AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ನಿಮ್ಮ ಈ ಮೂರು ಕೆಟ್ಟ ಅಭ್ಯಾಸಗಳೇ ನರಕ ಪ್ರಾಪ್ತಿಗೆ ಕಾರಣ!

ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಹಾಭಾರತದಿಂದ ಉಲ್ಲೇಖಿಸಿ, ಮೂರು ತಪ್ಪುಗಳನ್ನು ಮಾಡದಿದ್ದರೆ ನರಕ ಪ್ರಾಪ್ತಿಯಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಆ ಮೂರು ತಪ್ಪುಗಳು ಕಾಮ, ಕ್ರೋಧ ಮತ್ತು ಅತಿಯಾದ ಆಸೆ (ದುರಾಸೆ). ಈ ತಪ್ಪುಗಳನ್ನು ನಿಯಂತ್ರಿಸುವುದರಿಂದ ಸುಖ ಮತ್ತು ಸಂತೋಷದ ಜೀವನವನ್ನು ನಡೆಸಲು ಸಾಧ್ಯ ಎಂದು ಅವರು ವಿವರಿಸಿದ್ದಾರೆ.

Daily Devotional: ನಿಮ್ಮ ಈ ಮೂರು ಕೆಟ್ಟ ಅಭ್ಯಾಸಗಳೇ ನರಕ ಪ್ರಾಪ್ತಿಗೆ ಕಾರಣ!
Daily Devotional
ಅಕ್ಷತಾ ವರ್ಕಾಡಿ
|

Updated on:Jun 05, 2025 | 8:36 AM

Share

ಖ್ಯಾತ ಜ್ಯೋತಿಷಿಗಳಾದ ಡಾ. ಬಸವರಾಜ್ ಗುರೂಜಿಯವರ ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ, ನರಕ ಪ್ರಾಪ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಾಭಾರತದ ಯುದ್ಧದ ಸನ್ನಿವೇಶವನ್ನು ಆಧಾರವಾಗಿಟ್ಟುಕೊಂಡು, ನರಕ ಪ್ರಾಪ್ತಿಗೆ ಕಾರಣವಾಗುವ ಕಾಮ, ಕ್ರೋಧ ಮತ್ತು ಅತಿಯಾದ ಆಸೆ (ದುರಾಸೆ) ತ್ಯಜಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕಾಮ ಎಂದರೆ ಕೇವಲ ಲೈಂಗಿಕ ಆಸೆಯಲ್ಲ. ಇದು ಹಣದಾಸೆ, ಸ್ಥಾನಮಾನದ ಬಯಕೆ, ಅತಿಯಾದ ಆಕಾಂಕ್ಷೆಗಳನ್ನು ಒಳಗೊಂಡಿದೆ. ಈ ಆಸೆಗಳನ್ನು ನಿಯಂತ್ರಿಸದಿದ್ದರೆ, ಅದು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ರಾವಣನ ಉದಾಹರಣೆಯನ್ನು ಗಮನಿಸಬಹುದು. ತನ್ನ ಅತಿಯಾದ ಕಾಮದಿಂದಾಗಿ ಆತ ತನ್ನ ಸಾಮ್ರಾಜ್ಯವನ್ನೇ ಕಳೆದುಕೊಂಡ ಎಂದು ಗುರೂಜಿ ವಿವರಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
Image
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
Image
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
Image
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಕ್ರೋಧವು ಇನ್ನೊಂದು ಪ್ರಮುಖ ಅಂಶ. ಅತಿಯಾದ ಕೋಪವು ಇತರರಿಗೆ ಮಾತ್ರವಲ್ಲದೆ, ನಮ್ಮದೇ ಆರೋಗ್ಯಕ್ಕೂ ಹಾನಿಕಾರಕ. ಕೋಪದಿಂದ ಮಾಡುವ ಕೆಲಸಗಳು ನಮಗೆ ನರಕದಂತಹ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ. ಇದಲ್ಲದೇ ಅತಿಯಾದ ಆಸೆ ಅಥವಾ ದುರಾಸೆಯು ರಾಜಕೀಯ ಅಥವಾ ವ್ಯಾಪಾರದಲ್ಲಿಯೂ ಕಾಣಬಹುದು. ಸ್ಥಾನ, ಐಶ್ವರ್ಯ, ಸಂಪತ್ತಿನ ಬೆನ್ನಟ್ಟುವಿಕೆಯು ಅನೇಕ ಬಾರಿ ಅನೈತಿಕ ಮಾರ್ಗಗಳಿಗೆ ಕಾರಣವಾಗುತ್ತದೆ. ಅಂತಿಮವಾಗಿ ಇದು ದುಃಖ ಮತ್ತು ನಷ್ಟವನ್ನು ತರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಈ ಪುರಾತನ ದೇವಾಲಯದಲ್ಲಿದೆ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ!

ಆದ್ದರಿಂದ ಈ ಮೂರು ತಪ್ಪುಗಳನ್ನು ನಿಯಂತ್ರಿಸಿ, ಸಮತೋಲಿತ ಜೀವನವನ್ನು ನಡೆಸುವುದರಿಂದ ನಾವು ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ಸಾಧಿಸಬಹುದು. ಜೀವನದಲ್ಲಿ ಸಕಾರಾತ್ಮಕ ಚಿಂತನೆ, ಧ್ಯಾನ ಮತ್ತು ಆತ್ಮಶುದ್ಧಿಯಿಂದ ಈ ತಪ್ಪುಗಳನ್ನು ಜಯಿಸಲು ಸಾಧ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:35 am, Thu, 5 June 25