Mithun Sankranti 2022: ಮಿಥುನ ಸಂಕ್ರಾಂತಿಯ ಈ ದಿನದ ಭೂಮಿ ಪೂಜೆಗೆ ಇದೆ ವಿಶೇಷವಾದ ಹಿನ್ನೆಲೆ
ನಂಬಿಕೆಗಳ ಪ್ರಕಾರ, ಮಹಿಳೆಯರಿಗೆ ಪ್ರತಿ ತಿಂಗಳು ಋತುಸ್ರಾವವಾಗುವುದು ಅವರ ದೇಹದ ಬೆಳವಣಿಗೆಯ ಸಂಕೇತವಾಗಿದೆ. ಮಿಥುನ ಸಂಕ್ರಾಂತಿಯ ಕಥೆಯ ಪ್ರಕಾರ ಮಹಿಳೆಯರಿಗೆ ಮುಟ್ಟು ಇರುವಂತೆ ಹಾಗೆಯೇ ಭೂಮಿ ತಾಯಿಗೆ 3 ದಿನ ಋತುಸ್ರಾವವಾಗುತ್ತೆ.
ಸೂರ್ಯ ದೇವರ ರಾಶಿಯ ಬದಲಾವಣೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯ ಸಂಕ್ರಮಿಸುವ ರಾಶಿಯನ್ನು ಆ ರಾಶಿಯ ಸಂಕ್ರಾಂತಿ ಎಂದು ಪರಿಗಣಿಸಲಾಗುತ್ತದೆ. ಹೀಗೆ ಒಂದು ವರ್ಷದಲ್ಲಿ 12 ಸಂಕ್ರಾಂತಿಗಳು ಬರುತ್ತದೆ. ಮಿಥುನ ಸಂಕ್ರಾಂತಿಯು ಸೂರ್ಯದೇವನು ಮಿಥುನ ರಾಶಿಯನ್ನು ಪ್ರವೇಶಿಸಿದಾಗ ಸಂಭವಿಸುತ್ತದೆ. ಈ ವರ್ಷ ಮಿಥುನ ಸಂಕ್ರಾಂತಿಯನ್ನು ಬುಧವಾರ, 15 ಜೂನ್ 2022 ರಂದು ಆಚರಿಸಲಾಗುತ್ತದೆ. ಸೂರ್ಯದೇವನು ಪ್ರತೀ ತಿಂಗಳಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತಾನೆ ಮತ್ತು ಒಂದು ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ. ಈ ದಿನದಂದು ಜನರು ಉತ್ತಮ ಫಸಲು ಬರಲಿ ಎಂದು ದೇವರಿಗೆ ಒಳ್ಳೆಯ ಮಳೆಯನ್ನು ಹಾರೈಸುತ್ತಾರೆ. ಇದನ್ನು ರಾಜ ಪರ್ವ ಸಂಕ್ರಾಂತಿ ಎಂದೂ ಕರೆಯುತ್ತಾರೆ.
ಒರಿಸ್ಸಾದಲ್ಲಿ, ಈ ದಿನವನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಈ ದಿನ ಭೂದೇವಿ ಅಂದರೆ ಭೂಮಾತೆಯ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ಹಬ್ಬದಲ್ಲಿ ಮಹಿಳೆಯರೊಂದಿಗೆ ಅವಿವಾಹಿತ ಹೆಣ್ಣುಮಕ್ಕಳು ಕೂಡ ಒಳ್ಳೆಯ ವರ ಸಿಗಲಿ ಎಂದು ಪೂಜೆ, ವ್ರತಗಳನ್ನು ಮಾಡುತ್ತಾರೆ. ಈ ಹಬ್ಬ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಇದನ್ನೂ ಓದಿ: ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಾರಾ ಅಲಿ ಖಾನ್; ಸೈಫ್ ಪುತ್ರಿಯ ಫೋಟೋ ವೈರಲ್
ಮಿಥುನ ಸಂಕ್ರಾಂತಿ ಶುಭ ಮುಹೂರ್ತ ಮಿಥುನ ಸಂಕ್ರಾಂತಿ ತಿಥಿ ಆರಂಭ: 2022 ಜೂನ್ 15 ರಂದು ಬುಧವಾರ 12:18 ರಿಂದ ಮಿಥುನ ಸಂಕ್ರಾಂತಿ ತಿಥಿ ಮುಕ್ತಾಯ: 2022 ಜೂನ್ 15 ರಂದು ಸಂಜೆ 7:20 ರವರೆಗೆ
ಮಿಥುನ ಸಂಕ್ರಾಂತಿಯ ಮಹತ್ವ ಮಿಥುನ ಸಂಕ್ರಾಂತಿಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಮಿಥುನ ಸಂಕ್ರಾಂತಿಯ ದಿನದಂದು ಸೂರ್ಯ ದೇವರನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಈ ಹಬ್ಬವನ್ನು ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆಯೊಂದಿಗೆ ಪರಿಗಣಿಸಲಾಗಿದೆ. ಮಿಥುನ ಸಂಕ್ರಾಂತಿಯ ದಿನದಂದು, ಪುಣ್ಯ ಫಲಿತಾಂಶಗಳನ್ನು ಪಡೆಯಲು ದಾನ ಕಾರ್ಯಗಳನ್ನು ಮಾಡಲಾಗುತ್ತದೆ. ಈ ಹಬ್ಬವನ್ನು ಪ್ರಕೃತಿಯ ಬದಲಾವಣೆಯ ಸಂಕೇತವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ದಿನದಿಂದ ಮಳೆಗಾಲ ಪ್ರಾರಂಭವಾಗುತ್ತದೆ ಎಂದು ನಂಬಲಾಗಿದೆ. ಸೂರ್ಯ ದೇವರು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿದಾಗ, ಎಲ್ಲಾ ನಕ್ಷತ್ರಪುಂಜಗಳ ದಿಕ್ಕು ಬದಲಾಗುತ್ತದೆ. ಸೂರ್ಯನು ಕೃತಿಕಾ ನಕ್ಷತ್ರದಿಂದ ರೋಹಿಣಿ ನಕ್ಷತ್ರಕ್ಕೆ ಬಂದಾಗ ಮಳೆಯಾಗುವ ಸಂಭವವಿರುತ್ತದೆ. ಇದರೊಂದಿಗೆ ಜನರು ಉತ್ತಮ ಕೃಷಿಗಾಗಿ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಇದನ್ನೂ ಓದಿ: ನರಕ ಚತುರ್ದಶಿ ದಿನ ಹನುಮ ಜಯಂತಿ: ಭಕ್ತರು ವಿಶೇಷವಾಗಿ ವಾಯುಪುತ್ರನನ್ನು ಆರಾಧಿಸಿದರೆ ಸಂಕಷ್ಟಗಳೆಲ್ಲ ದೂರ
ಮಿಥುನ ಸಂಕ್ರಾಂತಿಯ ಕಥೆ ನಂಬಿಕೆಗಳ ಪ್ರಕಾರ, ಮಹಿಳೆಯರಿಗೆ ಪ್ರತಿ ತಿಂಗಳು ಋತುಸ್ರಾವವಾಗುವುದು ಅವರ ದೇಹದ ಬೆಳವಣಿಗೆಯ ಸಂಕೇತವಾಗಿದೆ. ಮಿಥುನ ಸಂಕ್ರಾಂತಿಯ ಕಥೆಯ ಪ್ರಕಾರ ಮಹಿಳೆಯರಿಗೆ ಮುಟ್ಟು ಇರುವಂತೆ ಹಾಗೆಯೇ ಭೂಮಿ ತಾಯಿಗೆ 3 ದಿನ ಋತುಸ್ರಾವವಾಗುತ್ತೆ. ಇದು ಭೂಮಿಯ ಅಭಿವೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. 3 ದಿನಗಳ ಕಾಲ ಭೂದೇವಿಯು ಋತುಸ್ರಾವದಲ್ಲಿ ಉಳಿಯುತ್ತಾಳೆ ಮತ್ತು ನಾಲ್ಕನೇ ದಿನ ಅಂದರೆ ಮಿಥುನ ಸಂಕ್ರಾಂತಿಯ ದಿನದಂದು ಭೂಮಿ ತಾಯಿಯನ್ನು ಪೂಜಿಸಲಾಗುತ್ತದೆ. ನೀರು ಮತ್ತು ಹಾಲಿನಿಂದ ಸ್ನಾನ ಮಾಡಲಾಗುತ್ತದೆ. ವಿಷ್ಣುವಿನ ಪತ್ನಿ ಭೂದೇವಿಯ ಬೆಳ್ಳಿಯ ಪ್ರತಿಮೆಯು ಒರಿಸ್ಸಾದ ಜಗನ್ನಾಥ ದೇವಾಲಯದಲ್ಲಿ ಇಂದಿಗೂ ಇದೆ. ಮಿಥುನ ಸಂಕ್ರಾಂತಿಯ ದಿನದಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಮಿಥುನ ಸಂಕ್ರಾಂತಿಯ ದಿನದಂದು ಪೂಜೆ ಮತ್ತು ಉಪವಾಸವು ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ. ಈ ದಿನ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಗೋಧಿ, ಬೆಲ್ಲ, ತುಪ್ಪ, ಧಾನ್ಯಗಳು ಇತ್ಯಾದಿಗಳನ್ನು ದಾನ ಮಾಡಬೇಕು.