ರಾಮ ಸೀತೆಯನ್ನು ಮದುವೆಯಾದ ಗಳಿಗೆ ಯಾವುದು? ಹೇಗೆ ನಡೆದಿತ್ತು ಈ ವಿವಾಹ? ಈ ಮುಹೂರ್ತದಲ್ಲಿ ಮದುವೆಯಾಗುವುದು ಶುಭವೇ?

ಸೀತಾಮಾತೆ ಮತ್ತು ಪ್ರಭು ಶ್ರೀರಾಮರ ಜೋಡಿ ವಿಶ್ವ ಪ್ರಸಿದ್ಧ. ಆದರೆ ಪ್ರಭು ಶ್ರೀರಾಮ ಸೀತೆಯನ್ನು ಹೇಗೆ ವರಿಸಿದ, ಅವರ ಸ್ವಯಂವರ ಹೇಗೆ ನಡೆದಿತ್ತು? ಎಂಬುದರ ಬಗ್ಗೆ ರಾಮಚರಿತಮಾನಸದಂತ ಕೃತಿಗಳು ಬಹಳ ವಿಸ್ತಾರವಾಗಿ ತಿಳಿಸುತ್ತವೆ. ಭಗವಾನ್ ಶ್ರೀರಾಮ ಮತ್ತು ಜನಕನ ಪುತ್ರಿ ಜಾನಕಿಯ ವಿವಾಹವು ಮಾರ್ಗಶಿರ ಮಾಸದ ಶುಕ್ಲ ಪಂಚಮಿಯಂದು ನಡೆದಿತ್ತು ಎನ್ನಲಾಗುತ್ತದೆ. ಈ ದಿನವನ್ನು 'ವಿವಾಹ ಪಂಚಮಿ ಹಬ್ಬ' ಎಂದು ಆಚರಿಸಲಾಗುತ್ತದೆ.

ರಾಮ ಸೀತೆಯನ್ನು ಮದುವೆಯಾದ ಗಳಿಗೆ ಯಾವುದು? ಹೇಗೆ ನಡೆದಿತ್ತು ಈ ವಿವಾಹ? ಈ ಮುಹೂರ್ತದಲ್ಲಿ ಮದುವೆಯಾಗುವುದು ಶುಭವೇ?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 20, 2024 | 5:54 PM

ಶ್ರೀರಾಮ ಎಂದ ತಕ್ಷಣ ಆತನ ಆರ್ಧಾಂಗಿ ಸೀತಾ ಮಾತೆಯೂ ನೆನಪಾಗುತ್ತಾಳೆ. ಮಾತೆ ಸೀತಾ ಮತ್ತು ಪ್ರಭು ಶ್ರೀರಾಮರ ಜೋಡಿ ವಿಶ್ವ ಪ್ರಸಿದ್ಧ. ಆದರೆ ಪ್ರಭು ಶ್ರೀರಾಮ ಸೀತೆಯನ್ನು ಹೇಗೆ ವರಿಸಿದ, ಅವರ ಸ್ವಯಂವರ ಹೇಗೆ ನಡೆದಿತ್ತು? ಎಂಬುದರ ಬಗ್ಗೆ ರಾಮಚರಿತಮಾನಸದಂತ ಕೃತಿಗಳು ಬಹಳ ವಿಸ್ತಾರವಾಗಿ ತಿಳಿಸುತ್ತವೆ. ಭಗವಾನ್ ಶ್ರೀರಾಮ ಮತ್ತು ಜನಕನ ಪುತ್ರಿ ಜಾನಕಿಯ ವಿವಾಹವು ಮಾರ್ಗಶಿರ ಮಾಸದ ಶುಕ್ಲ ಪಂಚಮಿಯಂದು ನಡೆದಿತ್ತು ಎನ್ನಲಾಗುತ್ತದೆ. ಈ ದಿನವನ್ನು “ವಿವಾಹ ಪಂಚಮಿ ಹಬ್ಬ” ಎಂದು ಆಚರಿಸಲಾಗುತ್ತದೆ.

ಸೀತಾ ರಾಮರ ಕಲ್ಯಾಣೋತ್ಸವ ನಡೆದ ಪರಿ ಹೇಗಿತ್ತು?

ಪೌರಾಣಿಕ ಧಾರ್ಮಿಕ ಗ್ರಂಥಗಳ ಪ್ರಕಾರ, ರಾಜ ಜನಕನು ಸೀತೆಯ ಸ್ವಯಂವರದಲ್ಲಿ ಒಂದು ಷರತ್ತನ್ನು ಹಾಕುತ್ತಾನೆ. ಆ ಪ್ರಕಾರ ಯಾರು ಶಿವನ ಧನುಸ್ಸನ್ನು ಎತ್ತುತ್ತಾರೋ ಅವರೇ ಸೀತೆಯನ್ನು ವರಿಸುತ್ತಾರೆ ಎಂಬುದು ಅಲ್ಲಿಯ ನಿಯಮ. ಸ್ವಯಂವರಕ್ಕೆ ಬಂದ ಎಲ್ಲಾ ರಾಜರು ಮತ್ತು ಚಕ್ರವರ್ತಿಗಳು ಶಿವನ ಧನುಸ್ಸನ್ನು ಎತ್ತಲು ಸಾಧ್ಯವಾಗದಿದ್ದಾಗ, ಮಹರ್ಷಿ ವಸಿಷ್ಠರು ಭಗವಾನ್ ಶ್ರೀರಾಮನಿಗೆ ಬಿಲ್ಲನ್ನು ಎತ್ತುವಂತೆ ಆದೇಶ ನೀಡುತ್ತಾರೆ. ಅವರ ಮಾತನ್ನು ಕೇಳಿ ಶ್ರೀರಾಮನು ತಕ್ಷಣವೇ ಬಿಲ್ಲನ್ನು ಎತ್ತಿ ಬಾಣವನ್ನು ಹೂಡುತ್ತಾನೆ. ಬಿಲ್ಲನ್ನು ಹಿಡಿದಿದ್ದಾಗ ಭಯಾನಕ ಶಬ್ದದೊಂದಿಗೆ ಧನಸ್ಸು ಮುರಿದು ಹೋಗುತ್ತದೆ. ಶಿವ ಧನಸ್ಸು ಮುರಿದ ರಾಮನಿಗೆ ಜನಕ ಮಹಾರಾಜ ತನ್ನ ಮಗಳಾದ ಸೀತೆಯನ್ನು ಮದುವೆ ಮಾಡಿ ಕೊಡುತ್ತಾನೆ. ಆ ಮೂಲಕ ಶ್ರೀ ರಾಮ ತನ್ನ ಪರಾಕ್ರಮದಿಂದ ಸೀತೆಯನ್ನು ಪಡೆಯುತ್ತಾನೆ. ಭಾರತೀಯ ಸಂಸ್ಕೃತಿಯಲ್ಲಿ, ರಾಮ- ಸೀತೆಯನ್ನು ಆದರ್ಶ ದಂಪತಿಗಳೆಂದು ಪರಿಗಣಿಸಲಾಗುತ್ತದೆ. ಮರ್ಯಾದಾ ಪುರುಷೋತ್ತಮ ಮತ್ತು ಸೀತಾ ಮಾತೆಯ ವಿವಾಹದ ಕಾರಣದಿಂದ ಈ ದಿನವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.

ನಂಬಿಕೆಯ ಪ್ರಕಾರ, ಮದುವೆಯಾದವರು ಭಗವಾನ್ ರಾಮ ಮತ್ತು ಸೀತಾಮಾತೆಯನ್ನು ಪೂಜಿಸುವುದರಿಂದ ವೈವಾಹಿಕ ಜೀವನದಲ್ಲಿನ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಇನ್ನು ಅವಿವಾಹಿತರು ಸೀತೆ ಮತ್ತು ಶ್ರೀರಾಮನನ್ನು ಮನಃಪೂರ್ವಕವಾಗಿ ಪೂಜಿಸಿದರೆ, ಅವರು ಬಯಸಿದ ಜೀವನ ಸಂಗಾತಿಯನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ. ಮದುವೆಯ ದಿನ ರಾಮನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸುವುದರಿಂದಲೂ ಸಂಸಾರದಲ್ಲಿ ಅಡೆತಡೆ ಬರದಂತೆ ರಾಮ ಕಾಪಾಡುತ್ತಾನೆ ಎನ್ನುವ ನಂಬಿಕೆಯೂ ಇದೆ.

ಇದನ್ನೂ ಓದಿ: ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಸಂಭ್ರಮವನ್ನು ಮನೆಯಲ್ಲಿ ಆಚರಣೆ ಮಾಡುವುದು ಹೇಗೆ?

ಹಾಗಾದರೆ ರಾಮ ಸೀತೆ ವಿವಾಹದ ದಿನದಂದು ಮದುವೆಯಾಗಬಾರದು ಎಂದು ಹೇಳುವುದೇಕೆ?

ರಾಮ ಮತ್ತು ಸೀತಾ ದೇವಿಯು ವಿವಾಹವಾದ ದಿನದಂದು ಕೆಲವು ಕಡೆಗಳಲ್ಲಿ ಮದುವೆ ಕಾರ್ಯಗಳು ನಡೆಯುವುದಿಲ್ಲ. ವಿಶೇಷವಾಗಿ ಮಿಥಿಲಾಚಲ ಮತ್ತು ನೇಪಾಳದಲ್ಲಿ ಈ ದಿನ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದಿಲ್ಲ. ಏಕೆಂದರೆ ಈ ದಿನ ರಾಮನನ್ನು ಮದುವೆಯಾದ ಸೀತಾ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಈ ಕಾರಣದಿಂದಾಗಿ, ವಿವಾಹ ಪಂಚಮಿ ದಿನದಂದು ಮದುವೆಯಾಗುವುದರಿಂದ ಕನ್ಯೆಯರಿಗೆ ಸುಖಮಯ ದಾಂಪತ್ಯ ಜೀವನ ಸಿಗುವುದಿಲ್ಲ ಎನ್ನುವ ನಂಬಿಕೆಯಿದೆ. ಇನ್ನು ಸೀತಾ ದೇವಿಯು ತನ್ನ ಗರ್ಭಾವಸ್ಥೆಯಲ್ಲಿಯೂ ಕೂಡ ವಾಲ್ಮಿಕಿ ಮಹರ್ಷಿಗಳ ಆಶ್ರಮದಲ್ಲಿ ಒಂಟಿ ಜೀವನವನ್ನು ನಡೆಸಿ ಲವ – ಕುಶ ಎನ್ನುವ ಅವಳಿ ಗಂಡು ಮಕ್ಕಳಿಗೆ ಜನ್ಮವನ್ನು ನೀಡಿದಳು. ಮದುವೆಯಾದಾಗಲೂ ಸೀತಾಗೆ ಹೆಚ್ಚು ಸಂತೋಷ ಸಿಗಲಿಲ್ಲ. ರಾವಣನ ಕಾರಣದಿಂದಾಗಿ ದೂರವಿರಬೇಕಾಯಿತು, ಅದಕ್ಕಾಗಿಯೇ ಜನರು ವಿವಾಹ ಪಂಚಮಿ ದಿನದಂದು ತಮ್ಮ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಹೆದರುತ್ತಾರೆ.

ಇನ್ನು ಕೆಲವು ಭಾಗದಲ್ಲಿ ಸೀತಾ- ರಾಮ ಮದುವೆಯಾದ ದಿನ ಅತ್ಯಂತ ಶ್ರೇಷ್ಠ ಎನ್ನಲಾಗುತ್ತದೆ. ಅದೇ ದಿನ ಮದುವೆ ಸಮಾರಂಭಗಳನ್ನು ಮಾಡಿಕೊಳ್ಳುತ್ತಾರೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಷಯವಾದ್ದರಿಂದ, ಕೆಲವರಿಗೆ ಆ ದಿನ ಒಳ್ಳೆಯದು ಇನ್ನು ಕೆಲವರಿಗೆ ಶುಭ ಕಾರ್ಯ ನಡೆಸಲು ಒಳ್ಳೆಯ ದಿನವಲ್ಲ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Sat, 20 January 24

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ