆಗಳಿಗೆ ಸಂಭಾಷಣೆಯ ರೂಪು ಕೊಡಿ ಎಂದು ಕೇಳಿಕೊಳ್ಳಲಾಯಿತು. ಇನ್ನು ನೀವುಂಟು ಅವರು ಸೃಷ್ಟಿಸಿದ ಪಾತ್ರಗಳುಂಟು ಮತ್ತು ‘ವಿಶ್ವ ರಂಗಭೂಮಿ ದಿನ’ವೂ ಉಂಟು.

ಪರಿಕಲ್ಪನೆ : ಶ್ರೀದೇವಿ ಕಳಸದ

ನಾಟಕ : ಕೈಕೈ ಹಿಡಕೊಂಡು

ರಚನೆ : ಸೌರಭಾ ಕಾರಿಂಜೆ

ದೃಶ್ಯ ಒಂದು

ಕಿವಿ: ಅಲ್ಲ ಕಣ್ಣೇ, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನೋದು ನಿಜ ಆಯ್ತು ನೋಡು. ಕಣ್ಣು: ಅಂತದ್ದೇನಾಯ್ತು ಈಗ? ಯಾವುದಕ್ಕೆ ಪೀಠಿಕೆ ಹಾಕ್ತಾ ಇದ್ದೀಯ?

ಬಾಯಿ: ನಾ ಹೇಳ್ತೀನಿ ನಾ ಹೇಳ್ತೀನಿ!

ಕಿವಿ: ನೀನು ಸುಮ್ನಿರೋ. ಹೊಸಾ ವೈರಸ್ ಬಂದಿದೆ ಕಣೋ, ಸುದ್ದಿ ಕೇಳಿಲ್ವ?

ಕಣ್ಣು: ಕಿವಿ ನೀನು, ನಾನಲ್ವಲ್ಲಾ? ಕೇಳೋದು ನಿನ್ನ ಕೆಲಸ. ನಾನು ಇವತ್ತಿನ ಪೇಪರ್ ಓದಿಲ್ಲ ಅಷ್ಟೇ.

ಕಿವಿ: ಅದೂ ಸರಿ ಅನ್ನು. ಇವತ್ತೇ ಈ ಬಾಯಿ ನನ್ ಮಗ ಯಾರಿಗೋ ಹೇಳ್ತಾ ಇದ್ದ.

ಕಣ್ಣು: ಏನಂತೆ?

ಬಾಯಿ: ನಾ ಹೇಳ್ತೀನಿ ನಾ ಹೇಳ್ತೀನಿ.

ಕಿವಿ: ಬಾಯೀ, ಮುಚ್ಚಿಕೋ!

ಮೂಗು: ನಾ ಹೇಳ್ತೀನಿ ನಾ ಹೇಳ್ತೀನಿ.

ಕಿವಿ: ಮೂಗು ತೂರಿಸೋದು ಅನ್ನೋ ಪದ ನಿನ್ನಿಂದಾಗೇ ಬಂದಿರೋದು ನೋಡು. ಸುಮ್ನಿರು, ನಾನೇ ಹೇಳ್ತೀನಿ. ವಿಷಯ ಏನಪ್ಪಾಂದ್ರೆ, ಇನ್ನು ಮೇಲೆ ಈ ಮೂಗು- ಬಾಯಿ ಮುಚ್ಕೊಂಡ್ ಓಡಾಡೋದು ಬೇಡ್ವಂತೆ, ಇನ್ನುಮೇಲೆ ನನಗೆ-ನಿನಗೆ ಸಜಾ ಅಂತೆ. ಹೊಸಾ ವೈರಸ್ ಕಣ್ಣು ಕಿವಿ ಮೂಲಕ ಅಟ್ಯಾಕ್ ಮಾಡೋದಂತೆ, ಅದಕ್ಕೆ.

ಕಣ್ಣು: ಅಯ್ಯಯ್ಯೋ.

ಬಾಯಿ: ಹಾ ಹಾ ಹಾ ಎಷ್ಟು ಒಳ್ಳೆ ಸುದ್ದಿ!

ಮೂಗು: ನಮ್ಮ ಕಷ್ಟ ಏನಂತ ನಿಮಗೂ ಗೊತ್ತಾಗಲಿ ಸ್ವಲ್ಪ.

ಕಣ್ಣು: ಏ… ಹೋಗ್ರೋ. ಇವೆಲ್ಲ ಯಾಕೋ ಆಗಲ್ಲ ಹೋಗಲ್ಲ ಅನಿಸತ್ತೆ. ನಮ್ಮಿಬ್ಬರನ್ನು ಬಿಟ್ಟು ಬದುಕು ಸಾಧ್ಯವಾ?

ಕಿವಿ: ನನಗೂ ಹಾಗೇ ಅನಿಸೋದು. ಈ ಬಾಯಿಯ ಕೊಬ್ಬು ಎಷ್ಟೇ ಇದ್ದರೂ ಇವನು ಮಾತಾಡದಿದ್ದರೆ ಯಾರೂ ಸಾಯಲ್ಲ.

ಕಣ್ಣು: ಈ ಮೂಗೇನೂ ಕಮ್ಮಿ ಇಲ್ಲ. ನಾನಿಲ್ಲದಿದ್ದರೆ ಮನುಷ್ಯ ಸಾಯೋದೇ ಅಂತ ಕೊಬ್ಬಾಡ್ತಾ ಇರ್ತಾನೆ. ಆದ್ರೆ ಒಂದು ಮಾಸ್ಕ್ ಹಾಕೋಕೂ ನಿನ್ನ ಸಹಾಯ ಬೇಕು.

ಕಿವಿ: ಅಲ್ಲ… ಯಾವ ಕನ್ನಡಕಾನೂ ಸಾಲಲ್ಲ ಅಂತೆ ವೈರಸ್​ನಿಂದ ರಕ್ಷಿಸಿಕೊಳ್ಳೋಕೆ. ಇಡೀ ಮನುಷ್ಯ ಜಾತೀನೇ ಕಣ್ಮುಚ್ಕೋಬೇಕಂತಪ್ಪಾ. ಸಾಧ್ಯನಾ?

ಕಣ್ಣು: ಕಿವೀನೂ ಮುಚ್ಚಿಕೊಂಡ್ರೆ ಮಾತಾಡೋದೇ ಕೇಳಿಸಲ್ಲ. ಬಾಯಿ ಇದ್ರೂ ಪ್ರಯೋಜನ ಇಲ್ಲ. ಆ ಕಡೆಯಿಂದ ಕಾಣೋದೂ ಇಲ್ಲ, ಈ ಕಡೆಯಿಂದ ಕೇಳೋದೂ ಇಲ್ಲ. ಹೇಗೆ ಬದುಕ್ತಾರೆ ಈ ಮನುಷ್ಯರು? ಸಾಧ್ಯಾನೇ ಇಲ್ಲ.

(ಕಣ್ಣು-ಕಿವಿ ಗಹಗಹಿಸಿ ನಗು)

ಮೂಗು-ಬಾಯಿ: ಏನಾದ್ರೂ ಆಗಲಿ, ನಮ್ಮ ವನವಾಸ ಮುಗೀತಪ್ಪ.

ಕಣ್ಣು: ಸ್ವಾರ್ಥಿಗಳಾ…

ಬಾಯಿ: ಇಕ್ಕೋ ಇವರಿಗೆ. ಇಷ್ಟು ದಿನ ಆರಾಮಾಗಿದ್ದು ಈಗ ನಮ್ಮನ್ನು ಆಡ್ಕೋತಾರೆ.

(ಕಣ್ಣು-ಕಿವಿ-ಮೂಗು-ಬಾಯಿ ಮಾರಾಮಾರಿ)

ದೃಶ್ಯ ಎರಡು

ಕಣ್ಣು: ಏನು ನಡೀತಾ ಇದೆ? ನನ್ ಕಣ್ಣಿಗೆ ಪಟ್ಟಿಬಿದ್ದು ಒಂದು ವರ್ಷ ಆಯಿತು.

ಕಿವಿ: ಯಾರಿಗ್ಗೊತ್ತು, ಮನುಷ್ಯ ಮತ್ತು ಅವನ ಜೊತೆ ನಾವೆಲ್ಲ ಬದುಕಿದ್ದೀವಾ ಇನ್ನೂ?

ಮೂಗು: ನಾನಂತೂ ಉಸಿರಾಡ್ತಾ ಇದ್ದೀನಿ.

ಬಾಯಿ: ನನಗಂತೂ ಊಟ ಬೀಳ್ತಾ ಇದೆ. ಇವರು ಹಾಡಂತೂ ಹಾಡ್ತಾ ಇರ್ತಾರೆ. ಬದುಕಿರಲೇಬೇಕು.

ಕಣ್ಣು ಕಿವಿ ಮೂಗು ಬಾಯಿ (ಕೋರಸ್​): ಹೇಗೆ ಹೇಗೆ ಹೇಗೆ ಹೇಗೆ?

(ಹತ್ತು-ಹದಿನೈದು ಮನುಷ್ಯರು ಕಣ್ಣು-ಕಿವಿ ಮುಚ್ಚಿಕೊಂಡು, ಒಬ್ಬರ ಕೈ ಒಬ್ಬರು ಹಿಡಿದುಕೊಂಡು, ಕೋರಸ್​ನಲ್ಲಿ ಹಾಡಿಕೊಂಡು ನಿಧಾನಕ್ಕೆ ನಡೆಯುತ್ತಿದ್ದಾರೆ.)

ಸ್ಪರ್ಶ (ಕಿರುನಗು ಬೀರುತ್ತಾ) : ನೀವು ನಾಲ್ಕು ಜನ ನನ್ನನ್ನು ಮರೆತೇ ಬಿಟ್ಟಿರಲ್ಲ. ನಾನಿರೋವರೆಗೂ ಮನುಷ್ಯ ಬದುಕಿಯೇ ಬದುಕ್ತಾನೆ. ಕೈ-ಕೈ ಹಿಡಿದುಕೊಂಡೇ

ಬದುಕಿಬಿಡ್ತಾನೆ.

ಇದನ್ನೂ ಓದಿ : World Theatre Day ; ಮತ್ತೊಂದ್ ನಾಟಕ ಬಂತ್ರಪೋ : ಮರೋನಾ ವೈರಸ್’

Published On - 1:03 pm, Sat, 27 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ