AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahashivratri 2024: ಶಿವ ಮತ್ತು ವಿಷ್ಣು ಬಾವ, ಬಾಮೈದರಾದದ್ದು ಹೇಗೆ? ಇದರ ಹಿಂದಿರುವ ಕಥೆಯೇನು?

ಪಾರ್ವತಿ ಶಿವನನ್ನು ಮದುವೆಯಾಗಲು ಮುಖ್ಯವಾಗಿ ನಾರದರು ಮತ್ತು ವಿಷ್ಣು ದೇವ ಕಾರಣ ಎಂದು ನಂಬಲಾಗುತ್ತದೆ. ಕೆಲವು ದಂತಕಥೆಗಳಲ್ಲಿ ಪಾರ್ವತಿಯು ಭಗವಾನ್ ವಿಷ್ಣುವನ್ನು ಅಣ್ಣನಾಗಿ ಸ್ವೀಕರಿಸಿದ್ದಳು ಎನ್ನಲಾಗುತ್ತದೆ. ಹಾಗಾದರೆ ಈ ಕಥೆ ಏನು? ದೇವಿ ಪಾರ್ವತಿ ಮತ್ತು ಭಗವಾನ್ ವಿಷ್ಣು ಹೇಗೆ ಅಣ್ಣ -ತಂಗಿಯಾದರು, ಶಿವ ಮತ್ತು ವಿಷ್ಣು ಬಾವ, ಬಾಮೈದರಾಗಲು ಕಾರಣವೇನು? ಇಲ್ಲಿದೆ ಸ್ವಾರಸ್ಯಕರ ಕಥೆ.

Mahashivratri 2024: ಶಿವ ಮತ್ತು ವಿಷ್ಣು ಬಾವ, ಬಾಮೈದರಾದದ್ದು ಹೇಗೆ? ಇದರ ಹಿಂದಿರುವ ಕಥೆಯೇನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Mar 08, 2024 | 6:26 PM

Share

ಶಿವನ (Lord Shiva) ಪ್ರೀತಿಯನ್ನು ಅನಂತ ಮತ್ತು ವಿಶಿಷ್ಟವೆಂದು ಹೇಳಲಾಗುತ್ತದೆ. ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಶಿವ ಪಾರ್ವತಿಯರನ್ನು ಆದರ್ಶ ಜೋಡಿ ಎನ್ನಲಾಗುತ್ತದೆ. ಪಾರ್ವತಿಯ ಪ್ರೀತಿ, ಶಿವನು ಸಂಬಂಧಗಳ ಮೇಲಿಟ್ಟಿರುವ ಗೌರವ ಎಲ್ಲವೂ ಕೂಡ ಎಂತಹ ಕಲ್ಲು ಹೃದಯವನ್ನಾದರೂ ಕರಗಿಸುತ್ತದೆ ಎಂಬ ಮಾತಿದೆ. ಆದರೆ ಇದೆಲ್ಲದರ ಹೊರತಾಗಿ ಪಾರ್ವತಿಯು (Goddess Parvati) ಶಿವನನ್ನು ವರಿಸಲು ಮಾಡಿದ ಪ್ರಯತ್ನ ನಿಜಕ್ಕೂ ಶ್ರೇಷ್ಠ ಎನಿಸಿಕೊಳ್ಳುತ್ತದೆ. ಅವಳು ಶಿವನನ್ನು ಮದುವೆಯಾಗಲು ಮುಖ್ಯವಾಗಿ ನಾರದರು ಮತ್ತು ವಿಷ್ಣು ದೇವ ಕಾರಣ ಎಂದು ನಂಬಲಾಗುತ್ತದೆ. ಕೆಲವು ದಂತಕಥೆಗಳಲ್ಲಿ ಪಾರ್ವತಿಯು ಭಗವಾನ್ ವಿಷ್ಣುವನ್ನು ಅಣ್ಣನಾಗಿ ಸ್ವೀಕರಿಸಿದ್ದಳು ಎನ್ನಲಾಗುತ್ತದೆ. ಹಾಗಾದರೆ ಈ ಕಥೆ ಏನು? ದೇವಿ ಪಾರ್ವತಿ ಮತ್ತು ಭಗವಾನ್ ವಿಷ್ಣು ಹೇಗೆ ಅಣ್ಣ. ತಂಗಿಯಾದರೂ, ಶಿವ ಮತ್ತು ವಿಷ್ಣು ಬಾವ, ಬಾಮೈದರಾಗಲು ಕಾರಣವೇನು? ಇಲ್ಲಿದೆ ಸ್ವಾರಸ್ಯಕರ ಕಥೆ.

ಶಿವನ ಪತ್ನಿಯಾಗಿದ್ದ ಸತಿ ದೇವಿಯು ಅಗ್ನಿ ಕುಂಡಕ್ಕೆ ಹಾರಿ ತನ್ನ ಪ್ರಾಣತ್ಯಾಗ ಮಾಡಿ, ಮುಂದಿನ ಜನ್ಮದಲ್ಲಿ ಪರ್ವತರಾಜನ ಮಗಳು ಪಾರ್ವತಿಯಾಗಿ ಜನಿಸುತ್ತಾಳೆ. ಆಕೆಗೆ ಬುದ್ಧಿಬಂದ ಬಳಿಕ, ತಾನು ಶಿವನಿಗಾಗಿ ಜನಿಸಿದ್ದು ಎಂಬುದರ ಅರಿವಾಗುತ್ತದೆ. ಆಗ ಆಕೆ ತನ್ನ ಭವಿಷ್ಯದ ಬಗ್ಗೆ ದಿಕ್ಕು ಕಾಣದೆಯೇ ನಾರದ ಮುನಿಗಳನ್ನು ನೆನೆಯುತ್ತಾಳೆ. ಆಗ ಪ್ರತ್ಯಕ್ಷರಾದ ನಾರದರು, ಪಾರ್ವತಿಯ ಬಳಿ, ನೀನು ಶಿವನ ಪೂಜೆ ಮತ್ತು ತಪಸ್ಸು ಮಾಡಿ, ಆ ಬಳಿಕ ಶಿವನನ್ನು ವರಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಅಲ್ಲದೆ ಮಣ್ಣಿನಿಂದ ಮಾಡಿದ ಶಿವಲಿಂಗಕ್ಕೆ ಪೂಜೆ ಮಾಡು ಎನ್ನುತ್ತಾರೆ. ಪಾರ್ವತಿ ಬಹಳ ಕಷ್ಟಪಟ್ಟು, ಮಣ್ಣಿನಿಂದ ಲಿಂಗ ತಯಾರಿಸಲು ಪ್ರಯತ್ನಿಸುತ್ತಾಳೆ. ಆದರೆ ಆಕೆ ಅದರಲ್ಲಿ ವಿಫಲಳಾಗುತ್ತಾಳೆ. ಇದನ್ನು ಕಂಡ ಶ್ರೀವಿಷ್ಣು ಸ್ವತಃ ತಾನೇ ಬ್ರಾಹ್ಮಣನ ವೇಷ ಧರಿಸಿ, ಆಕೆಯ ಸಹಾಯಕ್ಕೆ ಹೋಗುತ್ತಾನೆ.

ಆಗ ಪಾರ್ವತಿ ದೇವಿಯು, ವಿಷ್ಣುವಿನ ಬಳಿ “ಅಣ್ಣ ನನಗೆ ಶಿವಲಿಂಗ ತಯಾರಿಸಲು ಸಹಾಯ ಮಾಡುವಿರಾ?” ಎಂದು ಕೇಳುತ್ತಾಳೆ. ತಾಯಿ ಪಾರ್ವತಿಯು ಅಣ್ಣ ಎಂದಿದ್ದರಿಂದ ಶ್ರೀವಿಷ್ಣುವಿಗೆ ಬಹಳ ಆನಂದವಾಗುತ್ತದೆ. ಅವನಿಗೆ ಅರಿವಿಲ್ಲದಂತೆ ಕಣ್ಣೀರು ಹನಿ ಹನಿಯಾಗಿ ಬೀಳುತ್ತದೆ. ಆ ಕಣ್ಣೀರಿನಿಂದ ಶಿವಲಿಂಗ ತಯಾರಾಗುತ್ತದೆ. ಬಳಿಕ ಪಾರ್ವತಿಯು ಆ ಲಿಂಗಕ್ಕೆ ಪೂಜೆ ಮಾಡಿ ತಪಸ್ಸು ಮಾಡುತ್ತಾಳೆ. ಬಳಿಕ ಪಾರ್ವತಿಯ ತಪಸ್ಸಿಗೆ ಮೆಚ್ಚಿದ ಶಿವನು, ಆಕೆಯನ್ನು ಮಾಘ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಮದುವೆಯಾದನು. ಆ ದಿನವನ್ನೇ ಇಂದು ನಾವು ಮಹಾಶಿವರಾತ್ರಿ ಎಂದು ಆಚರಿಸುತ್ತೇವೆ.

ಇದನ್ನೂ ಓದಿ: ಶಿವ ಪಾರ್ವತಿಯನ್ನು ಭೇಟಿ ಮಾಡಲು ಬಂದಾಗ ಆತನಿಗೆ ನಿರಾಸೆಯಾಗುವುದೇಕೆ?

ಶಿವ ಮತ್ತು ಪಾರ್ವತಿಯ ಮದುವೆಯಲ್ಲಿ ಬ್ರಹ್ಮ ಅರ್ಚಕನಾಗಿ ತನ್ನ ಕರ್ತವ್ಯ ನಿಭಾಯಿಸಿದರೆ, ವಿಷ್ಣು ವಧುವಿನ ಸಹೋದರನಾಗಿ ಎಲ್ಲಾ ಪದ್ಧತಿಗಳನ್ನು ಪೂರೈಸಿದನು. ಹಾಗಾಗಿ ಶಿವ ಪಾರ್ವತಿಯರ ಮದುವೆಯಿಂದಾಗಿ ಭಗವಾನ್ ವಿಷ್ಣು ಮತ್ತು ಶಿವನು ಬಾವ, ಬಾಮೈದರಾದರು ಎಂದು ಹೇಳಲಾಗುತ್ತದೆ. ಇದು ಕೆಲವು ಪುರಾಣಗಳ ಮೂಲಕವೂ ಸಾಬೀತಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ