AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Vastu Tips: ವಾಸ್ತು ಪ್ರಕಾರ ಅಡುಗೆಮನೆಗೆ ಯಾವ ಬಣ್ಣಗಳು ಶುಭ? ಯಾವುದು ಅಶುಭ?

ಅಡುಗೆಮನೆಯ ವಾಸ್ತು ಪ್ರಕಾರ, ಒಲೆಯ ಸ್ಥಾನ ಮತ್ತು ಗೋಡೆಗಳ ಬಣ್ಣಗಳು ಬಹಳ ಮುಖ್ಯ. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರುವ ಒಲೆಗೆ ಹಸಿರು ಬಣ್ಣ, ದಕ್ಷಿಣ ಅಥವಾ ನೈಋತ್ಯಕ್ಕೆ ಹಳದಿ ಬಣ್ಣ ಉತ್ತಮ. ಹಳದಿ, ಗುಲಾಬಿ, ಕಿತ್ತಳೆ, ಕೆಂಪು ಒಳ್ಳೆಯದು, ಆದರೆ ಕಪ್ಪು ಬಣ್ಣವನ್ನು ತಪ್ಪಿಸಬೇಕು. ಸಕಾರಾತ್ಮಕ ಶಕ್ತಿಗೆ ಸುಣ್ಣ ಬಳಸುವುದು ಒಳ್ಳೆಯದು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

Kitchen Vastu Tips: ವಾಸ್ತು ಪ್ರಕಾರ ಅಡುಗೆಮನೆಗೆ ಯಾವ ಬಣ್ಣಗಳು ಶುಭ? ಯಾವುದು ಅಶುಭ?
Kitchen Vastu Tips
ಅಕ್ಷತಾ ವರ್ಕಾಡಿ
|

Updated on:May 31, 2025 | 11:34 AM

Share

ಅಡುಗೆಮನೆಗೆ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂದು ತಜ್ಞರು ಹೇಳುತ್ತಾರೆ. ಒಂದು ಮನೆಯಲ್ಲಿ ಎಷ್ಟೇ ಕೋಣೆಗಳಿದ್ದರೂ, ಅಡುಗೆ ಮನೆ ತುಂಬಾ ತುಂಬಾ ವಿಶೇಷವಾದದ್ದು. ಅದಕ್ಕಾಗಿಯೇ ಅಡುಗೆಮನೆ ಮತ್ತು ಅದರಲ್ಲಿ ಅಳವಡಿಸಲಾದ ಗ್ಯಾಸ್ ಸ್ಟೌವ್ ಸೇರಿದಂತೆ ಎಲ್ಲದಕ್ಕೂ ವಿಶೇಷ ಗಮನ ನೀಡಲಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ಇಡಬೇಕಾದ ಮತ್ತು ಇಡಬಾರದ ಕೆಲವು ವಸ್ತುಗಳು ಇವೆ. ನೀವು ಅಡುಗೆಮನೆಯಲ್ಲಿ ಇಡುವ ವಸ್ತುಗಳಿಗೆ ಮಾತ್ರವಲ್ಲ, ಅದರಲ್ಲಿ ಬಳಸುವ ಬಣ್ಣಗಳಿಗೂ ವಿಶೇಷ ಗಮನ ನೀಡಬೇಕು. ವಾಸ್ತು ಪ್ರಕಾರ ಅಡುಗೆಮನೆಗೆ ಯಾವ ಪೈಂಟ್​​ ಉತ್ತಮ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಾಸ್ತವವಾಗಿ, ಬಣ್ಣಗಳು ನಮ್ಮ ಸುತ್ತಲಿನ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಮನೆ ಕಟ್ಟುವಾಗ ಅಥವಾ ಅಡುಗೆಮನೆಯನ್ನು ಅಲಂಕರಿಸುವಾಗ, ದಿಕ್ಕು ಮತ್ತು ಬಣ್ಣವನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆ. ಅಡುಗೆಮನೆಯಲ್ಲಿ ಒಲೆ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿದ್ದರೆ, ಅದರ ಸುತ್ತಲೂ ಹಸಿರು ಬಣ್ಣ ಬಳಿಯಿರಿ. ಈ ಬಣ್ಣವು ಅಲ್ಲಿನ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.

ಇದನ್ನೂ ಓದಿ: ಸೂರ್ಯ ಮೃಗಶಿರ ನಕ್ಷತ್ರಕ್ಕೆ ಪ್ರವೇಶ; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ

ಇದನ್ನೂ ಓದಿ
Image
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
Image
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
Image
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
Image
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಅಗ್ಗಿಷ್ಟಿಕೆ(ಗೃಹಾಗ್ನಿ) ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಿಸಿದ್ದರೆ, ಈ ಗೋಡೆಗೆ ಹಳದಿ ಬಣ್ಣ ಬಳಿಯುವುದು ಪ್ರಯೋಜನಕಾರಿ. ಹಳದಿ ಬಣ್ಣವು ಶಾಖ ಮತ್ತು ಶಕ್ತಿಯನ್ನು ನಿಯಂತ್ರಿಸುತ್ತದೆ. ಇದು ಅಡುಗೆಮನೆಯಲ್ಲಿ ಶಾಖವನ್ನು ಸಮತೋಲನದಲ್ಲಿಡುತ್ತದೆ.

ಅಡುಗೆ ಕೋಣೆಯ ಗೋಡೆಯ ಬಣ್ಣ ಹಳದಿ, ಗುಲಾಬಿ, ಕಿತ್ತಳೆ, ಕೆಂಪು ಹಾಗೂ ಚಾಕೋಲೇಟ್‌ ಬಣ್ಣವಾಗಿದ್ದರೆ ಒಳ್ಳೆಯದು. ಎಂದಿಗೂ ಕಪ್ಪು ಬಣ್ಣವನ್ನು ಗೋಡೆಗೆ ಬಳಸದಿರಿ. ಹಳ್ಳಿಗಳಲ್ಲಿ ವಾಸಿಸುವ ಜನರು ಅಡುಗೆಮನೆಗೆ ಸುಣ್ಣ ಬಳಸುತ್ತಿದ್ದರು, ಇದು ಸುಂದರವಾಗಿ ಕಾಣುವಂತೆ ಮಾಡುವುದಲ್ಲದೆ, ಸಕಾರಾತ್ಮಕ ಶಕ್ತಿಯನ್ನು ತರುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 am, Sat, 31 May 25