AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮಸ್ಕಾರ ಹೇಗೆ ಮಾಡಬೇಕು? ಇದರಲ್ಲಿ ಎಷ್ಟು ವಿಧ? ಈ ಬಗ್ಗೆ ಶಾಸ್ತ್ರ ಹೇಳುವುದೇನು?

ನಮಸ್ಕಾರವು 'ಕಾಯಿಕ, ವಾಚಿಕ, ಮಾನಸಿಕ' ಎಂದು ಮೂರು ವಿಧವಾಗಿದೆ. ದೇಹದಿಂದ ಮಾಡುವ ನಮಸ್ಕಾರವು 'ಕಾಯಿಕ(ದೈಹಿಕ) ನಮಸ್ಕಾರ' ಎನಿಸಿಕೊಂಡರೆ, ಮಾತಿನ ಮೂಲಕ ಮಾಡುವ ನಮಸ್ಕಾರವು 'ವಾಚಿಕ ನಮಸ್ಕಾರ', ಮನಸ್ಸಿನ ಮೂಲಕ ಮಾಡುವ ನಮಸ್ಕಾರವು 'ಮಾನಸಿಕ ನಮಸ್ಕಾರ' ಎಂದು ಕರೆಸಿಕೊಳ್ಳುತ್ತದೆ.

ನಮಸ್ಕಾರ ಹೇಗೆ ಮಾಡಬೇಕು? ಇದರಲ್ಲಿ ಎಷ್ಟು ವಿಧ? ಈ ಬಗ್ಗೆ ಶಾಸ್ತ್ರ ಹೇಳುವುದೇನು?
ನಮಸ್ಕಾರ
TV9 Web
| Updated By: ಆಯೇಷಾ ಬಾನು|

Updated on: Aug 28, 2022 | 6:30 AM

Share

ಸಾಮಾನ್ಯವಾಗಿ ಯಾರನ್ನಾದರೂ ಭೇಟಿಯಾದಗ ಅಥವಾ ದೇವಸ್ಥಾನಕ್ಕೆ ಹೋದಾಗ ಶಿರವಾಗಿ ಗೌರವಯುತ ರೂಪದಲ್ಲಿ ಶುಭಾಶಯ ಹೇಳುವುದನ್ನೇ ನಮಸ್ಕಾರ(Namaskara) ಎನ್ನಲಾಗುತ್ತೆ. ನಮಸ್ಕಾರವನ್ನು ಸಾಮಾನ್ಯವಾಗಿ ಸ್ವಲ್ಪ ಬಗ್ಗಿ ಮತ್ತು ಕೈಗಳನ್ನು ಒಂದಕ್ಕೊಂದು ಒತ್ತಿ, ಅಂಗೈಗಳು ಸ್ಪರ್ಶಿಸಿ ಮತ್ತು ಬೆರಳುಗಳು ಮೇಲ್ಮುಖವಾಗಿ ಇದ್ದು, ಹೆಬ್ಬೆರಳುಗಳನ್ನು ಎದೆಗೆ ಹತ್ತಿರವಿರಿಸಿ ಹೇಳಲಾಗುತ್ತದೆ. ಈ ಸನ್ನೆಯನ್ನು ಅಂಜಲಿ ಮುದ್ರೆ ಅಥವಾ ಪ್ರಣಾಮಾಸನ ಎಂದು ಕರೆಯಲಾಗುತ್ತದೆ. ಬನ್ನಿ ಈ ನಮಸ್ಕಾರದ ಹಿಂದಿರುವ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಇಳಿಯಿರಿ.

ನಮಸ್ಕಾರ ಎನ್ನುವ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ. ಈ ಪದವನ್ನು ಬಿಡಿಸಿದಾಗ ನಮಸ್ – ಕಾರ ಎನ್ನುವ ಎರಡು ಬೇರೆ ಬೇರೆ ಪದಗಳು ದೊರೆಯುತ್ತವೆ. ಇದು ‘ಣಮು ಪ್ರಹ್ವತ್ವೇ ಶಬ್ದೇ ಚ’ ಎನ್ನುವ ಧಾತುವಿನಿಂದ ಉತ್ಪನ್ನವಾಗಿದೆ. ನಮಸ್ ಎಂದರೆ ಪ್ರಹ್ವತೆ. ಧಾತುವಿನಲ್ಲಿರುವ ಪದಗಳ ಅರ್ಥವನ್ನು ನೋಡಿದಾಗ ನಾವು ನಮಸ್ಕಾರ ಎನ್ನುವ ಪ್ರಕ್ರಿಯೆಯನ್ನು ಮಾಡುವಾಗ ನಮ್ಮ ದೇಹವನ್ನು ಬಾಗಿಸಿರಬೇಕು ಮತ್ತು ಮನಸ್ಸೂ ಸಹ ಬಾಗಿರಬೇಕು ಎನ್ನುವ ಅರ್ಥ ಸಿಗುತ್ತದೆ. ಅಂದರೆ ನಮಸ್ಕಾರವನ್ನು ಮಾಡುವಾಗ ನಮ್ಮ ದೇಹಬಾಗಿದ್ದರೆ ಮಾತ್ರ ಸಾಲದು. ದೇವದೇವನ ಮುಂದೆ ನಮ್ಮ ಮನಸ್ಸೂ ಬಾಗಿದ್ದು, ಅವನ ಮಹಿಮೆಗಳು ಶಬ್ದರೂಪ ಸ್ತೋತ್ರದ ಮೂಲಕ ಹೊರಬರುತ್ತಿರಬೇಕು.

ಇದೇ ಮಾತನ್ನು ಶ್ರೀಮಜ್ಜಯತೀರ್ಥರು ತಮ್ಮ ಸುಧಾಗ್ರಂಥದಲ್ಲಿ ‘ಮನೋವೃತ್ತೇಃ ತತ್ಪ್ರವಣತಾ ಹಿ ವಂದನಮ್’ ಎಂದಿದ್ದಾರೆ. ಹೀಗೆ ನಮಸ್ಕಾರ ಮಾಡುವುದು ಮನಸ್ಸಿನಿಂದ, ಕೇವಲ ಅಡ್ಡಬೀಳುವುದೇ ನಮಸ್ಕಾರವಲ್ಲ. ನಾವು ಪೂಜಾವಸಾನದಲ್ಲಿ ಹೇಳುವ ‘ನಾಹಂ ಕರ್ತಾ ಹರಿ ಕರ್ತಾ ತತ್ಪೂಜಾ ಕರ್ಮ ಚಾಖಿಲಮ್’ ಎನ್ನುವ ಮಾತಿನಂತೆ ಯಾವುದೇ ಕಾರ್ಯ ನಮ್ಮಿಂದಾದರೆ ನಿಜವಾಗಿಯೂ ಆ ಕಾರ್ಯ ನಮ್ಮಿಂದಾದುದಲ್ಲ. ಭಗವಂತನಿಂದಲೇ ಆದದ್ದು ಎನ್ನುವ ಭಾವನೆಯೇ ನಮಸ್ಕಾರ. ಅಲ್ಲದೇ! ನಮಸ್ಕಾರವನ್ನು ಮಾಡಿದಾಗ ನಮ್ಮ ದೇಹದ ಭಾರವನ್ನು ಭೂವರಾಹನ ಮೇಲೆ ಹಾಕಿ ಆತ್ಮವನ್ನು ನಿವೇದಿಸಬೇಕಾದರೆ ‘ನಾಹಂ ಕರ್ತಾ’ ಎನ್ನುವ ಅನುಸಂಧಾನವಿರಲೇಬೇಕು. ಇಲ್ಲದಿದ್ದಲ್ಲಿ ದೇಹವನ್ನು ಮಾತ್ರ ಭೂಮಿಯ ಮೇಲೆ ಬೀಳಿಸಿದಂತಾ ಗುತ್ತದೆ. ಆತ್ಮನಿವೇದನೆ ಮಾಡಿದಂತಾಗುವುದಿಲ್ಲ.

ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ | ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್ ||

ಎನ್ನುವ ನವವಿಧ ಭಕ್ತಿಯಲ್ಲಿ ಆತ್ಮನಿವೇದನೆ ಸೇರಿದಂತೆ ವಂದನವೂ ಸೇರಿದೆ. ಈ ವಂದನದ ಮೂಲಕ ಭಗವಂತನಲ್ಲಿ ಸ್ನೇಹವನ್ನು ಸಂಪಾದಿಸಿ, ಅವನ ದಾಸರಾಗಿ, ಅವನ ಉತ್ಕರ್ಷವನ್ನು ಒಪ್ಪಿಕೊಂಡು ಅವನಿಗೆ ನಮ್ಮ ಆತ್ಮನಿವೇದನೆಯನ್ನು ಮಾಡುವುದರ ಮೂಲಕ ನಮ್ಮ ಒಳಿತು – ಕೆಡಕುಗಳಿಗೆ ಆ ಭಗವಂತನೇ ಕಾರಣ ಎನ್ನುವ ಅನುಸಂಧಾನದ ಮೂಲಕ ಮನಸ್ಸನ್ನು ನಮ್ರವಾಗಿಸುವುದೇ ನಮಸ್ಕಾರದ ಪ್ರಕ್ರಿಯೆ.

ನಮಸ್ಕಾರದಲ್ಲಿ ಎಷ್ಟು ವಿಧಗಳು:

ನಮಸ್ಕಾರವು ‘ಕಾಯಿಕ, ವಾಚಿಕ, ಮಾನಸಿಕ’ ಎಂದು ಮೂರು ವಿಧವಾಗಿದೆ. ದೇಹದಿಂದ ಮಾಡುವ ನಮಸ್ಕಾರವು ‘ಕಾಯಿಕ(ದೈಹಿಕ) ನಮಸ್ಕಾರ’ ಎನಿಸಿಕೊಂಡರೆ, ಮಾತಿನ ಮೂಲಕ ಮಾಡುವ ನಮಸ್ಕಾರವು ‘ವಾಚಿಕ ನಮಸ್ಕಾರ’, ಮನಸ್ಸಿನ ಮೂಲಕ ಮಾಡುವ ನಮಸ್ಕಾರವು ‘ಮಾನಸಿಕ ನಮಸ್ಕಾರ’ ಎಂದು ಕರೆಸಿಕೊಳ್ಳುತ್ತದೆ. ಈ ಮೂರು ವಿಧವಾದ ನಮಸ್ಕಾರಗಳು ಸೇರಿದಾಗ ಮಾತ್ರ ಅದು ‘ಉತ್ತಮ ನಮಸ್ಕಾರ’ ಎಂದೆನಿಸಿಕೊಳ್ಳುತ್ತದೆ. ಇದನ್ನೇ ‘ತ್ರಿಕರಣ ಪೂರ್ವಕ ನಮಸ್ಕಾರ’ ಎನ್ನುತ್ತಾರೆ. ಈ ಮೂರು ವಿಧದ ನಮಸ್ಕಾರಗಳಲ್ಲಿ ‘ಕಾಯಿಕ ನಮಸ್ಕಾರವು ಉತ್ತಮ, ವಾಚಿಕ ನಮಸ್ಕಾರವು ಅಧಮ, ಮಾನಸಿಕ ನಮಸ್ಕಾರವು ಮಧ್ಯಮ’ ಎಂದು ವಿಭಾಗ ಮಾಡಲಾಗಿದೆ.

ಕಾಯಿಕ ವಾಗ್ಭವಶ್ಚೈವ ಮಾನಸಸ್ತ್ರಿವಿಧಸ್ಸ್ಮೃತಃ | ನಮಸ್ಕಾರಸ್ತು ತತ್ವಜ್ಞೈಃ ಉತ್ತಮಾಧಮಮಧ್ಯಮಾಃ || ಎಂಬುದಾಗಿ. ಕಾಯದಿಂದ ಮಾಡುವ ನಮಸ್ಕಾರಗಳಲ್ಲಿ ಪುನಃ ಮೂರುವಿಧಗಳಿವೆ. ‘ಕಾಯಿಕ ಉತ್ತಮ, ಕಾಯಿಕ ಮಧ್ಯಮ, ಕಾಯಿಕ ಅಧಮ’ ಎಂಬುದಾಗಿ. ಕಾಯಿಕ ಉತ್ತಮ ನಮಸ್ಕಾರದ ವಿಧವನ್ನು ಹೇಳುತ್ತಿದ್ದಾರೆ.

ಪ್ರಸಾರ್ಯ ಪಾದೌ ಹಸ್ತೌ ಚ ಪತಿತ್ವಾ ದಂಡವತ್ ಕ್ಷಿತೌ | ಜಾನುಭ್ಯಾಂ ಧರಣೀಂ ಗತ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ | ಕ್ರಿಯತೇ ಯೋ ನಮಸ್ಕಾರಃ ಉತ್ತಮಕಾಯಿಕಸ್ತು ಸಃ ||

ಕಾಯಿಕ ಉತ್ತಮ:

ಭೂಮಿಯಲ್ಲಿ ದಂಡಾಕಾರವಾಗಿ ಮಲಗಿ, ಹಸ್ತ, ಪಾದಗಳನ್ನು ಚಾಚಿ, ಮಂಡಿ, ತಲೆಗಳಿಂದ ಭೂಮಿಯನ್ನು ಸ್ಪರ್ಶಿಸುತ್ತಾ, ನಮ್ಮ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂತನಲ್ಲಿ ನೆಟ್ಟು ಮಾಡುವ ನಮಸ್ಕಾರವೇ ‘ಕಾಯಿಕ ಉತ್ತಮ ನಮಸ್ಕಾರ’. ಈ ರೀತಿಯ ನಮಸ್ಕಾರವನ್ನು ಪುರುಷರು ಮಾತ್ರ ಮಾಡಬೇಕು.

ಕಾಯಿಕ ಮಧ್ಯಮ:

ಮಂಡಿಗಳನ್ನು ಭೂಮಿಯಲ್ಲಿ ಊರಿ, ತಲೆಯನ್ನು ಭೂಮಿಗೆ ತಾಗಿಸಿ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂಕನ ರೂಪದಲ್ಲಿಟ್ಟು ಮಾಡುವ ನಮಸ್ಕಾರವೇ ‘ಕಾಯಿಕ ಮಧ್ಯಮ’ ಎಂದೆನಿಸಿಕೊಳ್ಳುತ್ತದೆ.

“ಜಾನುಭ್ಯಾಂ ಚ ಕ್ಷಿತಿಂ ಸ್ಪೃಷ್ಟ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ | ಕ್ರಿಯತೇ ಯೋ ನಮಸ್ಕಾರಃ ಮಧ್ಯಮಃ ಕಾಯಿಕಸ್ತು ಸಃ “

ಎಂದು ಹೇಳಿ ಈ ನಮಸ್ಕಾರವನ್ನು ಸ್ತ್ರೀಪುರುಷರಿಬ್ಬರೂ ಮಾಡಬಹುದು.

ಕಾಯಿಕ ಅಧಮ:

“ಪುಟೀಕೃತ್ಯ ಕರೌ ಶೀರ್ಷೇ ದೀಯತೇ ಯದ್ಯಥಾ ತಥಾ | ಅಸ್ಪೃಷ್ಟ್ವಾ ಜಾನುಶೀರ್ಷಾಭ್ಯಾಂ ಕ್ಷಿತಿಂ ಸೋಡಧಮ ಉಚ್ಯತೇ”

ಮಂಡಿ ಮತ್ತು ತಲೆಯನ್ನು ಭೂಮಿಗೆ ತಾಗಿಸದೇ, ಕೈಯನ್ನು ತಲೆಯಲ್ಲಿಟ್ಟು ಮಾಡುವ ನಮಸ್ಕಾರವು ಕಾಯಕ ಅಥಮ ನಮಸ್ಕಾರ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿ ಒಂದು ಪ್ರಶ್ನೆ ಬರುತ್ತದೆ ಏನೆಂದರೆ ಕಾಯಕ ಉತ್ತಮದ ನಮಸ್ಕಾರವನ್ನು ಪುರುಷರು ಮಾತ್ರ ಏಕೆ ಮಾಡಬೇಕು, ಸ್ತ್ರೀಯರು ಏಕೆ ಮಾಡಬಾರದು ಎಂಬುದಾಗಿ? ಅದಕ್ಕೆ ಉತ್ತರ ಈ ರೀತಿ ಇದೆ.

“ಬ್ರಾಹ್ಮಣಸ್ಯ ಗುದಂ ಶಂಖಂ ಯೋಷಿತಃ ಸ್ತನಮಂಡಲಮ್ | ರೇತಃ ಪವಿತ್ರಗ್ರಂಥಿಂ ಚ ನ ಭೂಃ ಧಾರಯಿತುಂ ಕ್ಷಮಾ”

ಏನೆಂದರೆ ಇಡೀ ಭೂ ಮಂಡಲದ ಭಾರವನ್ನು ಹೊತ್ತಿರುವ ಭೂದೇವಿಯು ಬ್ರಾಹ್ಮಣರ ಗುದಪ್ರದೇಶವನ್ನು, ಶಂಖವನ್ನು, ಸ್ತ್ರೀಯರ ಸ್ತನಮಂಡಲವನ್ನು, ಶುಕ್ಲರೂಪದಲ್ಲಿರುವ ರೇತಸ್ಸನ್ನು, ಧರ್ಭೆಯ ಗ್ರಂಥಿಯನ್ನು ಧರಿಸಲಾರಳಂತೆ. ಆದುದರಿಂದ ಸ್ತ್ರೀಯರು ಕಾಯಕ ಉತ್ತಮ ನಮಸ್ಕಾರವನ್ನು ಮಾಡಬಾರದೆಂದು ತಿಳಿಸುತ್ತಾ ಇದನ್ನು ಕೇವಲ ಪುರುಷರಿಗೆ ಮಾತ್ರ ವಿಧಾನ ಮಾಡಿರುವರು. ಅಲ್ಲದೇ! ಪುರುಷರು ಆಸನವಿಲ್ಲದೇ ನೆಲದ ಮೇಲೆ ಕುಳಿತುಕೊಳ್ಳಬಾರದೆಂದೂ ಕೂಡ ವಿಧಾನ ಮಾಡಿರುವರು.

ಮಾಹಿತಿ: ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..