AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸಬೇಕೆಂದರೆ ಮನೆಯ ಹಿರಿಯರಲ್ಲಿ ಈ 4 ಗುಣಗಳು ಇರಬೇಕು

Chanakya Niti: ಆಚಾರ್ಯ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ಸುಗಮ ಮತ್ತು ಯಶಸ್ವಿ ಜೀವನಕ್ಕಾಗಿ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಉಲ್ಲೇಖಿಸಿದ್ದಾರೆ.

ಮನೆಯಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸಬೇಕೆಂದರೆ ಮನೆಯ ಹಿರಿಯರಲ್ಲಿ ಈ 4 ಗುಣಗಳು ಇರಬೇಕು
ಮನೆಯಲ್ಲಿ ಸುಖ-ಶಾಂತಿ-ನೆಮ್ಮದಿ ಅಭಿವೃದ್ಧಿ ಕಾಣಬೇಕೆಂದರೆ ಮನೆಯ ಹಿರಿಯರಲ್ಲಿ ಈ 4 ಗುಣಗಳು ಅತ್ಯಗತ್ಯ
TV9 Web
| Updated By: ಸಾಧು ಶ್ರೀನಾಥ್​|

Updated on:Aug 08, 2022 | 4:41 PM

Share

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಸುಗಮ ಮತ್ತು ಯಶಸ್ವಿ ಜೀವನಕ್ಕಾಗಿ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಉಲ್ಲೇಖಿಸಿದ್ದಾರೆ. ಇವುಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಅದನ್ನು ನಿವಾರಿಸಿಕೊಳ್ಳುವುದು ಮಾತ್ರವಲ್ಲದೆ ಸುಲಭವಾಗಿ ಯಶಸ್ಸನ್ನೂ ಸಾಧಿಸಬಹುದು ಎಂಬುದು ನಂಬಿಕೆ. ಆಚಾರ್ಯ ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಮನೆಯ ಯಜಮಾನ ಯಾವ ಗುಣಗಳನ್ನು ಹೊಂದಿರಬೇಕು ಎಂಬುದನ್ನೂ ಉಲ್ಲೇಖಿಸಿದ್ದಾನೆ. ಈ ಗುಣಗಳೆಲ್ಲಾ ಇದ್ದರೆ ಮನೆಯಲ್ಲಿ ಸುಖ-ಸಂತೋಷ ನೆಲೆಸುತ್ತದೆ, ಇಲ್ಲದಿದ್ದರೆ ಸಮಸ್ಯೆಗಳು ಎದುರಾಗಬಹುದು ಎಂದಿದ್ದಾರೆ. ಈಗ ಕುಟುಂಬದ ಸಾರಥಿಗೆ ಇರಬೇಕಾದ ಗುಣಗಳನ್ನು ತಿಳಿಯೋಣ.

  1. ಆಚಾರ್ಯ ಚಾಣಕ್ಯರ ಪ್ರಕಾರ.. ಕುಟುಂಬದ ಯಜಮಾನ ಸರಿಯಾದ ಪುರಾವೆಗಳಿಲ್ಲದೆ ಯಾವುದನ್ನೂ ನಂಬಬಾರದು. ನೀವು ಏನನ್ನಾದರೂ ನಂಬುವ ಮೊದಲು ಅದನ್ನು ಪರಿಶೀಲಿಸಬೇಕು. ಹಾಗೆ ಮಾಡದಿದ್ದರೆ ಕುಟುಂಬದಲ್ಲಿ ಸಮಸ್ಯೆಗಳು ತಲೆದೋರಬಹುದು.
  2. ಮನೆಯ ವೆಚ್ಚವನ್ನು ಕುಟುಂಬದ ಮುಖ್ಯಸ್ಥರು ನೋಡಿಕೊಳ್ಳಬೇಕು. ಯಾವುದೇ ವೆಚ್ಚವನ್ನು ಎಚ್ಚರಿಕೆಯಿಂದ ಮಾಡಬೇಕು. ಅನಾವಶ್ಯಕವಾಗಿ ಹಣ ಖರ್ಚು ಮಾಡುವುದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ, ಕುಟುಂಬದಲ್ಲಿ ಕಲಹಗಳಿಗೆ ಕಾರಣವಾಗುತ್ತದೆ.
  3. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಕುಟುಂಬದ ಮುಖ್ಯಸ್ಥರು ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾರಿಗೂ ತೊಂದರೆಯಾಗದಂತೆ ನಿರ್ಧಾರ ಕೈಗೊಳ್ಳಬೇಕು. ಈ ವಿಷಯವನ್ನು ಅನುಸರಿಸದಿದ್ದರೆ, ಕುಟುಂಬದಲ್ಲಿ ತೊಂದರೆ ಉಂಟಾಗುತ್ತದೆ.
  4. ಕುಟುಂಬದ ಮುಖ್ಯಸ್ಥನು ತನ್ನ ನಿರ್ಧಾರಗಳಿಗೆ ಅಂಟಿಕೊಳ್ಳಬೇಕು. ಇದು ಕುಟುಂಬದ ಸದಸ್ಯರಲ್ಲಿ ಶಿಸ್ತಿನ ಅಭ್ಯಾಸವನ್ನು ಸೃಷ್ಟಿಸುತ್ತದೆ. ಕುಟುಂಬದ ಮುಖ್ಯಸ್ಥನು ತನ್ನ ನಿರ್ಧಾರಗಳಲ್ಲಿ ದೃಢವಾಗಿರಬೇಕು. ಇದರಿಂದ ಕುಟುಂಬದಲ್ಲಿ ಶಿಸ್ತಿನ ವಾತಾವರಣ ನಿರ್ಮಾಣವಾಗುತ್ತದೆ. To fread in Telugu click here

Published On - 4:40 pm, Mon, 8 August 22