Temple Travel: ಬೆಟ್ಟ, ಗುಡ್ಡದಂತಹ ರಮ್ಯ ಮನೋಹರ ಪ್ರದೇಶಗಳಲ್ಲಿ ನೆಲೆ ನಿಂತ ಶಕ್ತಿ ದೇವತೆಗಳ ಭವ್ಯ ಮಂದಿರಗಳು

ಪರ್ವತದ ಶ್ರೇಣಿಯಂತಹ ಎತ್ತರದ ಪ್ರದೇಶಗಳಲ್ಲಿ ಪೂಜಿಸಲ್ಪಡುತ್ತಿರುವ ಶಕ್ತಿ ಶಾಲಿ ದೇವರ ದೇವಸ್ಥಾನಗಳ ಪರಿಚಯವನ್ನು ಇಲ್ಲಿ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ. ಸುತ್ತಲೂ ಅರಣ್ಯ, ಹಚ್ಚ ಹಸಿರಿನ ರಾಶಿ ಟ್ರಾವೆಲ್ ಪ್ರಿಯರಿಗೆ ಇಷ್ಟವಾಗುವ ಹಾಗೂ ಭಕ್ತರಿಗೆ ಆಧ್ಯಾತ್ಮದತ್ತ ಮತ್ತಷ್ಟು ಸೆಳೆಯುವ ಪುಣ್ಯ ಕ್ಷೇತ್ರಗಳ ಪಟ್ಟಿ ಇಲ್ಲಿದೆ. ಭಾರತದಲ್ಲಿ ಇಂತಹ ಅನೇಕ ದೇವಾಲಯಗಳಿವೆ, ಅಲ್ಲಿ ಹೆಣ್ಣು ದೇವತೆಗಳನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಗುಹೆಗಳು, ಬೆಟ್ಟಗಳು ಮತ್ತು ದಟ್ಟವಾದ ಕಾಡುಗಳಲ್ಲಿ ನೆಲೆಗೊಂಡಿರುವ ಈ ದೇವಾಲಯಗಳು ಹೆಚ್ಚು ಪೂಜನೀಯ.

TV9 Web
| Updated By: preethi shettigar

Updated on:Dec 11, 2021 | 7:38 AM

ಸಪ್ತಶೃಂಗಿ ದೇವಿ(Saptashrungi Temple): ಈ ದೇವಸ್ಥಾನವು ನಾಸಿಕ್‌ನಲ್ಲಿದೆ. ಸಪ್ತಶೃಂಗಿ ತಾಯಿಯ ಆಶೀರ್ವಾದ ಪಡೆಯಲು ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಸಪ್ತಶೃಂಗಿ ಎಂದರೆ ಏಳು ಪರ್ವತ ಶಿಖರಗಳಲ್ಲಿ ನೆಲೆಸಿರುವವಳೆಂದರ್ಥ. 51 ಶಕ್ತಿಪೀಠಗಳಲ್ಲಿ ಸಪ್ತಶೃಂಗಿ ದೇವಿ ದೇವಾಲಯವೂ ಒಂದು.

must visit temples in india these temples of goddess are situated on the mountains

1 / 5
ಕಾಮಾಕ್ಯ ದೇವಾಲಯ(Kamakhya Temple): ಇದು ದುರ್ಗಾ ಮಾತೆಯ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಗುವಾಹಟಿ ಬಳಿಯ ನೀಲಾಚಲ ಎಂಬ ಬೆಟ್ಟಗಳಲ್ಲಿ 20 ದೇವಾಲಯಗಳಿವೆ. ಅವುಗಳಲ್ಲಿ ಒಂದು ಕಾಮಾಕ್ಯ ದೇವಿಯ ದೇವಾಲಯ. ಈ ದೇವಾಲಯವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಎರಡು ಕೋಣೆಗಳಿವೆ, ಮೂರು ಮಂಟಪಗಳು ಮತ್ತು ಗರ್ಭಗುಡಿ ಇದೆ, ತಾಯಿ ಸತಿಯ ಯೋನಿಯು ಗರ್ಭಗುಡಿಯಲ್ಲಿ ಬಿದ್ದಿದೆ ಎಂದು ನಂಬಲಾಗಿದೆ.

2 / 5
ಮಾನಸಾ ದೇವಿ ದೇವಸ್ಥಾನ(Manasa Devi Temple): ಈ ದೇವಸ್ಥಾನವು ಹರಿದ್ವಾರದಲ್ಲಿದೆ. ಭಾರತದ ಅತ್ಯಂತ ಪವಿತ್ರವಾದ ದೇವಸ್ಥಾನಗಳಲ್ಲಿ ಇದೂ ಒಂದು. ಈ ದೇವಾಲಯವು ಭಿಲ್ವಾ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಮಾನಸಾ ದೇವಿಯ ಮುಂದೆ ಏನೇ ಪ್ರಾರ್ಥನೆ ಸಲ್ಲಿಸಿದರೂ ತಾಯಿ ನೆರವೇರಿಸುತ್ತಾಳೆ ಎಂದು ಹೇಳಲಾಗುತ್ತದೆ. ಈ ದೇವಾಲಯದ ಸಮೀಪದಲ್ಲಿ ಚಂಡಿ ದೇವಿಯ ದೇವಾಲಯವೂ ಇದೆ.

3 / 5
ನೈನಾ ದೇವಿ ದೇವಸ್ಥಾನ(Naina Devi Temple): ಈ ದೇವಸ್ಥಾನವು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿದೆ. ನೈನಿ ಸರೋವರದ ಉತ್ತರದ ಅಂಚಿನಲ್ಲಿದೆ. ನವರಾತ್ರಿ ಮತ್ತು ಶ್ರಾವಣ ಅಷ್ಟಮಿಯಂದು ಇಲ್ಲಿ ಭಕ್ತರ ದೊಡ್ಡ ಸರತಿ ಸಾಲು ಇರುತ್ತದೆ. ಇಲ್ಲಿ ಭಕ್ತರು ರಸ್ತೆ ಅಥವಾ ಕೇಬಲ್ ಕಾರ್ ಸೌಲಭ್ಯದ ಮೂಲಕ ಹೋಗಬಹುದು. ಇದು ಕೂಡ 52 ಶಕ್ತಿ ಪೀಠಗಳಲ್ಲಿ ಒಂದಾಗಿದೆ.

4 / 5
ವೈಷ್ಣೋ ದೇವಿ ದೇವಾಲಯ(Vaishno Devi temple): ವೈಷ್ಣೋ ದೇವಿ ಸ್ಥಳವು ಉತ್ತರ ಭಾರತದ ಅತ್ಯಂತ ಪೂಜ್ಯ ಮತ್ತು ಪವಿತ್ರ ತಾಣಗಳಲ್ಲಿ ಒಂದು. ಇದು ದುರ್ಗಾ ಮಾತೆಯ ಅತ್ಯಂತ ಪ್ರಸಿದ್ಧ ದೇವಾಲಯವೆಂದು ಪರಿಗಣಿಸಲಾಗಿದೆ. ಜಮ್ಮುವಿನ ತ್ರಿಕೂಟ ಪರ್ವತಗಳ ಮೇಲಿರುವ ವೈಷ್ಣೋದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

5 / 5

Published On - 7:15 am, Sat, 11 December 21

Follow us
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ

ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ

ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್

ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ

ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ