ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಕಾಡುತ್ತಿದೆಯಾ? ಪೂಜಾ ಕೋಣೆಯಲ್ಲಿ ಈ 6 ವಸ್ತುಗಳನ್ನು ಇಟ್ಟರೆ ಲಕ್ಷ್ಮಿಕಟಾಕ್ಷ ಖಚಿತ

ಪೂಜೆಯ ವೇಳೆ ಮೂರ್ತಿಗಳ ಮುಂದೆ ನೀರು ತುಂಬಿದ ಕಲಶವನ್ನು ಇಟ್ಟರೆ ಮನೆಯಲ್ಲಿ ಆರ್ಥಿಕ ಸಮಸ್ಯೆಯಿಲ್ಲದೆ ನೆಮ್ಮದಿಯ ವಾತಾವರಣ ಇರುತ್ತದೆ ಎಂದು ಹೇಳಲಾಗುತ್ತದೆ. ಏಕೆಂದರೆ ಕಲಶವನ್ನೇ ವಿಘ್ನೇಶ್ವರನ ಸಂಕೇತವೆಂದು ಪರಿಗಣಿಸಲಾಗಿದೆ.

ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಕಾಡುತ್ತಿದೆಯಾ? ಪೂಜಾ ಕೋಣೆಯಲ್ಲಿ ಈ 6 ವಸ್ತುಗಳನ್ನು ಇಟ್ಟರೆ ಲಕ್ಷ್ಮಿಕಟಾಕ್ಷ ಖಚಿತ
ಪೂಜಾ ಕೋಣೆಯಲ್ಲಿ ಈ 6 ವಸ್ತುಗಳನ್ನು ಇಟ್ಟರೆ ಲಕ್ಷ್ಮಿಕಟಾಕ್ಷ ಖಚಿತ
Follow us
ಸಾಧು ಶ್ರೀನಾಥ್​
|

Updated on: Sep 17, 2023 | 6:06 AM

ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಪೂಜೆ ಬಹಳ ಮುಖ್ಯ. ಪೂಜೆಯು ಮನಃಶಾಂತಿಯ ಜೊತೆಗೆ ಸುಖ ನೆಮ್ಮದಿಯನ್ನು ನೀಡುತ್ತದೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಆದರೆ ಪೂಜೆಗಾಗಿ ನಿರ್ಮಿಸಿದ ಕೋಣೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ವಾಸ್ತುವಿನಲ್ಲಿ ಯಾವುದೇ ಸಣ್ಣ ತಪ್ಪು ಮಾಡಿದರೂ ಅದರ ಪರಿಣಾಮವನ್ನು ಇಡೀ ಕುಟುಂಬವೇ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ವಾಸ್ತ್ರು ಶಾಸ್ತ್ರ ಪಂಡಿತರು. ಕೆಲವರು ನಿತ್ಯವೂ ಪೂಜೆ ಮಾಡುತ್ತಿದರೂ ಆರ್ಥಿಕ ಸಮಸ್ಯೆಗಳು ಕಾಡುವುದು ಈ ದೋಷಗಳಿಂದಲೇ. ಈ ಸಮಸ್ಯೆಗಳಿಂದ ಮುಕ್ತಿ ಹೊಂದಲು ಪೂಜಾ ಮಂದಿರದಲ್ಲಿ ವಾಸ್ತು ಪಾಲಿಸುವುದರಿಂದ ಸಂಪತ್ತು ಸಿಗುತ್ತದೆ ಎಂಬುದು ಹಿರಿಯರ ನಂಬಿಕೆ. ಕೆಲವು ವಸ್ತುಗಳನ್ನು ನಿರ್ದಿಷ್ಟವಾಗು ದೇವರ ಮಂದಿರದಲ್ಲಿ ಸೇರಿಸಬೇಕು. ಅಂತಹ ವಸ್ತುಗಳನ್ನು ಪೂಜಾ ಮಂದಿರದಲ್ಲಿ ಇಡುವ ಮೂಲಕ ಕುಟುಂಬದಲ್ಲಿ ಆಯು ಆರೋಗ್ಯ ಜೊತೆಗೆ ಹಣಕಾಸಿನ ನೆಮ್ಮದಿಯನ್ನು ಕಾಣಬಹುದಾಗಿದೆ.

ಪೂಜಾ ಗಂಟೆ: ತಪಸ್ಸು ಮತ್ತು ಪೂಜೆಯು ದೇವರ ಪ್ರೀತಿಯನ್ನು ಗಳಿಸಲು ಉತ್ತಮ ಮಾರ್ಗವಾಗಿದೆ. ಅನೇಕ ಜನರು ಇದನ್ನು ಸಾಧಿಸಲು ಪೂಜಾ ವ್ಯವಸ್ಥೆಯನ್ನು ಆಯ್ಕೆ ಮಾಡುತ್ತಾರೆ. ತಜ್ಞರ ಪ್ರಕಾರ ಗಂಟೆ ಬಾರಿಸುತ್ತಾ ಪೂಜೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಉಂಟಾಗುತ್ತದೆ ಮತ್ತು ದುಷ್ಟಶಕ್ತಿಗಳನ್ನು ಮನೆಯಿಂದ ದೂರವಿಡುತ್ತದೆ. ಪರಿಣಾಮವಾಗಿ, ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು ಸಹ ದೂರವಾಗುತ್ತವೆ.

ನವಿಲು ಗರಿ: ಶ್ರೀಕೃಷ್ಣನ ಅಲಂಕಾರದ ಭಾಗವಾದ ನವಿಲು ಗರಿಗೆ ನಮ್ಮ ಧರ್ಮದಲ್ಲಿ ಹೆಚ್ಚಿನ ಮಹತ್ವವಿದೆ. ಬೆಣ್ಣೆ ಪ್ರಿಯ ಕೃಷ್ಣನಿಗೆ ಪ್ರಿಯವಾದ ನವಿಲು ಗರಿ ಪೂಜಾ ಕೋಣೆಯಲ್ಲಿ ಸಂತಸವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ದೀಪ: ದೀಪವಿಲ್ಲದೆ ಯಾವುದೇ ರೀತಿಯ ಪೂಜೆಯೂ ಅಪೂರ್ಣ. ವಾಸ್ತು ಶಾಸ್ತ್ರದ ಪ್ರಕಾರ, ಪೂಜಾ ಕೋಣೆಯ ಪಶ್ಚಿಮದಲ್ಲಿ ದೀಪವನ್ನು ಇಡುವುದು ಅತ್ಯಂತ ಮಂಗಳಕರವಾಗಿದೆ. ಪಶ್ಚಿಮ ದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದರಿಂದ, ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ, ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಉಂಟುಮಾಡುತ್ತದೆ ಎಂಬುದು ನಂಬಿಕೆ.

ಇದನ್ನೂ ಓದಿ: ಪರ್ಸ್‌ನಲ್ಲಿ ಈ ವಸ್ತುಗಳು ಇದ್ದರೆ ಮನೆಯಲ್ಲಿ ಬಡತನ ನುಸುಳಿದಂತೆಯೆ! ಎಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ಹದಗೆಡಬಹುದು

ಶಂಖ: ಪೂಜಾ ಕೋಣೆಯಲ್ಲಿ ಶಂಖವನ್ನು ಇಡುವುದು ತುಂಬಾ ಶ್ರೇಯಸ್ಕರ ಎನ್ನುತ್ತಾರೆ ಹಿರಿಯರು. ಪೂಜಾ ಮಂದಿರದಲ್ಲಿ ಶಂಖ ಇದ್ದರೆ ಸುಖ, ಸಂಪತ್ತು ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಕಲಶ: ಪೂಜೆಯ ವೇಳೆ ಮೂರ್ತಿಗಳ ಮುಂದೆ ನೀರು ತುಂಬಿದ ಕಲಶವನ್ನು ಇಟ್ಟರೆ ಮನೆಯಲ್ಲಿ ಆರ್ಥಿಕ ಸಮಸ್ಯೆಯಿಲ್ಲದೆ ನೆಮ್ಮದಿಯ ವಾತಾವರಣ ಇರುತ್ತದೆ ಎಂದು ಹೇಳಲಾಗುತ್ತದೆ. ಏಕೆಂದರೆ ಕಲಶವನ್ನೇ ವಿಘ್ನೇಶ್ವರನ ಸಂಕೇತವೆಂದು ಪರಿಗಣಿಸಲಾಗಿದೆ.

Also read: ಮಕ್ಕಳ ಅಧ್ಯಯನಕ್ಕಾಗಿ ವಾಸ್ತು ಸಲಹೆಗಳು: ಮಕ್ಕಳು ಏಕಾಗ್ರತೆಯಿಂದ ವ್ಯಾಸಂಗ ಮಾಡಲು ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು?

ಗಂಗಾಜಲ: ಹಿಂದೂ ಧರ್ಮದಲ್ಲಿ ಗಂಗಾಜಲ ಅತ್ಯಂತ ಪವಿತ್ರವಾದುದು. ಪೂಜಾ ಕೋಣೆಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿ ಈ ನೀರನ್ನು ಇಡುವುದರಿಂದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ ಎಂದು ಹಿರಿಯರು ನಂಬುತ್ತಾರೆ.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!