Lord Ganesha: ಕನಸಲ್ಲಿ ಗಣೇಶ ಕಾಣಿಸಿಕೊಂಡರೆ ಏನರ್ಥ?

ಸಂಕಟ ಹರ ಶಿವ ಹಾಗೂ ಪಾರ್ವತಿ ಮಾತೆಯ ಪುತ್ರ ಗಣೇಶ ಕನಸಲ್ಲಿ ಬರುವುದು ಶುಭ ಸಂಕೇತ. ಕನಸಲ್ಲಿ ಗಣೇಶನ ದರ್ಶನವಾದರೆ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಂತೋಷ ನೆಲೆಸುತ್ತದೆ. ನಿಮ್ಮ ಕೆಲಸದಲ್ಲಾದ ಅಡೆ-ತಡೆ ನಿವಾರಣೆಯಾಗುತ್ತದೆ.

Lord Ganesha: ಕನಸಲ್ಲಿ ಗಣೇಶ ಕಾಣಿಸಿಕೊಂಡರೆ ಏನರ್ಥ?
ಗಣೇಶ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 07, 2021 | 4:55 PM

ರಾತ್ರಿ ಮಲಗಿದಾಗ ಪ್ರತಿಯೊಬ್ಬರಿಗೂ ಕನಸು ಬೀಳುತ್ತೆ. ಇದು ಸಾಮಾನ್ಯ. ಆದರೆ ಆ ಕನಸಿನ ಹಿಂದೆ ಏನಾದರೂ ಸೂಚನೆ ಇದೆಯಾ ಎಂಬ ಅನುಮಾನ ಕೆಲವೊಮ್ಮೆ ನಮಗೆ ಬರುತ್ತೆ. ನಮ್ಮಲ್ಲಿ ಹೆಚ್ಚಿನವರು ರಾತ್ರಿ ಕಂಡ ಕನಸನ್ನು ಬೆಳಗ್ಗೆ ಏಳೋವಷ್ಟರಲ್ಲಿ ಮರೆತು ಹೋಗುತ್ತಾರೆ. ಇನ್ನು ಕೆಲವರು ಕಂಡ ಕನಸಿನ ಹಿಂದೆ ಏನಾದರು ಸೂಚನೆ ಇದೆಯಾ ಎಂದು ತಲೆ ಕೆಡಿಸಿಕೊಳ್ಳುತ್ತಾರೆ. ನಮ್ಮ ಕನಸುಗಳು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ. ಕೆಲವರು ಅದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ನಿದ್ರೆಯ ಸಮಯದಲ್ಲಿ ನಾವು ಕಾಣುವ ಕನಸು ನಮ್ಮ ನಿಯಂತ್ರಣಕ್ಕೆ ಮೀರಿದ್ದು. ಸದ್ಯ ನಾವೀಗ ಕನಸಲ್ಲಿ ವಿಘ್ನ ನಿವಾರಕ ಗಣೇಶನ ದರ್ಶನವಾದರೇ ಏನು ಫಲ ಎಂಬ ಬಗ್ಗೆ ತಿಳಿಸಿಕೊಟ್ಟಿದ್ದೇವೆ.

ಸಂಕಟ ಹರ ಶಿವ ಹಾಗೂ ಪಾರ್ವತಿ ಮಾತೆಯ ಪುತ್ರ ಗಣೇಶ ಕನಸಲ್ಲಿ ಬರುವುದು ಶುಭ ಸಂಕೇತ. ಕನಸಲ್ಲಿ ಗಣೇಶನ ದರ್ಶನವಾದರೆ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಂತೋಷ ನೆಲೆಸುತ್ತದೆ. ನಿಮ್ಮ ಕೆಲಸದಲ್ಲಾದ ಅಡೆ-ತಡೆ ನಿವಾರಣೆಯಾಗುತ್ತದೆ. ಮತ್ತು ಸಾಕ್ಷಾತ್ ಗಣೇಶನೇ ನಿಮ್ಮ ಕೆಲಸಗಳಲ್ಲಿ ಉಂಟಾದ ವಿಘ್ನವನ್ನು ನಿವಾರಣೆ ಮಾಡಿ ಕೆಲಸಗಳಾಗುವಂತೆ ಮಾಡುತ್ತಾರೆ. ನಿಮ್ಮ ಮೇಲೆ ಕೃಪೆ ತೋರುತ್ತಾನೆ.

ಸಾಮಾನ್ಯವಾಗಿ ಹೊಸ ಕೆಲಸ ಅಥವಾ ಶುಭ ಕಾರ್ಯದ ಸಮಯದಲ್ಲಿ ಗಣೇಶನ ಪೂಜೆ ಮಾಡಲಾಗುತ್ತೆ. ಆದ್ರೆ ಗಣೇಶನೇ ಕನಸಲ್ಲಿ ಬಂದರೇ ತಮ್ಮ ಎಲ್ಲಾ ಕೆಲಸಗಳಿಗೂ ಗಣೇಶನ ಕೃಪೆ ಇದೆ ಎಂದರ್ಥ ಎಂದು ನಂಬಲಾಗಿದೆ. ಗಣೇಶನಿಗೆ ಮೊದಲ ಪೂಜೆಯ ಆದ್ಯತೆ ಇದೆ. ಹಾಗೂ ಗಣಪತಿ ಮಂಗಳಕರನಾಗಿದ್ದು ಒಬ್ಬ ವ್ಯಕ್ತಿಯು ಗಣೇಶನ ಬಗ್ಗೆ ಕನಸು ಕಂಡಾಗ, ಅವನು ಅಥವಾ ಅವಳು ಯಶಸ್ಸನ್ನು ಸಾಧಿಸುತ್ತಾರೆ ಎಂದರ್ಥ.

ಮೇಲಾಗಿ, ಗಣೇಶನನ್ನು ಸುಖಕರ್ತ ಎಂದೂ ಕರೆಯುತ್ತಾರೆ, ಅಂದರೆ ಒಳ್ಳೆಯದನ್ನು ಮಾಡುವವರು ಅಥವಾ ಸಂತೋಷವನ್ನು ಸುರಿಸುವವರು. ಆದ್ದರಿಂದ ಒಬ್ಬ ವ್ಯಕ್ತಿಯು ಗಣೇಶನ ಬಗ್ಗೆ ಕನಸು ಕಂಡಾಗ, ಅವನು ಸಂತೋಷವಾಗಿರುತ್ತಾನೆ.

ನಿಮ್ಮ ಕನಸಿನಲ್ಲಿ ನೀವು ಗಣೇಶನನ್ನು ನೋಡಿದಾಗ, ನೀವು ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಬಹುದು ಅಥವಾ ನಿಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಆರಂಭವನ್ನು ಹೊಂದಬಹುದು ಎಂದು ಸಹ ಸೂಚಿಸಲಾಗಿದೆ. ಅಥವಾ ನೀವು ಗಣೇಶ ದೇವರಲ್ಲಿ ಏನಾದರೂ ಹರಕೆ ಹೊತ್ತಿಕೊಂಡಿದ್ದು ಅದನ್ನು ನೆರವೇರಿಸಿಲ್ಲ ಅಥವಾ ಅದರ ಸಮಯ ಬಂದಾಗಿದೆ ಎಂದು ನೆನಪಿಸಲು ಸಹ ಗಣೇಶ ಕನಸಲ್ಲಿ ಬರುತ್ತಾನೆ. ಈ ರೀತಿ ಕನಸಲ್ಲಿ ನಾವು ಕಾಣುವ ಪ್ರತಿಯೊಂದು ವಸ್ತು, ಪ್ರಾಣಿ, ಕ್ರಿಯೆಗೂ ಅದರದೇ ಆದ ಮಹತ್ವ, ಅರ್ಥ, ಸೂಚನೆ ಇರುತ್ತದೆ. ಇನ್ನು ಕೆಲ ಜ್ಞಾನಿಗಳು ಕನಸ್ಸೆಂಬುವುದು ನಮ್ಮ ಭವಿಷ್ಯ. ದೇವರು ನಮಗೆ ತೋರಿಸುವ ಮಾರ್ಗ ಎಂದು ಹೇಳತ್ತಾರೆ.

ಇದನ್ನೂ ಓದಿ: ಗಣೇಶ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತರಲು ಗುದುಗಿನ ಹುಗ್ಗಿ ಮಾಡಿ

Published On - 7:03 am, Thu, 26 August 21