AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Festivals In October 2023: ಅಕ್ಟೋಬರ್​​ನಲ್ಲಿ ಆಚರಣೆ ಮಾಡುವ ಹಬ್ಬಗಳಾವುವು? ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರತಿ ಹಬ್ಬವೂ ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಛಾಯೆಯನ್ನು ಪ್ರತಿಬಿಂಬಿಸುತ್ತದೆ. ಈ ಸಂದರ್ಭಗಳು ಜನರನ್ನು ಒಟ್ಟುಗೂಡಿಸುವಲ್ಲಿ ಮತ್ತು ತಲೆಮಾರುಗಳಿಂದ ರವಾನಿಸಲ್ಪಟ್ಟ ಸಂಪ್ರದಾಯಗಳನ್ನು ಆಚರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಬಾರಿ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಆಚರಣೆ ಮಾಡುವ ಹಬ್ಬಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Festivals In October 2023: ಅಕ್ಟೋಬರ್​​ನಲ್ಲಿ ಆಚರಣೆ ಮಾಡುವ ಹಬ್ಬಗಳಾವುವು? ಸಂಪೂರ್ಣ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 27, 2023 | 4:51 PM

Share

ಪ್ರತಿ ತಿಂಗಳೂ ಕೂಡ ಭಾರತೀಯ ಹಬ್ಬಗಳು ವೈವಿಧ್ಯಮಯವಾಗಿರುವುದನ್ನು ನಾವು ಕಾಣಬಹುದು. ಜೊತೆಗೆ ಪ್ರತಿ ಹಬ್ಬವೂ ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಛಾಯೆಯನ್ನು ಪ್ರತಿಬಿಂಬಿಸುತ್ತದೆ. ಈ ಸಂದರ್ಭಗಳು ಜನರನ್ನು ಒಟ್ಟುಗೂಡಿಸುವಲ್ಲಿ ಮತ್ತು ತಲೆಮಾರುಗಳಿಂದ ರವಾನಿಸಲ್ಪಟ್ಟ ಸಂಪ್ರದಾಯಗಳನ್ನು ಆಚರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಬಾರಿ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ತಿಳಿಯಿರಿ.

ಅಕ್ಟೋಬರ್ 2023ರ ಹಬ್ಬಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

ಅಕ್ಟೋಬರ್ 2: ಸಂಕಷ್ಟ ಚತುರ್ಥಿ

ಪ್ರತಿ ತಿಂಗಳ ಚತುರ್ಥಿ ತಿಥಿಯಂದು ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ಗಣಪತಿಯನ್ನು ಪೂಜಿಸುವುದರಿಂದ ಜೀವನದಲ್ಲಿನ ಸಕಲ ಸಂಕಷ್ಟಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣಕ್ಕಾಗಿ ಸಂಕಷ್ಟ ಚತುರ್ಥಿ ದಿನದಂದು ಹೆಚ್ಚಿನ ಜನರು ಗಣಪತಿ ಆರಾಧನೆಯನ್ನು ಮಾಡುತ್ತಾರೆ. ಈ ಬಾರಿಯ ಸಂಕಷ್ಟ ಚತುರ್ಥಿಯನ್ನು ಅಕ್ಟೋಬರ್ 2 ರಂದು ಆಚರಣೆ ಮಾಡಲಾಗುತ್ತದೆ.

ಅಕ್ಟೋಬರ್ 4: ಚಂದ್ರ ಷಷ್ಠಿ

ಭಗವಾನ್ ಶ್ರೀ ಕೃಷ್ಣನ ಅಣ್ಣ ಬಲರಾಮ ಅವರತಾರವೆತ್ತಿ ಭೂಮಿಗೆ ಬಂದ ದಿನವನ್ನು ಹಾಲ ಷಷ್ಠಿ ಅಥವಾ ‘ಚಂದ್ರ ಷಷ್ಠಿ’ ಅಥವಾ ಬಲರಾಮ ಜಯಂತಿಯನ್ನಾಗಿ ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಆರನೆಯ ದಿನದಂದು ಈ ಪವಿತ್ರ ದಿನವನ್ನು ಆಚರಿಸುತ್ತಾರೆ. ದೇಶದ ಬೇರೆ ಬೇರೆ ಭಾಗದಲ್ಲಿ ಇದನ್ನು ಬೇರೆ ಬೇರೆ ಹೆಸರುಗಳಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಅಕ್ಟೋಬರ್ 7: ಅವಿಧವಾ ನವಮಿ

ಭಾದ್ರಪದ ಮಾಸದ ಕೃಷ್ಣ ಪಕ್ಷವನ್ನು ಪಿತೃಪಕ್ಷ ಎಂದು ಕರೆಯುತ್ತಾರೆ. ಈ ಪಕ್ಷದಲ್ಲಿ ಪಿತೃ ಕಾರ್ಯಗಳನ್ನು ಮಾಡಲಾಗುತ್ತದೆ. ಇನ್ನು ಪಿತೃಪಕ್ಷದ ಒಂಭತ್ತನೇ ದಿನ ಅಂದರೆ ನವಮಿಯಂದು ಮಾಡುವ ಸಂಸ್ಕಾರವೇ ಅವಿಧವಾ ನವಮಿ ಶ್ರಾದ್ಧ. ಪತಿಗಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಈ ದಿನ ಮಾಡಲಾಗುತ್ತದೆ.

ಅಕ್ಟೋಬರ್ 10: ಸರ್ವೈಕಾದಶಿ

ಹಿಂದೂ ಧಾರ್ಮಿಕ ಪಂಚಾಗ ಪ್ರಕಾರ ಸರ್ವೈಕಾದಶಿಯಂದು ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ವ್ರತವನ್ನು ಆಚರಿಸುವುದರಿಂದ ಮತ್ತು ಕ್ರಮಬದ್ಧವಾಗಿ ಮಹಾವಿಷ್ಣುವನ್ನು ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಇಷ್ಟಾರ್ಥ ಎಲ್ಲಾ ಕಾರ್ಯಗಳು ನೆರವೇರುತ್ತವೆ.

ಅಕ್ಟೋಬರ್ 11: ಯತಿದ್ವಾದಶಿ ಅಥವಾ ಯತಿ ಮಹಾಲಯ

ಯತಿ ಮಹಾಲಯ ಅಥವಾ ದ್ವಾದಶಿ ಶ್ರಾದ್ಧವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ದ್ವಾದಶಿಯಂದು ಆಚರಿಸಲಾಗುತ್ತದೆ. ಯತಿ ಮಹಾಲಯವು ಮಹಾಲ್ಯ ಪಕ್ಷದ ಹನ್ನೆರಡನೇ ದಿನವಾಗಿದೆ. ಯತಿ ಮಹಾಲಯದಂದು ದೇಹವನ್ನು ತೊರೆದ ಋಷಿಗಳು ಅಥವಾ ಸಂತರಿಗೆ ಶ್ರಾದ್ಧವನ್ನು ನಡೆಸಲಾಗುತ್ತದೆ. ಈ ದಿನ ಯತಿಗಳಿಗೆ ಶ್ರಾದ್ಧವನ್ನು ನಡೆಸುವುದರಿಂದ ಇದನ್ನು ಯತಿ ಮಹಾಲ್ಯ ಎಂದು ಕರೆಯಲಾಗುತ್ತದೆ. ಈ ದಿನ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಅಥವಾ ಆಹಾರವನ್ನು ನೀಡಲಾಗುತ್ತದೆ.

ಅಕ್ಟೋಬರ್ 14: ಮಹಾಲಯ ಅಮವಾಸ್ಯೆ

ಪಿತೃ ಪಕ್ಷದ ಕೊನೆಯ ದಿನವನ್ನೇ ಮಹಾಲಯ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಇದನ್ನು ಸರ್ವಪಿತ್ರಿ ಅಮಾವಾಸ್ಯೆ ಅಥವಾ ಪಿತೃ ಪಕ್ಷ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ ಮತ್ತು ನಿಮ್ಮ ಅಗಲಿದ ಪೂರ್ವಜರಿಗೆ ತರ್ಪಣವನ್ನು ನೀಡಲು ಸೂಕ್ತ ದಿನವಾಗಿದೆ. ಈ ಬಾರಿ ಮಹಾಲಯ ಅಮಾವಾಸ್ಯೆಯನ್ನು ಅಕ್ಟೋಬರ್ 14 ರಂದು ಆಚರಿಸಲಾಗುತ್ತದೆ.

ಅಕ್ಟೋಬರ್ 15: ನವರಾತ್ರಿ ಆರಂಭ

ಹಿಂದೂಗಳಿಗೆ ಅತ್ಯಂತ ಶುಭಕರ ದಿನಗಳಲ್ಲಿ ನವರಾತ್ರಿ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ನವರಾತ್ರಿ ಒಂಬತ್ತು ದಿನಗಳ ಸುದೀರ್ಘ ಹಬ್ಬವಾಗಿದ್ದು ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಭಕ್ತಿಯಿಂದ ಆಚರಿಸುವುದರಿಂದ ಸುಖ, ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ಅಕ್ಟೋಬರ್ 15 ರಂದು ನವರಾತ್ರಿ ಆರಂಭವಾಗಿ ಅಕ್ಟೋಬರ್ 24 ರಂದು ಕೊನೆಗೊಳ್ಳಲಿದೆ.

ಅಕ್ಟೋಬರ್ 17: ತುಲಾ ಸಂಕ್ರಮಣ

ಹಿಂದೂಗಳು ನದಿಯನ್ನು ದೇವರಂತೆ ಪೂಜಿಸುತ್ತಾರೆ. ಹಾಗಾಗಿ ವರ್ಷಕ್ಕೊಮ್ಮೆ ಕಾವೇರಿ ಸಂಕ್ರಮಣ ಅಥವಾ ತುಲಾ ಸಂಕ್ರಮಣವನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 17 ರಂದು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಅಕ್ಟೋಬರ್ 19: ಲಲಿತಾ ಪಂಚಮಿ

ನವರಾತ್ರಿ ಹಬ್ಬದ 5 ನೇ ದಿನವನ್ನು ಲಲಿತಾ ಪಂಚಮಿ ಎಂದು ಆಚರಿಸಲಾಗುತ್ತದೆ. ಈ ದಿನದಂದು ಸತಿ ದೇವಿಯ ರೂಪವಾದ ಲಲಿತಾ ದೇವಿಯನ್ನು ಪೂಜಿಸಲಾಗುತ್ತದೆ. ಈ ಬಾರಿ ಲಲಿತಾ ಪಂಚಮಿಯನ್ನು ಅಕ್ಟೋಬರ್ 19 ರಂದು ಗುರುವಾರ ಆಚರಿಸಲಾಗುತ್ತದೆ.

ಅಕ್ಟೋಬರ್ 20: ಶಾರದಾ ಪ್ರತಿಷ್ಠೆ

ನವರಾತ್ರಿಯ ಆರನೇ ದಿನದಂದು ಮನೆ ಮನೆಯಲ್ಲಿ ಶಾರದೇಯ ಪ್ರತಿಷ್ಠಾಪನೆ ಮಾಡಿ ವಿದ್ಯೆ, ಬುದ್ದಿ ಕೊಡು ಎಂದು ಬೇಡಿಕೊಳ್ಳುವುದರ ಜೊತೆಗೆ ಪುಸ್ತಕವನ್ನಿಟ್ಟು ಪೂಜೆ ಮಾಡಲಾಗುತ್ತದೆ. ಈ ದಿನ ಶಾರದೆಯನ್ನು ಭಕ್ತಿಯಿಂದ ಮೆಚ್ಚಿಸುವುದರಿಂದ ವಿದ್ಯಾ ಬುದ್ದಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಅಕ್ಟೋಬರ್ 22: ದುರ್ಗಾಷ್ಟಮಿ ಅಥವಾ ಜೀವದಯಾಷ್ಟಮಿ

ನವರಾತ್ರಿಯ ಎಂಟನೇ ದಿನದಂದು, ದುರ್ಗಾ ದೇವಿಯ ಎಂಟನೇ ಶಕ್ತಿಯಾದ ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಕೈಗೊಳ್ಳುವ ಪೂಜೆಯಿಂದ ಭಕ್ತರಿಗೆ ಬಹಳಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಭಕ್ತರ ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ತಾಯಿ ಗೌರಿ ಪರಿಹರಿಸಿ ತನ್ನ ಆಶೀರ್ವಾದದಿಂದ ದುಃಖಗಳನ್ನು ದೂರ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಈ ದಿನ ಆಕೆಗೆ ಪ್ರೀಯವಾದ ತೆಂಗಿನಕಾಯಿ ಮತ್ತು ತೆಂಗಿನಕಾಯಿಯಿಂದ ಮಾಡಿದ ಪದಾರ್ಥಗಳನ್ನು ಮಾತೆ ಗೌರಿಗೆ ಅರ್ಪಿಸಲಾಗುತ್ತದೆ.

ಇದನ್ನೂ ಓದಿ:ಗೋಂದೋಲು ಆಚರಣೆ: ಬಡವರ ಹಬ್ಬಗಳು ಶ್ರೀಮಂತವಾಗಿರುತ್ತವೆ! ಇಂತಹ ಆಚರಣೆಗಳೇ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಗೆ ಆಧಾರ

ಅಕ್ಟೋಬರ್ 23: ಮಹಾನವಮಿ, ಶಾರದಾ ವಿಸರ್ಜನೆ, ಆಯುಧ ಪೂಜೆ

ಆಯುಧ ಪೂಜೆಯು ನವರಾತ್ರಿ ಹಬ್ಬದ 9ನೇ ದಿನದಂದು ಅಂದರೆ ಮಹಾನವಮಿಯಂದು ಆಚರಣೆ ಮಾಡಲಾಗುತ್ತದೆ. ನವಮಿ ತಿಥಿಯಂದು ಆಯುಧಪೂಜೆ ಮಾಡಲಾಗುತ್ತದೆ. ಆಯುಧ ಪೂಜೆಯನ್ನು ಶಸ್ತ್ರಪೂಜೆ ಮತ್ತು ಅಸ್ತ್ರಪೂಜೆ ಎಂದೂ ಕರೆಯುತ್ತಾರೆ. ಈ ದಿನದಂದು ಶಾರದಾ ವಿಸರ್ಜನೆ ಕೂಡ ನಡೆಯುತ್ತದೆ.

ಅಕ್ಟೋಬರ್ 24: ವಿಜಯದಶಮಿ ಅಥವಾ ವಿದ್ಯಾದಶಮಿ

ವಿಜಯದಶಮಿ ನವರಾತ್ರಿಯ ಕೊನೆಯ ದಿನ. ಈ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದಸರಾ ದಿನದಂದು ಶಮೀ ವೃಕ್ಷವನ್ನು ಅಥವಾ ಬನ್ನಿ ಮರವನ್ನು ಪೂಜಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ. ಈ ಬಾರಿ ವಿಜಯದಶಮಿಯನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ.

ಅಕ್ಟೋಬರ್ 28: ಖಂಡಗ್ರಾಸ ಚಂದ್ರಗ್ರಹಣ

ಖಂಡಗ್ರಾಸ ಚಂದ್ರಗ್ರಹಣ ಅಕ್ಟೋಬರ್ 28 ರಂದು ಗೋಚರವಾಗಲಿದೆ. ಈ ಪೆನಂಬ್ರಲ್ ಗ್ರಹಣವು ಅಕ್ಟೋಬರ್ 28 ರಂದು ರಾತ್ರಿ 11 ಗಂಟೆಗೆ ಆರಂಭವಾಗಿ ಮಧ್ಯರಾತ್ರಿ 3. 56ಕ್ಕೆ ಮುಕ್ತಾಯಗೊಳ್ಳಲಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ