ಈ 5 ವಸ್ತುಗಳನ್ನು ಯಾವತ್ತೂ ದಾನ ಮಾಡಬೇಡಿ.. ಇಲ್ಲವಾದರೆ ನಿಮಗೆ ಬಡತನ ಕಾಡುತ್ತದೆ

Astrology Tips: ಪ್ಲಾಸ್ಟಿಕ್ ವಸ್ತುಗಳು ಮತ್ತು ಪಾತ್ರೆಗಳನ್ನು ದಾನ ಮಾಡುವುದನ್ನು ಸಹ ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಇದರಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ. ಹಾಗೆಯೇ ಗಾಜು, ಅಲ್ಯೂಮಿನಿಯಂ ಮತ್ತು ಸ್ಟೀಲ್ ವಸ್ತುಗಳನ್ನು ಸಹ ದಾನ ಮಾಡಬಾರದು.

ಈ 5 ವಸ್ತುಗಳನ್ನು ಯಾವತ್ತೂ ದಾನ ಮಾಡಬೇಡಿ.. ಇಲ್ಲವಾದರೆ ನಿಮಗೆ ಬಡತನ ಕಾಡುತ್ತದೆ
ಈ 5 ವಸ್ತುಗಳನ್ನು ಯಾವತ್ತೂ ದಾನ ಮಾಡಬೇಡಿ..
Follow us
ಸಾಧು ಶ್ರೀನಾಥ್​
|

Updated on: Sep 28, 2023 | 6:27 PM

ಜ್ಯೋತಿಷ್ಯ ಸಲಹೆಗಳು: ಸಾಮಾನ್ಯವಾಗಿ ಎಲ್ಲರೂ ದಾನ ಮಾಡಲು ಹೇಳುತ್ತಾರೆ. ದಾನ ಮಾಡುವುದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಹಾಗೂ ಭಗವಂತನ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ದಾನವನ್ನು (Donation) ಒಂದು ಮಹಾನ್ ಸತ್ಕಾರ್ಯವೆಂದು ಪರಿಗಣಿಸಲಾಗಿದೆ. ಯಾರಾದರೂ ತಮ್ಮ ಬಳಿ ಬಂದು ದಾನ ನೀಡಲು ಬಯಸಿದರೆ ಅಥವಾ ನಾವೇ ಏನಾದರೂ ದಾನ ಮಾಡಲು ಬಯಸಿದರೂ ಹಾಗೆ ಮಾಡಬಹುದು ಎನ್ನುತ್ತಾರೆ. ಇದು ಕರ್ಮಫಲದಿಂದ ಮುಕ್ತಿ ನೀಡುತ್ತದೆ ಎಂದು ವೇದ ವಿದ್ವಾಂಸರು ಹೇಳುತ್ತಾರೆ (Spiritual, Astrology).

ಹೀಗೆ ಮಾಡುವುದರಿಂದ ಕರ್ಮಫಲದಿಂದ ಮುಕ್ತಿ ಸಿಗುತ್ತದೆ ಎಂದು ವೇದ ವಿದ್ವಾಂಸರು ಹೇಳುತ್ತಾರೆ. ಆದರೆ, ದಾನ ಮಾಡಲು ಕೆಲವು ನಿಯಮಗಳಿವೆ ಎಂದು ಹಿಂದೂ ಧರ್ಮಗ್ರಂಥಗಳೂ ಹೇಳುತ್ತವೆ. ಅವರ ಪ್ರಕಾರ.. ಏನು ದಾನ ಮಾಡಬೇಕು? ಏನು ದಾನ ಮಾಡಬಾರದು? ಯಾವಾಗ ದಾನ ಮಾಡಬೇಕು? ಯಾವ ಸಮಯದಲ್ಲಿ ಏನು ಮಾಡಬಾರದು ಎಂದು ವೇದ ಪಂಡಿತರು ಹೇಳುತ್ತಾರೆ. ಇವುಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಹೇಳಲಾಗುತ್ತದೆ.

ದಾನ ಮಾಡವುದು ಪುಣ್ಯವಾಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಬೇಕು. ಆದರೆ ಕೆಲವು ವಸ್ತುಗಳನ್ನು ದಾನ ಮಾಡುವುದು ಅಶುಭ ಎಂದು ಹೇಳಲಾಗುತ್ತದೆ. ಈ ವಸ್ತುಗಳನ್ನು ದಾನ ಮಾಡಿದರೆ ಅಂತಹ ವ್ಯಕ್ತಿಗಳ ಮೇಲೆ ಲಕ್ಷ್ಮಿ ದೇವಿ ಮತ್ತು ಶನಿ ದೇವರು ಕೋಪಗೊಳ್ಳುತ್ತಾರೆ. ಅದರಿಂದ ಅಂತಹ ದಾನಿಗಳು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಯಾವತ್ತೂ ದಾನ ಮಾಡಬಾರದ ವಸ್ತುಗಳು ಯಾವುವು ಎಂದು ಈಗ ತಿಳಿಯೋಣ..

ಪೊರಕೆ: ಯಾವುದೇ ಹೊಸ ಅಥವಾ ಹಳೆಯ ಪೊರಕೆಯನ್ನು ದಾನ ಮಾಡಿದರೆ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಪೊರಕೆ ದಾನ ಮಾಡುವುದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ. ಆದ್ದರಿಂದ ಪೊರಕೆ ದಾನ ಮಾಡುವುದನ್ನು ತಪ್ಪಿಸಿ.

ಚೂಪಾದ ವಸ್ತುಗಳು: ಚಾಕು, ಕತ್ತರಿ, ಸೂಜಿಯಂತಹ ಹರಿತವಾದ ವಸ್ತುಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಅಪಶ್ರುತಿ ಉಂಟಾಗುತ್ತದೆ. ಇದು ಕುಟುಂಬ ಸದಸ್ಯರ ನಡುವೆ ಕಲಹಕ್ಕೆ ಕಾರಣವಾಗುತ್ತದೆ. ಇದು ನಿಮ್ಮ ಅದೃಷ್ಟದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಈ ವಸ್ತುಗಳನ್ನು ದಾನ ಮಾಡುವುದನ್ನು ತಪ್ಪಿಸಿ.

Also Read: ರಾಘವೇಂದ್ರಸ್ವಾಮಿ ಮತ್ತು ಗ್ರಾಮ ದೇವತೆ ಮಂಚಾಲಮ್ಮ ದರ್ಶನಕ್ಕೆ ಹರಿದುಬರುತ್ತಿರುವ ಭಕ್ತರು: ತುಂಬಿತುಳುಕಿದ ಮಠದ ಹುಂಡಿ

ಎಣ್ಣೆ: ಎಣ್ಣೆಯನ್ನು ದಾನ ಮಾಡುವುದರಿಂದ ಶನಿ ದೇವರು ಪ್ರಸನ್ನನಾಗುತ್ತಾನೆ. ಆದರೆ ಬಳಸಿದ, ಉಳಿದ ಅಥವಾ ಹಾಳಾದ ಎಣ್ಣೆಯನ್ನು ಎಂದಿಗೂ ದಾನ ಮಾಡಬೇಡಿ. ಅಂತಹ ಎಣ್ಣೆಯನ್ನು ದಾನ ಮಾಡುವುದರಿಂದ ಶನಿ ದೇವರ ದುಷ್ಪರಿಣಾಮಗಳು ಎದುರಿಸಬೇಕಾಗುತ್ತದೆ. ಶನಿ ದೇವರನ್ನು ಮೆಚ್ಚಿಸಲು ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ದಾನ ಮಾಡಿ.

ಆಹಾರ: ಬಡವರಿಗೆ ಮತ್ತು ಹಸಿದವರಿಗೆ ಅನ್ನ ನೀಡುವುದು ಬಹಳ ಪುಣ್ಯ. ಆದರೆ ಆಹಾರವು ಹಳಸದಂತೆ ಅಥವಾ ಹಾಳಾಗದಂತೆ ನೋಡಿಕೊಳ್ಳಬೇಕು. ಇಂತಹ ಅನ್ನದಾನ ಮಾಡುವುದರಿಂದ ಪುಣ್ಯದ ಬದಲು ಪಾಪ ಆವರಿಸುತ್ತದೆ. ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪ್ಲಾಸ್ಟಿಕ್ ವಸ್ತುಗಳು ಮತ್ತು ಪಾತ್ರೆಗಳನ್ನು ದಾನ ಮಾಡುವುದನ್ನು ಸಹ ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಇದರಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ. ಹಾಗೆಯೇ ಗಾಜು, ಅಲ್ಯೂಮಿನಿಯಂ ಮತ್ತು ಸ್ಟೀಲ್ ವಸ್ತುಗಳನ್ನು ಸಹ ದಾನ ಮಾಡಬಾರದು.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ

(ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯು ನಂಬಿಕೆಯನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಜನರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ನೀಡಿದ್ದೇವೆ)

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್