Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಲಯ ಎಂದರೇನು? ಮಹಾಲಯ ಅಮವಾಸ್ಯೆಯಲ್ಲಿ ಏನು ಮಾಡಬೇಕು? ಶುಭಕಾರ್ಯವನ್ನು ಯಾಕೆ ಮಾಡಬಾರದು?

Mahalaya Amavasya: ನಮಗೆ ನಮ್ಮ ಪಿತೃಗಳ ಮರಣವಾದ ಮಿತಿ/ತಿಥಿ ತಿಳಿಯದೇ ಇದ್ದಲ್ಲಿ ಅಂತಹವರ ಕಾರ್ಯವನ್ನು ಈ ಪಕ್ಷದ ಅಮಾವಾಸ್ಯೆ ಅಂದರೆ ಮಹಾಲಯ ಅಮವಾಸ್ಯೆಯಂದು ಮಾಡಬೇಕು.

ಮಹಾಲಯ ಎಂದರೇನು? ಮಹಾಲಯ ಅಮವಾಸ್ಯೆಯಲ್ಲಿ ಏನು ಮಾಡಬೇಕು? ಶುಭಕಾರ್ಯವನ್ನು ಯಾಕೆ ಮಾಡಬಾರದು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Sep 18, 2022 | 10:09 AM

ಪಾಂಚಭೌತಿಕ ಶಕ್ತಿಯಿಂದ ಈ ಜಗತ್ತು ನಿರ್ಮಾಣವಾಗಿದೆ. ಹಿಂದೂ ಧರ್ಮದ ಪ್ರಕಾರ ಇದರ ನಿರ್ಮಾತೃ ಬ್ರಹ್ಮ. ಪಾಂಚಭೌತಿಕವೆಂದರೆ ಪಂಚಭೂತಗಳಿಂದಾದುದು ಎಂದರ್ಥ. ಈ ದೇಹಕ್ಕೆ ಸಂಸ್ಕಾರವೆಂಬುದು ಅತ್ಯಗತ್ಯ. ಅದರ ಪೂರ್ವ ಮತ್ತು ಅಪರ ಸಂಸ್ಕಾರವೆಂದು ಎರಡು ವಿಧ. ಪೂರ್ವ ಸಂಸ್ಕಾರ ಜೀವಿತದಲ್ಲಿರುವವರಿಗೂ, ಅಪರ ಸಂಸ್ಕಾರ ಮೃತರಾದವರಿಗೂ ಮಾಡುವಂತಹದು. ಇದಲ್ಲದೇ ಮನುಷ್ಯನಿಗೆ ಕಾಲಕ್ಕನುಗುಣವಾಗಿ ಸತ್ಕಾರ್ಯಗಳನ್ನು ಮಾಡುವುದರಿಂದ ಪುಣ್ಯ ವೃದ್ಧಿಯಾಗಿ ಇಹದಲ್ಲಿ ತನಗೂ ಪರದಲ್ಲಿ ಪಿತೃಗಳಿಗೂ ಕ್ಷೇಮವಾಗುವುದು.

ಈ ಕಾರಣಗಳಿಂದ ಧರ್ಮಶಾಸ್ತ್ರದಲ್ಲಿ ಆಯಾಯ ಮಾಸದಲ್ಲಿ ಮಾಡಬೇಕಾದ ಕಾರ್ಯಗಳನ್ನು ಉಲ್ಲೇಖಿಸಿ ಅದಕ್ಕನುಗುಣವಾದ ಪುರಾಣದ ಇತಿ ವೃತ್ತವನ್ನು ನೀಡಿರುತ್ತಾರೆ. ಈಗ ನಾವು ಮಹಾಲಯದ ಕುರಿತಾಗಿ ಚಿಂತನೆ ನಡೆಸುವುದಾದರೆ… ಮಹಾಲಯವೆನ್ನುವ ಶಬ್ದದ ಮೂಲ ಈ ರೀತಿ ಇದೆ. ಮಹಾನ್ ಆತ್ಯಂತಿಕೊ ಲಯೋ ಯತ್ರ ಎಂಬುದಾಗಿ. ನಮ್ಮಲ್ಲಿರುವ ಆತ್ಮ/ಪ್ರಾಣವೇನಿದೆ ಅದು ಮಹಾನ್ ಚೈತನ್ಯದಲ್ಲಿ ಲಯವಾಗುವುದು ಎಂದರ್ಥ. ಒಟ್ಟಾರೆಯಾಗಿ ಅದರ ತಾತ್ಪರ್ಯವೇನೆಂದರೆ ಮಹಾನ್ + ಆಲಯ = ಮಹಾಲಯ. ಆಲಯವೆಂದರೆ ಸ್ಥಾನವೆಂದು ಅರ್ಥ. ಮಹಾಲಯವೆಂದರೆ ಮಹತ್ತರವಾದ ಸ್ಥಾನ. ಅದರಲ್ಲಿ ಲಯವಾಗುವಿಕೆ / ಸೇರುವಿಕೆ ಎಂದರ್ಥ. ಇದನ್ನೂ ಓದಿ: Amavasya: ಅಮಾವಾಸ್ಯೆ ದಿನ ಚಂದ್ರ ಮತ್ತು ಸೂರ್ಯ ಒಂದೇ ವೇಳೆಯಲ್ಲಿ ಉದಯಿಸುತ್ತಾರೆ, ಹೀಗಾಗಿ ಈ ದಿನ ಅನಾಹುತಗಳು ಹೆಚ್ಚು

ಶಾಸ್ತ್ರದ ಒಂದು ಮಾತು ಹೀಗಿದೆ.. ಕನ್ಯಾಸ್ಯಾರ್ಕಾನ್ವಿತಃ ಪಕ್ಷಃ ಸಃ ಅತ್ಯಂತಮ್ ಪುಣ್ಯಮುಚ್ಯತೇ” ಎಂದು. ಕನ್ಯಾದಲ್ಲಿ ಸೂರ್ಯನು ಬಂದರೆ ಅಂತಹ ಮಾಸ ಅತ್ಯಂತ ಫಲಪ್ರದ ಎಂದರ್ಥ. ಯಾವುದಕ್ಕೆ ಎಂಬ ಪ್ರಶ್ನೆಗುತ್ತರ ಪಿತೃಕಾರ್ಯಕ್ಕೆ / ಪಿಂಡದಾನ/ ತಿಲತರ್ಪಣ ಇತ್ಯಾದಿಗಳಿಗೆ. ನಮಗೆ ನಮ್ಮ ಪಿತೃಗಳ ಮರಣವಾದ ಮಿತಿ/ತಿಥಿ ತಿಳಿಯದೇ ಇದ್ದಲ್ಲಿ ಅಂತಹವರ ಕಾರ್ಯವನ್ನು ಈ ಪಕ್ಷದ ಅಮಾವಾಸ್ಯೆ ಅಂದರೆ ಮಹಾಲಯ ಅಮವಾಸ್ಯೆಯಂದು ಮಾಡಬೇಕು. ಅಲ್ಲದೇ ಶಾಸ್ತ್ರ ಪ್ರಕಾರ ಹೇಳುದಾದರೆ ಪಿತೃಕಾರ್ಯವನ್ನು ನಾಲ್ಕು ಸ್ಥಳಗಳಲ್ಲಿ ಮಾಡಲೇಬೇಕು.

ಅವುಗಳು 1.ಮನೆಯಲ್ಲಿ. 2.ತೀರ್ಥಕ್ಷೇತ್ರಗಳಲ್ಲಿ. 3.ಪುಣ್ಯಸ್ಥಾನಗಳಲ್ಲಿ. 4.ಕನ್ಯಾದಲ್ಲಿ ರವಿಯಿರುವಾಗ ಮಾಡಿದರೆ ಯಾವುದೇ ಪಿತೃ ಸಂಬಂಧ ದೋಷಗಳು ಬರುವುದಿಲ್ಲ. ಈಗ ಮನಸ್ಸಲ್ಲಿ ಅನಿಸಬಹುದು ನಮಗೆ ಆ ಕಾಲ ಗೊತ್ತಿಲ್ಲ/ ನಮ್ಮಿಂದ ಆಗಿಲ್ಲ ನಾವೇನು ಮಾಡೋಣ ಎಂದು. ಅದಕ್ಕೆ ಪರಿಹಾರವೆಂದರೆ ಮೇಲೆ ಹೇಳಿದ ನಾಲ್ಕೂ ಸ್ಥಾನಗಳಲ್ಲಿ ಪಿತೃಕಾರ್ಯ ಮಾಡಿದರೆ ಯಾವ ಪುಣ್ಯವಿದೆಯೋ ಅದು ಮಹಾಲಯ ಅಮಾವಾಸ್ಯೆಯಂದು ಪಿತೃಕಾರ್ಯ ಮಾಡಿದರೆ ಲಭ್ಯವಾಗುತ್ತದೆ. ಈ ಕಾರಣದಿಂದಲೇ ಮಹಾಲಯ ಅಮಾವಾಸ್ಯೆ ವಿಶೇಷ. ಇದನ್ನೂ ಓದಿ: Amavasya: ಅಮಾವಾಸ್ಯೆ ದಿನ ಮಗು ಹುಟ್ಟಿದರೆ ಶುಭವೋ? ಅಶುಭವೋ? ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ

ಕೆಲವರಿಗನಿಸಬಹುದು ಹೆಚ್ಚು ಅವಗಡ ಅಂದೇ ಸಂಭವಿಸುತ್ತದೆಯಲ್ಲ ಯಾಕೆ ಎಂದು. ಅಂದು ಪಿತೃಪಕ್ಷದ ಕೊನೆಯದಿನ. ವಾಸ್ತವವಾಗಿ ಯೋಚಿಸುವುದಾದರೆ ನಾವು ಮಾಡಬೇಕಾದ ಕಾರ್ಯ ಬಿಟ್ಟು ಸ್ವೇಚ್ಛರಾಗಿ ವ್ಯವಹರಿಸಿದರೆ ಹೇಗೆ ಸರಿಯಲ್ಲವೋ… ಅದೇ ರೀತಿ ಪಿತೃಕಾರ್ಯವನ್ನು ಸರಿಯಾಗಿ ಮಾಡಲು ದೊರೆತ ಉತ್ತಮ ಅವಕಾಶ ಬಿಟ್ಟು ಬೇರೆ ಕಾರ್ಯ ಮಾಡಿದ್ದರ ಫಲವೇ ಈ ಅವಗಡಗಳಾಗುವಿಗೆ. ಮಹಾಲಯ ಅಮಾವಾಸ್ಯೆ ಎನ್ನುವುದು ಮಂಗಲಕಾರ್ಯಗಳಿಗೆ ಯೋಗ್ಯವಾದ ಕಾಲವಲ್ಲ. ಹಾಗಂತ ಅದು ಅಶುಭ ದಿನವೂ ಅಲ್ಲ. ಅದು ನಮ್ಮ ಮೃತರಾದ ಹಿರಿಯರ ಕುರಿತಾಗಿ ಸಂತರ್ಪಣೆ, ಆರಾಧನೆ, ತಿಲತರ್ಪಣ, ಪಿಂಡದಾನ, ಶ್ರಾದ್ಧಾದಿಗಳನ್ನು ಮಾಡಲಿರುವ ವಿಶೇಷ ದಿನ. ಈ ದಿನದಂದು ಕಪಾಲರುದ್ರನ ಪೂಜೆಮಾಡುವುದರಿಂದ ಅತ್ಯುತ್ತಮ ಫಲವಿದೆ. ಶಿವನಿಗೆ ರುದ್ರಾಭಿಷೇಕ ಮಾಡಿದರೂ ಒಳ್ಳೆಯದು. ಪಿತೃಗಳ ಕುರಿತಾದ ದಿನವಾದ್ದರಿಂದ ಈ ದಿನ ಬೇರೆ ಕರ್ಮಗಳು ಉಚಿತವಲ್ಲ. ಮಹಾಲಯ ಅಮಾವಾಸ್ಯೆ ಈ ಸಲ ಸೆ.25ರ ಭಾನುವಾರದಂದು ಬಂದಿದೆ. ಎಲ್ಲರೂ ಅವರ ಅಜೀವಿತ ಹಿರಿಯರ ಕಾರ್ಯಮಾಡಿ ಪುಣ್ಯಪ್ರದರಾಗೋಣ.

ಡಾ.ಕೇಶವ ಕಿರಣ ಬಿ ಪ್ರಾಧ್ಯಾಪಕರು S.R.B.S.S College ಹೊನ್ನಾವರ kkmanasvi@gamail.com

Published On - 10:07 am, Sun, 18 September 22

ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಐಪಿಎಲ್​ಗೆ ಎಂಟ್ರಿಕೊಟ್ಟ ರೋಬೋ ಶ್ವಾನ; ವಿಡಿಯೋ ನೋಡಿ
ಐಪಿಎಲ್​ಗೆ ಎಂಟ್ರಿಕೊಟ್ಟ ರೋಬೋ ಶ್ವಾನ; ವಿಡಿಯೋ ನೋಡಿ
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
33 ಎಸೆತಗಳಲ್ಲಿ 65 ರನ್​ ಸಿಡಿಸಿದ ಫಿಲ್ ಸಾಲ್ಟ್
33 ಎಸೆತಗಳಲ್ಲಿ 65 ರನ್​ ಸಿಡಿಸಿದ ಫಿಲ್ ಸಾಲ್ಟ್
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ