Hanuman Jayanti 2024: ಹನುಮಾನ್ ಜಯಂತಿಯಂದು ಈ ಮಂತ್ರ ಪಠಿಸಿ! ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತೆ

| Updated By: ಅಕ್ಷತಾ ವರ್ಕಾಡಿ

Updated on: Apr 22, 2024 | 6:31 PM

ಹನುಮಾನ್ ಜಯಂತಿಯಂದು ಆತನ ಆಶೀರ್ವಾದ ಪಡೆಯಲು ಪೂಜೆ ಮಾಡುವ ಸಂದರ್ಭದಲ್ಲಿ ಕೆಲವು ವಿಶೇಷ ಮಂತ್ರಗಳನ್ನು ಪಠಿಸಿ. ಇದರಿಂದ ರಾಮ ಭಕ್ತ ಹನುಮಂತನ ಅನುಗ್ರಹ ದೊರೆಯುವುದಲ್ಲದೆ, ಮನೆಯಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಶಾಂತಿ, ಜೊತೆಗೆ ಸಂತೋಷ, ಯಶಸ್ಸು, ಸಂಪತ್ತು, ಉತ್ತಮ ಆರೋಗ್ಯ ಮತ್ತು ದುಷ್ಟ ಶಕ್ತಿಗಳಿಂದ ಸರ್ವತೋಮುಖ ರಕ್ಷಣೆ ಸಿಗುತ್ತದೆ.

Hanuman Jayanti 2024: ಹನುಮಾನ್ ಜಯಂತಿಯಂದು ಈ ಮಂತ್ರ ಪಠಿಸಿ! ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತೆ
Hanuman Jayanti 2024
Follow us on

ಹನುಮಾನ್ ಜಯಂತಿಯಂದು ಆತನ ಆಶೀರ್ವಾದ ಪಡೆಯಲು ಪೂಜೆ ಮಾಡುವ ಸಂದರ್ಭದಲ್ಲಿ ಕೆಲವು ವಿಶೇಷ ಮಂತ್ರಗಳನ್ನು ಪಠಿಸಿ. ಇದರಿಂದ ರಾಮ ಭಕ್ತ ಹನುಮಂತನ ಅನುಗ್ರಹ ದೊರೆಯುವುದಲ್ಲದೆ, ಮನೆಯಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಶಾಂತಿ, ಜೊತೆಗೆ ಸಂತೋಷ, ಯಶಸ್ಸು, ಸಂಪತ್ತು, ಉತ್ತಮ ಆರೋಗ್ಯ ಮತ್ತು ದುಷ್ಟ ಶಕ್ತಿಗಳಿಂದ ಸರ್ವತೋಮುಖ ರಕ್ಷಣೆ ಸಿಗುತ್ತದೆ. ಹನುಮಾನ್ ಜಯಂತಿಯ ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ ನಿಮ್ಮ ಮನೆಯ ದೇವರಿಗೆ ಅಥವಾ ದೇವಸ್ಥಾನಕ್ಕೆ ಹೋಗಿ ನಿಮ್ಮ ಆಚರಣೆಗಳ ಪ್ರಕಾರ ಪೂಜೆ ಮಾಡಿ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಿ. ಜೊತೆಗೆ ಕೆಲವು ಮಂತ್ರಗಳನ್ನು ಪಠಿಸಿ. ಇದರಿಂದ ನಿಮ್ಮ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.

-ಓಂ ಹನುಮತೇ ನಮಃ।

ಕಾರ್ಯ ಸಿದ್ಧಿಗಾಗಿ ಹನುಮಾನ್ ಮೂಲ ಮಂತ್ರ​ವನ್ನು ಪಠಿಸಿ. ಜೊತೆಗೆ ನಿಮ್ಮ ಜೀವನದಲ್ಲಿರುವ ಅಡೆತಡೆಗಳು ಮತ್ತು ಸಮಸ್ಯೆಗಳ ನಿವಾರಣೆಗೆ ಇದು ಅತ್ಯುತ್ತಮ ಮಂತ್ರವಾಗಿದೆ.

-ಓಂ ಆಂ ಭ್ರೀಂ ಹನುಮತೇ ಶ್ರೀ ರಾಮ ದೂತಾಯ ನಮಃ।

ಹನುಮಂತನ ಬೀಜ ಮಂತ್ರವು ಅವನ ಆಶೀರ್ವಾದ ಪಡೆಯಲು ಅತ್ಯಂತ ಶಕ್ತಿಯುತ ಮಾರ್ಗವಾಗಿದೆ. ಇದು ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೂ ಪರಿಹಾರ ಕೊಡುತ್ತದೆ.

-ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ|
ತನ್ನೋ ಹನುಮತ್‌ ಪ್ರಚೋದಯಾತ್‌||

ಹನುಮಂತನು ಶಕ್ತಿ, ತ್ರಾಣ, ಬುದ್ಧಿವಂತಿಕೆ, ನಿಷ್ಠೆ ಮತ್ತು ಅಚಲ ಭಕ್ತಿಯ ಸಾಕಾರರೂಪ. ಆದ್ದರಿಂದ ಹನುಮಂತನ ಈ ಗಾಯತ್ರಿ ಮಂತ್ರವು ಅವನಂತಹ ಗುಣಗಳನ್ನು ಬೆಳೆಸಿಕೊಳ್ಳಲು ಬಯಸುವವರಿಗೆ ಒಳ್ಳೆಯ ಮಂತ್ರವಾಗಿದೆ.

-ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ।

ಈ ಆಂಜನೇಯ ಮಂತ್ರವು ಹೊಸ ಉದ್ಯೋಗ, ಜೀವನದಲ್ಲಿನ ಯಶಸ್ಸನ್ನು ಪಡೆಯಲು ಶಕ್ತಿಯುತ ಮಂತ್ರವಾಗಿದೆ. ಪ್ರತಿದಿನ ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ ಅಥವಾ ಹೊಸ ಉದ್ಯೋಗವನ್ನು ಪಡೆಯುವಲ್ಲಿ ಯಾವುದೇ ಅಡೆತಡೆಗಳು ಬರುವುದಿಲ್ಲ.

ಇದನ್ನೂ ಓದಿ: ಚೈತ್ರ ಹುಣ್ಣಿಮೆಯ ಪೂಜೆ ಹೇಗೆ ಮಾಡಬೇಕು? ಇಲ್ಲಿದೆ ಸರಳ ಪೂಜಾ ವಿಧಾನ

-ಮನೋಜವಂ ಮಾರೂತತುಲ್ಯವೇಗಂ ಜಿತೇಂದ್ರಿಂ ಬುದ್ಧಿಮತಾಂ ವರಿಷ್ಟಂ|
ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪಧ್ಯೆ||

ಇದು ಶ್ರೀರಾಮನ ಪ್ರೀತಿಯ ಭಕ್ತನಾದ ಹನುಮಂತನನ್ನು ಹೊಗಳಿ ನಮಸ್ಕರಿಸುವ ಮಂತ್ರವಾಗಿದೆ. ಇದನ್ನುಪ್ರತಿನಿತ್ಯ ಪಠಣ ಮಾಡುವುದರಿಂದ ಎಲ್ಲಾ ರೀತಿಯಲ್ಲಿಯೂ ಶುಭಫಲಗಳು ಪ್ರಾಪ್ತಿಯಾಗುತ್ತದೆ.

-ಓಂ ಏಂ ಹ್ರೀಂ ಹನುಮತೇ ರಾಮದೂತೇ ಲಂಕವಿದ್ಮಂಸನೇ
ಅಂಜನೀ ಗರ್ಭ ಸಂಭೂತಾಯ ಶಾಕಿನಿ ಢಾಕಿನಿ ವಿಧ್ವಂಸನಾಯ
ಕಿಲಕಿಲೀ ಬುಬುಕರೇನ ವಿಭೀಷಣ ಹನುಮದ್‌ ದೇವಾಯ ಓಂ ಹ್ರಿಂ ಹ್ರೀಂ ಹಂ ಫಟ್‌ ಸ್ವಾಹಾ||

ಯಾವಾಗಲೂ ನನ್ನನ್ನು ರಕ್ಷಿಸು ಎಂದು ಕೇಳಿಕೊಳ್ಳುವ ಮಂತ್ರ ಇದಾಗಿದೆ. ಯಾವುದೇ ರೀತಿಯ ಕಷ್ಟ ಬಂದರೂ ಕೂಡ ಈ ಮಂತ್ರ ಪಠಣ ಮಾಡುವುದರಿಂದ ಪರಿಹಾರ ಸಿಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ