AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮಹಾಲಕ್ಷ್ಮಿಯ ಪರಿಪೂರ್ಣ ಆಶೀರ್ವಾದ ಪಡೆಯಲು ಈ ದಿನ ದೀಪಾವಳಿ ಆಚರಿಸಿ

ಈ ವರ್ಷದ ದೀಪಾವಳಿ ಆಚರಣೆ ದಿನಾಂಕ, ಮಹತ್ವದ ಬಗ್ಗೆ ಡಾ. ಬಸವರಾಜ್ ಗುರೂಜಿಯವರು ಮಾಹಿತಿ ನೀಡಿದ್ದಾರೆ. 2025ರಲ್ಲಿ ಅಕ್ಟೋಬರ್ 20 ರಂದೇ ದೀಪಾವಳಿ ಹಬ್ಬ, ವಿಶೇಷವಾಗಿ ಲಕ್ಷ್ಮಿ ಪೂಜೆ ಮಾಡುವುದು ಶಾಸ್ತ್ರಬದ್ಧವಾಗಿ ಅತ್ಯಂತ ಪ್ರಾಶಸ್ತ್ಯ. ಅಕ್ಟೋಬರ್ 20 ರ ರಾತ್ರಿಯ ಅಮಾವಾಸ್ಯೆ, ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಿ ಮಹಾಲಕ್ಷ್ಮಿಯ ಆಶೀರ್ವಾದ ಪಡೆಯಲು ಗುರೂಜಿ ಸಲಹೆ ನೀಡಿದ್ದಾರೆ.

Daily Devotional: ಮಹಾಲಕ್ಷ್ಮಿಯ ಪರಿಪೂರ್ಣ ಆಶೀರ್ವಾದ ಪಡೆಯಲು ಈ ದಿನ ದೀಪಾವಳಿ ಆಚರಿಸಿ
ದೀಪಾವಳಿ
ಅಕ್ಷತಾ ವರ್ಕಾಡಿ
|

Updated on: Oct 14, 2025 | 12:07 PM

Share

ಈ ವರ್ಷದ ದೀಪಾವಳಿ ಹಬ್ಬದ ಆಚರಣೆಗೆ ಸೂಕ್ತ ದಿನಾಂಕ ಮತ್ತು ಮಹತ್ವ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ದೀಪಾವಳಿಯ ಆಚರಣೆಗೆ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವಿದೆ. ಭಗವಾನ್ ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಹಿಂದಿರುಗಿದಾಗ, ಆ ವಿಜಯೋತ್ಸವದ ಸಂಕೇತವಾಗಿ ದೀಪಗಳನ್ನು ಹಚ್ಚಿ ಸ್ವಾಗತಿಸಲಾಯಿತು. ಹಾಗೆಯೇ, ದುಷ್ಟ ಶಿಕ್ಷಕ ಮತ್ತು ಶಿಷ್ಟ ರಕ್ಷಕನಾದ ಶ್ರೀಕೃಷ್ಣನು ನರಕಾಸುರನನ್ನು ಸಂಹಾರ ಮಾಡಿದ ವಿಜಯದ ಸಂಕೇತವಾಗಿಯೂ ದೀಪಾವಳಿಯನ್ನು ಆಚರಿಸಲಾಗುತ್ತದೆ. ಇದು ಬೆಳಕಿನ ಹಬ್ಬವಾಗಿದ್ದು, ನಮ್ಮಲ್ಲಿನ ಜಡತ್ವವನ್ನು ನಿವಾರಿಸಿ ಚೈತನ್ಯವನ್ನು ತುಂಬುತ್ತದೆ. ಭಾರತಾದ್ಯಂತ ಆಚರಿಸಲಾಗುವ ಈ ಹಬ್ಬದಲ್ಲಿ ಅಭ್ಯಂಗ ಸ್ನಾನ, ಲಕ್ಷ್ಮಿ ಪೂಜೆ, ಹೊಸ ಅಕೌಂಟ್‌ಗಳನ್ನು ತೆರೆಯುವುದು, ಕೇದಾರೇಶ್ವರ ವ್ರತ ಆಚರಣೆ, ಮತ್ತು ಉಡುಗೊರೆಗಳ ವಿನಿಮಯದಂತಹ ಹಲವಾರು ವಿಧದ ಆಚರಣೆಗಳು ಇರುತ್ತವೆ.

ಈ ಬಾರಿಯ ದೀಪಾವಳಿಯ ಪ್ರಮುಖ ಪ್ರಶ್ನೆಯೆಂದರೆ, ಯಾವಾಗ ಆಚರಣೆ ಮಾಡಬೇಕು? ಅಮಾವಾಸ್ಯೆಯ ತಿಥಿ ಅಕ್ಟೋಬರ್ 21ರ ಸೂರ್ಯೋದಯಕ್ಕೆ ಇದ್ದರೂ, 21ರ ಸಂಧ್ಯಾಕಾಲದಲ್ಲಿ ಅಮಾವಾಸ್ಯೆ ಇರುವುದಿಲ್ಲ. ದೀಪಾವಳಿಯ ಮುಖ್ಯ ಆಚರಣೆಗಳಾದ ಲಕ್ಷ್ಮಿ ಪೂಜೆ ಮತ್ತು ದೀಪಗಳನ್ನು ಹಚ್ಚುವುದು ರಾತ್ರಿಯ ಸಮಯದಲ್ಲಿ ನಡೆಯುವುದರಿಂದ, ರಾತ್ರಿಯಲ್ಲಿ ಅಮಾವಾಸ್ಯೆ ತಿಥಿ ಇರುವುದು ಅತ್ಯಂತ ಅವಶ್ಯಕ ಎಂದು ಗುರೂಜಿ ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಪಂಚಾಂಗದ ಪ್ರಕಾರ, 2025ರ ಅಕ್ಟೋಬರ್ 20ರಂದು ಮಧ್ಯಾಹ್ನ 3 ಗಂಟೆ 44 ನಿಮಿಷಕ್ಕೆ ಅಮಾವಾಸ್ಯೆ ಪ್ರಾರಂಭವಾಗುತ್ತದೆ. ಇದು ಅಕ್ಟೋಬರ್ 21ರ ಸಂಜೆ 5 ಗಂಟೆ 54 ನಿಮಿಷದವರೆಗೆ ಇರುತ್ತದೆ. ಇದರರ್ಥ, ಅಕ್ಟೋಬರ್ 20ರ ಸಂಧ್ಯಾಕಾಲ ಮತ್ತು ರಾತ್ರಿಯ ಸಮಯದಲ್ಲಿ ಅಮಾವಾಸ್ಯೆ ಪರಿಪೂರ್ಣವಾಗಿ ಇರುತ್ತದೆ. ಆದರೆ ಅಕ್ಟೋಬರ್ 21ರಂದು ಸೂರ್ಯೋದಯಕ್ಕೆ ಅಮಾವಾಸ್ಯೆ ಇದ್ದರೂ, ರಾತ್ರಿಯ ಹೊತ್ತು ದೀಪ ಹಚ್ಚಲು ಮತ್ತು ಲಕ್ಷ್ಮಿ ಪೂಜೆ ಮಾಡಲು ಅಮಾವಾಸ್ಯೆ ತಿಥಿ ಇರುವುದಿಲ್ಲ.

ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಆದ್ದರಿಂದ, ಅಕ್ಟೋಬರ್ 20 ರಂದೇ ದೀಪಾವಳಿ ಹಬ್ಬವನ್ನು ಆಚರಿಸುವುದು, ಕಲಶ ಸ್ಥಾಪನೆ ಮಾಡುವುದು, ಮತ್ತು ಮಹಾಲಕ್ಷ್ಮಿ ಪೂಜೆ ಮಾಡಿಕೊಳ್ಳುವುದು ಶಾಸ್ತ್ರಬದ್ಧವಾಗಿ ಅತ್ಯಂತ ಪ್ರಾಶಸ್ತ್ಯವಾಗಿದೆ. ಸೋಮವಾರ, ಅಕ್ಟೋಬರ್ 20ರಂದು ಸಂಜೆ 5:30ಕ್ಕೆ ಲಕ್ಷ್ಮಿ ಪೂಜೆಗೆ ಬಹಳಷ್ಟು ಪ್ರಾಶಸ್ತ್ಯ ಇರುತ್ತದೆ. ನಿರ್ದಿಷ್ಟವಾಗಿ, ಸಂಜೆ 5 ಗಂಟೆ 44 ನಿಮಿಷದಿಂದ ರಾತ್ರಿ 8 ಗಂಟೆ 24 ನಿಮಿಷದವರೆಗೆ ಮಹಾಲಕ್ಷ್ಮಿ ಪೂಜೆ, ಕಲಶ ಪೂಜೆ, ನೈವೇದ್ಯ ಅರ್ಪಣೆ ಮತ್ತು ಅಖಂಡ ದೀಪವನ್ನು ಬೆಳಗಲು ಅತ್ಯಂತ ಶುಭ ಮುಹೂರ್ತವಾಗಿದೆ. ಅಖಂಡ ದೀಪವನ್ನು ಅಕ್ಟೋಬರ್ 20ರಂದು ಪ್ರತಿಷ್ಠಾಪಿಸಿ, 21ರ ಬೆಳಗಿನ ಜಾವ 5 ಗಂಟೆಯ ತನಕ ಬೆಳಗುವುದು ಶುಭಕರ. ಈ ರೀತಿಯಾಗಿ ಅಕ್ಟೋಬರ್ 20, ರಂದು ದೀಪಾವಳಿ ಹಬ್ಬವನ್ನು ಆಚರಿಸುವುದರಿಂದ, ಮಹಾಲಕ್ಷ್ಮಿಯ ಪರಿಪೂರ್ಣ ಆಶೀರ್ವಾದ ದೊರೆಯುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ