Anant Chaturdashi 2023: ಅನಂತ ಚತುರ್ದಶಿ ಯಾವಾಗ? ಸಮಯ, ಪೂಜಾ ಆಚರಣೆ, ಮಹತ್ವ ಬಗ್ಗೆ ಇಲ್ಲಿದೆ ಮಾಹಿತಿ

ಅನಂತ ಚತುರ್ದಶಿ 2023: ಅನಂತ ಚತುರ್ದಶಿ ವಿಷ್ಣುವನ್ನು ಪೂಜಿಸಲು ಸಮರ್ಪಿತವಾದ ಪ್ರಮುಖ ಹಿಂದೂ ಹಬ್ಬವಾಗಿದೆ. ಈ ದಿನ ಅನಂತನನ್ನು ಪೂಜಿಸುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲದೆ ಈ ದಿನ, ಗಣೇಶ ವಿಸರ್ಜನೆಯನ್ನು ಸಹ ಮಾಡಲಾಗುತ್ತದೆ. ಈ ದಿನವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಪೂಜಾ ಆಚರಣೆ ಮತ್ತು ಮಹತ್ವ ಬಗ್ಗೆ ಇಲ್ಲಿದೆ ಮಾಹಿತಿ.

Anant Chaturdashi 2023: ಅನಂತ ಚತುರ್ದಶಿ ಯಾವಾಗ? ಸಮಯ, ಪೂಜಾ ಆಚರಣೆ, ಮಹತ್ವ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 27, 2023 | 6:43 PM

ಹಿಂದೂ ಧರ್ಮದಲ್ಲಿ ಅನಂತ ಚತುರ್ದಶಿಗೆ (Anant Chaturdashi) ಹೆಚ್ಚಿನ ಮಹತ್ವವಿದೆ. ಈ ದಿನವನ್ನು ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗಿದ್ದು ಬ್ರಹ್ಮಾಂಡದ ಸಂರಕ್ಷಕನಾದ ವಿಷ್ಣುವನ್ನು ಈ ದಿನ ಪೂಜಿಸಲಾಗುತ್ತದೆ. ದ್ರಿಕ್ ಪಂಚಾಂಗದ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯಂದು ಅನಂತ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಈ ವರ್ಷ, ಅನಂತ ಚತುರ್ದಶಿ ಸೆಪ್ಟೆಂಬರ್ 28 ರಂದು ಆಚರಣೆ ಮಾಡಲಾಗುತ್ತದೆ. ಅನಂತ ಚತುರ್ದಶಿಯ ಪೂಜಾ ಮುಹೂರ್ತ ಬೆಳಿಗ್ಗೆ 05:37 ಕ್ಕೆ ಆರಂಭವಾಗಿ ಸಂಜೆ 06: 49 ಕ್ಕೆ ಕೊನೆಗೊಳ್ಳಲಿದೆ.

ಅನಂತ ಚತುರ್ದಶಿ ಹಬ್ಬದ ಮಹತ್ವ:

ಅನಂತ ಚತುರ್ದಶಿ ಹಿಂದೂಗಳಲ್ಲಿ ಅಪಾರ ಮಹತ್ವವನ್ನು ಹೊಂದಿದೆ. ಅಂದು ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿಯೂ ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುವ ಒಂದು ಮಹತ್ವದ ಹಿಂದೂ ಹಬ್ಬವಾಗಿದೆ. ಈ ಶುಭ ದಿನವನ್ನು ವಿಷ್ಣುವನ್ನು ಪೂಜಿಸಲು ಅರ್ಪಿಸಲಾಗುತ್ತದೆ. ಭಗವಾನ್ ವಿಷ್ಣುವನ್ನು ಅನಂತ ಎಂದೂ ಕರೆಯುತ್ತಾರೆ, ಅಂದರೆ ಅಂತ್ಯವಿಲ್ಲ ಎಂಬ ಅರ್ಥ ನೀಡುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ವಿಷ್ಣು, ಅನಂತನ ರೂಪದಲ್ಲಿ ಸರ್ಪದ ಮೇಲೆ ಮಲಗುತ್ತಾನೆ ಮತ್ತು ಕ್ಷೀರ ಸಾಗರದಲ್ಲಿ (ಕ್ಷೀರ ಸಾಗರ) ನಿದ್ರೆಯಲ್ಲಿದ್ದಾಗ, ಅನಂತ ಎಂಬ ಸರ್ಪವು ಸುಮಂತ್ ಎಂಬ ಬ್ರಾಹ್ಮಣನಿಗೆ ವಿಷ್ಣುವಿನ ಕಥೆಯನ್ನು ವಿವರಿಸಲು ಪ್ರಾರಂಭಿಸಿತು ಎಂದು ನಂಬಲಾಗಿದೆ. ನಂತರ ವಿಷ್ಣುವಿನ ಕಥೆಗೆ “ಅನಂತ” ಎಂಬ ಹೆಸರು ಬಂದಿತು ಎನ್ನಲಾಗುತ್ತದೆ.

ಇದನ್ನೂ ಓದಿ: ಅನಂತ ಚತುರ್ದಶಿ ದಿನಾಂಕ, ಪೂಜಾ ವಿಧಾನ, ಮಹತ್ವದ ಕುರಿತು ಮಾಹಿತಿ ಇಲ್ಲಿದೆ

ಈ ಶುಭ ದಿನದಂದು, ಜನರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅನಂತನನ್ನು ಹೆಚ್ಚಿನ ಭಕ್ತಿ ಮತ್ತು ಸಮರ್ಪಣೆಯಿಂದ ಪೂಜಿಸುತ್ತಾರೆ. ಅಲ್ಲದೆ ಕಾಲ ಸರ್ಪ ದೋಷದಿಂದ ಬಳಲುತ್ತಿರುವ ಜನರು, ಸರ್ಪ ದೇವರನ್ನು ಮತ್ತು ವಿಷ್ಣುವನ್ನು ಪೂಜಿಸಬೇಕು ಮತ್ತು ಅದನ್ನು ತೊಡೆದು ಹಾಕಲು ಅವರ ಆಶೀರ್ವಾದವನ್ನು ಪಡೆಯಬೇಕು ಎಂದು ನಂಬಲಾಗಿದೆ. ಜೊತೆಗೆ ಅನಂತ ಚತುರ್ದಶಿಯಂದು, ಗಣೇಶ ವಿಸರ್ಜನೆಯನ್ನು ಬಹಳ ಆಡಂಬರದಿಂದ ಆಚರಿಸಲಾಗುತ್ತದೆ ಮತ್ತು ಗಣಪತಿಯನ್ನು ಭಕ್ತಿಯಿಂದ ಮುಳುಗಿಸಲಾಗುತ್ತದೆ. 10 ದಿನಗಳ ಕಾಲ ಗಣೇಶನನ್ನು ಪೂಜಿಸಿದ ನಂತರ, 11 ನೇ ದಿನ ಮುಂದಿನ ವರ್ಷ ಮತ್ತೆ ಬಾ ಎಂದು ಪ್ರೀತಿಯಿಂದ ಹೇಳುವ ಮೂಲಕ ಗಣೇಶನಿಗೆ ವಿದಾಯ ಹೇಳಲಾಗುತ್ತದೆ.

ಅನಂತ ಚತುರ್ದಶಿಯಂದು ಯಾವ ಮಂತ್ರ ಪಠಿಸಬೇಕು?

1. ಓಂ ನಮೋ ಭಗವತೇ ವಾಸುದೇವಾಯ

2. ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ ಹೇ ನಾಥ್ ನಾರಾಯಣ್ ವಾಸುದೇವ ಈ ಮಂತ್ರವನ್ನು ಅನಂತ ಚತುರ್ದಶಿಯಂದು ಪಠಣೆ ಮಾಡುವುದರಿಂದ ವಿಷ್ಣುವಿನ ಅನುಗ್ರಹವಾಗುತ್ತದೆ. ಜೊತೆಗೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್