Akshaya Tritiya: ಅಕ್ಷಯ ತೃತೀಯಕ್ಕೆ ಸ್ಟಾಕ್ ಎಕ್ಸ್​ಚೇಂಜ್​ನಿಂದಲೇ ಖರೀದಿಸಬಹುದು ಸವರನ್ ಗೋಲ್ಡ್​ ಬಾಂಡ್

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡಿದ್ದರೆ ಶುಭ ಎಂಬುದು ಧಾರ್ಮಿಕ ನಂಬಿಕೆ. ಆದರೆ ಅದು ಯಾವ ಸ್ವರೂಪದಲ್ಲಿ ಇದ್ದರೂ ಓಕೆ ಅಂದುಕೊಳ್ಳುವವರಿಗೆ ಇಲ್ಲಿದೆ ಸವರನ್ ಗೋಲ್ಡ್ ಬಾಂಡ್ ಆಯ್ಕೆ.

Akshaya Tritiya: ಅಕ್ಷಯ ತೃತೀಯಕ್ಕೆ ಸ್ಟಾಕ್ ಎಕ್ಸ್​ಚೇಂಜ್​ನಿಂದಲೇ ಖರೀದಿಸಬಹುದು ಸವರನ್ ಗೋಲ್ಡ್​ ಬಾಂಡ್
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 10, 2021 | 11:33 AM

ಚಿನ್ನದ ಖರೀದಿಗೆ ಭಾರತೀಯರಿಗೆ ಕಾರಣ ಬೇಕಾ? ಅದರಲ್ಲೂ ಅಕ್ಷಯ ತೃತೀಯ ಬಂದರಂತೂ ಕೇಳುವುದೇ ಬೇಡ. ಇನ್ನು ಕಳೆದ ಕೆಲವು ವರ್ಷಗಳಲ್ಲಿ ಬಾಂಡ್​ಗಳು ಅಥವಾ ಫಂಡ್​ಗಳ ಮೂಲಕವಾದರೂ ಚಿನ್ನದ ಮೇಲೆ ಹೂಡಿಕೆ ಮಾಡಿರುವವರಿಗೂ ಒಳ್ಳೆ ರಿಟರ್ನ್ಸ್ ಸಿಕ್ಕಿದೆ. ಈಗಿನ ಹಣಕಾಸು ವರ್ಷ (2021- 22)ದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸವರನ್ ಗೋಲ್ಡ್ ಬಾಂಡ್ಸ್ (SGB) ವಿತರಣೆ ಸ್ಕೀಮ್​ನೊಂದಿಗೆ ಬರಬೇಕಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಗೋಲ್ಡ್ ಬಾಂಡ್ ವಿತರಿಸಿತ್ತು. 2015ರ ನವೆಂಬರ್​ನಲ್ಲಿ SGB ಮೊದಲು ಆರಂಭವಾದಾಗಿನಿಂದ ಹೂಡಿಕೆದಾರರಿಗೆ ಒಳ್ಳೆ ರಿಟರ್ನ್ಸ್ ಸಿಕ್ಕಿದೆ. ಈ ತನಕ 49 ಕಂತುಗಳಲ್ಲಿ SGB ವಿತರಣೆ ಆಗಿದೆ. ಸರಾಸರಿ 1.25 ಟನ್​ಗಳಷ್ಟು ಮೌಲ್ಯದ ಚಿನ್ನವನ್ನು ಪೇಪರ್ ಅಥವಾ ಡಿಜಿಟಲ್ ರೂಪದಲ್ಲಿ ಪ್ರತಿ ಸಲ ಹಂಚಲಾಗಿದೆ.

2021-22ರಲ್ಲಿ ಇನ್ನೂ ಬಾಂಡ್ ವಿತರಿಸದಿದ್ದರೂ ಸ್ಟಾಕ್ ಎಕ್ಸ್​ಚೇಂಕ್​ಗಳಾದ ಬಿಎಸ್​ಇ ಮತ್ತು ಎನ್​ಎಸ್​ಇ ಮೂಲಕವಾಗಿ ಖರೀದಿಸಬಹುದು. ಇವುಗಳು ಲಿಸ್ಟೆಡ್ ಆಗಿದ್ದು, ನಗದು ಸೆಗ್ಮೆಂಟ್​ನಲ್ಲೇ ಈಕ್ವಿಟಿ ಷೇರುಗಳ ಜತೆಯಲ್ಲೇ ವಹಿವಾಟು ನಡೆಸುತ್ತವೆ. ರೀಟೇಲ್ ಹೂಡಿಕೆದಾರರು ಡಿಮ್ಯಾಟ್ ಖಾತೆ ಮೂಲಕವಾಗಿ ಖರೀದಿ ಮತ್ತು ಮಾರಾಟ ಮಾಡಬಹುದು. ಸವರನ್ ಗೋಲ್ಡ್ ಬಾಂಡ್​ಗಳು ಕೂಪನ್ ರೇಟ್​ನೊಂದಿಗೆ ಬರುತ್ತವೆ. ಎಕ್ಸ್​ಚೇಂಜ್​ನಲ್ಲಿ ಲಿಸ್ಟ್​ ಆಗಿವುದು ಮಾರುಕಟ್ಟೆ ದರದಲ್ಲಿ. ಆದರೆ ಯಾವಾಗ ಎಕ್ಸ್​ಚೇಂಜ್​ನಲ್ಲೇ ಖರೀದಿ ಮಾಡುತ್ತೀರೋ ಎರಡು ಮೂರು ಅಂಶಗಳು ಮುಖ್ಯವಾಗುತ್ತವೆ.

ಮಾರಾಟ ಮಾಡುವವರು ಮಾರುಕಟ್ಟೆಯಲ್ಲಿ ಇರಬೇಕು ನಗದೀಕರಣ ಅತಿ ಮುಖ್ಯವಾಗುತ್ತದೆ. ನೀವು ಖರೀದಿ ಮಾಡಲು ಬಯಸುವಷ್ಟು ಸವರನ್ ಗೋಲ್ಡ್ ಬಾಂಡ್​ ಮಾರಾಟ ಮಾಡುವಂಥವರು ಮಾರ್ಕೆಟ್​ನಲ್ಲಿ ಇರಬೇಕು. ಈ ತನಕದ 49 ಸರಣಿಯ ಸವರನ್​ ಗೋಲ್ಡ್ ಬಾಂಡ್​ಗಳಲ್ಲಿ 19ರ ನಿತ್ಯದ ಸರಾಸರಿ ಪ್ರಮಾಣ 100 ಅಥವಾ ಅದಕ್ಕಿಂತ ಹೆಚ್ಚಿನ ಯೂನಿಟ್​ಗಳು ಎನ್​ಎಸ್​ಯಲ್ಲಿ ವಹಿವಾಟು ನಡೆಸುತ್ತವೆ. ಉದಾಹರಣೆಗೆ, SGB2020-21 Sr-V (NSE CODE: SGBAUG28V), SGB2020-21 Sr-XII (SGBMR29XII) ಮತ್ತು SGB2020-21 Sr-IV (SGBJUL28IV) ಪ್ರತಿ ನಿತ್ಯ ಸರಾಸರಿ 2,468, 656 ಮತ್ತು 600 ಯೂನಿಟ್ ವಹಿವಾಟು ನಡೆಸುತ್ತಿವೆ, ಅದೂ ಕಳೆದ ಮೂರು ತಿಂಗಳಲ್ಲಿ. ​

ಆದರೂ ಹಲವು SGBಗಳು ಕಡಿಮೆ ನಗದೀಕರಣದಿಂದ ಬಳಲುತ್ತಾ ಇವೆ. ಮಾರ್ಕೆಟ್ ದರ ಎಷ್ಟಿದೆಯೋ ಅಷ್ಟಕ್ಕೆ ಖರೀದಿಸಲು ಸಾಧ್ಯವಾಗದೆ ಸ್ವಲ್ಪ ಹೆಚ್ಚಿಗೆ ಪಾವತಿ ಮಾಡಬೇಕಾಗುತ್ತದೆ. ಈ ವ್ಯತ್ಯಾಸವನ್ನು ಬಿಡ್- ಆಫರ್ ಸ್ಪ್ರೆಡ್ ಅಥವಾ ಇಂಪ್ಯಾಕ್ಟ್ ಕಾಸ್ಟ್ ಎನ್ನಲಾಗುತ್ತದೆ. ಸ್ಪ್ರೆಡ್ ಕಡಿಮೆ ಆದಷ್ಟೂ ನಿಮಗೆ ಒಳ್ಳೆಯದು. ಇನ್ನು Yield to Maturity (YTM) ಮುಖ್ಯವಾಗುತ್ತದೆ. ಸೆಕೆಂಡರಿ ಮಾರ್ಕೆಟ್​ನಲ್ಲಿ ಬಾಂಡ್ ಖರೀದಿ ಮಾಡಿದಾಗ, ಬಾಂಡ್​ ಮೆಚ್ಯೂರಿಟಿ ಅವಧಿ ತನಕ ಇಟ್ಟುಕೊಂಡಲ್ಲಿ ಎಷ್ಟು ರಿಟರ್ನ್ ಸಿಗುತ್ತದೆ ಎಂದು ಅಂದಾಜು ಮಾಡಬಹುದು. ಸದ್ಯದ ಮಾರುಕಟ್ಟೆ ದರ, ಮೆಚ್ಯೂರಿಟಿ ಮೌಲ್ಯ ಮತ್ತು ಇತರ ಎಲ್ಲ ಕೂಪನ್ ಪಾವತಿಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧರಿಸಲಾಗುತ್ತದೆ.

IBJA ವೆಬ್​ಸೈಟ್​ನಲ್ಲಿ ಪ್ರಕಟಿಸುವ ದರದ ಜತೆಗೆ ಹೋಲಿಸಿ SGBಯಲ್ಲಿ ಮೆಚ್ಯೂರಿಟಿ ಮೊತ್ತ ಗೊತ್ತಿರುವುದಿಲ್ಲ. ಮೆಚ್ಯೂರಿಟಿ ಅವಧಿಯಲ್ಲಿ ಏನು ಬೆಲೆ ಇರುತ್ತದೋ ಅದರ ಆಧಾರದಲ್ಲಿ ರಿಡೆಂಪ್ಷನ್ ದರ ನಿಗದಿ ಆಗುತ್ತದೆ. 999 ಶುದ್ಧತೆಯ ಚಿನ್ನಕ್ಕೆ ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಆ ದರವನ್ನು ನಿಗದಿ ಮಾಡುತ್ತಾರೆ. SGBಯಲ್ಲಿ YTM ಪ್ರಸ್ತುತವೇ ಅಲ್ಲ. SGB ಮಾರ್ಕೆಟ್ ದರಗಳನ್ನು IBJA ವೆಬ್​ಸೈಟ್​ನಲ್ಲಿ ಪ್ರಕಟಿಸುವ ದರದ ಜತೆಗೆ ಹೋಲಿಸಿಕೊಳ್ಳಬಹುದು. ನಿಮಗೆ ಗೊತ್ತಿರಲಿ, ಐಬಿಜೆಎ ಪ್ರಕಟಿಸುವ 999 ಶುದ್ಧತೆಯ ಚಿನ್ನದ ದರವೇ SGBy ರೆಫರೆನ್ಸ್ ದರ. ಆ ಸಂದರ್ಭದಲ್ಲಿ SGB ಮಾರುಕಟ್ಟೆಯ ದರ ಹೆಚ್ಚೋ ಕಡಿಮೆಯೋ ಐಬಿಜೆಎ ದರವೇ ಅಂತಿಮ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಲವು SGBಗಳು ಉತ್ತಮ ನಗದೀಕರಣದೊಂದಿಗೆ, ಐಬಿಜೆಎ ದರಕ್ಕಿಂತ ಮೇಲ್ಮಟ್ಟದಲ್ಲಿ ವ್ಯವಹಾರ ನಡೆಸುತ್ತಿವೆ. SGBಗಳಿಗೆ ಹೆಚ್ಚಿನ ಬೇಡಿಕೆ ಇದೆ. ಎಕ್ಸ್​ಚೇಂಜ್​ಗಳ ಮೂಲಕವಾಗಿ ದಲ್ಲಾಳಿಗಳು SGB ಖರೀದಿಸಬಹುದು. ಈ ಹಿಂದೆ ಇಂಟರ್ ಡೆಪಾಸಿಟರಿ ವರ್ಗಾವಣೆ ಮತ್ತು ವಿಲೇವಾರಿಯ ಕಾರ್ಯ ನಿರ್ವಹಣೆ ಸಮಸ್ಯೆಗಳಿದ್ದವು. ಅದೀಗ ಬಗೆಹರಿದಿದೆ. SGB ಮೆಚ್ಯೂರಿಟಿ ಅವಧಿ ನೋಡಿಕೊಂಡು, ಹೂಡಿಕೆ ಮಾಡಬಹುದು.

ತೆರಿಗೆ ಲೆಕ್ಕಾಚಾರ ಹೇಗೆ ಮತ್ತು ಯಾವ ಸಂದರ್ಭದಲ್ಲಿ SGB ಪ್ರಾಥಮಿಕ ವಿತರಣೆಯನ್ನು ಆರ್​ಬಿಐ ವಿಳಂಬ ಮಾಡುತ್ತಿದೆ. ಅಂದಹಾಗೆ ಇದು ಭಾರತ ಸರ್ಕಾರದ ತೀರ್ಮಾನ ಆಗಿರುತ್ತದೆ. ಎಕ್ಸ್​ಚೇಂಜ್​ಗಳಲ್ಲಿ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಬಹುದು. ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದ್ದರಿಂದಾಗಿ SGBಗಳು ಅದ್ಭುತ ರೀಟರ್ನ್ಸ್ ನೀಡಿವೆ. 2019ರಿಂದ 2020ರ ತನಕ ಭರ್ಜರಿ ಏರಿಕೆ ಕಂಡ ಮೇಲೆ, ಎತ್ತರದಿಂದ ಇಳಿಕೆ ಕಾಣುತ್ತಾ ಬಂದಿದೆ. ಆದರೆ ಕಳೆದ ಒಂದು ತಿಂಗಳಿಂದ ಮತ್ತೆ ಚಿನ್ನ ಚೇತರಿಸಿಕೊಂಡಿದೆ. ಚಿನ್ನ ಹೂಡಿಕೆಯ ಬೇರೆ ವಿಧಾನಗಳಾದ ಇಟಿಎಫ್​ಗಳು ಮತ್ತು ಇ-ಗೋಲ್ಡ್​ಗಿಂತಲೂ SGBಯಲ್ಲಿ ಹೂಡಿಕೆ ಮಾಡುವುದಕ್ಕೆ ಆಸಕ್ತಿ ಹೆಚ್ಚಿದೆ. ಚಿನ್ನದ ಬೆಲೆ ಏರಿಕೆಯ ಜತೆಗೆ SGBಗೆ ಹೆಚ್ಚುವರಿಯಾಗಿ ಕೂಪನ್ ಪಾವತಿ ಇರುವುದರಿಂದ ಈ ರೀತಿ ಬೇಡಿಕೆ ಇದೆ.

ಮಾರುಕಟ್ಟೆ ಅಇನಿಶ್ಚಿತತೆಗೆ ಸಿಲುಕಿದಾಗ ಹೂಡಿಕೆದಾರರು ನೋಡುವುದೇ ಚಿನ್ನದ ಕಡೆಗೆ. ಯಾವುದೇ ಸಂದರ್ಭಕ್ಕೂ ನಿಮ್ಮ ಹೂಡಿಕೆ ಪೋರ್ಟ್​ಫೋಲಿಯೋದಲ್ಲಿ ಚಿನ್ನದ ಪ್ರಮಾಣ ಶೇ 5ರಿಂದ 10ರಷ್ಟು ಇರಬುಹುದು ಎನ್ನುತ್ತಾರೆ ವಿಶ್ಲೇಷಕರು. ಪ್ರಾಥಮಿಕ ಮಾರುಕಟ್ಟೆಯಲ್ಲಿ SGBಯನ್ನು ಖರೀದಿಸಿ, ಮೆಚ್ಯೂರಿಟಿ (8 ವರ್ಷ) ತನಕ ಇಟ್ಟುಕೊಂಡಿದ್ದಲ್ಲಿ ಮಾತ್ರ ಕ್ಯಾಪಿಟಲ್ ಗೇಯ್ನ್ಸ್​ನ ತೆರಿಗೆ ವಿನಾಯಿತಿ ಸಿಗುತ್ತದೆ.

ಇದನ್ನೂ ಓದಿ: Akshaya Tritiya 2021: ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಲು ಯಾವ ಮುಹೂರ್ತ ಒಳ್ಳೆಯದು?

( Akshaya Tritiya on May 14, 2021. You can invest in sovereign gold bonds (SGB) through stock exchanges, know how?)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್