AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anjaneya Swamy: ಆಂಜನೇಯ ಸ್ವಾಮಿಗಾಗಿ ಒಂದು ದೀಪ ಹಚ್ಚಿ, ನಿಮ್ಮ ಜೀವನ ತೇಜೋಮಯಗೊಳ್ಳುತ್ತದೆ

ಕಲಿಯುಗದಲ್ಲಿ ಆಂಜನೇಯನ ಉಪಾಸನೆ ಮಾಡುವುದರಿಂದ ತುಂಬಾ ಮಂಗಳಕರವಾಗಿರುತ್ತದೆ. ಮಂಗಳವಾರ ಆಂಜನೇಯ ಸ್ವಾಮಿಯ ದಿನ. ಈ ದಿನ ಆಂಜನೇಯ ಸ್ವಾಮಿಯನ್ನು ವಿಶೇಷವಾಗಿ ಪೂಜಿಸುವುದರಿಂದ ಆತನ ಕೃಪೆ ನಿಮ್ಮ ಮೇಲೆ ಇರುತ್ತದೆ.

Anjaneya Swamy: ಆಂಜನೇಯ ಸ್ವಾಮಿಗಾಗಿ ಒಂದು ದೀಪ ಹಚ್ಚಿ, ನಿಮ್ಮ ಜೀವನ ತೇಜೋಮಯಗೊಳ್ಳುತ್ತದೆ
ಆಂಜನೇಯ ಸ್ವಾಮಿಗಾಗಿ ಒಂದು ದೀಪ ಹಚ್ಚಿ, ನಿಮ್ಮ ಜೀವನ ತೇಜೋಮಯಗೊಳ್ಳುತ್ತದೆ
TV9 Web
| Updated By: ಆಯೇಷಾ ಬಾನು|

Updated on: Aug 25, 2021 | 7:30 AM

Share

ಶ್ರೀ ರಾಮಚಂದ್ರನ ಭಕ್ತ, ವಾಯುಪುತ್ರ ಆಂಜನೇಯ ಸ್ವಾಮಿಗಾಗಿ ಮಂಗಳವಾರ ಒಂದು ದೀಪ ಹಚ್ಚಿ, ಅದರಿಂದ ನಿಮ್ಮ ಜೀವನ ದೇದೀಪ್ಯಮಾನವಾಗುತ್ತದೆ. ನಿಮ್ಮ ಎಲ್ಲ ದುಃಖಗಳೂ ದೂರವಾಗುತ್ತವೆ. ನಿಮ್ಮೆಲ್ಲ ಮನೋಕಾಮೇಷ್ಠಿಗಳೂ ನೆರವೇರುತ್ತವೆ. ಹನುಮಂತ ಸ್ವಾಮಿಯು ತನ್ನ ಭಕ್ತರನ್ನು ಸಂಕಟದಿಂದ ಪಾರುಮಾಡುತ್ತಾನೆ. ಆಂಜನೇಯ ತನ್ನ ಭಕ್ತರ ಒಂದು ಕೂಗು, ಒಂದು ಪ್ರಾರ್ಥನೆಗೆ ಓಗೊಡುತ್ತಾನೆ. ಅದರಲ್ಲೂ ಸ್ವಾಮಿಗೆ ಮಂಗಳವಾರ ಒಂದು ದೀಪ ಹಚ್ಚಿ, ನೀನೇ ದಿಕ್ಕು ಅನ್ನಿ ಸಾಕು ನಿಮ್ಮೆಲ್ಲ ಕಷ್ಟಗಳೂ ತೀರುತ್ತವೆ.

ಮಂಗಳವಾರ ಆಂಜನೇಯ ಸ್ವಾಮಿಗೆ ಮಂಗಳಕರ ದಿನ:

ಕಲಿಯುಗದಲ್ಲಿ ಆಂಜನೇಯನ ಉಪಾಸನೆ ಮಾಡುವುದರಿಂದ ತುಂಬಾ ಮಂಗಳಕರವಾಗಿರುತ್ತದೆ. ಮಂಗಳವಾರ ಆಂಜನೇಯ ಸ್ವಾಮಿಯ ದಿನ. ಈ ದಿನ ಆಂಜನೇಯ ಸ್ವಾಮಿಯನ್ನು ವಿಶೇಷವಾಗಿ ಪೂಜಿಸುವುದರಿಂದ ಆತನ ಕೃಪೆ ನಿಮ್ಮ ಮೇಲೆ ಇರುತ್ತದೆ. ಹಾಗೆ ನೋಡಿದರೆ ಆಂಜನೇಯ ಸ್ವಾಮಿ ಸದಾ ಭಕ್ತರಿಗಾಗಿ ಸನ್ನದ್ಧನಾಗಿರುತ್ತಾನೆ. ಈತ ನಿಂತನಿಲುವಿನಲ್ಲೇ ಆಶೀರ್ವಾದ ಮಾಡುತ್ತಾನೆ. ಮಂಗನ ಮುಖ ಹೊಂದಿರುವ ಆಂಜನೇಯ ಸ್ವಾಮಿ ತೇಜೋಮಯ. ಈತನ ದೇಹ ಕಾಂತಿಯುಕ್ತವಾಗಿದೆ. ಜೀವನ್ಮರಣದ ಭಯ ಹೋಗಲಾಡಿಸುತ್ತಾನೆ. ಆಂಜನೇಯ ತುಂಬಾ ಕೃಪಾಳು. ಬನ್ನೀ, ಆಂಜನೇಯ ಸ್ವಾಮಿಗೆ ಮಂಗಳವಾರದಂದು ದೀಪ ಹಚ್ಚಿ ಪೂಜೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ದೀಪ ಹಚ್ಚಿ ಪೂಜೆ ಮಾಡುವುದು ಮತ್ತು ದೀಪ ದಾನ ಮಾಡುವುದು:

ಆಂಜನೇಯ ಸ್ವಾಮಿಗೆ ಮಂಗಳಕರವಾದ ದೀಪ ಹಚ್ಚುವುದುರ ಮಹತ್ವ ಏನು ಅಂದರೆ ಪವನಪುತ್ರ ಆಂಜನೇಯ ವಿಧಿಬದ್ಧವಾಗಿ ದೀಪ ಹಚ್ಚುವ ಸಾಧನಕರಿಗೆ ಮೂರೂ ಲೋಕದಲ್ಲಿ ಕಷ್ಟ ಅನ್ನುವ ಮಾತೇ ಇರುವುದಿಲ್ಲ. ಎಲ್ಲವನ್ನೂ ಸುಲಭವಾಗಿ ದಕ್ಕಿಸಿಕೊಳ್ಳಬಹುದು. ಉದ್ದು, ಗೋಧಿ, ಹೆಸರು, ಎಳ್ಳು, ಅಕ್ಕಿಯಿಂದ ಮಾಡಿದ ದೀಪ ಹಚ್ಚಬೇಕು,ಜೊತೆಗೆ ಈ ದೀಪಗಳ ದಾನವನ್ನು ಮಾಡಬೇಕು. ಆದರೆ ನಿಮ್ಮ ಮನೋಕಾಮನೆ,ಇಚ್ಛೆಗೆ ಅನುಸಾರ ಮಾಡಬೇಕು. ಅವು ಯಾವುವು?

1. ಕನ್ಯಾ ಪ್ರಾಪ್ತಿಗಾಗಿ ದೇವರ ಅಂಗಳ ಸ್ವಚ್ಛಗೊಳಿಸಿ ಲವಂಗ, ಕರ್ಪೂರ, ಏಲಕ್ಕಿ ದೀಪ ಮಾಡಿ ಹಚ್ಚಿಡಬೇಕು. ಇದರಿಂದ ಶುಭವಾಗಿ, ನಿಮ್ಮ ಮನೋ ಇಚ್ಛೆ ನೆರವೇರುತ್ತದೆ.

2. ಆಂಜನೇಯನಿಗಾಗಿ ಸದಾ ಕೆಂಪು ನೂಲಿನಿಂದ ಮಾಡಿದ ದೀಪದ ಎಳೆಗಳನ್ನು ಮಾಡಿಕೊಡು ದೀಪ ಹಚ್ಚಬೇಕು.

3. ಆಂಜನೇಯ ಸ್ವಾಮಿಯ ಪೂಜೆ ಮಾಡುವಾಗಲೂ ಸಹ ಕೆಂಪು ವಸ್ತ್ರ ಧರಿಸಿರಬೇಕು. ಕೆಂಪು ಹೂವನ್ನು ಬಳಸಬೇಕು. ಏಕೆಂದರೆ ಹನುಮಂತ ಸ್ವಾಮಿಗೆ ಕೆಂಪು ಬಣ್ಣವೆಂದರೆ ತುಂಬಾ ಇಷ್ಟ.

4. ಸ್ಫಟಿಕ ಶಿಲೆಯಿಂದ ಮಾಡಿದ ಸೂಕ್ತ ಶಿವಲಿಂಗದ ಸಮೀಪದಲ್ಲಿ ಅಥವಾ ಸಾಲಿಗ್ರಾಮದ ಪಕ್ಕದಲ್ಲಿ ಕುಳಿತು ದೀಪ ದಾನ ಮಾಡಬೇಕು. ಇದರಿಂದ ಐಶ್ವರ್ಯ ವೃದ್ಧಿಯಾಗುತ್ತದೆ.

5. ವಿಷ ಅಥವಾ ವ್ಯಾಧಿಯನ್ನು ದೂರ ಮಾಡಬೇಕು ಅಂದರೆ ಹನುಮಂತನ ವಿಗ್ರಹದ ಪಕ್ಕ ಕುಳಿತು ದೀಪ ದಾನ ಮಾಡಬೇಕು.

6. ಇನ್ನೂ ನಾನಾ ವ್ಯಾಧಿಗಳು, ಭಾದೆಗಳಿಂದ ಮುಕ್ತರಾಗಲು ಹಸುವಿನ ಸಗಣಿಯಿಂದ ದೀಪ ಮಾಡಿ ಹಚ್ಚಬೇಕು.

(fire a lamp in the worship of hanuman for fulfill your wish)

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ