Best Vastu Plants: ವಾಸ್ತು ಪ್ರಕಾರ ಮನೆಯಲ್ಲಿ ಈ ಸಸ್ಯಗಳಿದ್ದರೆ ಸಂಪತ್ತಿಗೆ ಎಂದಿಗೂ ಕೊರತೆಯಾಗದು
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ, ಬೇವು, ಮನಿ ಪ್ಲಾಂಟ್ ಮತ್ತು ಅಂಜೂರದ ಮರಗಳನ್ನು ಬೆಳೆಸುವುದರಿಂದ ಅದೃಷ್ಟ, ಸಂಪತ್ತು ಮತ್ತು ಯಶಸ್ಸು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಈ ಪವಿತ್ರ ಸಸ್ಯಗಳು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತವೆ. ಈ ಲೇಖನದಲ್ಲಿ ಈ ಸಸ್ಯಗಳ ಪ್ರಯೋಜನಗಳ ಬಗ್ಗೆ ತಿಳಿಸಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ಪವಿತ್ರ ಸಸ್ಯಗಳನ್ನು ಬೆಳೆಸುವುದರಿಂದ ಅದೃಷ್ಟ, ಯಶಸ್ಸು ಮತ್ತು ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ. ಈ ಸಸ್ಯಗಳು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಡುವುದರಿಂದ ಸುತ್ತಮುತ್ತಲಿನ ಶುಭ ಶಕ್ತಿ ಮತ್ತು ಸುಖ-ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅಂತಹ ಸಸ್ಯಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವಾಸ್ತು ಪ್ರಕಾರ ಮನೆಯಲ್ಲಿ ಇರಬೇಕಾದ ಸಸ್ಯಗಳಿವು:
ತುಳಸಿ ಗಿಡ:
ತುಳಸಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ತುಳಸಿ ಬೆಳೆಸುವುದರಿಂದ ಗಾಳಿ ಶುದ್ಧವಾಗಿಸಿ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮನೆಗೆ ಶಾಂತಿಯನ್ನು ತರುತ್ತದೆ. ಮನೆಯಲ್ಲಿರುವ ತುಳಸಿ ಶುದ್ಧತೆ ಮತ್ತು ರಕ್ಷಣೆಯ ಸಂಕೇತವಾಗಿದೆ.
ಬೇವಿನ ಮರ:
ಬೇವಿನ ಮರವು ಆರೋಗ್ಯ ಪ್ರಯೋಜನಗಳ ಜೊತೆಗೆ ಶುಭ ಶಕ್ತಿಯನ್ನು ಸಹ ಹೊಂದಿದೆ. ಇದನ್ನು ಹಳ್ಳಿಯ ಔಷಧಾಲಯ ಎಂದು ಕರೆಯಲಾಗುತ್ತದೆ. ಪೂಜೆಗಳು ಮತ್ತು ಹಬ್ಬಗಳಲ್ಲಿ ಬೇವಿನ ಎಲೆಗಳು ಮತ್ತು ಕೊಂಬೆಗಳನ್ನು ಬಳಸಲಾಗುತ್ತದೆ. ಇದು ದುಷ್ಟಶಕ್ತಿಗಳನ್ನು ಓಡಿಸುತ್ತದೆ. ಮನೆಯಲ್ಲಿ ಬೇವಿನ ಮರವನ್ನು ಬೆಳೆಸುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ ಎಂದು ನಂಬಲಾಗಿದೆ.
ಆಲದ ಮರ:
ಆಲದ ಮರವು ಶಿವನನ್ನು ಪ್ರತಿನಿಧಿಸುತ್ತದೆ. ಇದು ದೀರ್ಘಕಾಲ ಬಾಳುವ ಮರವಾಗಿದ್ದು, ಆದ್ದರಿಂದ ಇದನ್ನು ಶಾಶ್ವತತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದರ ಉಪಸ್ಥಿತಿಯಲ್ಲಿ ಸ್ಥಿರತೆ ಇರುತ್ತದೆ. ಮನೆಯಲ್ಲಿ ಏಕತೆ ಹೆಚ್ಚಾಗುತ್ತದೆ. ಇದು ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಸೂರ್ಯ ಮೃಗಶಿರ ನಕ್ಷತ್ರಕ್ಕೆ ಪ್ರವೇಶ; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ
ಮನಿ ಪ್ಲಾಂಟ್:
ಮನಿ ಪ್ಲಾಂಟ್ ಅನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನಿ ಪ್ಲಾಂಟ್ ಬಹಳ ಸುಲಭವಾಗಿ ಬೆಳೆಯುತ್ತದೆ. ಇದನ್ನು ಮನೆಯಲ್ಲಿ ಇಟ್ಟರೆ ಹಣ ಹೇರಳವಾಗಿ ಬರುತ್ತದೆ ಎಂದು ನಂಬಲಾಗಿದೆ. ಇದು ಹಣಕ್ಕೆ ಸಂಬಂಧಿಸಿದ ನಮ್ಮ ಆಕಾಂಕ್ಷೆಗಳನ್ನು ಬಲಪಡಿಸುತ್ತದೆ ಮತ್ತು ಉತ್ತಮ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ಅಂಜೂರದ ಮರ:
ಆಯುರ್ವೇದದಲ್ಲಿ ಅಂಜೂರದ ಮರವನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಇದರ ತೊಗಟೆ ಮತ್ತು ಎಲೆಗಳನ್ನು ಆರೋಗ್ಯ ಪ್ರಯೋಜನಗಳಿಗಾಗಿ ಬಳಸಲಾಗುತ್ತದೆ. ಇದು ಶಿವನಿಗೆ ಸಂಬಂಧಿಸಿದ ಸಸ್ಯವಾಗಿದೆ. ಮನೆಯಲ್ಲಿ ಈ ಮರವನ್ನು ಬೆಳೆಸುವುದರಿಂದ ಧೈರ್ಯ ಹೆಚ್ಚಾಗುತ್ತದೆ. ಇದು ಸ್ಥಿರವಾದ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಇದು ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




