Vastu Tips: ಫ್ರಿಡ್ಜ್ ಮೇಲೆ ಮರೆತೂ ಈ ವಸ್ತು ಇಡಬೇಡಿ; ಆರ್ಥಿಕ ನಷ್ಟ ತರಬಲ್ಲ ಮುನ್ನೆಚ್ಚರಿಕೆಗಳು ಇಲ್ಲಿವೆ!
ಇತ್ತೀಚಿನ ದಿನಗಳಲ್ಲಿ ಫ್ರಿಡ್ಜ್ ಮೇಲ್ಭಾಗವನ್ನು ಹಲವು ವಸ್ತುಗಳನ್ನಿಡಲು ಬಳಸುತ್ತೇವೆ. ವಾಸ್ತು ಪ್ರಕಾರ, ಕೆಲವು ವಸ್ತುಗಳನ್ನು ಇಡುವುದು ಅಶುಭ. ಆದರೆ, ತಾಮ್ರದ ಪಾತ್ರೆ, ಬಿದಿರಿನ ಗಿಡ, ಆಮೆಯ ವಿಗ್ರಹ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹಾಗೂ ಆರ್ಥಿಕ ಪ್ರಗತಿ ಕಂಡುಬರುತ್ತದೆ. ಕೀಲಿಗಳು, ಔಷಧಿಗಳು, ಮುರಿದ ವಸ್ತುಗಳು, ಖಾಲಿ ಪಾತ್ರೆಗಳು ಅಥವಾ ಹಳೆಯ ಬಿಲ್‌ಗಳನ್ನು ಇಡುವುದರಿಂದ ದಾರಿದ್ರ್ಯ ಮತ್ತು ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಸರಿಯಾದ ವಸ್ತುಗಳ ಆಯ್ಕೆ ಮುಖ್ಯ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್ ಅತ್ಯಗತ್ಯ ವಸ್ತುವಾಗಿದೆ. ಸಾಮಾನ್ಯವಾಗಿ ಜಾಗದ ಕೊರತೆಯಿಂದಾಗಿ ಅಥವಾ ಸುಲಭವಾಗಿ ಸಿಗಲಿ ಎಂಬ ಕಾರಣಕ್ಕೆ ನಾವೆಲ್ಲರೂ ಫ್ರಿಡ್ಜ್ ಮೇಲ್ಭಾಗವನ್ನು ಕೆಲವು ವಸ್ತುಗಳನ್ನು ಇಡಲು ಬಳಸುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಫ್ರಿಡ್ಜ್ ಮೇಲ್ಭಾಗದಲ್ಲಿ ಕೀಗಳು, ಔಷಧಿಗಳು ಸೇರಿದಂತೆ ಕೆಲವು ವಸ್ತುಗಳನ್ನು ಇಡುವುದು ತೀವ್ರ ಅಶುಭ ಎನ್ನಲಾಗುತ್ತದೆ. ಆದಾಗ್ಯೂ, ವಾಸ್ತು ನಿಯಮಗಳ ಪ್ರಕಾರ ಫ್ರಿಡ್ಜ್ ಮೇಲೆ ಕೆಲವು ನಿರ್ದಿಷ್ಟ ವಸ್ತುಗಳನ್ನು ಇಡುವುದರಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು ಮತ್ತು ಆರ್ಥಿಕ ಪ್ರಗತಿಗೂ ಕಾರಣವಾಗಬಹುದು. ಹಾಗಾದರೆ ಫ್ರಿಡ್ಜ್ ಮೇಲೆ ಯಾವ ವಸ್ತುಗಳನ್ನು ಇಡಬೇಕು? ಯಾವುದನ್ನು ಇಡಬಾರದು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಫ್ರಿಡ್ಜ್ ಮೇಲೆ ಇವುಗಳನ್ನು ಇಟ್ಟರೆ ಆರ್ಥಿಕ ಪ್ರಗತಿ ಖಂಡಿತ:
ವಾಸ್ತು ಶಾಸ್ತ್ರದ ಪ್ರಕಾರ, ಕೆಳಗಿನ ವಸ್ತುಗಳನ್ನು ರೆಫ್ರಿಜರೇಟರ್ ಮೇಲೆ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ:
- ತಾಮ್ರದ ಪಾತ್ರೆ: ನೀವು ಫ್ರಿಡ್ಜ್ ಮೇಲೆ ಒಂದು ಸಣ್ಣ ತಾಮ್ರದ ಪಾತ್ರೆ ಅಥವಾ ಗಿಂಡಿಯನ್ನು ಇಡಬಹುದು. ಆ ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರನ್ನು ತುಂಬಿಸಿ ಇಡುವುದು ವಿಶೇಷ. ಹೀಗೆ ಮಾಡುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಹರಿದುಬರುತ್ತದೆ ಮತ್ತು ಆರ್ಥಿಕ ಲಾಭವೂ ಸಿಗುತ್ತದೆ.
- ಬಿದಿರಿನ ಗಿಡ (Bamboo Plant): ಫ್ರಿಡ್ಜ್ ಮೇಲೆ ಒಂದು ಸಣ್ಣ ಬಿದಿರಿನ ಗಿಡವನ್ನು ಇಡುವುದು ಅತ್ಯಂತ ಶ್ರೇಷ್ಠ. ಇದು ಜಾತಕದಲ್ಲಿ ರಾಹುವಿಗೆ ಸಂಬಂಧಿಸಿದ ಅಶುಭ ಪರಿಣಾಮಗಳನ್ನು ಮತ್ತು ಮನೆಯ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೆ ಬುಧ ಗ್ರಹವನ್ನು ಬಲಪಡಿಸಿ ವ್ಯಾಪಾರ-ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.
- ಹಿತ್ತಾಳೆ ಅಥವಾ ಗಾಜಿನ ಆಮೆ: ಫ್ರಿಡ್ಜ್‌ನ ಮೇಲ್ಭಾಗದಲ್ಲಿ ಹಿತ್ತಾಳೆ ಅಥವಾ ಗಾಜಿನಿಂದ ಮಾಡಿದ ಸಣ್ಣ ಆಮೆಯ ವಿಗ್ರಹವನ್ನು ಇಡಬಹುದು. ಇದರಿಂದ ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಇದು ಮನೆಯ ಆರ್ಥಿಕ ಪ್ರಗತಿಗೆ ಹೊಸ ದಾರಿಗಳನ್ನು ತೆರೆಯುತ್ತದೆ.
ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ
ಮರೆತೂ ಇವುಗಳನ್ನು ಫ್ರಿಡ್ಜ್ ಮೇಲೆ ಇಡಬೇಡಿ ದರಿದ್ರ ಬೆನ್ನತ್ತಬಹುದು:
ವಾಸ್ತು ನಿಯಮಗಳ ಪ್ರಕಾರ, ರೆಫ್ರಿಜರೇಟರ್ ಮೇಲೆ ಕೆಳಗಿನ ವಸ್ತುಗಳನ್ನು ಇಟ್ಟರೆ ನಕರಾತ್ಮಕ ಶಕ್ತಿ ಹೆಚ್ಚಾಗಿ, ಧನಹಾನಿ ಉಂಟಾಗುತ್ತದೆ. ಫ್ರಿಡ್ಜ್ ಮೇಲೆ ಔಷಧಿಗಳನ್ನು ಇಡುವುದರಿಂದ ಮನೆಯಲ್ಲಿ ಅನಾರೋಗ್ಯದ ವಾತಾವರಣ ಮುಂದುವರಿಯುತ್ತದೆ. ಇನ್ನು ಕೀಲಿಗಳ ಗೊಂಚಲುಗಳನ್ನು ಇಡುವುದರಿಂದ ಆರ್ಥಿಕ ಪ್ರಗತಿ ಕುಂಠಿತಗೊಳ್ಳುತ್ತದೆ. ಇದಲ್ಲದೇ ಯಾವುದೇ ಹಾನಿಗೊಳಗಾದ ಅಥವಾ ಮುರಿದ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡಬಾರದು. ಹಾಗೆಯೇ ಖಾಲಿ ಪಾತ್ರೆಗಳನ್ನು ಇಡುವುದರಿಂದ ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆ. ಮನೆಗೆ ಸಂಬಂಧಿಸಿದ ಹಳೆಯ ಬಿಲ್‌ಗಳು, ದಿನಸಿ ಲಿಸ್ಟ್‌ಗಳು ಅಥವಾ ಅನಗತ್ಯ ಕಾಗದದ ದಾಖಲೆಗಳನ್ನು ಫ್ರಿಡ್ಜ್ ಮೇಲೆ ರಾಶಿ ಹಾಕಬೇಡಿ. ಇದು ಮನೆಯಲ್ಲಿ ಸಾಲದ ಬಾಧೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




