ವಾಸ್ತು ಶಾಸ್ತ್ರದಲ್ಲಿ ಕವಡೆಗೆ ಇದೆ ಭಾರೀ ಕಿಮ್ಮತ್ತು, ಮನೆಗೆ ತಂದರೆ ವೃದ್ಧಿಸುತ್ತದೆ ಸಂಪತ್ತು!

Significance of conch shells in Vastu Tips: ವಾಸ್ತು ಶಾಸ್ತ್ರದಲ್ಲಿ ಕವಡೆಗೆ ಭಾರೀ ಕಿಮತ್ತು ಇದೆ. ಕವಡೆಯನ್ನು ಪೂಜಾ ಮನೆಗಳಲ್ಲಿ ಇರಿಸಲಾಗುತ್ತದೆ ಮತ್ತು ಇದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ಕವಡೆಗಳನ್ನು ಹೊಂದಿದ್ದರೆ ಅದು ಆರ್ಥಿಕ ಲಾಭವನ್ನು ತರುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ ಲಕ್ಷ್ಮಿ ದೇವಿಯು ಕವಡೆಯಲ್ಲಿ ನೆಲೆಸಿದ್ದಾಳೆ.

ವಾಸ್ತು ಶಾಸ್ತ್ರದಲ್ಲಿ ಕವಡೆಗೆ ಇದೆ ಭಾರೀ ಕಿಮ್ಮತ್ತು, ಮನೆಗೆ ತಂದರೆ ವೃದ್ಧಿಸುತ್ತದೆ ಸಂಪತ್ತು!
Follow us
ಸಾಧು ಶ್ರೀನಾಥ್​
|

Updated on: Aug 26, 2024 | 7:06 AM

Significance of conch shells in Vastu Tips- ವಾಸ್ತು ಸಲಹೆಗಳು: ಇಂದಿನ ಹಣದ ಯುಗದಲ್ಲಿ ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇದೆ. ಲಾಭದ ಲೆಕ್ಕಾಚಾರವಿಲ್ಲದೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಆದರೆ ಅನೇಕ ವ್ಯಾಪಾರಿಗಳು, ಜನರು ದೀರ್ಘಕಾಲವಾದರೂ ಆರ್ಥಿಕ ಲಾಭವನ್ನು ಹೊಂದಿಲ್ಲ ಎಂದು ಕೊರಗುತ್ತಾರೆ. ಇದರಿಂದ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಹಣದ ಬಗ್ಗೆ ಬಹಳ ವಿವರವಾಗಿ ಹೇಳಲಾಗಿದೆ. ಅಂತಹ ಅನೇಕ ಪರಿಹಾರಗಳನ್ನು ಸೂಚಿಸಲಾಗಿದೆ, ಇದನ್ನು ಬಳಸಿಕೊಂಡು ಮನೆಯಲ್ಲಿ ಹಣದ ಮಳೆಯನ್ನು ಸುರಿಯುವಂತೆ ಮಾಡಿಕೊಳ್ಳಬಹುದು. ನಿಮ್ಮ ಮನೆಗೆ ತಂದರೆ ಪ್ರಯೋಜನಕಾರಿಯಾಗುವ 3 ವಸ್ತುಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

ಶಂಖು: ಹಿಂದೂ ಧರ್ಮದಲ್ಲಿ ಶಂಖಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಪೂಜೆ-ಹವನ ಅಥವಾ ಆರತಿಯ ವೇಳೆ ಇದನ್ನು ಬಳಸಲಾಗುತ್ತದೆ. ಶಂಖದ ಶಬ್ದವು ನಕಾರಾತ್ಮಕ ಶಕ್ತಿಯನ್ನು ದೂರಮಾಡುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ. ನಂಬಿಕೆಗಳ ಪ್ರಕಾರ ಲಕ್ಷ್ಮಿ ದೇವಿ ಸ್ವತಃ ಶಂಖದಲ್ಲಿ ನೆಲೆಸಿದ್ದಾಳೆ, ಆದ್ದರಿಂದ ಶಂಖವನ್ನು ತುಂಬಾ ಪವಿತ್ರ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಶಂಖವನ್ನು ತರುವುದರಿಂದ ಸಂಪತ್ತು ವೃದ್ಧಿಯಾಗುವುದಲ್ಲದೆ ಮನಸ್ಸಿನಲ್ಲಿ ನೆಮ್ಮದಿಯ ಭಾವ ಮೂಡುತ್ತದೆ.

Also Read: Roofless Shikari Devi Temple: ಆ ದೇವಸ್ಥಾನ ಬಟಾಬಯಲಿನಲ್ಲಿದೆ, ಶಿಕಾರಿ ದೇವಿಗೆ ಆಕಾಶವೇ ಶ್ರೀರಕ್ಷೆ! ಎಲ್ಲಿದೆ ಈ ಮಂದಿರ?

ಪಿರಮಿಡ್: ವಾಸ್ತು ಶಾಸ್ತ್ರದ ಪ್ರಕಾರ, ಪಿರಮಿಡ್ ಧನಾತ್ಮಕ ಶಕ್ತಿಯ ಮೂಲವಾಗಿದೆ. ಇದನ್ನು ಮನೆಯಲ್ಲಿಯೂ ಇಡಬೇಕು. ಇದು ಸಮೃದ್ಧಿ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ. ಪಿರಮಿಡ್ ಇಡುವುದರಿಂದಲೇ ವಾಸ್ತುವಿನ ಅನೇಕ ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಐಶ್ವರ್ಯ ಬರುತ್ತದೆ. ನೀವು ಮನೆಯಲ್ಲಿನ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಬಯಸಿದರೆ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯ ಪಿರಮಿಡ್ ಅನ್ನು ತಂದು ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಇಡಬೇಕು. ಇದರಿಂದ ಸಂಪತ್ತು ಹೆಚ್ಚುತ್ತದೆ.

Also Read: ಸ್ಥಳ ಮಹಾತ್ಮೆ – ನವ ವಿವಾಹಿತರು ಶಿವ-ಪಾರ್ವತಿ ಸಪ್ತಪದಿ ತುಳಿದ ಸ್ಥಳಕ್ಕೆ ಇಂದಿಗೂ ಭೇಟಿ ನೀಡುತ್ತಾರೆ! ಯಾಕೆ ಗೊತ್ತಾ?

ಕವಡೆ: ವಾಸ್ತು ಶಾಸ್ತ್ರದಲ್ಲಿ ಕವಡೆಗೆ ಭಾರೀ ಕಿಮತ್ತು ಇದೆ. ಕವಡೆಯನ್ನು ಪೂಜಾ ಮನೆಗಳಲ್ಲಿ ಇರಿಸಲಾಗುತ್ತದೆ ಮತ್ತು ಇದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ಕವಡೆಗಳನ್ನು ಹೊಂದಿದ್ದರೆ ಅದು ಆರ್ಥಿಕ ಲಾಭವನ್ನು ತರುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ ಲಕ್ಷ್ಮಿ ದೇವಿಯು ಕವಡೆಯಲ್ಲಿ ನೆಲೆಸಿದ್ದಾಳೆ. ಆದ್ದರಿಂದ, ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ಭಕ್ತರು ತಮ್ಮೊಂದಿಗೆ ಕವಡೆಗಳನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಸುರಕ್ಷಿತವಾಗಿ ಇಡುವುದರಿಂದ ಆರ್ಥಿಕ ಲಾಭವೂ ಬರುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್