ಧನ್ವಂತರಿ ಮಹಾವಿಷ್ಣುವಿನ ಈ ಮಂತ್ರ ಹೇಳಿ ಅಥವಾ ಕೇಳಿಸಿಕೊಳ್ಳಿ; ರೋಗಬಾಧೆಗಳಿಂದ ರಕ್ಷಣೆ ಪಡೆಯಿರಿ

ಕೊರೊನಾ ಎರಡನೇ ಅಲೆಯಲ್ಲಿ ಭಾರತದಾದ್ಯಂತ ಜನರು ತತ್ತರಿಸುತ್ತಿದ್ದಾರೆ. ರೋಗ ಬಾಧೆಯಿಂದ ರಕ್ಷಣೆ ನೀಡುವ ಧನ್ವಂತರಿ ಮಹಾವಿಷ್ಣುವಿನ ಮೂಲಮಂತ್ರವನ್ನು ಇಲ್ಲಿ ನೀಡಲಾಗಿದ್ದು, ಪಠಣ- ಶ್ರವಣದಿಂದ ಉತ್ತಮ ಫಲ ಪಡೆಯಿರಿ.

ಧನ್ವಂತರಿ ಮಹಾವಿಷ್ಣುವಿನ ಈ ಮಂತ್ರ ಹೇಳಿ ಅಥವಾ ಕೇಳಿಸಿಕೊಳ್ಳಿ; ರೋಗಬಾಧೆಗಳಿಂದ ರಕ್ಷಣೆ ಪಡೆಯಿರಿ
ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್​
Follow us
Srinivas Mata
|

Updated on: May 01, 2021 | 12:42 PM

ಕೊರೊನಾ ಎರಡನೇ ಅಲೆಯಲ್ಲಿ ಇಡೀ ಭಾರತದಲ್ಲಿ ಆತಂಕ ಮನೆ ಮಾಡಿದೆ. ಪರಿಚಯಸ್ಥರು, ಸ್ನೇಹಿತರು, ಸಂಬಂಧಿಗಳು, ಕುಟುಂಬಸ್ಥರು ಹೀಗೆ ಯಾರೆಂದರೆ ಯಾರಿಗೆ ಬೇಕಾದರೂ ಕೊರೊನಾ ಬರಬಹುದು. ಅದು ಯಾವ ಮಟ್ಟಕ್ಕೆ ಬೇಕಾದರೂ ಹೇಗಬಹುದು. ಈಗ ಇರುವವರು ನಾಳೆಗೆ ಇಲ್ಲ ಎಂಬಂತಾಗಿದೆ ಪರಿಸ್ಥಿತಿ. ಆರೋಗ್ಯ ಸ್ಥಿತಿ ಸುಧಾರಿಸುವುದಕ್ಕೆ ನಮ್ಮ ಹಿರಿಯರು ಧನ್ವಂತರಿಯ ಆರಾಧನೆ ಮಾಡಬೇಕು ಎನ್ನುತ್ತಿದ್ದರು. ಮನೆಯಲ್ಲಿ ಯಾರಿಗಾದರೂ ತೀವ್ರ ಅನಾರೋಗ್ಯವಾದಲ್ಲಿ ಧನ್ವಂತರಿ ಆರಾಧನೆ ಮಾಡುವ ಪರಿಪಾಠ ಇತ್ತು. ಈಗಲೂ ಹಲವು ಕಡೆ ಇದನ್ನು ಕಾಣಬಹುದು. ಇನ್ನು ಜೀವಕ್ಕೇ ಸಮಸ್ಯೆ ಇದೆ ಅಂತಾದಲ್ಲಿ ಮೃತ್ಯುಂಜಯ ಜಪ, ಹೋಮ ಇತ್ಯಾದಿಗಳನ್ನು ಮಾಡಲಾಗುತ್ತದೆ. ಆದರೆ ಈಗಿನ ಪರಿಸ್ಥಿತಿಗೆ ಏನು ಮಾಡಬಹುದು ಎಂಬ ಬಗ್ಗೆ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಮಾಹಿತಿ ತಿಳಿಸಿಕೊಟ್ಟು, ಅಮೂಲ್ಯವಾದ ಧನ್ವಂತರಿ ಮಹಾವಿಷ್ಣು ಮೂಲಮಂತ್ರವನ್ನು ಟಿವಿ9ಕನ್ನಡ ಡಿಜಿಟಲ್ ಓದುಗರಿಗಾಗಿ ಹಂಚಿಕೊಂಡಿದ್ದಾರೆ.

ಆಯುರ್ವೇದದಲ್ಲಿ ಯಾವುದೇ ಚಿಕಿತ್ಸೆಗೆ ಆ ಧನ್ವಂತರಿ ಮಹಾವಿಷ್ಣುವೇ ಆಧಾರ. ಅವನಿಲ್ಲದೆ ಮುಂದಕ್ಕೆ ಏನೂ ಸಾಗುವುದಿಲ್ಲ. ಮನುಷ್ಯನ ದೇಹಕ್ಕೆ ಔಷಧ ತಲುಪಿ, ಅದು ಕೆಲಸ ಮಾಡುವಂತಾಗಬೇಕು ಎಂದರೂ ಧನ್ವಂತರಿ ಮಹಾವಿಷ್ಣುವಿನ ಅನುಗ್ರಹ ಬೇಕು. ಕೊರೊನಾ ತೀವ್ರವಾಗಿರುವ ಈ ಸಂದರ್ಭದಲ್ಲಿ ಮನೆಯಲ್ಲಿ ಯಾರಿಗಾದರೂ ಕಾಯಿಲೆ ಬಂದಿದ್ದಲ್ಲಿ ಅವರ ಕಿವಿಗೆ ಕೇಳುವಂತೆ ಈ ಮಂತ್ರವನ್ನು ಪಠಣ ಮಾಡಬೇಕು. ಇನ್ನು ರೋಗಬಾಧೆಯಿಂದ ರಕ್ಷಣೆ ದೊರೆಯಬೇಕು ಅಂದರೂ ಧನ್ವಂತರಿ ಮಹಾವಿಷ್ಣುವಿನ ಮಂತ್ರವನ್ನು ಪಠಣ, ಶ್ರವಣ ಮಾಡಬೇಕು. ಕೆಲವರಿಗೆ ಈ ಮಂತ್ರ ಹೇಳುವುದು ಕಷ್ಟ ಎನಿಸುತ್ತದೆ. ಮತ್ತು ಹೇಳುವ ಕ್ರಮ ಗೊತ್ತಿರುವುದಿಲ್ಲ. ಅಂಥವರು ಯೂಟ್ಯೂಬ್​ನಲ್ಲಿ ಹುಡುಕಿಕೊಂಡು, ಮನೆಯಲ್ಲಿ ಹಾಕಿಕೊಳ್ಳಬಹುದು.

ಸಮುದ್ರ ಮಂಥನದ ಸಮಯದಲ್ಲಿ ಆ ಮಹಾವಿಷ್ಣು ಧನ್ವಂತರಿಯ ಅವತಾರವನ್ನು ಎತ್ತುತ್ತಾನೆ. ಅಮೃತವನ್ನು ಸ್ವೀಕರಿಸುತ್ತಾನೆ. ಆದ್ದರಿಂದ ಅಂಥ ಮಹಾವಿಷ್ಣುವಿನ ಆರಾಧನೆ ಮಾಡುವ ಮೂಲಕ ರೋಗಬಾಧೆಗಳಿಂದ ರಕ್ಷಣೆ ದೊರೆಯುವಂತಿದ್ದಲ್ಲಿ ಏಕಾಗಬಾರದು. ಈ ಮಂತ್ರವನ್ನು ಕೇಳುವಾಗ ಸಾಧ್ಯವಾದಷ್ಟೂ ಶುಚಿಯಾಗಿರಿ. ಶ್ರದ್ಧೆ ಇರಲಿ. ಇನ್ನು ಭಕ್ತಿ- ನಂಬಿಕೆಗಳು ಇಲ್ಲದೆ ಏನೂ ಆಗುವುದಿಲ್ಲ ಅನ್ನೋದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ.

ಮತ್ತೆ ಕೆಲವರು ಮಂತ್ರಕ್ಕೆ ಮಾವಿನಕಾಯಿ ಉದುರುತ್ತಾ, ಎಲ್ಲರಿಗೂ ಲಸಿಕೆ ಬದಲಿಗೆ ಈ ಮಂತ್ರವನ್ನೇ ಹೇಳಿಕೊಟ್ಟುಬಿಡಿ ಎನ್ನುತ್ತಾರೆ. ಲಸಿಕೆ ತೆಗೆದುಕೊಂಡು ಮೇಲೂ ಕೊರೊನಾ ಬಾರದೆ ಇರುತ್ತದೆಯೇ, ಆಸ್ಪತ್ರೆಯಲ್ಲಿದಾಖಲಿಸಿದ ತಕ್ಷಣ ನೀವು ಬದುಕಿಬಿಡ್ತೀರಾ ಎಂಬ ಪ್ರಶ್ನೆಗಳು ಎಷ್ಟು ಬಾಲಿಶ ಅನ್ನಿಸುತ್ತದೆಯೋ ಈ ಮೇಲಿನ ಪ್ರಶ್ನೆಗಳು ಹಾಗೇ ಅನಿಸುತ್ತವೆ. ಏಕೆಂದರೆ, ಆ ಭಗವಂತನನ್ನು ನಾವು ಪ್ರಾರ್ಥಿಸುವುದು, ಈ ದೇಹಕ್ಕೆ ರಕ್ಷಣೆ ಒದಗಿಸು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸು ಅಂತಲೇ. ಈಗ ನಾನು ತಿಳಿಸುತ್ತಿರುವುದು ಮಂತ್ರವೇ ಹೊರತು ಇದರಲ್ಲಿ ಯಾವ ಖರ್ಚು ಇರುವುದಿಲ್ಲ. ಸಾಧ್ಯವಾದಲ್ಲಿ ನೀವೇ ಹೇಳಿಕೊಳ್ಳಿ (ಜೋರಾಗಿ ಹೇಳಿದರೆ ನಾಲ್ಕು ಮಂದಿ ಕೇಳಿಸಿಕೊಳ್ಳುತ್ತಾರೆ, ಅವರಿಗೂ ಒಳ್ಳೆಯದಾಗುತ್ತದೆ). ಇಲ್ಲದಿದ್ದರೆ ಯೂಟ್ಯೂಬ್​ನಲ್ಲಿ ಹಾಕಿಕೊಳ್ಳಿ. ಸರ್ವೇ ಜನಾಃ ಸುಖಿನೋ ಭವಂತು.

ಧನ್ವಂತರಿ ಮಹಾವಿಷ್ಣು ಮಂತ್ರ ಹೀಗಿದೆ: ಓಂ ನಮೋ ಭಗವತೇ ಧನ್ವಂತರಯೇ ಅಮೃತ ಕಲಶ ಹಸ್ತಾಯ ಸರ್ವಾಮಯ ವಿನಾಶನಾಯ ತ್ರೈಲೋಕ್ಯನಾಥಾಯ ಶ್ರೀ ಮಹಾವಿಷ್ಣವೇ ಸ್ವಾಹಾ

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ: 6361335497

ಇದನ್ನೂ ಓದಿ: ಕೊರೊನಾ ತಡೆಗೆ ದೆಹಲಿಯಲ್ಲಿ ನಡೆಯಿತು ಧನ್ವಂತರಿ ಮಹಾಯಾಗ! 

(Dhanvantari Mahavishnu moola mantra chanting and listening is the best way to get protection against all illness)

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!