ಈ ಗ್ರಾಮದಲ್ಲಿ ಹನುಮಂತನನ್ನು ಪೂಜಿಸುವುದು ನಿಷಿದ್ಧ; ಕಾರಣವೇನು ಗೊತ್ತಾ?
ರಾಮನ ಮೇಲೆ ಹನುಮಂತನಿಗಿದ್ದ ಭಕ್ತಿಯನ್ನು, ಪ್ರೀತಿಯನ್ನು ನಾವು ಯಾರಲ್ಲಿಯೂ ನೋಡಲು ಸಾಧ್ಯವಿಲ್ಲ. ಅದರಂತೆ ಎಲ್ಲೇ ರಾಮನನ್ನು ಪೂಜಿಸಿದರೂ ಅಲ್ಲೊಂದು ಹನುಮಂತನ ದೇವಾಲಯ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಗ್ರಾಮದಲ್ಲಿ ರಾಮಭಕ್ತರಿದ್ದರೂ ಇಲ್ಲಿ ಹನುಮನನ್ನು ಪೂಜಿಸುವುದು ಮತ್ತು ಹನುಮಂತನ ನಾಮ ಜಪಿಸುವುದು ನಿಷಿದ್ಧವಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಭಾರತದಲ್ಲಿ ರಾಮನನ್ನು ಪೂಜಿಸುವ ಒಂದು ಸ್ಥಳವಿದೆ ಆದರೆ ಇಲ್ಲಿ ಹನುಮಂತನನ್ನು ಪೂಜಿಸುವುದು ನಿಷಿದ್ಧ. ಸಾಮಾನ್ಯವಾಗಿ ರಾಮನನ್ನು ಪೂಜಿಸುವಲ್ಲು ಹನುಮ ಇದ್ದೇ ಇರುತ್ತಾನೆ. ಆದರೆ ಇಲ್ಲಿ ಹನುಮಂತನ ಯಾವುದೇ ದೇವಸ್ಥಾನವಿಲ್ಲ ಜೊತೆಗೆ ಇಲ್ಲಿ ಹನುಮಂತನ ನಾಮವನ್ನು ಜಪಿಸುವಂತಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹನುಮಂತನ ನಾಮವನ್ನು ಜಪಿಸದಂತೆ ನಿಷೇಧಿಸಿರುವ ಗ್ರಾಮ ಉತ್ತರಾಖಂಡದ ಚಮೋಲಿಯಲ್ಲಿ ದ್ರೋಣಗಿರಿಯಲ್ಲಿದೆ. ಇಲ್ಲಿ ರಾಮನನ್ನು ಜನ ಪೂಜಿಸಿದರೂ ಹನುಮಂತನಿಗೆ ಯಾವುದೇ ದೇವಾಲಯವಿಲ್ಲ. ನಂಬಿಕೆಗಳ ಪ್ರಕಾರ, ಇದರ ಕಥೆ ರಾಮಾಯಣ ಅವಧಿಗೆ ಸಂಬಂಧಿಸಿದೆ. ರಾವಣನೊಂದಿಗಿನ ಯುದ್ಧದಲ್ಲಿ ಲಕ್ಷ್ಮಣ ಪ್ರಜ್ಞಾಹೀನನಾಗಿದ್ದಾಗ, ಹನುಮಂತ ಸಂಜೀವಿನಿ ಗಿಡಮೂಲಿಕೆಯನ್ನು ಪಡೆಯಲು ಈ ಗ್ರಾಮಕ್ಕೆ ಬಂದನು ಎಂದು ಹೇಳಲಾಗುತ್ತದೆ. ಗಿಡಮೂಲಿಕೆಯನ್ನು ಹುಡುಕುತ್ತಿರುವಾಗ, ಹನುಮಂತನಿಗೆ ಪರ್ವತದ ಮೇಲೆ ಮೂಲಿಕೆಯನ್ನು ಗುರುತಿಸಲು ಸಾಧ್ಯವಾಗದೆ ಇಡೀ ಪರ್ವತವನ್ನು ಹೊತ್ತು ಹೋದನು.
ಇದನ್ನೂ ಓದಿ: ಶಿವ ದೇವಾಲಯದಲ್ಲಿ ಮೂರು ಬಾರಿ ಚಪ್ಪಾಳೆ ತಟ್ಟುವುದೇಕೆ? ಹಿಂದಿನ ಕಾರಣವನ್ನು ತಿಳಿಯಿರಿ
ಹನುಮಂತ ಹೀಗೆ ಮಾಡಿದ್ದಕ್ಕಾಗಿ ಸ್ಥಳೀಯ ದೇವತೆಯ ಸಿಟ್ಟಿಗೆ ಕಾರಣವಾಯಿತು. ಹನುಮಂತ ಪರ್ವತವನ್ನು ಕಿತ್ತುಹಾಕುವ ಮೊದಲು ಅನುಮತಿ ಪಡೆಯಲಿಲ್ಲ ಮತ್ತು ಆ ಸಮಯದಲ್ಲಿ ಪರ್ವತ ದೇವತೆ ಧ್ಯಾನದಲ್ಲಿ ನಿರತನಾಗಿದ್ದರು ಎಂದು ಸ್ಥಳೀಯರು ನಂಬುತ್ತಾರೆ. ಹನುಮಂತ ಪರ್ವತ ದೇವತೆಯ ಬಲಗೈಯನ್ನು ಕಿತ್ತುಕೊಂಡು ಹೋದನು, ಇದರಿಂದಾಗಿ ಇಂದಿಗೂ ಇಲ್ಲಿನ ಜನರು ಹನುಮಂತನನ್ನು ಕ್ಷಮಿಸುವುದಿಲ್ಲ. ಇದೇ ಕಾರಣಕ್ಕೆ ಇಲ್ಲಿನ ಜನರು ಹನುಮಂತನನ್ನು ಇಲ್ಲಿಗೆ ವರೆಗೂ ಪೂಜಿಸುತ್ತಿಲ್ಲ, ಜೊತೆಗೆ ಇಲ್ಲಿ ಹನುಮನ ನಾಮವನ್ನು ಜಪಿಸುವಂತಿಲ್ಲ ಎಂದು ಹೇಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 am, Fri, 18 July 25








