ಈ ಶಿವ ದೇವಾಲಯದ ಮುಂದೆ ನಂದಿ ವಿಗ್ರಹವೇ ಇಲ್ಲ ಯಾಕೆ ಗೊತ್ತಾ? ಪುರಾಣಕ್ಕೆ ಸಾಕ್ಷಿಯಾಗಿದೆ ಪಂಜ ಸೀಮೆಯ ದೇವರು

ಎಲ್ಲಾ ಶಿವದೇವಾಲಯದಲ್ಲಿ ಎದುರಿನ ಮಂಟಪದಲ್ಲಿ ನಂದಿಯ ಸಾನಿಧ್ಯವನ್ನು ಕಾಣಬಹುದು. ಆದರೆ ಈ ಕ್ಷೇತ್ರದಲ್ಲಿ ನಂದಿ ಮಾಯವಾಗಿ ಶ್ರೀ ಸದಾಶಿವ ದೇವರ ಸಾನಿಧ್ಯವಿದೆ.

ಈ ಶಿವ ದೇವಾಲಯದ ಮುಂದೆ ನಂದಿ ವಿಗ್ರಹವೇ ಇಲ್ಲ ಯಾಕೆ ಗೊತ್ತಾ? ಪುರಾಣಕ್ಕೆ ಸಾಕ್ಷಿಯಾಗಿದೆ ಪಂಜ ಸೀಮೆಯ ದೇವರು
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 15, 2022 | 7:00 AM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೂತ್ಕೂಂಜ ಗ್ರಾಮದ ಪಂಜ ಸೀಮೆಯ ದೇವರೆಂದು ಖ್ಯಾತಿಯಾದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯವು ಜ್ಞಾತಾ ಜ್ಞಾತವಾಗಿರುವ ಹಲವು ದೈವ, ದೇವರುಗಳನ್ನೊಳಗೊಂಡು ಮಹತ್ವಪೂರ್ಣವಾಗಿ ಕಂಗೊಳಿಸುತ್ತಿದೆ. ಇಲ್ಲಿಯ ಮಹಿಮೆಯನ್ನು ಪುರಾಣ ಇತಿಹಾಸಗಳಲ್ಲಿ ಕಾಣಬಹುದು.ಸದ್ಯೋಜಾತ , ವಾಮದೇಹ ,ಅಘೋರ, ತತ್ಪುರುಷ, ಈಶಾನ ಎಂಬ ಪಂಜಬ್ರಹ್ಮರಥ ಐದು ಹೆಸರಿನಲ್ಲಿ ಬೇರೆ ಬೇರೆಯಾಗಿ ಶಿವನ ಸ್ವರೂಪವನ್ನು ಆರಾಧಿಸಿಕೊಂಡು ಬಂದವರಲ್ಲಿ ಪಾಂಡವರು ಮೊದಲಿಗರು. ಅವರು ವನವಾಸಕಾಲದಲ್ಲಿ , ತ್ರಿಗರ್ತ ಪ್ರದೇಶದ ದಕ್ಷಿಣ ಭಾಗದ ಒಂಬತ್ತು ಕಡೆಗಳಲ್ಲಿ ನೆಲೆಯಾಗಿ ಶಿವಲಿಂಗಾರ್ಚನೆ ಮಾಡಿದ ಕಡೆಗಳಲ್ಲಿ ಇಂದು ಪಂಚಲಿಂಗೇಶ್ವರ ದೇವಾಲಯವನ್ನು ಕಾಣಬಹುದು. ಈ ಪೈಕಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯವು ಒಂದು. ಎಲ್ಲಾ ಶಿವದೇವಾಲಯದಲ್ಲಿ ಎದುರಿನ ಮಂಟಪದಲ್ಲಿ ನಂದಿಯ ಸಾನಿಧ್ಯವನ್ನು ಕಾಣಬಹುದು. ಆದರೆ ಈ ಕ್ಷೇತ್ರದಲ್ಲಿ ನಂದಿ ಮಾಯವಾಗಿ ಶ್ರೀ ಸದಾಶಿವ ದೇವರ ಸಾನಿಧ್ಯವಿದೆ.

ಜೈನ ಬಲ್ಲಾಳರು ಆಡಳಿತ ಕಾಲದಲ್ಲಿ , ಅರ್ಚಕರು ನಿತ್ಯವೂ ಶ್ರೀ ಪರಿವಾರ ಪಂಚಲಿಂಗೇಶ್ವರ ಸ್ವಾಮಿಯನ್ನು ಪೂಜಿಸಿ, ನಾಗತೀರ್ಥವೆಂಬ ಹೆಸರಿನ ಜಲವಾಹಿನಿಯ ಉಗಮ ಸ್ಥಾನವಾದ ಬಂಟಮಲೆಯ ತುತ್ತ ತುದಿಯಲ್ಲಿ ಸಾನಿಧ್ಯವಿದ್ದ ಶ್ರೀ ಸದಾಶಿವ ದೇವರನ್ನು ಪೂಜಿಸಬೇಕಿತ್ತು. ದಟ್ಟ ಅರಣ್ಯ ಪ್ರದೇಶದ ನಡುವೆ ದುರ್ಗಮವಾದ ದಾರಿಯನ್ನು ಕ್ರಮಿಸಬೇಕಾದ ಕಾರಣ, ಬ್ರಹ್ಮಜ್ಞಾನಿಯೂ, ಯೋಗಿಯೂ ಆದ ಆರ್ಚಕರ ಭಕ್ತಿಯ ಪ್ರಾರ್ಥನೆಗೆ ಒಲಿದು ಶ್ರೀ ಪಂಚಲಿಂಗೇಶ್ವರ ದೇವರ ಎದುರಿನಲ್ಲಿದ್ದ ನಂದಿಯನ್ನು ಸೂಕ್ಷ್ಮವನ್ನಾಗಿಸಿ ಶ್ರೀ ಸದಾಶಿವ ಲಿಂಗ ಉದ್ಭುವಗೊಂಡಿತ್ತು, ಎಂದು ಹೇಳುತ್ತಾರೆ ಇಲ್ಲಿನ ಹಿರಿಯರು . ಹಾಗೆಯೇ ಪೂರ್ವಾಭಿಮುಖವಾಗಿ ಗಜಪೃಷ್ಠಾಕಾರದ ಶ್ರೀ ಪಂಚಲಿಂಗೇಶ್ವರ ಗರ್ಭಗುಡಿಯನ್ನು ಹಾಗೂ ಅಲ್ಲಿಂದ ಸರಳ ರೇಖೆಯಲ್ಲಿ ಒಂದೇ ಕಡೆಯಲ್ಲಿ ಪೂರ್ವಾಭಿಮುಖವಾಗಿ ಶ್ರೀ ಸದಾಶಿವ ದೇವರನ್ನೂ ಕಾಣಬಹುದು. ಆದ್ದರಿಂದ ಏಕಕಾಲದಲ್ಲಿ ಪೂಜೆ ಸ್ವೀಕರಿಸುವ ಎರಡು ಶಿವ ಸಾನಿಧ್ಯವನ್ನು ಈ ಕ್ಷೇತ್ರದಲ್ಲಿ ವಿಶೇಷವಾಗಿ ಕಾಣಬಹುದು.

ಐವತ್ತೇಳು ಗ್ರಾಮದೊಳಗಿನ ಸಾವಿರಕ್ಕೂ ಹೆಚ್ಚಿನ ದೈವ, ದೇವರುಗಳನ್ನೊಳಗೊಂಡ ಅತ್ಯಂತ ಕಾರಣಿಕ ಕ್ಷೇತ್ರವಾಗಿದೆ ಪಂಜ ಸಾವಿರ ಸೀಮೆಯ ದೇವಾಲಯ. ಶ್ರೀ ದೇವಳದಲ್ಲಿ ತ್ರಿಶಾಲ ಪೂಜಾ ವಿಧಿ ವಿಧಾನಗಳು ನಡೆಯುತ್ತಿದೆ. ವಿಶೇಷವಾಗಿ ರುದ್ರಾಭಿಷೇಕ, ಏಕದಾಶ ರುದ್ರಾಭಿಷೇಕ, ಶತ ರುದ್ರಾಭಿಷೇಕ ಹೆಚ್ಚಿನ ಸಂಖ್ಯೆಯಲ್ಲಿ ಸಿಯಾಳಾಭಿಷೇಕ, ರಂಗಪೂಜೆ, ಶಿವಪೂಜೆ, ಮಹಾಪೂಜೆ , ಬಿಲ್ವಾರ್ಚನೆ ಇತ್ಯಾದಿ ವಿಶೇಷ ಸೇವೆಗಳು ನಿರಂತರ ನಡೆಯುತ್ತದೆ. ಮೃತ್ಯು ಕಂಟಕಗಳ ಪರಿಹಾರವಾಗಿ ಮೃತ್ಯುಂಜಯ ಪೂಜೆ , ಜಪ, ಹೋಮ, ನವಗ್ರಹ ಹೋಮ, ಸಂಧಿದೋಷ ನಿವಾರಣೆಗೆ ಸಂಧಿ ಶಾಂತಿ ಹೋಮ, ವಿವಾಹ ಯೋಗ್ಯತೆಯ ಸಲುವಾಗಿ ಸ್ವಯಂವರ ಪಾರ್ವತೀ ಪೂಜೆ, ಶನಿದಶಾಭಕ್ತಿಯಲ್ಲಿರುವ ದೋಷ ನಿವಾರಣೆಗಾಗಿ ಶನಿ ಪೂಜೆ, ಜಪಗಳು ನಡೆಯುತ್ತದೆ. ವರ್ಷಕ್ಕೊಮ್ಮೆ ಪೂರ್ವ ಸಂಪ್ರದಾಯದಂತೆ ವಿಜೃಂಭಣೆಯಿಂದ ಒಂಬತ್ತು ದಿನದ ಜಾತ್ರೋತ್ಸವಗಳು ನಡೆಯುತ್ತದೆ.

ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಗಣಪತಿ ಹೋಮ, ಆಶ್ಲೇಷಾ ಬಲಿ ,ಕಲಶಾಭಿಷೇಕ, ಶತರುದ್ರಾಭಿಷೇಕ ಸೇವೆಗಳು ಜರುಗುತ್ತದೆ. ನಿರಂತರ ದೇವಳದಲ್ಲಿ ಅನ್ನದಾಸೋಹವೂ ನಡೆಯುತ್ತದೆ. ಪಂಚ ಪರ್ವತಗಳ ಸಲುವಾಗಿ ಚೌತಿ, ನಾಗರ ಪಂಚಮಿ, ವಿಷು, ದೀಪಾವಳಿ, ನವರಾತ್ರಿ ಪೂಜೆ, ಶಿವರಾತ್ರಿ ಪೂಜೆ, ಸೂರ್ಯೋದಯ ಮೊದಲೇ ಧನು ಪೂಜೆ ಪ್ರಾರ್ಥನೆಗಳು ನಡೆಯುತ್ತದೆ.

ಶ್ರೀ ಕ್ಷೇತ್ರದಲ್ಲಿ ಉಪ ಗುಡಿಗಳಾದ ಗಣಪತಿ, ಶಸ್ತಾರ, ದುರ್ಗಾಪರಮೇಶ್ವರಿ ಅಮ್ಮನವರು ಅಲ್ಲದೇ ಅತ್ಯಂತ ಕಾರಣಿಕ ಶಕ್ತಿಗಳಾದ ಉಳ್ಳಾಕ್ಕು ಕಾಚುಕುಜುಂಬ , ಮಹಿಷಂರಾಯ , ವ್ಯಾಘ್ರ ಚಾಮುಂಡಿ, ರುದ್ರಾಂಡಿ , ಪಂಜುರ್ಲಿ, ಪುರುಷ ರಾಯ , ಪೊಟ್ಟ ಭೂತ , ರಕ್ತೇಶ್ವರಿ, ಗುಳಿಗ ದೈವಗಳು, ಗುಡಿಗಳು ಇವೆ. ಪ್ರತಿ ಸಂಕ್ರಮಣದಂದು ತಂಬಿಲ ಸೇವೆ ನಡೆಯುತ್ತದೆ. ನಾಗ ಸಾನ್ನಿಧ್ಯದಲ್ಲಿ ಪ್ರತಿ ಶುಕ್ಲ ಪಂಚಮಿಯಂದು ನಾಗಾರಾಧನೆಯು ಆಚರಿಸಲ್ಪಡುತ್ತದೆ. ಇಲ್ಲಿ ವೀರ ಪುರುಷರಾದ ಕೋಟಿ ಚೆನ್ನಯರ ಗರಡಿ ಆಲಯವೂ ಇದೆ. ಎಲ್ಲಾ ಸೇವೆಗಳನ್ನು ಸ್ವೀಕರಿಸಿ ಭಕ್ತರ ಮನೋಭಿಲಾಷೆಯನ್ನು ಈಡೇರಿಸುವ ಹಲವು ದೇವತಾ ಸಾನ್ನಿಧ್ಯಗಳನ್ನು ಒಳಗೊಂಡ ಭವ್ಯ , ದಿವ್ಯ ಕ್ಷೇತ್ರ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ಕ್ಷೇತ್ರ.

ಜಯಶ್ರೀ  ಅಂಬಿಕಾ ಮಹಾವಿದ್ಯಾಲಯ ಪುತ್ತೂರು

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ