AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರು ಪೂರ್ಣಿಮಾ 2025: ಗುರು ದೋಷ ಪರಿಹಾರಕ್ಕಾಗಿ ಹಾಗೂ ಗುರು ಬಲ ಪಡೆಯಲು ಗುರು ಕೃಪೆಗೆ ಪಾತ್ರರಾಗಲು ಸುಲಭ ಮಾರ್ಗಗಳು

ಗುರು ಪೂರ್ಣಿಮೆ ಕೇವಲ ಒಂದು ಆಚರಣೆಯಲ್ಲ, ಅದು ಗುರುಗಳ ಮೇಲಿನ ಭಕ್ತಿ, ಶ್ರದ್ಧೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಅವಕಾಶ. ಈ ದಿನದಂದು ನೀವು ಮಾಡುವ ಸಣ್ಣ ಪ್ರಯತ್ನವೂ ನಿಮ್ಮ ಜೀವನದಲ್ಲಿ ದೊಡ್ಡ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಗುರುಗಳ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಜ್ಞಾನ ವೃದ್ಧಿಸಲಿ ಎಂದು ಹಾರೈಸೋಣ.

ಗುರು ಪೂರ್ಣಿಮಾ 2025: ಗುರು ದೋಷ ಪರಿಹಾರಕ್ಕಾಗಿ ಹಾಗೂ ಗುರು ಬಲ ಪಡೆಯಲು ಗುರು ಕೃಪೆಗೆ ಪಾತ್ರರಾಗಲು ಸುಲಭ ಮಾರ್ಗಗಳು
Guru Purnima
ಅಕ್ಷಯ್​ ಪಲ್ಲಮಜಲು​​
| Updated By: Digi Tech Desk|

Updated on:Jul 02, 2025 | 5:58 PM

Share

ಜುಲೈ 10, ಗುರುವಾರ 2025 ರಂದು ಗುರು ಪೂರ್ಣಿಮಾ: ಈ ಗುರು ಪೂರ್ಣಿಮೆಯು ಜ್ಞಾನ, ವಿವೇಕ ಮತ್ತು ಸದ್ಗುಣಗಳ ಪ್ರತೀಕವಾದ ಗುರುವನ್ನು ಸ್ಮರಿಸುವ ಮತ್ತು ಗೌರವಿಸುವ ಪವಿತ್ರ ದಿನ. ಹಿಂದೂ ಸಂಸ್ಕೃತಿಯಲ್ಲಿ ಗುರುವನ್ನು ದೇವರ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ‘ಗು’ ಎಂದರೆ ಕತ್ತಲು, ‘ರು’ ಎಂದರೆ ಅದನ್ನು ನಿವಾರಿಸುವವರು. ಅಜ್ಞಾನದ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವರೇ ಗುರು. ಈ ದಿನ ಗುರುಗಳ ಆಶೀರ್ವಾದ ಪಡೆದರೆ ಜೀವನದಲ್ಲಿ ಶುಭವಾಗುತ್ತದೆ ಎಂಬ ನಂಬಿಕೆಯಿದೆ.

ಗುರು ಪೂರ್ಣಿಮಾ 2025ರ ವಿಶೇಷ:

ಈ ವರ್ಷದ ಗುರು ಪೂರ್ಣಿಮೆಯು ಗುರುವಾರದಂದೇ ಬಂದಿರುವುದು ವಿಶೇಷ. ಜ್ಯೋತಿಷ್ಯದ ಪ್ರಕಾರ, ಗುರು ಗ್ರಹವು ಸುಖ, ಸಮೃದ್ಧಿ, ಸೌಭಾಗ್ಯ ಮತ್ತು ಜ್ಞಾನಕ್ಕೆ ಅಧಿಪತಿ. ಗುರುಬಲ ಇಲ್ಲದವರು ಸಹ ಈ ದಿನದಂದು ವಿಶೇಷ ಪರಿಹಾರಗಳನ್ನು ಮಾಡುವುದರಿಂದ ಗುರುಬಲ ಪ್ರಾಪ್ತವಾಗಿ ಶುಭ ಫಲಗಳನ್ನು ಪಡೆಯಬಹುದು. ಗುರುಬಲ ಇರುವ ರಾಶಿಗಳಿಗೆ ಇದರ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ.

ಗುರು ಪೂರ್ಣಿಮಾದಂದು ಗುರು ಕೃಪೆಗೆ ಪಾತ್ರರಾಗಲು ಯಾವೆಲ್ಲಾ ಪರಿಹಾರಗಳನ್ನು ಮಾಡಬಹುದು

ವಿಶೇಷ ಗುರು ಸನ್ನಿಧಾನಗಳಿಗೆ ಭೇಟಿ

ಗುರು ಪೂರ್ಣಿಮೆಯಂದು ಗುರು ಸನ್ನಿಧಾನಗಳಿಗೆ ಭೇಟಿ ನೀಡುವುದು ಅತ್ಯಂತ ಶುಭಕರ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿರುವ ಕೆಲವು ಪ್ರಮುಖ ಗುರು ಸ್ಥಳಗಳು ಇಲ್ಲಿವೆ:

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠ: ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೂಲ ಬೃಂದಾವನವಿರುವ ಈ ಸ್ಥಳವು ಗುರು ಕೃಪೆಗೆ ಅತ್ಯಂತ ಪ್ರಶಸ್ತವಾದ ಜಾಗ. ಇಲ್ಲಿ ತೀರ್ಥಸ್ನಾನ ಮಾಡಿ, ದರ್ಶನ ಪಡೆದು, ಪ್ರಸಾದ ಭೋಜನ ಮಾಡಿದರೆ ಗುರುಗಳ ವಿಶೇಷ ಆಶೀರ್ವಾದ ಲಭಿಸುತ್ತದೆ.

ಶಿರಡಿ ಸಾಯಿಬಾಬಾ ದೇಗುಲ: ಶಿರಡಿ ಸಾಯಿಬಾಬಾ ಅವರು ಸಕಲ ಧರ್ಮೀಯರಿಗೂ ಗುರು ಸ್ವರೂಪರಾಗಿದ್ದಾರೆ. ಇಲ್ಲಿಗೆ ಭೇಟಿ ನೀಡಿ ಅವರ ದರ್ಶನ ಪಡೆದರೆ ಆಧ್ಯಾತ್ಮಿಕ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ.

ಗಣಗಾಪುರ ದತ್ತಾತ್ರೇಯ ಸನ್ನಿಧಿ: ಗಣಗಾಪುರವು ದತ್ತಾತ್ರೇಯ ದೇವರ ಅವತಾರ ಸ್ಥಳ. ಇಲ್ಲಿಗೆ ಭೇಟಿ ನೀಡಿ ದತ್ತಾತ್ರೇಯ ದೇವರ ದರ್ಶನ ಪಡೆದರೆ ಜೀವನದ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿರುವ ಶ್ರೀ ಸದ್ಗುರು ಶ್ರೀಧರ ಸ್ವಾಮಿಗಳ ಆಶ್ರಮ: ಸಾಗರದಲ್ಲಿರುವ ಶ್ರೀ ಸದ್ಗುರು ಶ್ರೀಧರ ಸ್ವಾಮಿಗಳವರ ಆಶ್ರಮ ಕೂಡ ಗುರು ಪೂರ್ಣಿಮೆಯಂದು ಭೇಟಿ ನೀಡಲು ಸೂಕ್ತ ಸ್ಥಳ.

ತಮಿಳುನಾಡಿನ ಗುರುಸ್ಥಳಂ ಶಿವ ದೇಗುಲ: ಈ ದೇಗುಲವು ಗುರು ಗ್ರಹಕ್ಕೆ ಸಮರ್ಪಿತವಾಗಿದೆ. ಗುರು ದೋಷ ಇರುವವರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ದೋಷ ನಿವಾರಣೆಯಾಗುತ್ತದೆ.

ಈ ಗುರು ಸನ್ನಿಧಾನಗಳಿಗೆ ಪ್ರಯಾಣಿಸಲು ಸಾಧ್ಯವಾಗದಿದ್ದರೆ ಚಿಂತಿಸಬೇಕಾಗಿಲ್ಲ, ನಿಮ್ಮ ಸ್ಥಳೀಯವಾಗಿರುವ ಗುರು ಸನ್ನಿಧಾನಗಳಿಗೆ ಭೇಟಿ ನೀಡಿ. ಕುಲ ಗುರುಗಳ ಮತ್ತು ಅಧ್ಯಾಪಕರ ಆಶೀರ್ವಾದ ಪಡೆಯಿರಿ

ಗುರು ಸನ್ನಿಧಾನಗಳಿಗೆ ಭೇಟಿ ನೀಡಲು ಅಸಾಧ್ಯವಾದರೆ, ನಿಮ್ಮ ಕುಲ ಗುರುಗಳ ಮಠಗಳಿಗೆ ತೆರಳಿ. ಅಲ್ಲಿ ಗುರುಗಳಿಗೆ ಪಾದ ಪೂಜೆ ಮಾಡಿ, ಹಣ್ಣು, ವಸ್ತ್ರ ಮತ್ತು ಕಾಣಿಕೆಗಳನ್ನು ಸಮರ್ಪಿಸಿ. ಅವರ ಆಶೀರ್ವಾದ ಮತ್ತು ಮಂತ್ರಾಕ್ಷತೆಯನ್ನು ಪಡೆಯಿರಿ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ.

ಇದಲ್ಲದೆ, ನಿಮ್ಮ ಶಾಲಾ ದಿನಗಳಿಂದ ನಿಮಗೆ ಪಾಠ ಮಾಡಿದ ಅಧ್ಯಾಪಕರು ಅಥವಾ ಗುರುಗಳನ್ನು ಭೇಟಿ ಮಾಡಿ. ಅವರಿಗೆ ಕಾಣಿಕೆ ಸಮರ್ಪಿಸಿ, ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವುದರಿಂದ ಗುರುಗಳ ಜ್ಞಾನದ ಪ್ರಭಾವ ನಿಮ್ಮ ಮೇಲೆ ಬೀರುತ್ತದೆ.

ಗುರು ಪೂರ್ಣಿಮೆ ದಿನದಂದು ವಿಶೇಷ ಪೂಜಾ ಶಾಂತಿ ಹೋಮ ಮತ್ತು ಗುರು ದತ್ತಾತ್ರೇಯ ಹೋಮ

ಇನ್ನು ವಿಶೇಷವಾಗಿ ನಮ್ಮ ಯಾಗಶಾಲೆಯಲ್ಲಿ ಗುರು ಪೂರ್ಣಿಮೆ ದಿನದಂದು ವಿಶೇಷವಾಗಿ “ಸಹಸ್ರ ಗುರು ಶಾಂತಿ ಹೋಮ” ಹಾಗೂ “ಗುರು ದತ್ತಾತ್ರೇಯ ಹೋಮ” ಮಾಡಿ ಅಭಿಮಂತ್ರಿತ ಗುರು ಪಾದುಕೆಗಳು ಹಾಗೂ ವಿಶೇಷ ಧನಾಕರ್ಷಕ ಮಣಿ ಕಳುಹಿಸಿ ಕೊಡುತ್ತೇವೆ ಆ ಪೂಜೆಯಲ್ಲಿ ಸಂಕಲ್ಪಕ್ಕೆ ನಿಮ್ಮ ಹೆಸರು ನೀಡಲು ಕೂಡಲೇ 6361335497 ನಂಬರ್ ಗೆ ನಿಮ್ಮ ವಿವರ whatsapp ಮಾಡಿಕೊಳ್ಳಿ ಅಥವಾ

ಗುರು ಪೂರ್ಣಿಮೆಯಂದು ಸರಳ ಮತ್ತು ಪರಿಣಾಮಕಾರಿ ಪರಿಹಾರಗಳು

ಇನ್ನು ಮೇಲೆ ತಿಳಿಸಿದ ಯಾವುದೆ ವಿಧನಗಳನ್ನು ಪಾಲಿಸಲು ಅಸಾಧ್ಯವಾದರೆ, ಗುರು ಪೂರ್ಣಿಮೆಯಂದು ಅನುಸರಿಸಬಹುದಾದ ಕೆಲವು ಸರಳ ಪರಿಹಾರಗಳು ಇಲ್ಲಿವೆ:

ಉಪವಾಸ ಮತ್ತು ಪ್ರದಕ್ಷಿಣೆ: ಗುರು ಪೂರ್ಣಿಮೆಯ ದಿನ ಒಂದು ಹೊತ್ತು ಉಪವಾಸ ಇರುವುದು ಉತ್ತಮ. ನಿಮ್ಮ ಮನೆಯ ಸಮೀಪದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠ ಅಥವಾ ದತ್ತಾತ್ರೇಯ ದೇವಸ್ಥಾನ ಅಥವಾ ಸಾಯಿಬಾಬಾ ದೇಗುಲ ಹೀಗೆ ಯಾವುದಾದರೂ ಗುರು ದೇಗುಲದಲ್ಲಿ 28 ಪ್ರದಕ್ಷಿಣೆಗಳನ್ನು ಮಾಡಿ. ಇದು ಗುರುಬಲವನ್ನು ವೃದ್ಧಿಸುತ್ತದೆ.

ಕಡಲೆ ಕಾಳು ಸಮರ್ಪಣೆ: ಒಂದು ಅರಿಶಿನ ಬಣ್ಣದ ವಸ್ತ್ರದಲ್ಲಿ 1 ಕೆ.ಜಿ. ಅಷ್ಟು ಕಡಲೆ ಕಾಳುಗಳನ್ನು ಗಂಟು ಕಟ್ಟಿ, ಅದನ್ನು ದೇಗುಲದಲ್ಲಿ ಸಮರ್ಪಿಸಿ. ಕಡಲೆ ಕಾಳು ಗುರು ಗ್ರಹಕ್ಕೆ ಸಂಬಂಧಿಸಿದ್ದು, ಇದನ್ನು ಸಮರ್ಪಿಸುವುದರಿಂದ ಗುರು ಗ್ರಹದ ಅನುಗ್ರಹ ಲಭಿಸುತ್ತದೆ.

ಸ್ತೋತ್ರ ಪಠಣ: ಗುರು ಪೂರ್ಣಿಮೆಯ ಬೆಳಗ್ಗೆ, ಮನೆಯಲ್ಲಿಯೇ ದತ್ತಾತ್ರೇಯ ವಜ್ರ ಕವಚ ಸ್ತೋತ್ರ, ಗುರು ಗ್ರಹದ ಅಷ್ಟೋತ್ತರ (ಗುರುವಿನ 108 ನಾಮಗಳು), ರಾಘವೇಂದ್ರ ಸ್ತೋತ್ರಗಳು ಇತ್ಯಾದಿಗಳನ್ನು ಶ್ರದ್ಧೆಯಿಂದ ಪಠಿಸಿ. ಈ ಸ್ತೋತ್ರಗಳ ಪಠಣವು ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಮತ್ತು ಗುರುಗಳ ಕೃಪೆಗೆ ಪಾತ್ರರಾಗಲು ಸಹಾಯ ಮಾಡುತ್ತದೆ.

ಲೇಖನ: ವಿಠ್ಠಲ ಭಟ್

8105682380

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Wed, 2 July 25

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?